ದಿನ ಭವಿಷ್ಯ 20 ಡಿಸೆಂಬರ್ 2019.!

0
328

ಧನಸ್ಸು ರಾಶಿಯವರಿಗೆ ಗ್ರಹಣದ ಛಾಯೆ, ಪ್ರಭಾವ ಹೇಗಿರಲಿದೆ ಎಂಬುದನ್ನು ಶ್ರೀ ರವಿಶಂಕರ್ ಗುರೂಜಿ ಅವರು ತಿಳಿಸಿಕೊಟ್ಟಿದ್ದಾರೆ. ಗ್ರಹಣದ ದಿನ ಬಹಳ ಎಚ್ಚರಿಕೆಯಿಂದ ಇರಬೇಕು. ಯಾವುದೋ ಒಂದು ವ್ಯವಹಾರ ನಂಬಿ, ಪಾರ್ಟ್ನರ್ಶಿಪ್, ಫ್ರೆಂಡ್ ಶಿಪ್ ಅಲ್ಲೊಂದು ಮೋಸ. ಯಾವುದೋ ದೊಡ್ಡದಾದ ಸಾಲ ಅಲ್ಲೊಂದು ಪೆಟ್ಟು, ದೊಡ್ಡ ಸ್ಥಾನ ಅವಮಾನ, ನೀವಾಗಿಯೇ ನಿಮ್ಮ ಸ್ಥಾನವನ್ನು ಬಿಟ್ಟುಕೊಟ್ಟು ಅಲ್ಲಿಂದ ಜಾಗ ಖಾಲಿ ಮಾಡುವ ಪರಿಸ್ಥಿತಿ ಎದುರಾಗಲಿದೆ. ಯಾರೂ ನಿಮ್ಮ ತಲೆ ಕೆಡಿಸಿ ನಿಮ್ಮನ್ನು ಹಳ್ಳಕ್ಕೆ ದೂಡಿದ್ದಾರೆ. ಇವತ್ತು ಅದರ ಒಂದು ಪ್ರಭಾವ ನಿಮಗೆ ಎದುರಾಗುತ್ತದೆ.

 

ಮೂಲ ನಕ್ಷತ್ರದವರಿಗೆ ಮೂಲಕ್ಕೆ ಪೆಟ್ಟು, ಅಧಿಕಾರದಲ್ಲಿದ್ದರೆ ಕಲಾ ಪ್ರಪಂಚದಲ್ಲಿದ್ದರೆ, ನಿಮ್ಮ ಹೆಸರು ಕೇಳುವಂಥ ಪ್ರಸಂಗ ಉಂಟು ಎಚ್ಚರಿಕೆ.! ಸ್ಥಾನಪಲ್ಲಟ, ಉದ್ಯೋಗಪಲ್ಲಟ, ನಿಮ್ಮ ಭಾಗ್ಯಕ್ಕೆ ಭಂಗ, ಕರ್ಮಾಧಿಪತಿ, ಧರ್ಮಾಧಿಪತಿ ಭಂಗ, ಮನೋಕಾರಕ ಭಂಗ, ಸ್ಥಳಾಂತರ ಜಾಗ ಬದಲಾವಣೆ, ಬಹುದೊಡ್ಡ ಸ್ಥಾನವನ್ನು ಕಳೆದುಕೊಳ್ಳುತ್ತೀರಿ. ಬಹುದೊಡ್ಡ ಭೂಮಿ ವಿಚಾರದಲ್ಲಿ ಪೆಟ್ಟು, ಭ್ರೂಣ ಹತ್ಯೆ ಮಹಾ ಪಾಪದ ಸಂಕೇತವಾಗಲಿದೆ. ಧನಸ್ಸು ರಾಶಿ ಆ ನಿಮ್ಮ ಸ್ತ್ರೀ ಬಾಸ್ ಅವರ ಪ್ರಭಾವಕ್ಕೆ ಒಳಗಾಗುತ್ತೀರಿ. ಯಾವುದೋ ಸ್ತ್ರೀ ವಿಚಾರದಿಂದ ಒಂದು ನೋವು ಕೂಡ ಉಂಟಾಗುತ್ತದೆ. ಆದಷ್ಟು ಎಲ್ಲಿಯಾದರೂ ಶಿವ ಪಾರ್ವತಿ, ಸುಬ್ರಹ್ಮಣ್ಯ, ವಿನಾಯಕ ಸನ್ನಿಧಿ ಅದರಲ್ಲೂ ಗುರುಪುರ ಚಂದ್ರ ಈ ಮೂವರು ಸೇರಿದರೆ ಶನಿ ಸೇರಿದಂತೆ.

