ದಿನ ಭವಿಷ್ಯ 21 ಡಿಸೆಂಬರ್ 2019.!

0
358

ಮಕರ ರಾಶಿಯವರಿಗೆ ಗ್ರಹಣದ ಛಾಯೆ, ಪ್ರಭಾವ ಹೇಗಿರಲಿದೆ ಎಂಬುದನ್ನು ಶ್ರೀ ರವಿಶಂಕರ್ ಗುರೂಜಿ ಅವರು ಇಂದಿನ ಸಂಚಿಕೆಯಲ್ಲಿ ತಿಳಿಸಿಕೊಟ್ಟಿದ್ದಾರೆ. ಈ ಬಾರಿ ನಡೆಯುತ್ತಿರುವ ಗ್ರಹಣಕ್ಕೆ ಶನಿ ಕೇತು,ಬುಧ ಎಲ್ಲರೂ ಸೇರಿಕೊಂಡಿದ್ದಾರೆ. ಶನಿ ಗುರು ಧರ್ಮಕಾರಕ, ಕರ್ಮಕಾರಕ, ಜ್ಞಾನಕಾರಕ, ಜ್ಞಾನವನ್ನು ಕೊಡತಕ್ಕಂತಹ, ಜ್ಞಾನ ಪಡೆಯತಕ್ಕಂತ ವಿದ್ಯಾರ್ಥಿಗಳ ಆ ಒಂದು ವಿಸ್ಫೋಟ ನಡೆದು ಹೋಗಿದೆ. ನಿಮಗೆ ಶನಿ ಎಲ್ಲಿದ್ದಾನೆ.? ಶನಿ ೧೨ನೇ ಮನೆಯಲ್ಲಿದ್ದಾನೆ. ಅದರ ಜೊತೆಯಲ್ಲಿ ಗುರು ಕೇತು ಸೂರ್ಯ ಪುತ್ರ, ಶನಿ ರಾಹು ಗುರುಗಳ ಸಪ್ತಗ್ರಹ ಕೂಟ ನಡೆಯುತ್ತಿದೆ.

 

ಶುಕ್ರ-ರಾಹು ಗುರು ತತ್ವಕ್ಕೆ ಒಳಗಾಗಿದ್ದಾನೆ. ಹಾಗಾಗಿ ಅಲ್ಲೊಂದು ಪೆಟ್ಟು, ಎಡವಟ್ಟು, ವ್ಯವಹಾರ ನಷ್ಟ, ವ್ಯಾಪಾರ ನಷ್ಟ, ಕೋರ್ಟ್ ಸಮಸ್ಯೆ, ಅಲೆಮಾರಿ ಜೀವನ, ದೇಶ ಬಿಟ್ಟು ಹೋಗುವುದು, ಬುದ್ಧಿ ನಿಮ್ಮ ಸ್ವಾಧೀನದಲ್ಲಿ ಇರುವುದಿಲ್ಲ. ಜ್ಞಾನ ನಿಮ್ಮ ಸ್ವಾಧೀನದಲ್ಲಿ ಇರುವುದಿಲ್ಲ. ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಬರುವುದಿಲ್ಲ. ನಿಮ್ಮ ಮನೆಯ ಅಧಿಪತಿಯೇ ವ್ಯಯ ಭಾಗದಲ್ಲಿ ಕುಳಿತಿರುವಾಗ, ಭಾಗ್ಯ ಕಾರಕನು ವ್ಯಯ.! ಅದೃಷ್ಟಕ್ಕೋಸ್ಕರ ಖರ್ಚು, ಗುರು ಕೇತು ಜೊತೆ ಕುಳಿತಿರುವಾಗ ಜ್ಞಾನದ ಕಡೆ ಗಮನ ಬರುವುದಿಲ್ಲ. ಒಳ್ಳೆಯ ಬುದ್ಧಿ ಇರುವವರು ವಕ್ರ ಬುದ್ಧಿಗೆ ಹೋಗುತ್ತೀರಿ, ವಕ್ರಬುದ್ಧಿ ಇರುವವರು ಒಳ್ಳೆಯ ಕಡೆ ಬರುತ್ತೀರಿ ಆ ಪ್ರಭಾವ ಇರುತ್ತದೆ.

