ದಿನ ಭವಿಷ್ಯ 26 ಡಿಸೆಂಬರ್ 2019!

0
321

ಇಂದು ಗ್ರಹಣದ ಛಾಯೆ ೧೧:೦೫ ಸಮಯಕ್ಕೆ ಮುಗಿಯಲಿದೆ. ಕೇತು ಶುಕ್ರರ ಸಾರದಲ್ಲಿದ್ದಾನೇ ಹಾಗಾಗಿ ಕಲಾವಿದರು, ಸ್ತ್ರೀಯರಿಗೆ ಸಂಬಂಧಿಸಿದ ವಿಷಯಗಳಲ್ಲಿ ಬಹುದೊಡ್ಡ ಪ್ರತಿಭಟನೆ, ಗಲಭೆ, ಪ್ರಚೋದನೆ ಆ ರೀತಿ ಒಂದು ಘಟನೆಗಳು ನಡೆಯುತ್ತವೆ. ಮತ್ತು ಯಾವುದೇ ಒಂದು ಪ್ರಮುಖ ನಿರ್ಧಾರಗಳನ್ನು ಇವತ್ತು ತೆಗೆದುಕೊಳ್ಳಬೇಡಿ. ಪ್ರಮುಖ ವ್ಯವಹಾರಗಳು ಬೇಡ ಪ್ರಮುಖ ಸಹಿ ಹಾಕುವುದು ಬೇಡ. ಯಾಕೆಂದರೆ ಇವತ್ತು ಸರಿಯಾದ ದಿನವಲ್ಲ. ಮೂಲಾ ನಕ್ಷತ್ರ ಛಾಯೆ.! ಏನ್ನೋ ಒಂದು ವೈಬ್ರೇಷನ್ ಇರಲಿದೆ. ಶನಿ, ಬುಧ, ಸೂರ್ಯ, ಚಂದ್ರ, ರಾಹು, ಕುಜ ಅಷ್ಟಮದಲ್ಲಿ ನೋಡುತ್ತಿದ್ದಾನೆ, ನವಗ್ರಹಗಳು ಸೇರಿಕೊಂಡಿದ್ದಾವೆ. ೮ ದಿನಗಳ ಹಿಂದೆ ಅಥವಾ ೮ ದಿನಗಳು ಮುಂದೆ ಬಹುದೊಡ್ಡ ತೊಂದರೆಗಳನ್ನು ನೋಡುತ್ತೀರಿ.

 

ಉನ್ಮಾದ, ಬೆಂಕಿ, ಗಲಭೆ ಎಲ್ಲವನ್ನು ನೋಡುತ್ತೀರಿ ಜಾಗರೂಕತೆ. ಆದಷ್ಟು ಇವತ್ತು ಬೆಳಗ್ಗೆಯೇ ಮನೆಯ ಮುಂದೆ ದೀಪವನ್ನು ಹಚ್ಚಿ. ನಿಮ್ಮ ನಿಮ್ಮ ಧರ್ಮಕ್ಕೆ ಸಂಬಂಧಿಸಿದ ಹಾಗೆ ಪೂಜೆ ಪುನಸ್ಕಾರಗಳನ್ನು ಮಾಡಿಕೊಳ್ಳಿ. ನಿಮ್ಮನ್ನು ಗ್ರಹಗಳಿಸದ ರಕ್ಷಿಸಿಕೊಳ್ಳಿ ಒಳ್ಳೆಯದಾಗಲಿದೆ. ವಿದ್ಯಾರ್ಥಿಗಳಿಂದ ಹಿಡಿದು ಕಾರ್ಮಿಕರು, ರೈತರು, ಜಡ್ಜ್, ಪೊಲೀಸ್ ಎಲ್ಲರಿಗೂ ಇದರ ಒಂದು ತೊಂದರೆ ಇರಲಿದೆ ಜಾಗರೂಕತೆ. ಮನೆಯಲ್ಲಿ ಪುಟ್ಟ ದೀಪ, ದೇವನಾಮ ಜಪವನ್ನು ಮಾಡಿಕೊಳ್ಳಿ. ಗುರು ಮಂತ್ರ, ಓಂ ನಮಃ ಶಿವಾಯ, ಓಂ ಭಗವತಿ ವಾಸುದೇವಾಯ ನಮಃ ಎಂದು ಜಪವನ್ನು ಮಾಡಿಕೊಳ್ಳಿ.

