ದಿನ ಭವಿಷ್ಯ 25 ಡಿಸೆಂಬರ್ 2019!

0
298

ಇವತ್ತು ಕ್ರೈಸ್ತರಿಗೆ ಕ್ರಿಸ್ಮಸ್ ಹಬ್ಬದ ಖುಷಿಯ ದಿನ. ಅವರಿಗೆಲ್ಲ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು. ಇವತ್ತು ಬೆಳಗ್ಗೆ ಎದ್ದ ತಕ್ಷಣ ಅಡುಗೆಯನ್ನು ಮಾಡಿ ಅದನ್ನು ಕುಟುಂಬದವರು ತಿನ್ನುವ ಮುನ್ನ ಒಂದು ಬೊಗಸೆ ಎತ್ತಿಕೊಂಡು ಪಶು, ಪ್ರಾಣಿ ಪಕ್ಷಿಗಳಿಗೆ ಉಣಬಡಿಸಿ ಅನಂತರ ನೀವು ತಿನ್ನಿ ಒಳ್ಳೆಯದು. ಯಾವುದೋ ಆತಂಕ, ದುಗುಡ, ಮನಸ್ಸು ಕಲಕುವಂತಹ ಘಟನೆಗಳು ನಡೆಯ ತಕ್ಕಂತ ಒಂದು ದಿನವಾಗಿರಲಿದೆ. ಯಾವುದೋ ಕದಲಿಕೆ, ಹೋಮ ನಡೆಯುವಂತ ಸೂಚನೆಗಳನ್ನು ನೀಡುತ್ತದೆ.

ಯಾವುದೋ ಮಾರಣಹೋಮ, ದೊಡ್ಡ ಮೋಸ, ಉಗುಳುವಿಕೆ ಪ್ರಭಾವ ಯಾಕೆಂದರೆ ನಾಳೆ ಗ್ರಹಣ ಎಚ್ಚರಿಕೆ. ನಮ್ಮ ಕಣ್ಣಿಗೆ ಕಾಣುವ ಎರಡು ದೇವಗಳು ಎಂದರೆ ಅದು ಸೂರ್ಯ ಮತ್ತು ಚಂದ್ರ ಇದನ್ನು ನೆನಪಿಸಿಕೊಂಡು, ಮನೆಯ ಮುಂದೆ ಆದಷ್ಟು ಶುಚಿ ಮಾಡಿ, ಸಗಣಿ ಇದ್ದರೆ ಅಥವಾ ಸಿಕ್ಕರೆ ಅದನ್ನು ಮನೆಯ ಮುಂದೆ ಸಾರಿಸಿ. ಯಾಕಂದ್ರೆ ದುಷ್ಟಶಕ್ತಿಗಳ ತೊಂದರೆ ಅಥವಾ ಅದರ ಒಂದು ಪ್ರಭಾವ ನಮ್ಮ ಮೇಲೆ ಬೀರುವುದಿಲ್ಲ ಎಂಬ ಒಂದು ನಂಬಿಕೆ. ಗೋಮಯ ಒಂದು ನಂಬಿಕೆ, ಶ್ರೇಷ್ಠ ಹಾಗಾಗಿ ಮನೆಯ ಮುಂದೆ ಸಾರಿಸಿದರೆ ದುಷ್ಟಶಕ್ತಿಗಳು ಬರುವುದಿಲ್ಲ ಎಂಬುದು ನಂಬಿಕೆ. ಹೀಗಾಗಿಯೇ ಗೋಮಯದಿಂದ ಮಾಡಿದ ವಿಭೂತಿಯನ್ನು ಪ್ರತಿಯೊಬ್ಬರು ಧರಿಸುತ್ತಿದ್ದರು.

