ದಿನ ಭವಿಷ್ಯ 23 ಡಿಸೆಂಬರ್ 2019!

0
434

ಮೀನ ರಾಶಿಗೆ ಗ್ರಹಣದ ಛಾಯೆ, ಪ್ರಭಾವ ಹೇಗಿರಲಿದೆ ಎಂಬುದನ್ನು ಶ್ರೀ ರವಿಶಂಕರ್ ಗುರೂಜಿ ಅವರು ಇಂದಿನ ಸಂಚಿಕೆಯಲ್ಲಿ ತಿಳಿಸಿಕೊಟ್ಟಿದ್ದಾರೆ. ಗ್ರಹಣ ಇರುವ ಕಾರಣ ಆದಷ್ಟು ಶಿವನಿಗೆ ಅರ್ಚನೆ, ಪೂಜೆ, ಅಭಿಷೇಕ ಭಗವಂತನ ಹೆಸರಿನಲ್ಲಿ ಐದು ಜನಕ್ಕೆ ಊಟವೋ, ಪ್ರಸಾದವೋ, ದಾನಮಾಡಿ ಅದಕ್ಕಿಂತ ಪುಣ್ಯ ನಿಮಗೆ ದೊರೆಯದು. ಬಡವರು, ಪೌರ ಕಾರ್ಮಿಕರು, ಕೂಲಿಗಾರರು ಇಂಥವರಿಗೆ ನೀಡಿ ಬಹಳ ಒಳ್ಳೆಯದು. ಶಿವ ತೃಪ್ತನಾಗುತ್ತಾನೆ. ವಯಸ್ಸಾದವರು, ತುಂಬಾ ಕಾಯಿಲೆಗೆ ತುತ್ತಾಗಿರುವವರ ಸುತ್ತಲೂ ಗರಿಕೆಯನ್ನು ತಂದಿಡುವುದು ಒಳ್ಳೆಯದು. ಗಣಪತಿ ಮಂತ್ರದಿಂದ ಮನೆಯ ಸುತ್ತೆಲ್ಲ ಗರಿಕೆಯಿಂದ ಓಂ ಗಂ ಗಣಪತಯೇ ನಮಃ ಎಂದು ಪ್ರೋಕ್ಷಣೆ ಮಾಡಿ.

ಬೆಳಿಗ್ಗೆ ಎದ್ದು ಬಿಸಿ ಬಿಸಿ ಆಹಾರ ತಯಾರಿಸಿ ಅವರಿಗೆ ಉಣಬಡಿಸಿ ೬:೧೫ ರ ಸಮಯ ಆಗುವುದರೊಳಗೆ ಆಹಾರ ತಯಾರಿಸಿ ತಿನ್ನಿಸಿ, ಮಲಗಿಸಿ ಅವರ ಜೊತೆ ಯಾರಾದರೂ ಒಬ್ಬರು ಇರುವುದು ಒಳ್ಳೆಯದು. ಹಿರಿಯರ ಪಕ್ಕದಲ್ಲಿ ಇದ್ದು ಅವರ ಯೋಗಕ್ಷೇಮ ವಿಚಾರಿಸುತ್ತಿರಬೇಕು. ಗ್ರಹಣದ ಛಾಯೆ ಅವರ ಮೇಲೆ ಗಂಭೀರ ಪ್ರಭಾವ ಬೀರುತ್ತದೆ ಹಾಗಾಗಿ ಜಾಗರೂಕತೆ, ಮನೆಯಲ್ಲಿರುವ ವಯಸ್ಸಾದವರ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಿ. ತುಳಸಿ ಇಟ್ಟಿರುವ ನೀರು ಅಥವಾ ಗರಿಕೆಯನ್ನು ಇಟ್ಟಿರುವ ನೀರನ್ನು ಅವರಿಗೆ ಕುಡಿಯಲು ನೀಡಿ ಒಳ್ಳೆಯದು. ಹಿರಿಯರ ಪಕ್ಕದಲ್ಲಿ ಕುಳಿತು ಸುಂದರ ಕಾಂಡದತ್ತ ಚರಿತ್ರೆ ಓದುವುದನ್ನು ಮಾಡಿ, ಗ್ರಹಣದ ಹಿಂದಿನ ದಿನದಿಂದ ಬೆಳಗ್ಗಿನ ದಿನದವರೆಗೂ ಒಂದು ದೀಪ ಅಥವಾ ಲೈಟ್ ಹಚ್ಚಿ ಅವರ ಸುತ್ತ ಇಡುವುದು ಒಳ್ಳೆಯದು. ಕಗ್ಗತ್ತಲೆಯಲ್ಲಿ ಮಲಗಲು ಬಿಡಬೇಡಿ.