 

ಸುಂದರಕಾಂಡ ರಾಮಾಯಣ ಪಠನೆ, ದತ್ತರ ಪಠನೆ, ಮನಸ್ಸಿಗೆ ಸಮಾಧಾನ, ಮನಸ್ಸಿಗೆ ಚಂಚಲತೆ ಇರುತ್ತದೆ. ಹಾಗಾಗಿ ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ಈ ಒಂದು ಗ್ರಹಣದಲ್ಲಿ ಯಾರಿಗೆ ಸರ್ಕಾರ ಮಟ್ಟದ ಕೆಲಸ, ವ್ಯವಹಾರದಲ್ಲಿ ಒದ್ದಾಡುತ್ತಿರುವರು ಸೂರ್ಯ ಆರಾಧನೆ ಮಾಡಿಕೊಳ್ಳಿ, ಶಿವಾರಾಧನೆ ಮನೆಯಲ್ಲಿ ಕಲಹ, ಗಲಭೆ, ದೊಂಬಿ, ಕಳ್ಳತನ, ಮೋಸ ,ಅಪಮೃತ್ಯು ಶಿವಾರಾಧನೆ ಮಾಡಿ, ದುರ್ಗಾರಾಧನೆ ಮಾಡಿ, ವಿದ್ಯಾರ್ಥಿಗಳು ಅತಿ ಮುಖ್ಯವಾಗಿ ಗಣಪತಿ ಅನುಷ್ಠಾನ ಮಾಡಿಕೊಳ್ಳಿ. ಓಂ ಗಂ ಗಣಪತಿಯೆ ನಮಃ, ಗಣಪತಿ ನಮಃ ಈ ರೀತಿ ಜಪವನ್ನು ಮಾಡಿಕೊಳ್ಳಿ ಒಳ್ಳೆಯದಾಗಲಿದೆ.

ಇಂದಿನ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ,

ಮೇಷ– ಇಂದು ಸ್ವಲ್ಪ ಜಾಗರೂಕತೆ ದುಡುಕಬೇಡಿ. ಕುಜ ಅಷ್ಟಮದಲ್ಲಿದ್ದಾನೆ, ಬೇರೆ ಪ್ರಚೋದನೆ, ಬೇರೆ ಬುದ್ಧಿ, ಮಾತು ಈ ರೀತಿಯ ಒಂದು ಪ್ರಚೋದನೆಗೆ ಒಳಗಾಗುತ್ತೀರಿ. ಕುಡಿದು ಚಿತ್ತೇರಿದಂತ ಪ್ರಭಾವ ಜಾಗರೂಕತೆ.

ವೃಷಭ– ಒಂದು ಚಿತ್ತಿನ ಪ್ರಭಾವ ನಿಮಗಿರಲಿದೆ ಜಾಗರೂಕತೆ. ಚಟಕ್ಕೆ ದಾಸರಾಗಿರುವವರು ಬಹಳ ಎಚ್ಚರ.! ಹಿಡಿದ ನಶೆಯನ್ನು ಬಿಡುವುದು ಕಷ್ಟವಿದೆ. ಯಾವುದೊಂದು ಪ್ರಭಾವಕ್ಕೆ ಒಳಗಾಗುವಂತೆ ಸನ್ನಿವೇಶಗಳಿವೆ ಎಚ್ಚರಿಕೆ.