 

ನಾಳೆ ನಡೆಯುವ ಈ ಒಂದು ಗ್ರಹಣಕ್ಕೆ ಎಲ್ಲರೂ ಕೂಡ ಬೆಳಗ್ಗೆ ಏದ್ದು, ಸಗಣಿಯನ್ನು ಸಾರಿಸಿ ಅದರ ಮೇಲೆ ರಂಗೋಲಿಯನ್ನು ಬಿಡಿಸಿ ರಂಗೋಲಿ ಇರಲೇಬೇಕು. ಅದರ ಮೇಲೆ ಒಂದು ಸ್ವಸ್ತಿಕ್, ಕುಂಕುಮ, ಅರಿಶಿನ ಇಟ್ಟು ಸ್ವಸ್ತಿಕ್ ಚಿಹ್ನೆ ಅಥವಾ ಓಂ ಚಿಹ್ನೆ ಇರಲೇಬೇಕು. ಆಯ್ತು ಅಂದರೆ ಇವತ್ತು ಸಂಜೆ ಅಥವಾ ಸಂಧ್ಯಾ ಕಾಲಕ್ಕೆ ಒಂದು ಮಾವಿನ ತೋರಣವನ್ನು ಕಟ್ಟಿ ಇವೆಲ್ಲ ನಿಮಗೆ ರಕ್ಷಣಾ ಕವಚವಾಗಿ ನಿಲ್ಲುತ್ತದೆ. ಹೊಟ್ಟೆ ಹಿಂಡುವಂಥ, ಕರಳು ಹಿಂಡುವಂಥ ಒಂದು ಪ್ರಸಂಗ ಖಂಡಿತ ಎದುರಾಗುತ್ತದೆ. ಬಹಳ ಎಚ್ಚರಿಕೆಯಿಂದ ಈ ಒಂದು ಕೆಲಸಗಳನ್ನು ಮಾಡಿ ರಕ್ಷಾ ಕವಚವಾಗಿ ನಿಲ್ಲುತ್ತದೆ.

ಇವತ್ತು ಸಂಧ್ಯಾ ಕಾಲಕ್ಕೆ ಪುಟ್ಟ ದೀಪವನ್ನು ಹಚ್ಚಿ ಅಥವಾ ಬೆಳಗ್ಗೆ ಬೂದುಗುಂಬಳ ಕಾಯಿಯ ಒಳಗಿನ ತಿರುಳನ್ನು ತೆಗೆದು ಅಲ್ಲಿ ಎಣ್ಣೆಯನ್ನು ಹಾಕಿ, ದೀಪದ ಬತ್ತಿಯನ್ನು ಇಟ್ಟು ಉರಿಸಿ ಒಳ್ಳೆಯದು. ಇವತ್ತು ಸಂಜೆಯಿಂದ ನಾಳೆ ಬೆಳಗ್ಗೆಯವರೆಗೂ ದೀಪ ಉರಿಯುವ ಹಾಗೆ ನೋಡಿಕೊಳ್ಳಿ ಶುಭವಾಗಲಿದೆ.

ಇಂದಿನ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ,

ಮೇಷ– ಇಂದು ವಿಶೇಷವಾದಂತ ದಿನ. ಬುದ್ಧಿ, ಮೇಧಾ ಶಕ್ತಿ, ಜ್ಞಾನ, ಟೆಕ್ನಿಕಲ್ ಲೈನ್ನಲ್ಲಿ ಕೆಲಸ ಮಾಡುತ್ತಿರುವವರಿಗೆ ಅದ್ಭುತವಾದ ದಿನ ಶುಭವಾಗಲಿದೆ. ಸೋದರಿಯರ ಜೊತೆ ಒಳ್ಳೆ ಬಾಂಧವ್ಯವನ್ನು ಇಟ್ಟುಕೊಳ್ಳಲು ಪ್ರಯತ್ನ ಮಾಡಿ ಒಳ್ಳೆಯದಾಗುವುದು.