ಸೂರ್ಯ ಉದಯವಾಗುವ ಮುನ್ನ ರಂಗೋಲಿ ಹಾಕಿ ಅದರ ಮಧ್ಯೆ ಒಂದು ದೀಪವನ್ನು ಹಚ್ಚಿ ಅದು ಇರಲೇಬೇಕು. ಮೀನ ರಾಶಿಯವರು ಜಾಗರೂಕತೆ.! ಏನೋ ಒಂದು ಎಡವಟ್ಟು ಕಾದಿದೆ.! ದುಡ್ಡು, ಪದವಿ, ಗ್ಲಾಮರ್, ಹೆಸರು, ಅಧಿಕಾರ ಹಿಂದೆ ಹೋಗುತ್ತೀರಿ. ಜಗತ್ತಿನಲ್ಲಿ ಒಳ್ಳೆಯ ತಾಯಿಯನ್ನು ಕೊಟ್ಟರೆ ಒಳ್ಳೆಯ ಅಪ್ಪನನ್ನು ಕೊಟ್ಟಿರುವುದಿಲ್ಲ, ಒಳ್ಳೆಯ ಅಪ್ಪ ಅಮ್ಮನನ್ನು ಕೊಟ್ಟಿದ್ದರೆ ಅಲ್ಲೊಂದು ಶ್ರೀಮಂತಿಕೆ ಕೊಟ್ಟಿರುವುದಿಲ್ಲ, ಒಳ್ಳೆ ಶ್ರೀಮಂತಿಕೆಯನ್ನು ಕೊಟ್ಟಿದ್ದರೆ ಒಳ್ಳೆಯ ಆರೋಗ್ಯವನ್ನು ಕೊಟ್ಟಿರುವುದಿಲ್ಲ , ಒಳ್ಳೆಯ ಆರೋಗ್ಯವನ್ನು ಕೊಟ್ಟಿದ್ದರೆ ಒಳ್ಳೆಯ ಆರೋಗ್ಯವಂತ ಸ್ನೇಹಿತರು ಬಂಧುಗಳು ನಮ್ಮ ಜೊತೆ ಇರುವುದಿಲ್ಲ. ಅದೆಲ್ಲವನ್ನೂ ಕೊಟ್ಟಿದ್ದರೂ ಒಳ್ಳೆಯ ಸಂಗಾತಿಯನ್ನು ಕೊಟ್ಟಿರುವುದಿಲ್ಲ.

 

ಒಳ್ಳೆಯ ಮಕ್ಕಳನ್ನು ಕೊಟ್ಟಿದ್ದರೆ ಅವರ ಕಾರ್ಯಕ್ಷೇತ್ರದಲಿ ಏಳಿಗೆ ಇರುವುದಿಲ್ಲ . ಈ ರೀತಿ ಭಗವಂತ ಒಂದಲ್ಲ ಒಂದು ರೀತಿಯಲ್ಲಿ ನೋವನ್ನು ಕೊಟ್ಟಿರುತ್ತಾನೆ. ಪ್ರಕೃತಿಯ ನಿಯಮ ಯಾರನ್ನೂ ಬಿಡುವುದಿಲ್ಲ. ಹಾಗಾಗಿ ಮೀನ ರಾಶಿಯವರು ಜಾಗರೂಕತೆ. ಬಹುದೊಡ್ಡ ಪದವಿ, ಬಹುದೊಡ್ಡ ಸ್ಥಾನ, ಬಹುದೊಡ್ಡ ಆಸೆ, ಬಹುದೊಡ್ಡ ನನ್ನದೇ ,ನನ್ನಿಂದಲೇ ಅನ್ನುವಂಥ ವ್ಯಾಮೋಹಕ್ಕೆ ಒಳಗಾಗಿದ್ದರೆ ,ಆ ವ್ಯಾಮೋಹ ಈ ಗ್ರಹಣಕ್ಕೆ ನಿಮಗೆ ಇಳಿಸಲಿದೆ. ನನ್ನಿಂದ ಎನ್ನುವುದು ಯಾವುದೂ ಇಲ್ಲ ಎಲ್ಲ ಭಗವಂತನದ್ದೇ. ಪರಸ್ಥಳ, ಪರ ಉದ್ಯೋಗ, ಪರ ದೇಶದಲ್ಲಿ ಕೆಲಸ ವ್ಯವಹಾರ, ಬಿಸಿನೆಸ್, ವಿದ್ಯಾಭ್ಯಾಸ ಮಾಡುತ್ತಿದ್ದರೆ ಪರಿಶ್ರಮದಿಂದ ಒಂದು ಅಲ್ಪ ಲಾಭವನ್ನು ನೋಡುತ್ತೀರಿ.