ಮಿಥುನ– ಇವತ್ತು ಸ್ವಲ್ಪ ನಿಮಗೆ ಸಂಗಾತಿ, ಓಡಾಟ ಯಾವುದೋ ಒಂದು ದುಃಖದ ವಿಚಾರ, ಹಣಕಾಸು, ಕುಟುಂಬ ವ್ಯವಹಾರ ಈ ರೀತಿಯ ಒಂದು ಪ್ರಭಾವದಲ್ಲಿ ಬೇಸರ ಎಚ್ಚರಿಕೆ.! ದುಡುಕಬೇಡಿ ಆದಷ್ಟು ಶಿವಪೂಜೆ, ಶಿವ ಸಂಕಲ್ಪ ಮಾಡಿಕೊಳ್ಳುವುದು ಉತ್ತಮ.

ಕಟಕ– ತೊಳಲಾಟದ ಪರಿಸ್ಥಿತಿ. ಮನೆ, ಕುಟುಂಬ, ಆತಂಕದ ಛಾಯೆ ಕಾಡುವಂಥ ದಿನವಾಗಿರಲಿದೆ. ಕುಟುಂಬ, ಮನೆಯವರೊಡನೆ ಅಲ್ಲೊಂದು ಸಮಸ್ಯೆ ಇದೆ ಹಾಗಾಗಿ ಹನುಮಾನ್ ಚಾಲೀಸ್, ಹನುಮರ ದ್ಯಾನ, ಒಂದು ನಾಮಸ್ಮರಣೆ ಮಾಡಿಕೊಳ್ಳಿ ಸಮಾಧಾನ ದೊರೆಯಲಿದೆ.

ಸಿಂಹ– ಪಂಚಮದ ಒಂದು ಭಾವ, ಹುಳಿ ಎಲ್ಲ ಇದೆ. ಆದರೆ ಅನುಭವಿಸಲು ಆಗುತ್ತಿಲ್ಲ. ಯಾರೂ ನನ್ನವರಲ್ಲ! ನನ್ನವರು ಎಂದು ಹೇಳುವರು ನನ್ನ ಜೊತೆ ಇರುತ್ತಾರ.? ಈ ರೀತಿಯ ಒಂದು ಪ್ರಶ್ನೆ ಗೊಂದಲಗಳು ನಿಮ್ಮಲ್ಲಿ ಕಾಡುತ್ತಿರುತ್ತವೆ. ಒಂದು ತೊಳಲಾಟದ ಭಾವ ಇರಲಿದೆ. ಗಣಪತಿ ಮಂತ್ರ ಅನುಷ್ಠಾನ ಮಾಡಿಕೊಳ್ಳಿ.

ಕನ್ಯಾ– ದೈವ ದರ್ಶನ, ಗುರುದರ್ಶನ, ಶಿವದರ್ಶನ, ನದಿ ಸ್ನಾನ, ತೀರ್ಥ ಕ್ಷೇತ್ರ ಸ್ನಾನ ಅಂಥದ್ದೊಂದು ಸೌಭಾಗ್ಯ ಉಂಟು ಹೋಗಿ ಬಂದಲ್ಲಿ ಒಳ್ಳೆಯದಾಗಲಿದೆ ಯೋಚಿಸಬೇಡಿ. ಧರ್ಮದೇವತೆ ನಿಮ್ಮ ಪಾಲಿಗೆ ಇರಲಿದೆ.

ತುಲಾ– ಒಡಹುಟ್ಟಿದವರ ವಿಚಾರ, ಕುಟುಂಬದ ವಿಚಾರ, ವ್ಯವಹಾರದ ವಿಚಾರದಲ್ಲೊಂದು ಗಲಿಬಿಲಿಯ ವಾತಾವರಣ. ಅವರನ್ನು ಕಾಪಾಡಿಕೊಳ್ಳಿ, ಅವರ ಕಡೆ ಗಮನ ಕೊಡಿ, ಅವರ ಹೆಸರಿನಲ್ಲಿ ವಿನಾಯಕರ ಬಳಿ ಒಂದು ಅರ್ಚನೆ ಮಾಡಿಸಿ ಒಳ್ಳೆಯದಾಗಲಿದೆ.