 

ನೀವು ಬೇಗ ಪ್ರಚೋದನೆಗೆ ಒಳಗಾಗುತ್ತೀರಿ. ಪ್ರಚೋದನೆಗೆ ಒಳಪಟ್ಟು ಕೆಟ್ಟ ಕೆಲಸ ಮಾಡುತ್ತೀರಿ ಈ ರೀತಿಯ ಬದಲಾವಣೆಯನ್ನು ಗ್ರಹಣದ ಸಮಯ ಮಕರ ರಾಶಿಯವರಿಗೆ ಎದುರಾಗಲಿದೆ. ಇರುವ ಅಧಿಕಾರ ಪದಚ್ಯುತಿ. ಗುರು ಕೇತು ಸೇರಿರುವ ಕಾರಣ ಸಾರ್ವಜನಿಕರಿಂದ ಅಪಮಾನ, ಅವಮಾನ, ಕೋರ್ಟು, ಕಚೇರಿ, ಪೊಲೀಸ್ ಕಡೆ ಹೋಗುವಂಥ ಸನ್ನಿವೇಶಗಳು ಎದುರಾಗಲಿದೆ ಜಾಗರೂಕತೆ. ಕಾನೂನಿನಲ್ಲಿ ಬಹುದೊಡ್ಡ ಮಾರ್ಪಾಟು, ದುಡುಕಬೇಡಿ ಆತುರ ಪಡಬೇಡಿ, ತುಂಬಾ ದೊಡ್ಡ ರಿಸ್ಕ್ ತೆಗೆದುಕೊಳ್ಳಬೇಡಿ ದೊಡ್ಡ ಮಟ್ಟದ ಹೂಡಿಕೆ ಮಾಡಬೇಡಿ ನೆನಪಿಟ್ಟುಕೊಳ್ಳಿ.

 

ತಂದೆ ಆರೋಗ್ಯ, ತಾಯಿ ಆರೋಗ್ಯ, ಒಡಹುಟ್ಟಿದವರ, ಸೋದರಿಯ ಜೀವನದಲ್ಲಿ ಅಲ್ಲೋಲ ಕಲ್ಲೋಲ ಇದೇ ಜಾಗರೂಕತೆ. ಅವರನ್ನು ಕಾಪಾಡಿ ಅವರಿಗೆ ನಿಮ್ಮ ಕೈಯಲ್ಲಿ ಆದಷ್ಟು ಸಹಾಯ ಹಸ್ತ ನೀಡಿ, ಅವರ ಮಕ್ಕಳಿಗೆ ಒಂದು ಸಹಾಯ ಮಾಡಿ ಒಳ್ಳೆಯದು. ಗ್ರಹಣದ ಪ್ರಭಾವ ೯೦ ದಿನ ಇರುತ್ತದೆ ಎಚ್ಚರಿಕೆ. ಆದಷ್ಟು ನೀವು ಗೋಧಿ ಮತ್ತು ಹುರುಳಿಯನ್ನು ಕೆಂಪು ವಸ್ತ್ರ, ಮಿಶ್ರಿತ ಬಣ್ಣದ ಬಟ್ಟೆಯಿಂದ ಕಟ್ಟಿ ಆಲಯಕ್ಕೆ, ವೃದ್ಧಾಶ್ರಮಕ್ಕೆ ತಾಂಬೂಲ ಸಮೇತ ದಾನ ಮಾಡಿ ಸಮಾಧಾನವಾಗಲಿದೆ ಒಳ್ಳೆಯದಾಗಲಿ.

ಇಂದಿನ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ,

ಮೇಷ– ಇಂದು ನಿಮ್ಮ ದಿನ ಚೆನ್ನಾಗಿದೆ. ವಿಶೇಷವಾಗಿ ಯಾವುದೋ ಗುರು ಸಾಕ್ಷಾತ್ಕಾರ ನಿಮ್ಮನ್ನು ಕಾಪಾಡುತ್ತದೆ. ಭೂಮಿ ವ್ಯವಹಾರ, ಟೆಕ್ನಿಕಲ್ ಸರ್ವಿಸ್, ಟೆಕ್ನಾಲಜಿಯಲ್ಲಿ ಕೆಲಸ ಮಾಡುತ್ತಿರುವವರಿಗೆ ಅದ್ಭುತ ಪ್ರಗತಿ ಕಾಣ ತಕ್ಕಂತಹ ಒಂದು ದಿನ.

 

ವೃಷಭ– ಬೆಂಕಿ, ಪೊಲೀಸ್ ಇಲಾಖೆ ,ರಕ್ಷಣೆ ಇಲಾಖೆ ಅಲ್ಲೊಂದು ವಿಸ್ಫೋಟ, ಪ್ರಚೋದನೆ ತಂದಿಡುವಂತ ಕೆಲಸಗಳು ನಡೆಯಲಿದೆ. ಯಾರದ್ದೊ ಪ್ರಚೋದನೆ ಜಾಗರೂಕತೆ. ಇತರ ಭಾಗಗಳಲ್ಲಿ ಕೆಲಸ ಮಾಡುತ್ತಿರುವವರು ತುಂಬಾ ಎಚ್ಚರಿಕೆ ದುರ್ಗಾ ಮಂತ್ರ ಜಪ ಮಾಡಿಕೊಳ್ಳಿ, ಪುಟ್ಟ ದೀಪವೊಂದನ್ನು ಹಚ್ಚಿಕೊಳ್ಳಿ ಒಳ್ಳೆಯದಾಗಲಿದೆ.