 

ಮನೆಯಲ್ಲಿ ಶುಭ ಕಾರ್ಯಗಳ ಸಿಂಚನ, ಪಾರ್ಟನರ್ ಶಿಪ್ ನಲ್ಲಿ ಮೋಸ ಉಂಟು ಜಾಗರೂಕತೆ. ಆದರೆ ಚಾರ್ಟೆಡ್ ಅಕೌಂಟ್ ಆಗಿದ್ದರೆ, ಬಿಸಿನೆಸ್ ಮ್ಯಾನೇಜ್ಮೆಂಟ್, ಲಾಯರ್ ,ಸರ್ಕಾರ ಮಟ್ಟದ ಕೆಲಸ ,ಕಾರ್ಯ ದೊಡ್ಡ ಸ್ಥಾನದಲ್ಲಿ ಇರುವವರಿಗೆ ಒಂದು ಅವಮಾನವೂ ಹುಡುಕಿಕೊಂಡು ಬರಲಿದೆ ಜಾಗರೂಕತೆ ಎಚ್ಚರಿಕೆ. ಆದಷ್ಟು ಶಿವಾ ಕ್ಷೇತ್ರಕ್ಕೆ ಹೋಗಿ ಇದ್ದು ಗ್ರಹಣದ ದಿನ ಅಥವಾ ಗ್ರಹಣದ ನಂತರ ವಿಶೇಷ ಪೂಜೆಯನ್ನು ಪಡೆದು ಶಿವನನ್ನು ನೆನೆಸಿಕೊಂಡು ವಸ್ತ್ರವೂ ಊಟವನ್ನು ಸಮರ್ಪಿಸಿ ಒಳ್ಳೆಯದಾಗಲಿದೆ.

ಇಂದಿನ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ,

ಮೇಷ– ಇಂದು ನಿಮ್ಮ ದಿನ ಪರವಾಗಿಲ್ಲ ತೃಪ್ತಿದಾಯಕ. ಯಾವುದೋ ಒಂದು ರೂಪದಲ್ಲಿ ಯಾರೂ ನಿಮ್ಮ ಕೈಯನ್ನು ಹಿಡಿಯುತ್ತಾರೆ. ಸೋಮವಾರ ಗಡಿಬಿಡಿ ಇದ್ದರು ಕೂಡ ಪರಿಶ್ರಮವಿದ್ದರೂ ಕೂಡ ಶುಭ ಸುದ್ದಿಯೊಂದನ್ನು ಕೇಳುತ್ತೀರಿ.

 

ವೃಷಭ– ಗುರುವಿನ ಸಾರದಲ್ಲಿ ಚಂದ್ರನಿದ್ದು, ಆ ಗುರು ಅಷ್ಟಮದ ಕೇಳಿರುವುದರಿಂದ ಯಾರದ್ದೋ ಹತ್ತಿರದವರಿಂದ ನೋವು, ಅಪಮಾನ, ಸಂಕಟ ಎದುರಾಗುತ್ತದೆ. ಡಾಕ್ಟರ್ ತಪಾಸಣೆ ಒದ್ದಾಟ, ಓಡಾಟ, ಮಾನಸಿಕ ನೋವು ಇರಲಿದೆ ಜಾಗರೂಕತೆ.

 

ಮಿಥುನ– ಏನಾದರೂ ಭೂಮಿ, ಕನ್ವೆಕ್ಷನ್, ಇಂಜಿನಿಯರಿಂಗ್, ಆಟೊಮೊಬೈಲ್ ಲೈನ್ ನಲ್ಲಿ ಕೆಲಸ ಮಾಡುತ್ತಿದ್ದರೆ ಪರಿಶ್ರಮದಿಂದ ಒಂದು ಲಾಭ ಒಳ್ಳೆಯದಾಗಲಿದೆ.

 

ಕಟಕ– ಪರಿಪೂರ್ಣ ಶಶಿಮಂಗಳ ಪ್ರಭಾವ ದೊರೆಯುವುದು. ಮಕ್ಕಳು, ಮನೆ, ಕುಟುಂಬ, ಓಡಾಟ, ವ್ಯವಹಾರ ಇವುಗಳ ವಾರದಲ್ಲೊಂದು ಶುಭ ಸುದ್ದಿಯೊಂದನ್ನು ಕೆಳ ತಕ್ಕಂತ ಒಂದು ಅದ್ಭುತವಾದ ದಿನ ಚೆನ್ನಾಗಿದೆ.

 

ಸಿಂಹ– ಸ್ವಲ್ಪ ಧೈರ್ಯದಿಂದ ಮುನ್ನುಗ್ಗುವಿರಿ. ಆದರೂ ಮಕ್ಕಳ ಜವಾಬ್ದಾರಿಯೋ ಮಕ್ಕಳಾಗಿ ನೀವು ನಿಮ್ಮ ಹಿರಿಯರ ಜವಾಬ್ದಾರಿಯಲ್ಲೊಂದು ನೋವು. ಹನುಮ ಕ್ಷೇತ್ರಕ್ಕೆ ಹೋಗಿ ಬನ್ನಿ ಸಮಾಧಾನ ದೊರೆಯಲಿದೆ ಅಥವಾ ಒಂದು ಪುಟ್ಟ ಸುಂದರಕಾಂಡ ಓದಿ ಪಾರಾಯಣ ಮಾಡಲು ಪ್ರಯತ್ನ ಮಾಡಿ ಸಮಾಧಾನ ದೊರೆಯಲಿದೆ.

 

ಕನ್ಯಾ– ಸಂಸಾರದಲ್ಲಿ ಒಂದು ಹುಳಿಯ ಭಾವ.! ಓಡಾಟದಲ್ಲಿ ಒಂದು ಪಾಲುದಾರಿಕೆ ಕೊಡುವುದು, ತೆಗೆದುಕೊಳ್ಳುವುದು ,ಕಾಗದ ಪತ್ರವೋ, ಡಾಕ್ಯುಮೆಂಟೇಷನ್, ಲಾಯರ್ ಕೇಳದೆ ವ್ಯವಹಾರ ಮಾಡಬೇಡಿ ಜಾಗರೂಕತೆ. ವಿಚಾರಿಸಿ, ಚಿಂತಿಸಿ ಮನೆಯವರ ಮಾತನ್ನು ಮೀರಬೇಡಿ ಹೊರಗಡೆಯವರ ಮಾತನ್ನು ಕೇಳಬೇಡಿ.

 

ತುಲಾ– ವಿಶೇಷವಾದಂಥ ಒಂದು ದಿನ. ಶತ್ರುಗಳಿಂದಲೂ ಲಾಭ ಆದರೆ ನಿಮ್ಮಿಂದ ಶತ್ರುಗಳಿಗೂ ಲಾಭ. ನಂಬಿ ಮೋಸ ಹೋಗುತ್ತೀರಿ, ದುಡ್ಡು ಕೊಟ್ಟು, ಶ್ಯೂರಿಟಿ ಕೊಟ್ಟು, ಚೆಕ್ಕು ಕೊಟ್ಟರೆ ಜಾಗರೂಕತೆ. ಇವತ್ತು ನಂಬಿಕೆಗೆ ಅರ್ಹ ಯಾರೂ ಇಲ್ಲ.