ವೃಶ್ಚಿಕ– ನಿಮ್ಮ ಮನೆಯಲ್ಲಿ, ನಿಮ್ಮ ಆತ್ಮೀಯರಲ್ಲಿ ಒಂದು ಗ್ರಹಣದ ಛಾಯೆ! ದೈವದರ್ಶನ, ಗುರುದರ್ಶನ, ಶಿವದರ್ಶನ, ಸಪ ದರ್ಶನ ಸರ್ಪ ಕ್ಷೇತ್ರಕ್ಕೆ ಹೋಗಿ ಬರುವುದು ಪ್ರಾಪ್ತಿ, ಭಾಗ್ಯ ಹೋಗಿ ಬನ್ನಿ. ನದಿ ಸ್ನಾನದ ಸುಯೋಗ ಉಂಟು ಶುಭವಾಗಲಿದೆ.

ಧನಸ್ಸು– ಎಲ್ಲಾ ಗ್ರಹಗಳು ನಿಮ್ಮ ಮನೆಗೆ ಬಂದು ಸೇರಿಕೊಂಡಿದ್ದಾರೆ. ಅನುಕೂಲಗಳು ಬಂದು ಸೇರಿಕೊಳ್ಳಲಿದೆ. ಅನುಭವಿಸಿ, ಅದರೆ ಅತಿಯಾಗಿ ಅನುಭವಿಸಲು ಹೋಗಬೇಡಿ ಪೆಟ್ಟು ತಿನ್ನುತ್ತೀರಿ ಜಾಗರೂಕತೆ.

ಮಕರ– ಇವತ್ತು ಮುಖ್ಯ ನಿರ್ಧಾರ, ಮುಖ್ಯ ಕೆಲಸ, ಮುಖ್ಯ ವ್ಯವಹಾರಗಳನ್ನು ಮಾಡದೇ ಇರುವುದು ಉತ್ತಮ ಜಾಗರೂಕತೆ ಎಚ್ಚರ ವಹಿಸಿ.

ಕುಂಭ– ಇಂದು ನಿಮ್ಮ ದಿನ ಚೆನ್ನಾಗಿದೆ. ಗುರುದರ್ಶನ, ದೈವದರ್ಶನ, ಪೂರ್ಣ ಪುಣ್ಯ ಸ್ಥಾನ, ವಿಶೇಷ ಲಾಭ ಕರ್ಮಾಧಿಪತಿ, ಜ್ಞಾನಧಿಪತಿ ಯಾವುದನ್ನು ಮಹತ್ಕಾರ್ಯ ನಿಮ್ಮಿಂದ ನಡೆಯಲಿದೆ. ದೇವಕಾರ, ಧರ್ಮಕಾರ್ಯ ನಿಮ್ಮನ್ನು ಸೆಳೆಯಲಿದೆ ಶುಭವಾಗಲಿ.

ಮೀನ– ದೈವ ದರ್ಶನದ ವಿಶೇಷ, ಉದ್ಯೋಗದಲ್ಲಿ ಏರುಪೇರು ತುಂಬಾ ಎತ್ತರಕ್ಕೆ ಏರಿದ್ದರೆ ಕೆಳಗೆ ಬರುವಂತಹ ಪರಿಸ್ಥಿತಿ ಇರಲಿದೆ ಜಾಗರೂಕತೆ. ಈ ರೀತಿಯ ಒಂದು ಬದಲಾವಣೆ ಉಂಟು ದುಡುಕಬೇಡಿ ಜಾಗರೂಕತೆ. ದಕ್ಷಿಣ ಕ್ಷೇತ್ರದ ಪೀಠ ಇಂಥ ಕ್ಷೇತ್ರಗಳಿಗೆ ಹೋಗಿ ಬನ್ನಿ ಒಳ್ಳೆಯದಾಗಲಿದೆ.

LEAVE A REPLY

Please enter your comment!
Please enter your name here