 

ಮಿಥುನ– ವಿದ್ಯಾರ್ಥಿಗಳಿಗೆ ಒಂದು ಗಲಿಬಿಲಿ, ಟೆಕ್ನಿಕಲ್ ಲೈನ್ ಅದರ ಒಂದು ವ್ಯವಸ್ಥೆಯಲ್ಲಿ ಉದ್ಯೋಗ ಮಾಡುತ್ತಿರುವವರಿಗೆ ಪರಿಶ್ರಮದ ದಿನ. ಆದರೂ ನಿಭಾಯಿಸಿಕೊಂಡು ಹೋಗುತ್ತೀರಿ ಚೆನ್ನಾಗಿದೆ.

 

 

ಕಟಕ– ಮನೆ ಆಲೋಚನೆ, ಕುಟುಂಬ ಆಲೋಚನೆ, ವ್ಯವಹಾರ ಆಲೋಚನೆ ಯಾರದೊ ಮಾತಿಗೆ ಸಂಬಂಧಪಟ್ಟಂತೆ ಅಣ್ಣ- ತಮ್ಮ ಸ್ಥಾನದಲ್ಲಿರುವವರ ಆರೋಗ್ಯದಲ್ಲೊಂದು ಸಣ್ಣ ಅಲೆದಾಟ, ಸಣ್ಣ ಗಲಿಬಿಲಿ ಇರುವಂಥ ಪ್ರಸಂಗ ನಿಭಾಯಿಸಿಕೊಂಡು ಹೋಗುತ್ತೀರಿ. ಆದಷ್ಟು ಇವತ್ತು ಗೋವಿಗೆ ೬ ಬಾಳೆಹಣ್ಣನ್ನು ತಿನ್ನಿಸಿ ಒಳ್ಳೆಯದಾಗಲಿದೆ.

 

ಸಿಂಹ– ಯಾರ ಜೊತೆಯೋ ಜಗಳ, ಕೊಪದ ಪ್ರಸಂಗ, ದೊರೆ ಸ್ಥಾನ ಇರುವವರಿಗೆ ವಿಪರೀತ ಆತಂಕದ ಒಂದು ಛಾಯೆ. ಆದಷ್ಟು ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಒಂದು ಬೆಲ್ಲದ ದೀಪ ಹಚ್ಚಿ ಬನ್ನಿ ಒಳ್ಳೆಯದು ಸಮಾಧಾನ ದೊರೆಯಲಿದೆ.

 

ಕನ್ಯಾ– ತುಂಬಾ ಟೆನ್ಷನ್, ಉದ್ಯೋಗ ನಿಮಿತ್ತ, ವ್ಯವಹಾರ ನಿಮಿತ್ತ ,ವ್ಯಾಪಾರ ನಿಮಿತ್ತ, ಕುಟುಂಬ ನಿಮಿತ್ತ, ಹಣಕಾಸು ನಿಮಿತ್ತ ಗಲಿಬಿಲಿ ಉಂಟಾಗುತ್ತದೆ. ಆದರೂ ಕೂಡಾ ದಿನದ ಅಂತ್ಯಕ್ಕೆ ಶುಭ ಸುದ್ದಿ ಕೇಳುತ್ತೀರಿ.

 

ತುಲಾ– ಪ್ರಯಾಣದಲ್ಲಿ ಎಚ್ಚರಿಕೆ.! ಭೂಮಿಗೆ ಸಂಬಂಧಿಸಿದ, ವಾಹನಕ್ಕೆ ಸಂಬಂಧಿಸಿದ ದೊಡ್ಡ ವ್ಯವಹಾರಗಳಲ್ಲಿ, ಉದ್ಯೋಗಗಳಲ್ಲಿ ತೊಡಗಿಸಿಕೊಂಡಿರುವವರಿಗೆ ಒಂದು ರೀತಿಯ ಟೆನ್ಷನ್, ಚಿಂತನೆ ಕಾಡುತ್ತದೆ. ಆದಷ್ಟು ಗುರುಶಾಂತಿ, ಗುರುದರ್ಶನ, ಗೋಪೂಜೆ, ಗುರುವಿಗೆ ಒಂದು ತಾಂಬೂಲ ದಾನ ಮಾಡಿ ಒಳ್ಳೆಯದಾಗಲಿದೆ.