ಮೋಕ್ಷದತ್ತ ನೀವು ಮುಖ ಮಾಡಬೇಕಾಗಿರುತ್ತದೆ. ಧನುಸ್ಸು ರಾಶಿಯವರು ಪುಣ್ಯಕ್ಷೇತ್ರಕ್ಕೆ ಹೋಗಿ ಬನ್ನಿ, ದೇವಿ ಕ್ಷೇತ್ರಕ್ಕೆ ಹೋಗಿ ಒಂದು ರಾತ್ರಿ, ಒಂಬತ್ತು ದಿನ ಅಥವಾ ಇಪ್ಪತ್ತೊಂದು ದಿನ ನಿತ್ಯ ಹರಿಶಿನ ಅಭಿಷೇಕವಾಗಬೇಕು ಇಲ್ಲ ಎಂದರೆ ಮುಳುಗುವ ಪರಿಸ್ಥಿತಿ ಎದುರಾಗಲಿದೆ ಜಾಗರೂಕತೆ. ಗುರುಗಳ ಸೇವೆ ಮಾಡಿ ಯಾರೋ ಗುರುಗಳಿಗೆ, ಕೂಲಿಗಾರರಿಗೆ ಹತ್ತಿರದ ಬಂಧುವಿಗೆ, ಅಕ್ಕ ತಂಗಿಯರಿಗೆ ಬೆನ್ನಿಗೆ ಚೂರಿ ಹಾಕಿದ್ದೀರಿ ತಂದೆಗೆ ವಿರುದ್ಧವಾಗಿ ನಡೆದುಕೊಂಡಿದ್ದೀರಿ, ಭೂಮಿಯನ್ನು ಕಿತ್ತುಕೊಂಡಿದ್ದೀರಿ ಅದಕ್ಕೆ ಪ್ರತಿಯೊಂದು ಪ್ರತಿಫಲವನ್ನು ಗ್ರಹಣಕ್ಕೆ ನೋಡ್ತಿರಿ.

 

ಕಾಂಚಿಪುರಂ ,ಮೋಕ್ಷ ಪುರಿ, ಮೂಕಾಂಬಿಕೆ ,ಚಾಮುಂಡೇಶ್ವರಿ, ಬಾಲಶಂಕರ್, ರಾಜರಾಜೇಶ್ವರಿ, ಚೆಲುವರಾಯಸ್ವಾಮಿ, ಮೇಲುಕೋಟೆ, ನರಸಿಂಹ, ಮಹದೇಶ್ವರ ಇಂಥ ವಿಶೇಷ ಕ್ಷೇತ್ರಗಳಿಗೆ ಹೋಗಿ ಅಥವಾ ೫ ದಿನ, ೯ ದಿನ ಅಲ್ಲೇ ನೀಡುವ ಪ್ರಸಾದ ಹಾಗೂ ಅಲ್ಲೇ ನೀಡುವ ಚಪ್ಪರದಲ್ಲಿ ಮಲಗಬೇಕು. ಧನಸ್ಸು ರಾಶಿಯವರು ತಿಂಗಳಿಗೊಮ್ಮೆಯಾದರೂ ಉಳಿದುಕೊಳ್ಳಬೇಕು ನೆನಪಿಟ್ಟುಕೊಳ್ಳಿ. ಮೂರು ರಾತ್ರಿ, ೭ ರಾತ್ರಿ, ೨೧ ರಾತ್ರಿ ಇದ್ದು ಬರಬೇಕು. ಮನೆಯಲ್ಲಿ ಸುಂದರ ಕಾಂಡ ಇಟ್ಟುಕೊಂಡು ನಿತ್ಯ ಪಾರಾಯಣ ಮಾಡಿ. ದೇವರ ಮುಂದೆ ಇಟ್ಟು ಪೂಜೆ, ನೈವೇದ್ಯ ,ಧೂಪ ಮಾಡಿ ಒಂದು ಐದು ಪುಟ ಓದಿ ಒಳ್ಳೆಯದು ಶುಭವಾಗಲಿ ಮಾಡಿಕೊಳ್ಳಿ,