ವೃಷಭ– ಸೋದರ, ಸೋದರಿಯರ ಸಹಾಯ ದೊರೆಯುತ್ತದೆ. ಇವತ್ತು ಬೆಣ್ಣೆಯಿಂದ ಕೂದಲನ್ನು ತೆಗೆಯುವಷ್ಟು ಸುಲಭವಾಗಿ, ಸುಲಲಿತವಾಗಿ ನಿಮ್ಮ ಕೆಲಸಗಳನ್ನು ಮಾಡಿ ಮುಗಿಸಿ ಕೊಳ್ಳುತ್ತೀರಿ. ಯಾವುದೇ ಕೆಲಸವನ್ನು ಕೂಡ ಸೂಕ್ಷ್ಮವಾಗಿ ಚಾಣಾಕ್ಷತೆಯಿಂದ ಮುಗಿಸಿಕೊಳ್ಳುವಂತ ತಾಕತ್ತು ನಿಮಗಿರಲಿದೆ ಶುಭವಾಗಲಿ.

ಮಿಥುನ– ನೀವು ಪಟ್ಟಿರುವ ಕಷ್ಟಕ್ಕೆ ಇಂದು ಉತ್ತಮ ಫಲವನ್ನು ನೋಡುವಂಥ ಒಂದು ಒಳ್ಳೆಯ ದಿನ ಚೆನ್ನಾಗಿದೆ. ಯಾವ ರೀತಿಯ ತೊಂದರೆ ಇಲ್ಲ ಧೈರ್ಯವಾಗಿ ಹೆಜ್ಜೆ ಇಡಿ ಶುಭವಾಗಲಿದೆ.

ಕಟಕ– ಯಾವುದರ ಬಗ್ಗೆಯೂ ಹೆಚ್ಚು ಯೋಚನೆ ಮಾಡಬೇಡಿ. ಪಾಲಿಗೆ ಬಂದದ್ದು ಪಂಚಾಮೃತ ಎಂದು ಭಾವಿಸಿ. ಸಂಧ್ಯಾ ಕಾಲಗಳ ಒಳಗೆ ಶುಭ ಸುದ್ದಿ, ಸ್ನೇಹಿತರ ಜೊತೆ ಭೋಜನಕೂಟ ನೋಡುತ್ತೀರಿ ಶುಭವಾಗಲಿದೆ.

ಸಿಂಹ– ಇಂದು ನಿಮ್ಮ ದಿನ ಚೆನ್ನಾಗಿದೆ. ಕಸ್ಟಮರ್ ಸರ್ವೀಸ್, ಟೆಕ್ನಿಕಲ್, ಪೈಂಟಿಂಗ್ ,ಎಲೆಕ್ಟ್ರಾನಿಕ್ ವಸ್ತುಗಳ ಸರ್ವಿಸಿಂಗ್ ಅದ್ಭುತವಾದಂತಹ ಪ್ರಗತಿಯ ದಿನ.

ಕನ್ಯಾ– ಇವತ್ತು ತುಂಟತನ, ಒನಪು ,ವಯ್ಯಾರ, ಓಡಾಟ, ಸುತ್ತಾಟ ಅದ್ಭುತವಾದಂತಹ ಪ್ರಭಾವ ಇವತ್ತು ನಿಮ್ಮದು. ಬುದ್ಧಿ ಉಪಯೋಗಿಸಿ ಮಾಡುವ ಯಾವುದೇ ಕೆಲಸ ಕಾರ್ಯದಲ್ಲಿ ಯಥೇಚ್ಚ ಲಾಭ.! ಆದರೆ ಯಾವುದೋ ಒಂದು ಸಣ್ಣ ವಸ್ತುವನ್ನು ಕಳೆದುಕೊಳ್ಳುವಿರಿ.

ತುಲಾ– ನಿಮ್ಮ ಮಾತೇ ನಿಮ್ಮನ್ನು ಗೆಲ್ಲಿಸುತ್ತದೆ. ಅಂತ ಒಂದು ಪ್ರಭಾವ, ಶುದ್ಧ ಜಡ್ಜ್, ಶುದ್ಧ ಗುರುಗಳು, ಶುದ್ಧ ಡಾಕ್ಟರ್ ಆಗಿರುತ್ತೀರಿ ನಿಮ್ಮಲ್ಲಿ ಕಲ್ಮಶ ಇರುವುದಿಲ್ಲ. ಬುದ್ಧಿ ಉಪಯೋಗಿಸಿ ಮುಗ್ಧತೆಯನ್ನು ಅಳಿಸಿ ಒಳ್ಳೆಯದಾಗಲಿದೆ.

ವೃಶ್ಚಿಕ– ನಿಮಗೆ ಟೋಪಿ ಹಾಕಲು ಬರುವುದಿಲ್ಲ. ನೇರವಾಗಿ ಹೊಡೆದಾಡುತ್ತೀರಿ ಇಲ್ಲವಾದರೆ ಸುಮ್ಮನಿದ್ದು ಬಿಡುತ್ತೀರಿ. ಆ ರೀತಿಯ ಒಂದು ಪ್ರಭಾವ ಇರುತ್ತದೆ. ಯಾರೂ ನಿಮ್ಮನ್ನು ನಯ,ವಿನಯ ಎಂಬ ಮಾತಿನ ಟೋಪಿ ಹಾಕುತ್ತಾರೆ. ಅದರ ಬಗ್ಗೆ ನಿಮಗೆ ಬೇಗ ಅರಿವು ಗೊತ್ತಾಗುತ್ತದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು ನೋಡುತ್ತೀರಿ ಚೆನ್ನಾಗಿದೆ.

ಧನಸ್ಸು– ಊಟ ಬಲ್ಲವನಿಗೆ ರೋಗವಿಲ್ಲ. ಯಾಕೋ ಆಲೋಚನೆಯಲ್ಲಿ ಎಡವಟ್ಟು. ಒಂದು ತೊಂದರೆಗಳು ಎದುರಾಗಬಹುದು ಧನುಸ್ಸು ರಾಶಿಯವರು ಜಾಗರೂಕತೆ.

ಮಕರ– ಕಮಿಷನ್ ಏಜೆಂಟ್ ಎಲ್ಲದರಲ್ಲೂ ಲಾಭ ನೋಡುತ್ತೀರಿ. ಇವತ್ತು ಸ್ವಲ್ಪ ಸ್ವಾರ್ಥಿಯಾಗಿ ಕೆಲಸವನ್ನು ಮಾಡುತ್ತೀರಿ. ಎಲ್ಲದರಲ್ಲೂ ಅಲ್ಪ ಲಾಭವನ್ನೂ ನೋಡುತ್ತೀರಿ. ಲಾಭ ದೊರೆಯಲಿದೆ ತೊಂದರೆಯಿಲ್ಲ ಶುಭವಾಗಲಿ.

ಕುಂಭ – ಮಾತಿನಲ್ಲೇ ಮನೆಯನ್ನು ಕಟ್ಟುತ್ತೀರಿ. ಮಾತಿನಲ್ಲೇ ಮೋಡಿ ಮಾಡುತ್ತೀರಿ. ಇವತ್ತು ನಿಮ್ಮ ಮಾತಿಗೆ ಮರುಳಾಗದವರೇ ಇಲ್ಲ ಜಾಗರೂಕತೆ.

ಮೀನ– ಮಾಡುವ ಕೆಲಸ, ಪಾಲುದಾರಿಕೆಯಲ್ಲಿ ವಿಶೇಷ ಪ್ರಗತಿಯನ್ನು ನೋಡ ತಕ್ಕಂತ ಒಂದು ದಿನ. ಆತುರ ಪಡಬೇಡಿ, ದುಡುಕಬೇಡಿ, ಗಣಪತಿ ಸನ್ನಿಧಿಗೆ ಹೋಗಿ ಜಪವನ್ನು ಮಾಡಿಕೊಳ್ಳಿ ಶುಭವಾಗಲಿದೆ.

LEAVE A REPLY

Please enter your comment!
Please enter your name here