 

ವೃಶ್ಚಿಕ– ಇಂದು ಒಳ್ಳೆಯದೇ ನಿಮಗೆ. ಆದರೆ ಹಣಕಾಸು ವ್ಯವಹಾರದಲ್ಲಿ ಒಂದು ಸಣ್ಣ ಎಳೆದಾಟ ಆಗುವಂತ ಒಂದು ಪ್ರಸಂಗ ಇರಲಿದೆ. ದಿನದಂತ್ಯಕ್ಕೆ ಆ ಸಮಸ್ಯೆಯಿಂದ ಹೊರಬರುವಂತ ಪ್ರಸಂಗವೇ ಎದುರಾಗಲಿದೆ. ಸ್ವಲ್ಪ ಮನೆಯ ಹೊರಗಡೆ ಒಂದು ಬೆಲ್ಲದ ದೀಪವನ್ನು ಹಚ್ಚಿ ಸಮಾಧಾನ ದೊರೆಯಲಿದೆ.

 

ಧನಸ್ಸು– ಅದೃಷ್ಟದ ದಿನ, ಅಧಿಕಾರದ ದಿನ, ವ್ಯವಸ್ಥೆಯ ದಿನ, ಬದಲಾವಣೆಯ ದಿನ. ಶುಭ ಸುದ್ದಿಯೊಂದನ್ನು ಕೇಳುವಂಥ ಒಂದು ದಿನ ಚೆನ್ನಾಗಿದೆ. ಗಾಬರಿ ಪಡುವಂತಹದ್ದೇನಿಲ್ಲ ಆದರೆ ಗುರು ಕೇತು ಸಾರದಲಿ ಇರುವುದರಿಂದ ವಿನಾಯಕನನ್ನು ನೆನಪಿಸಿಕೊಳ್ಳಿ, ಚಿಕ್ಕ ಮಕ್ಕಳಿಗೆ ಸಿಹಿಯನ್ನು ಹಂಚಿ ಒಳ್ಳೆಯದಾಗಲಿದೆ.

 

ಮಕರ– ಉದ್ಯೋಗದಲ್ಲಿ ಒಂದು ಪರಿಶ್ರಮ, ಒತ್ತಡ ಇನ್ನೊಂದು ಟೆನ್ಷನ್ ಗೆ ಒಳಗಾಗುತ್ತೀರಿ. ಕಲಾರಂಗದಲ್ಲಿ ಇರುವವರಿಗೆ ಪರಿಶ್ರಮದಿಂದ ಶುಭ ಸುದ್ದಿ.

 

ಕುಂಭ– ಅಷ್ಟಮದಲ್ಲಿರುವ ಚಂದ್ರ, ಶುಭ ಸುದ್ದಿಯೊಂದನ್ನು ತರುತ್ತಾನೆ. ಪರಿಶ್ರಮದಿಂದ ಭೂಮಿ, ಮನೆ, ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರೆ ವಾಹನ, ಉದ್ಯಮದಲ್ಲಿ, ಆಟೋಮೊಬೈಲ್ ಉದ್ಯಮ, ಬಹುದೊಡ್ಡ ಕನ್ಸ್ಟ್ರಕ್ಷನ್ ಇಂಥ ಒಂದು ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರೆ ವಿಶೇಷ ಶುಭ ಸುದ್ದಿ ಸುದ್ದಿಯೊಂದನ್ನು ಕೇಳುತ್ತೀರಿ.

 

ಮೀನ– ವ್ಯವಹಾರದಲ್ಲಿ ಪ್ರಗತಿ. ವ್ಯವಹಾರದಲ್ಲಿ ಉನ್ನತ ಸ್ಥಾನ, ಸ್ವಲ್ಪ ಪ್ರಯಾಣದಲ್ಲಿ ಜಾಗರೂಕತೆ. ಅತಿಯಾದ ವೇಗದಲ್ಲಿ ಓಡಾಡಬೇಡಿ, ಸಣ್ಣಪುಟ್ಟ ರಿಪೇರಿ, ಪೆಟ್ಟು ಆಗುವಂತ ಸನ್ನಿವೇಶಗಳು ಉಂಟು ಜಾಗರೂಕತೆ. ದುಡುಕಬೇಡಿ ಇವತ್ತು ಆದಷ್ಟು ದುರ್ಗಾ ಮಂತ್ರವನ್ನು ಜಪ ಮಾಡಿಕೊಳ್ಳಿ, ಕೋಪಕ್ಕೆ ಯಾರ ಮೇಲಾದರೂ ಜಗಳಕ್ಕೆ ಹೋಗುತ್ತೀರಿ ಎಚ್ಚರಿಕೆ.

LEAVE A REPLY

Please enter your comment!
Please enter your name here