ಇಂದಿನ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ,

ಮೇಷ– ಇಂದು ವಿಶೇಷ ಶುಭ ಸುದ್ದಿಯೊಂದನ್ನು ಕೇಳುತ್ತೀರಿ. ಅದರಲ್ಲೂ ಬಂಧುಗಳ ಪರವಾಗಿ, ಯಾವುದೋ ಶತ್ರುಗಳ ಪರವಾಗಿ, ಆತ್ಮೀಯರ ಪರವಾಗಿ ಶುಭಸುದ್ದಿಯೊಂದನ್ನು ಕೇಳುತ್ತೀರಿ ಒಳ್ಳೆಯ ದಿನ ಶುಭವಾಗಲಿದೆ.

 

ವೃಷಭ– ಯಾಕೋ ಮನಸ್ಸು ತಲ್ಲಣ.! ನೀವು ನೀವಾಗಿರುವುದಿಲ್ಲ, ಮಾತಲ್ಲಿ, ಆಲೋಚನೆಯಲ್ಲಿ, ವ್ಯವಹಾರದಲ್ಲಿ ಒಂದು ತಲ್ಲಣ ಇರುತ್ತದೆ. ಸ್ವಲ್ಪ ಇವತ್ತು ಮೊಸರು, ಕರಿಮೆಣಸು, ಕಲ್ಲು ಉಪ್ಪು ತೆಗೆದುಕೊಂಡು ದೇವಿ ಕ್ಷೇತ್ರ ಅಥವಾ ಬಡವರಿಗೆ ಕೊಟ್ಟುಬಿಡಿ ಒಳ್ಳೆಯದಾಗಲಿದೆ.

 

ಮಿಥುನ– ವಿದ್ಯಾರ್ಥಿಗಳು ತುಂಬಾ ದೊಡ್ಡ ಜವಾಬ್ದಾರಿಗಳಲ್ಲಿ ಇರುವವರಿಗೆ, ಯಾರೂ ನಿಮ್ಮ ಮನಸ್ಸಿಗೆ ಬೇಸರ ಮಾಡುತ್ತಾರೆ. ಹುಳಿ ಹಿಂಡುತ್ತಾರೆ. ಆ ರೀತಿಯ ಒಂದು ಪ್ರಸಂಗ ಎದುರಾಗಲಿದೆ. ವಿನಾಯಕನ ಜಪ ಮಾಡಿಕೊಳ್ಳಿ ಒಳ್ಳೆಯದಾಗಲಿದೆ.

 

ಕಟಕ– ಬುದ್ಧಿಶಕ್ತಿ, ಮೇಧಾ ಶಕ್ತಿ, ಜ್ಞಾನ, ಕರ್ಮ ಎಲ್ಲವನ್ನೂ ಉಪಯೋಗಿಸಿ ಮಾಡಿ ವ್ಯವಹಾರ, ಉದ್ಯೋಗ ನಿಮಿತ್ತ, ಶುಭ ಸುದ್ದಿಯೊಂದನ್ನು ಕೇಳುತ್ತೀರಿ ಧೈರ್ಯದಿಂದ ಮುಂದಕ್ಕೆ ಹೆಜ್ಜೆ ಇಡಿ ಶುಭವಾಗಲಿದೆ.

 

ಸಿಂಹ– ವ್ಯವಹಾರ ನಿಮಿತ್ತ ಒಂದು ಖರ್ಚು. ಬಂದುಗಳಿಗೋಸ್ಕರ, ಸ್ನೇಹಿತರಿಗೋಸ್ಕರ, ಸಂಗಾತಿಯ ಒಡಹುಟ್ಟಿದವರಿಗೋಸ್ಕರ ಅಥವಾ ನಿಮ್ಮ ಒಡಹುಟ್ಟಿದವರಿಗೋಸ್ಕರ ಖರ್ಚು ವೆಚ್ಚಗಳು ಉಂಟಾಗಲಿದೆ ತೊಂದರೆ ಇಲ್ಲ.

 

ಕನ್ಯಾ– ಸ್ವಲ್ಪ ಹಣಕಾಸು ಭದ್ರತೆ, ಮತ್ತೊಂದು ಯಾವುದೋ ಒಂದು ಹುಳಿ ಪ್ರಭಾವ.! ಸ್ವಲ್ಪ ಆಯಿತು ಅಂದರೆ ಬೂದುಗುಂಬಳಕಾಯಿ ತೆಗೆದುಕೊಂಡು ಪಾಯಸ ಮಾಡಿ ಒಂದಿಷ್ಟು ತುಪ್ಪ, ಗೋಡಂಬಿ, ದ್ರಾಕ್ಷಿ ಹಾಕಿ ಮಾಡಿ ಹತ್ತಿರದಲ್ಲಿ ಯಾರಾದರೂ ವಯಸ್ಸಾದವರಿಗೆ ಎರಡು ಲೋಟ ಪಾಯಸ ಕೊಡಿ, ಅನಂತರ ನೀವು ಸೇವಿಸಿ ಒಳ್ಳೆಯದಾಗಲಿದೆ.

 

ತುಲಾ– ಉದ್ಯೋಗ ನಿಮಿತ್ತ, ತಾಯಿ ನಿಮಿತ್ತ, ಕುಟುಂಬ ನಿಮಿತ್ತ, ಆರೋಗ್ಯ ನಿಮಿತ್ತ, ಯಾವುದೋ ಒಂದು ತಲ್ಲಣ, ಗಾಬರಿ.! ಶಿವಪೂಜೆ ಮಾಡಿಕೊಳ್ಳಿ ಶಿವನನ್ನು ಧ್ಯಾನ ಮಾಡಿ ಸಮಾಧಾನ ಪಡೆದುಕೊಳ್ಳುತ್ತೀರಿ.

 

ವೃಶ್ಚಿಕ– ನಿಮ್ಮ ವ್ಯವಹಾರ ಬುದ್ಧಿ, ಆಲೋಚನೆಗೆ, ತಂದೆ ತಾಯಿ ,ಹಿರಿಯರಿಂದ ಅಥವಾ ಯಾವುದೋ ಮೂಲೆಯಿಂದ ಸಹಾಯ ದೊರಕಲಿದೆ. ಹಾಲು, ಬೆಣ್ಣೆ, ಮೊಸರು, ತುಪ್ಪ, ಕಮಿಷನಿಂಗ್ ಏಜೆಂಟ್ ವ್ಯವಹಾರದಲ್ಲಿ ಇರುವವರಿಗೆ ತುಂಬಾ ಒಳ್ಳೆಯ ಅಭಿವೃದ್ಧಿ ನೋಡುವಂಥ ಒಂದು ದಿನ.

 

ಧನಸ್ಸು– ಮೆಡಿಕಲ್ ಲೈನ್, ಪ್ಲಾಸ್ಟಿಕ್ ಸರ್ಜರಿ, ಸ್ಕಿನ್ ಸ್ಪೆಷಲಿಸ್ಟ್ ,ಡರ್ಮಟಾಲಜಿಸ್ಟ್ ಆಗಿದ್ದರೆ ಅಂಥ ವಸ್ತುಗಳ ವ್ಯಾಪಾರ, ವ್ಯವಹಾರ, ಕಮಿಷನ್ ಎಜೆಂಟ್, ವಸ್ತ್ರ, ತರಕಾರಿ ಅಭಿವೃದ್ಧಿ ನೋಡುವಿರಿ ಒಳ್ಳೆಯ ದಿನ.

 

ಮಕರ– ಕೊಡುವುದು, ತೆಗೆದುಕೊಳ್ಳುವುದು, ಬುದ್ಧಿ, ಲೆಕ್ಕಾಚಾರದಲ್ಲಿ ಬಹಳ ಚುರುಕಾಗಿ ಕೆಲಸ ಮಾಡುತ್ತೀರಿ. ತುