ಕುಂಭ ರಾಶಿಯವರಿಗೆ ಗ್ರಹಣದ ಛಾಯೆ, ಪ್ರಭಾವ ಹೇಗಿರಲಿದೆ ಎಂಬುದನ್ನು ಶ್ರೀ ರವಿಶಂಕರ್ ಗುರೂಜಿ ಅವರು ಇಂದಿನ ಸಂಚಿಕೆಯಲ್ಲಿ ತಿಳಿಸಿಕೊಟ್ಟಿದ್ದಾರೆ. ಕುಂಭ ರಾಶಿಯವರು ಬೆಳಗ್ಗೆ ಎದ್ದು ಗರಿಕೆಯನ್ನು ತಂದಿಟ್ಟುಕೊಂಡು ವಿಷ್ಣು ಸಹಸ್ರನಾಮವನ್ನು ಪಠಿಸಿ, ಕೇಳಿ, ದತ್ತ ಚರಿತ್ರೆ, ಹನುಮ ಚರಿತ್ರೆ, ಹನುಮಾನ್ ಚಾಲೀಸ್, ಸಾಯಿಬಾಬಾ ಮಂತ್ರ, ಅತಿ ಮುಖ್ಯವಾಗಿ ಸುಂದರ ಕಾಂಡ, ರಾಮ ನಾಮ, ರಾಘವೇಂದ್ರ ಸ್ವಾಮಿಗಳ ಜಪ, ಶಿವನನ್ನು ನೆನೆದು ಓಂ ನಮಃ ಶಿವಾಯ ಎಂದು ಜಪ ಮಾಡಿಕೊಳ್ಳಿ ಒಳ್ಳೆಯದು. ಗರ್ಭಿಣಿ ಸ್ತ್ರೀಯರು ಗರಿಕೆಯನ್ನು ಕೈಯಲ್ಲಿ ಹಿಡಿದುಕೊಳ್ಳಿ ಎಲ್ಲೂ ಹೋಗಬೇಡಿ.
ಆದಷ್ಟು ಗರ್ಭಿಣಿ ಸ್ತ್ರೀಯರು ಹೊಟ್ಟೆ ಮೇಲೆ ಕೈಯಿಟ್ಟು ಓಂ ನಮ್ಮ ಭಗವತಿ ವಾಸುದೇವಾಯ ನಮಃ ಎಂದು ಜಪ ಮಾಡಿಕೊಳ್ಳಿ. ಸೂರ್ಯ ಉದಯವಾಗುವ ಮುನ್ನವೇ ಎದ್ದು ಬಿಸಿ ಬಿಸಿ ಫಲಹಾರ ಮಾಡಿಕೊಂಡು ಸೇವಿಸಿ. ಪ್ರಚೋದನೆಗೆ ಒಳಗಾಗಬೇಡಿ, ನಿಮಗೆ ರಾಜಯೋಗ, ಮರಳಿ ಅಧಿಕಾರ ಪಟ್ಟ, ಆರು- ಏಳು ವರ್ಷಗಳಿಂದ ಅಧಿಕಾರ ಅನುಭವಿಸುವವರಿಗೆ ಅಧಿಕಾರದ ಕೆಳಗೆ ಇಳಿಯುವ ಸಮಯ, ವಯಸ್ಸಾದ ಕುಂಭ ರಾಶಿಯವರಿಗೆ ಸ್ವರ್ಗಸ್ಥ, ಅಧಿಕಾರವನ್ನು ನೀತಿ ನಿಜಯತ್ತು ಇದ್ದು ಜಡ್ಜ್, ಪೊಲೀಸ್, ಧರ್ಮಗುರು ಆಗಿದ್ದರೆ ದೊಡ್ಡ ಹೆಸರು ಒದಗಿ ಬರುತ್ತದೆ. ನೀವು ಇಡುವ ಹೆಜ್ಜೆ ಯಾವುದಾದರು ಗೆಲುವು ನಿಮ್ಮದೆ. ಸೂರ್ಯ ಪ್ರಭಾವ, ಚಂದ್ರ ಪ್ರಭಾವ ನಿಮಗೆ ಹೆಚ್ಚು ಕುಟುಂಬದವರ ವಿಚಾರದಲ್ಲಿ ನೀವು ಹುಳಿಯೇ.!