 

ವೃಶ್ಚಿಕ– ಕುಟುಂಬಕ್ಕೋಸ್ಕರ ಖರ್ಚು, ವ್ಯವಹಾರ ಅಭಿವೃದ್ಧಿಗೋಸ್ಕರ ಖರ್ಚು ನಿಭಾಯಿಸಿಕೊಂಡು ಹೋಗುವಂಥ ಒಂದು ದಿನ ಸ್ವಲ್ಪ ಭಾರವಾಗಲಿದೆ.

 

ಧನಸ್ಸು– ಪ್ರಯೋಗಾತ್ಮಕ ವಿಚಾರಗಳಲ್ಲಿ ಬಹುದೊಡ್ಡ ಯಶಸ್ಸು ನೋಡುತ್ತೀರಿ. ಧರ್ಮದ ಹಾದಿಯಲ್ಲಿ ಇದ್ದರೆ ಧರ್ಮವೇ ಕಾಪಾಡುತ್ತದೆ. ಕಡು ಕಷ್ಟದಲ್ಲಿ ನಮಗೆ ಯಾರಾದರೂ ಒಬ್ಬರು ಬಂದು ಕೈ ಹಿಡಿದು ಕಾಪಾಡುತ್ತಾರೆ ಅಂತ ಒಂದು ಪ್ರಭಾವ ಶುಭವಾಗಲಿದೆ.

 

ಮಕರ– ಒತ್ತಡ, ಹಣಕಾಸಿನ ಒತ್ತಡ, ಕುಟುಂಬದ ಒತ್ತಡ ಎಲ್ಲೋ ಒಂದು ಗಾಬರಿ ಆದರೂ ದಿನದ ಅಂತ್ಯಕ್ಕೆ ಶುಭ ಸುದ್ದಿಯೊಂದನ್ನು ಕೇಳ್ತೀರಿ ಚೆನ್ನಾಗಿದೆ.

 

ಕುಂಭ– ಎಲ್ಲೋ ಅತಿಯಾದ ನಂಬಿಕೆ.! ಗಾಬರಿ, ಅತಿಯಾದ ಗಾಬರಿ, ಮತ್ತಷ್ಟು ಗಾಬರಿ ಈ ರೀತಿಯ ಒಂದು ತಲ್ಲಣ ಉದ್ಯೋಗ ನಿಮಿತ್ತ, ವ್ಯವಹಾರ ನಿಮಿತ್ತ ,ಕುಟುಂಬ ನಿಮಿತ್ತ ಮಾಡತಕ್ಕಂತಹ ಒಂದು ಪ್ರಚೋದನೆ ಆಗುತ್ತದೆ. ಆದರೂ ಕೂಡ ನಿಭಾಯಿಸಿಕೊಂಡು ಹೋಗುವಂಥ ಒಂದು ದಿನ ಶುಭವಾಗಲಿದೆ.

 

ಮೀನ– ಉದ್ಯೋಗ ಪರಸ್ಥಳ, ಪ್ರಯಾಣ ,ದುಡ್ಡು, ಕಾಸು, ಶ್ಯೂರಿಟಿ, ಕೋರ್ಟ್, ಕಟಕಟೆ, ಓಡಾಟ, ಭೂಮಿ, ಒಡಹುಟ್ಟಿದವರು ಇತರ ಯಾವುದಾದರು ವಿಚಾರದಲ್ಲಿ ಮನಸ್ಸಿಗೆ ಘಾಸಿಯಾಗುತ್ತದೆ. ಆದಷ್ಟು ಇವತ್ತು ಅಮ್ಮನವರ ಕ್ಷೇತ್ರಕ್ಕೆ ಹೋಗಿ ಬನ್ನಿ ಅಥವಾ ತಾಯಿಯ ವಸ್ತುವನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳಿ ತಾಯಿಗೆ ಪ್ರೀತಿಯನ್ನು ತೋರಿಸಿ ಸಮಾಧಾನವಾಗಲಿದೆ ಶುಭವಾಗಲಿ.

LEAVE A REPLY

Please enter your comment!
Please enter your name here