ದಿನ ಭವಿಷ್ಯ 24 ಡಿಸೆಂಬರ್ 2019!

0
309

ಗ್ರಹಣದ ಛಾಯೆಯ ಬಗ್ಗೆ ಶ್ರೀ ರವಿಶಂಕರ್ ಗುರೂಜಿ ಅವರು ಇಂದಿನ ಸಂಚಿಕೆಯಲ್ಲಿ ತಿಳಿಸಿಕೊಟ್ಟಿದ್ದಾರೆ. ಗ್ರಹಣ ಎಂಬುದು ಯಾವ ಮನುಷ್ಯನ ಜೀವನದಲ್ಲಿ ಹೇಗೆ ಅವನ ದಿಕ್ಕನ್ನು, ಜೀವನವನ್ನು ಬದಲಾಯಿಸುತ್ತದೆ ಎಂಬುದು ಹೇಳಲಿಕ್ಕೆ ಆಗುವುದಿಲ್ಲ. ಇತ್ತೀಚಿನ ಐಪಿಎಲ್ ಆಕ್ಷನ್ ನಲ್ಲಿ ಒಬ್ಬ ಸಾಮಾನ್ಯ ಹುಡುಗನಿಗೆ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಸ್ಥಾನ ಸಿಕ್ಕಿದೆ. ಹೌದು, ಕಡು ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದ ಒಬ್ಬ ಹುಡುಗ ಪಾನಿಪೂರಿ ವ್ಯಾಪಾರ ನಡೆಸಿಕೊಂಡು ತನ್ನ ಕನಸನ್ನು ಕಾಣುತ್ತಿದ್ದ.

ಬೀದಿ ಬದಿ ಪಾನಿಪುರಿ ವ್ಯಾಪಾರ ಮಾಡಿಕೊಂಡು ಕ್ರಿಕೆಟ್ ಆಸೆಯನ್ನು ಕಾಣುತ್ತಿದ್ದ ಹಾಗೂ ಅದರ ತರಬೇತಿಯನ್ನು ನಿತ್ಯ ಶ್ರಮದಿಂದ ಮಾಡಿಕೊಂಡು ಮುಂದುವರಿಯುತ್ತಿದ್ದು, ತನ್ನ ಕನಸನ್ನು ಹೊತ್ತುಕೊಂಡು ಮುಂದೊಂದು ದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡುತ್ತೇನೆ ಎಂಬ ವಿಶ್ವಾಸವನ್ನು ಹೊಂದಿದ್ದ. ಗ್ರಹಣದ ಛಾಯೆಯೊ ಏನೋ ಐಪಿಎಲ್ ಪಂದ್ಯವು ಅವನ ಜೀವನದಲ್ಲಿ ಅದೃಷ್ಟದ ವರವಾಗಿ ಮನೆ ಬಾಗಿಲಿಗೇ ಹುಡುಕಿಕೊಂಡು ಬಂದಿದೆ. ರಾಜಸ್ಥಾನ್ ರಾಯಲ್ಸ್ ತಂಡ ಎರಡೂವರೆ ಕೋಟಿ ಹಣವನ್ನು ಆತನಿಗೆ ಕೊಟ್ಟು ಖರೀದಿ ಮಾಡಿದೆ. ವಿಶೇಷವಾಗಿ ಆತನ ಹೆಸರು ಯಶಸ್ವಿ ಜೈಸ್ವಾಲ್.

 

ಗ್ರಹಣ ಅಂದರೆ ಹಾಗೆ ಎಲ್ಲರಿಗೂ ಕೆಟ್ಟದ್ದೇ ಆಗುತ್ತದೆ ಎಂಬುದು ತಪ್ಪು ತಿಳಿವಳಿಕೆ.! ಒಳ್ಳೆಯದು ಕೂಡ ಆಗಬಹುದು, ಆಗುತ್ತದೆ. ಈ ಗ್ರಹಣದ ಛಾಯೆ ಪರಿಹಾರಗಳು ಸೂರ್ಯಗ್ರಹಣದ ಆತ್ಮಕಾರಕ ಆತ್ಮ ಶುದ್ಧಿಯನ್ನು ತೆಗೆದು ಬಿಡುತ್ತದೆ. ಯಾವಾಗ ಆತ್ಮ ಕಾಡುತ್ತದೆಯೋ.! ಎಷ್ಟೇ ಪ್ರಾಮಾಣಿಕವಾಗಿದ್ದರೂ ಕೂಡ ಅದು ಪ್ರಯೋಜನವಾಗುವುದಿಲ್ಲ. ಹಾಗಾಗಿ ಆತ್ಮ ಶುದ್ಧಿಯನ್ನು ಮಾಡಿಕೊಳ್ಳುವುದು ಬಹಳ ಒಳ್ಳೆಯದು. ಅತ್ಮ ಕೆಟ್ಟರೆ ನೀವು ಕೆಟ್ಟು ಹೋಗುತ್ತೀರಿ. ಈ ಒಂದು ಹೊಸ ವರ್ಷ ನಿಮ್ಮ ಬಾಳಿನಲ್ಲಿ ಸಾಕಷ್ಟು ಹೊಸತನವನ್ನು ತಂದುಕೊಡುತ್ತದೆ. ಯಾರಿಗೆ ಪದೇ ಪದೇ ಆಕ್ಸಿಡೆಂಟ್ಗಳು ಆಗುತ್ತೆ, ಪದೇ ಪದೇ ಗಾಡಿಗಳಲ್ಲಿ ಬೀಳುವುದು. ಒಂದು ಪೆಟ್ಟು ಬೀಳುತ್ತದೆ ಜಾಗರೂಕತೆ.

 

ಕುಜನ ಪಕ್ಕದಲ್ಲಿ ಶನಿ ಕೇತು ಸೇರಿಕೊಂಡಿದೆ ಅಲ್ಲೊಂದು ಪೆಟ್ಟೂ ಉಂಟು. ಮತ್ತಷ್ಟು ಪ್ರಚೋದನೆ, ಮತ್ತಷ್ಟು ಕದಲಿಕೆ ಮತ್ತಷ್ಟು ಪೆಟ್ಟು, ಮತ್ತಷ್ಟು ಸರ್ಜರಿ ತಂದಿಟ್ಟು ಬಿಡುತ್ತದೆ ಜಾಗರೂಕತೆ. ಇಪ್ಪತ್ತೈದು ತಾರೀಕು ನಾಳೆ, ನಾಳಿದ್ದು ದೂರ ಪ್ರಯಾಣ, ವಾಹನವನ್ನು ಬಳಸದೇ ಇದ್ದರೆ ಅತ್ಯುತ್ತಮ. ಸ್ವಲ್ಪ ಕಡೆಗಣಿಸಿ ಸರ್ಕಾರಿ ವಾಹನಗಳನ್ನು ಬಳಸಿಕೊಳ್ಳಿ. ಚಿಕ್ಕಮಕ್ಕಳಿಗೆ ಗಾಡಿಯನ್ನು ಕೊಡಬೇಡಿ. ಮಕ್ಕಳ ಕೈಗೆ ವಾಹನವನ್ನು ಕೊಡಬೇಡಿ ಅವರ ಬಗ್ಗೆ ಹೆಚ್ಚಿನ ಜಾಗರೂಕತೆ ವಹಿಸಿ.

 

ಹತ್ತಿರದಲ್ಲಿ ಎಲ್ಲಿಯಾದರೂ ದೇವಸ್ಥಾನವಿದ್ದರೆ ಒಂದಷ್ಟು ಅಭಿಷೇಕವನ್ನು ತಂದು ಗ್ರಹಣದ ಮೂರು ದಿನ ಅವರಿಗೆ ಸ್ನಾನದಲ್ಲಿ ಅಥವಾ ಅಭಿಷೇಕದ ತೀರ್ಥ, ಅಮ್ಮನವರ ಪ್ರಸಾದ, ಗುರು ತೀರ್ಥವನ್ನು ಅವರಿಗೆ ರಕ್ಷಾ ಕವಚವಾಗಿ ಸ್ಥಾನದಲ್ಲೂ ಕೈಗೆ ಕಟ್ಟಿ. ತುಂಬಾ ತುಂಟ ಮಕ್ಕಳು, ಗಲಾಟೆ ಮಕ್ಕಳು ಇದ್ದರೆ ಗ್ರಹಣದ ಪ್ರಭಾವದಿಂದ ತುಂಬಾ ಹೆಚ್ಚು ಗಲಾಟೆ ಮಾಡುತ್ತಾರೆ, ಪ್ರಚೋದನೆ ಪಡಿಸುತ್ತಾರೆ. ದೇವಿ ಕ್ಷೇತ್ರದಿಂದ ಏನಾದರೂ ಕಪ್ಪು ದಾರವನ್ನು ಪೂಜೆ ಮಾಡಿಸಿ ಒಂಬತ್ತು ಗಂಟುಗಳನ್ನು ತಾಯಿ ಮುಖಾಂತರ, ಪತ್ನಿ ಮುಖಾಂತರ ಬಲಗೈಗೆ ಹಾಕಿಸಿಕೊಳ್ಳಿ ಒಳ್ಳೆಯದಾಗಲಿದೆ.

ಇಂದಿನ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ,

ಮೇಷ– ಸ್ವಲ್ಪ ತೊಳಲಾಟ, ಪ್ರಯತ್ನವಿದೆ ಆದರೆ ಪ್ರಯತ್ನಕ್ಕೆ ತಕ್ಕ ಫಲವಿಲ್ಲ ಎಂಬ ಒತ್ತಡ ಅನ್ನಿಸುತ್ತದೆ. ಸ್ವಲ್ಪ ತಾಳ್ಮೆಯಿಂದ ವರ್ತಿಸಿ ಖಂಡಿತ ಫಲ ವೃದ್ಧಿಯಾಗಲಿದೆ ಶುಭವಾಗಲಿದೆ.

 

ವೃಷಭ– ಪರಿಸ್ಥಿತಿಗೆ ಅನುಗುಣವಾಗಿ ಏನು ಕಷ್ಟಪಡುತ್ತಿದ್ದೀರ ಅದಕ್ಕೆ ತಕ್ಕ ಪ್ರತಿಫಲವನ್ನು ನೋಡುತ್ತೀರಿ. ಟೆಕ್ನಿಕಲ್ ಲೈನ್, ಮ್ಯಾನೇಜ್ಮೆಂಟ್ ಲೈನ್, ಲಿಕ್ಕರ್, ಐರನ್, ಸ್ಟೀಲ್, ಕಮಿಷನ್ ಏಜೆಂಟ್, ಟೆಲಿಕಾಮ್ ಲೈನ್ ಅದ್ಭುತ ಪ್ರಗತಿಯನ್ನು ನೋಡಿತಕ್ಕಂತ ದಿನ.

 

ಮಿಥುನ– ಇಂದು ನಿಮ್ಮ ದಿನ ಚೆನ್ನಾಗಿದೆ. ಶುಭವಾರ್ತೆಯನ್ನು ಉದ್ಯೋಗ ನಿಮಿತ್ತ, ಕುಟುಂಬ ನಿಮಿತ್ತ ಕೆಳ ತಕ್ಕಂತ ಒಂದು ದಿನ. ಆಟೊಮೊಬೈಲ್, ಟ್ರಾವೆಲ್, ಸರ್ವಿಸ್ ಇಂಜಿನಿಯರ್ಸ್ ಅದ್ಭುತವಾದಂತಹ ದಿನ.

 

ಕಟಕ– ನಿಮಗೆ ಇಂದು ಯಾರಾದರೂ ಪ್ರಚೋದನೆಗೆ ಒಳಪಡಿಸುತ್ತಾರೆ. ಸುಮ್ಮನೆ ನಿಮ್ಮ ಪಾಡಿಗೆ ನೀವು ಕೆಲಸ ಮಾಡುತ್ತಿದ್ದರೂ ಕೂಡ ಕೆದಕಿ ನಿಮ್ಮ ಕಾಲೆಳೆಯಲು ಪ್ರಯತ್ನ ಮಾಡುತ್ತಾರೆ. ಇವತ್ತು ನಿಮಗೆ ಹುಳಿ ನೀಡುವವರು ಜಾಸ್ತಿ, ತಲೆ ಕೆಡಿಸಿಕೊಳ್ಳಬೇಡಿ ಶುಭವಾಗಲಿದೆ.

 

ಸಿಂಹ– ಉದ್ಯೋಗ ನಿಮಿತ್ತ ಶುಭ ಸುದ್ದಿ. ಎಷ್ಟು ಕಷ್ಟಪಡುತ್ತಿದ್ದೀರಿ ಅದಕ್ಕೆ ತಕ್ಕಂತ ಫಲ ದೊರೆಯಲಿದೆ. ಪರ ದೇಶ, ಪರಸ್ಥಳ, ಎಂಜಿನಿಯರ್ಸ್, ಸರ್ವಿಸ್ ಇಂಜಿನಿಯರ್, ಎಕ್ಸ್ಪೋರ್ಟ್ ಇಂಪೋರ್ಟ್ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದರೆ ಅದ್ಭುತ ಪ್ರಗತಿ.

 

ಕನ್ಯಾ– ವಿಶೇಷವಾದ ಅನುಕೂಲತೆಯನ್ನು ಪಡೆಯತಕ್ಕಂತ ದಿನವಾಗಿರಲಿದೆ. ಒಂದು ಅದ್ಭುತ ಪ್ರಯಾಣ, ಕುಟುಂಬ ನಿಮಿತ್ತ, ವಿಸ್ಮಯ, ವಿಶೇಷ ಸುದ್ದಿ ,ವಿಶೇಷ ಪ್ರಯಾಣ, ಶುಭವಾರ್ತೆಯನ್ನು ಕೆಲಸದ ವಿಚಾರವಾಗಿ, ಕುಟುಂಬದ ವಿಚಾರವಾಗಿ ಪಡೆಯ ತಕ್ಕಂತ ಅದ್ಭುತ ಸುಯೋಗ.

 

ತುಲಾ– ಒಂದು ರೀತಿಯ ಮನೆಯಲ್ಲಿ ಗಾಳಿಯ ಮಾತು, ಉದ್ಯೋಗದಲ್ಲಿ ನಿಮಗೆ ನಿಮ್ಮ ಮನಸ್ಸಿನ ಏಕಾಗ್ರತೆಗೆ ತೊಡಕುಂಟಾಗುವ ಪ್ರಭಾವ ಜಾಗರೂಕತೆ. ಗಾಳಿ ಮಾತು ಗಾಳಿಯನ್ನು ದೂಡಿಬಿಡಿ.

 

ವೃಶ್ಚಿಕ– ಇಂದು ನಿಮ್ಮ ದಿನ ಚೆನ್ನಾಗಿದೆ. ಉಪಯೋಗಿಸಿ ಚಾಣಾಕ್ಷತೆಯಿಂದ ಮಾಡತಕ್ಕಂತಹ ಕೆಲಸಗಳಲ್ಲಿ ಯಶಸ್ಸು. ಯಾರಾದರೂ ನಿಮ್ಮ ಕೆಲಸವನ್ನು ಹೊಗಳಿ ಮಾತನಾಡಿದರೆ ನೀವು ಕರಗಿ ಹೋಗುತ್ತೀರಿ. ಆ ರೀತಿ ಟೋಪಿ ಹಾಕಲು ಬರುತ್ತಾರೆ ಜಾಗರೂಕತೆ. ಯೋಚಿಸಬೇಡಿ ಧೈರ್ಯದಿಂದ ಹೆಜ್ಜೆ ಇಡಿ ಒಳ್ಳೆಯದಾಗಲಿದೆ.

 

ಧನಸ್ಸು– ನಿಮಗೊಂದು ಶುಭವಾರ್ತೆ, ವ್ಯವಹಾರ ನಿಮಿತ್ತ, ಕುಟುಂಬ ನಿಮಿತ್ತ ದೊರೆಯಲಿದೆ ಪಾಲುದಾರಿಕೆ ವ್ಯವಹಾರದಲ್ಲಿ ಸ್ವಲ್ಪ ಎಚ್ಚರಿಕೆ.

 

ಮಕರ– ಕುಟುಂಬದವರೊಂದಿಗೆ, ಆತ್ಮೀಯರೊಂದಿಗೆ, ಹತ್ತಿರದವರೊಂದಿಗೆ ಸೇರಿಕೊಂಡು ಮಾಡುತ್ತಿರುವ ವ್ಯವಹಾರದಲ್ಲಿ, ಸ್ವಂತ ಉದ್ಯೋಗದಲ್ಲಿ ,ಸ್ವಂತ ಕಮಿಷನ್ ಏಜೆಂಟ್ ವ್ಯವಹಾರಗಳಲ್ಲಿ ವಿಶೇಷ ಪ್ರಗತಿ ಕಾಣತಕ್ಕಂತ ಒಂದು ದಿನ.

 

ಕುಂಭ– ಇವತ್ತು ಏನೋ ಒಂದು ವೈರಾಗ್ಯ ಭಾವ ಉಂಟು, ಖುಷಿಯೂ ಉಂಟು. ಆದರೆ ಅದನ್ನು ಸಂಪೂರ್ಣವಾಗಿ ಅನುಭವಿಸಲು ಆಗುವುದಿಲ್ಲ ಯಾವುದೋ ವಿಚಾರಕ್ಕೆ ಒಂದು ತಲ್ಲಣ ಮಾಡಿಕೊಳ್ಳುತ್ತೀರಿ. ಆದ್ರೂ ಆನಂದವನ್ನು ಅನುಭವಿಸುತ್ತೀರಿ ಆತ್ಮೀಯರೊಂದಿಗೆ ಭೋಜನ ಕೂಟ ಇರಲಿದೆ. ವಿವಾಹ ಕೂಟಕ್ಕೂ ಹೋಗಿ ಬರುವಂಥ ಶುಭಕರ ದಿನ.

 

ಮೀನ– ಮಕ್ಕಳ ವಿಚಾರದಲ್ಲಿ ಒಂದು ಶುಭ ಸುದ್ದಿ, ಖುಷಿ ಸುದ್ದಿ ಮಕ್ಕಳ ವಿಚಾರದಲ್ಲಿ ಏಳಿಗೆ, ಇನ್ವೆಸ್ಟ್ಮೆಂಟ್ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತೀರಿ. ಒಳ್ಳೆಯ ತತ್ತ್ವಗಳನ್ನು ಅಳವಡಿಸಿಕೊಳ್ಳಿ ಶುಭವಾಗಲಿದೆ.

LEAVE A REPLY

Please enter your comment!
Please enter your name here