ಯಾವುದೋ ಯೋಜನೆಗಳಿಗೆ ರೂಪುರೇಷೆಯನ್ನ ಹಾಕುತ್ತಿದ್ದೀರಿ ಎಚ್ಚರಿಕೆಯಿಂದ ಹೆಜ್ಜೆ ಹಾಕಿ, ಯೋಚಿಸಿ ಚಿಂತಿಸಿ ಧರ್ಮ ದೇವತೆಗೆ ಶರಣಾಗತಿ ಹೊಂದಿ. ಸರ್ಪ ಕ್ಷೇತ್ರಕ್ಕೆ ಹೋಗಿ ಬರುವುದು ಒಳ್ಳೆಯದು. ಕುಂಭ ರಾಶಿಯವರಿಗೆ ಹಂಚುವ ಬುದ್ಧಿ ಹೆಚ್ಚಿರುತ್ತದೆ. ಮನೆಯಲ್ಲಿ ಪುತ್ರ ಸಮಾಗಮ, ಮನೆಯಲ್ಲಿ ತುಂಬಾ ದಿನಗಳ ನಂತರ ಪೂಜಾ ವಿಧಿ ವಿಧಾನಗಳು, ಹಬ್ಬದ ವಾತಾವರಣ, ಮನೆಯಲ್ಲಿ ಯಥೇಚ್ಛವಾದ ದುಡ್ಡು ಹಣ ನೋಡುತ್ತೀರಿ. ದೇವರ ಹೆಸರಿನಲ್ಲಿ ವೃದ್ದಾಶ್ರಮ, ಅನಾಥಾಶ್ರಮಕ್ಕೆ ಸೇವೆ ಮಾಡುತ್ತಿರುವವರಿಗೆ ವಿಶೇಷ ಲಾಭ. ದೇವಸ್ಥಾನ ನೋಡಿಕೊಳ್ಳುತ್ತಿದ್ದರೆ, ಅನಾಥಾಶ್ರಮ ನೋಡಿಕೊಳ್ಳುತ್ತಿದ್ದರೆ ಜನಸಾಮಾನ್ಯರಿಗೆ ಸಹಾಯ ಮಾಡುತ್ತಿದ್ದರೆ ವಿಶೇಷ ಧನಲಾಭ, ಹೆಸರು, ಕೀರ್ತಿ ಪಡೆಯುತ್ತೀರಿ.
ಅದರಲ್ಲೂ ಯಾರು ಕುಂಭ ರಾಶಿಯವರಾಗಿ ಹುಟ್ಟಿ ಅವರ ಜಾತಕದಲ್ಲಿ ಎರಡನೇ ಮನೆ, ಒಂಬತ್ತನೇ ಮನೆ ,ಹನ್ನೊಂದನೇ ಮನೆ ಪಂಚಮ ಭಾಗದಲ್ಲಿ ಶನಿ, ಗುರುವಿನ ಕೇತುವಿನ ಸಂಗಮ ಇರುವ ಜಾತಕಸ್ಥರಿಗೆ ರಾಜಯೋಗ.! ಕುಂಭ ರಾಶಿಯವರಿಗೆ ಶತ್ರುವಿನಿಂದ ಕೂಡ ಲಾಭ ದೊರೆಯಲಿದೆ. ಮರಳಿ ಅಧಿಕಾರ ಪಡೆಯುವಿರಿ. ಕೀರ್ತಿ ಪಡೆಯುವಿರಿ, ಪ್ರತಿಷ್ಠೆ, ಗೌರವ ಪಡೆಯುವಿರಿ, ಯಥೇಚ್ಛವಾಗಿ ಧರ್ಮದೇವತೆ ಆಶೀರ್ವಾದ ಪಡೆಯುತ್ತೀರಿ. ಚಾಮುಂಡೇಶ್ವರಿ, ಉಗ್ರ ದೇವಿ, ಕಾಳಿ ಕಾಂಭ, ಬನಶಂಕರಿ, ರಾಜರಾಜೇಶ್ವರಿ, ನಿಮಿಷಾಂಬ, ದುರ್ಗ ಸ್ವರೂಪಿಯಾದ ಕಾಲ ಭೈರವಿ ಇಂಥ ಒಂದು ಕ್ಷೇತ್ರಗಳಲ್ಲಿ ಆದಷ್ಟು ಒಂದು ಸೇವಾ ಅರ್ಚನೆ ಮಾಡಿಸಿ ಒಳ್ಳೆಯದಾಗಲಿದೆ. ಒಂದು ಗ್ರಹಣದಿಂದ ನಿಮಗೆ ದುಃಖ ನೋವು ಎಲ್ಲವೂ ಅಳಿಸಿಹೋಗುತ್ತದೆ. ಧರ್ಮ ಕಾರ್ಯದ ಕಡೆ ಹೆಚ್ಚು ಒಲವು ತೋರಿಸಿ ಒಳ್ಳೆಯದಾಗಲಿದೆ.
ಇಂದಿನ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ,
ಮೇಷ– ಸ್ವಲ್ಪ ಒಡಹುಟ್ಟಿದವರು ವಿಚಾರದಲ್ಲೊಂದು ಸಣ್ಣ ಪ್ರಚೋದನೆ, ಗಾಬರಿಯಾಗುವ ಪ್ರಸಂಗ. ಭೂಮಿ ವಿಚಾರ, ಮನೆ ವಿಚಾರದಲ್ಲಿ ಆತುರ ನಿರ್ಧಾರದಿಂದ ಪೆಟ್ಟು ಜಾಗರೂಕತೆ.
ವೃಷಭ– ಯಾಕೋ ಒಂದು ರೀತಿ ಉನ್ಮಾದ ಸ್ಥಿತಿಯಲ್ಲಿ ಇರುತ್ತೀರಿ. ಕುಡುಕರಾಗಿದ್ದರೆ ಕೋಪದ ಪ್ರಭಾವದಲ್ಲಿದ್ದರೆ ಪೂರ್ಣ ಪ್ರಭಾವವನ್ನು ನೋಡುತ್ತೀರಿ ಜಾಗರೂಕತೆ. ಬೆಳಗ್ಗೆದ್ದು ಮನೆಯಲ್ಲಿ ಮಾಡಿರುವ ಫಲಹಾರವನ್ನು ಮನೆಯವರು ತಿನ್ನುವ ಮುನ್ನ ಪಶು ಪಕ್ಷಿಗಳಿಗೆ ನೀಡಿ ಒಳ್ಳೆಯದಾಗಲಿದೆ.
ಮಿಥುನ– ಏನೋ ಒಂದು ಮಂದಗತಿ, ಏನೋ ಒಂದು ಹುಳಿ. ಇಂದು ನೀವು ನೀವಾಗಿರುವುದಿಲ್ಲ ದುಡುಕಬೇಡಿ. ಇವತ್ತು ದುರ್ಗಾದೇವಿಯ ದರ್ಶನ ಮಾಡಿಕೊಳ್ಳಿ, ಬರುವ ದುರ್ಘಟನೆಯನ್ನು ಒಂದು ಮಟ್ಟಿಗೆ ತಪ್ಪಿಸಬಹುದು.
ಕಟಕ– ಭೂಮಿ, ಆಲೋಚನೆ ಮುಂಬರುವ ದಿನಗಳ ಬಗ್ಗೆ, ನೆನಪಿಟ್ಟುಕೊಳ್ಳಿ ಹಿಂದಿನ ದಿನಗಳ ಬಗ್ಗೆ ನಮಗೆ ನೆನಪಿರುವುದಿಲ್ಲ. ಇನ್ನು ಮುಂಬರುವ ದಿನಗಳ ಬಗ್ಗೆ ಏಕೆ ಯೋಚನೆ.? ಇವತ್ತು ಆದಷ್ಟು ಪುಟ್ಟದಾಗಿ ಹೊಸಿಲಿನ ಹೊರಗಡೆ ಎಳ್ಳೆಣ್ಣೆ ದೀಪವನ್ನು ಹಚ್ಚಿ ಹುಳಿ ಪದಾರ್ಥವನ್ನು ತಿನ್ನಬೇಡಿ.
ಸಿಂಹ– ಉದ್ರೇಕ ,ಉನ್ಮಾದ, ಹುಚ್ಚುತನ ನಂದೇ, ನನ್ನದೆ, ನಾನೇ ಅನ್ನತಕ್ಕಂತಹ ಪ್ರಭಾವಕ್ಕೆ ಒಳಗಾಗುವಂತ ಒಂದು ದಿನ. ಪ್ರತಿಯೊಂದು ಭಗವಂತನ ನಿಶ್ಚಯದಂತೆ ನಡೆಯುತ್ತದೆ. ಹೆಚ್ಚು ಮುಂದಾಲೋಚನೆ ಬೇಡ, ನಿಮಗೆ ತಿಳಿಯದ ಸತ್ಯ ಇರುತ್ತದೆ ಅದನ್ನು ಅರಿತುಕೊಳ್ಳಿ ಜಾಗರೂಕತೆ.
ಕನ್ಯಾ– ಇಂದು ನಿಮ್ಮ ದಿನ ಚೆನ್ನಾಗಿದೆ. ದೈವದರ್ಶನ, ಗುರುದರ್ಶನ ,ಧರ್ಮದರ್ಶನ ಪ್ರಾಪ್ತಿ ಉಂಟು. ಆಕಸ್ಮಿಕ ದೇವದರ್ಶನ ಕ್ಷೇತ್ರಕ್ಕೆ ಹೋಗಿ ಬರುತ್ತೀರಿ. ಮನೆಯಲ್ಲಿ ಸುಂದರಕಾಂಡ ಪಾರಾಯಣ ಮಾಡಿಕೊಳ್ಳಿ ಒಳ್ಳೆಯದಾಗಲಿದೆ.
ತುಲಾ– ಮನೆಯ ಹಿರಿಯರ ವಿಚಾರದಲ್ಲಿ ಒಂದು ಶಾಪಗ್ರಸ್ತರಾಗುವಿರಿ. ಹಿರಿಯರು ಯಾವಾಗಲೊ ಕೊಟ್ಟ ಶಾಪ, ಆಡಿದ ಮಾತು ಇವತ್ತು ನಿಮಗೆ ಎದುರಾಗಲಿದೆ. ಹಿರಿಯರ ಮಾತಿಗೆ ಬೆಲೆಯನ್ನು ಕೊಡಿ ಅವರ ಮನಸ್ಸನ್ನು ನೋಯಿಸಬೇಡಿ, ನೋಯಿಸಿದ ಹಾಗೆ ನೋಡಿಕೊಳ್ಳಿ ಶುಭವಾಗಲಿ.
ವೃಶ್ಚಿಕ– ಮನಸ್ಸಿನಲ್ಲಿ ಏನೋ ಒಂದು ಸಂಕಟ, ತಲ್ಲಣ, ಬಾಧೆ, ಹಿರಿಯರ ವಿಚಾರ, ಆರೋಗ್ಯ ವಿಚಾರದಲ್ಲಿ ತೊಳಲಾಟ ಇರುತ್ತದೆ. ಬೂದುಗುಂಬಳ ಕಾಯಿಯ ದೀಪವನ್ನು ಹಚ್ಚಿ ಅಥವಾ ಮನೆಗೆ ಬೂದುಗುಂಬಳ ಕಾಯಿಯನ್ನು ಕಟ್ಟಿ ಒಳ್ಳೆಯದಾಗಲಿದೆ.
ಧನಸ್ಸು – ಸಣ್ಣ ಕಂಪನಿ, ವ್ಯವಹಾರ ನಿಮಿತ್ತ, ನಾಳೆ ಬರುವ ಸೋಮವಾರದ ಟೆನ್ಷನ್ ಜವಾಬ್ದಾರಿ, ತೆಗೆದುಕೊಳ್ಳುವುದು, ಕೊಡುವುದು ಈ ವಿಚಾರಗಳಲ್ಲಿ ತಲೆನೋವು ಹುಡುಕಿಕೊಂಡು ಬರಲಿದೆ ದುಡುಕಬೇಡಿ ಜಾಗರೂಕತೆ.
ಮಕರ– ಪಾರ್ಟ್ನರ್ಶಿಪ್, ಫ್ರೆಂಡ್ ಶಿಪ್, ಇನ್ವೆಸ್ಟ್ ಮೆಂಟ್ ಯಾವುದೋ ಗೊತ್ತೋ ಗೊತ್ತಿಲ್ಲದೆ ಇರುವ ವಿಚಾರಗಳಲ್ಲಿ ಸಿಲುಕಿಕೊಳ್ಳುತ್ತೀರಿ. ಸುಳ್ಳು ವದಂತಿ, ನಕಲಿ ಮೆಸೇಜ್ ಗಳಿಗೆ ಕಿವಿಗೊಡಬೇಡಿ ಜಾಗರೂಕತೆ ಶಿವ ಧ್ಯಾನ ಮಾಡಿ.
ಕುಂಭ– ಇಂದು ಅತೃಪ್ತ, ಒತ್ತಡ ಇರುತ್ತದೆ. ಆದರೂ ನಿಭಾಯಿಸಿಕೊಂಡು ಹೋಗುತ್ತೀರಿ. ಗೆಲುವನ್ನು ನೋಡುತ್ತೀರಿ ಯೋಚಿಸಬೇಡಿ, ಸ್ವಲ್ಪ ಮಂದಗತಿಯಲ್ಲಿ ಸಾಗಿ ವಿನಾಯಕರ ಜಪವನ್ನು ಮಾಡಿಕೊಳ್ಳಿ, ತಾಯಿ ಆರೋಗ್ಯ, ಹಿರಿಯರ ಆರೋಗ್ಯದ ಕಡೆ ಗಮನ ಕೊಡಿ.
ಮೀನ– ನಿಮ್ಮ ಆರೋಗ್ಯ, ಮಕ್ಕಳ ಆರೋಗ್ಯದ ಕಡೆ ಗಮನ ಕೊಡುವುದು ಒಳ್ಳೆಯದು. ಇನ್ಫೆಕ್ಷನ್ ತೊಂದರೆಗಳಿಂದ ಅನುಭವಿಸುತ್ತೀರಿ. ಬಾಯಿಯ ಇನ್ಫೆಕ್ಷನ್ ಜಾಗರೂಕತೆ ಇವತ್ತು ಅದರ ಪ್ರಭಾವ ಉಂಟು ವ್ಯಗ್ರತ್ವ ಉಂಟು ಜಾಗರೂಕತೆ.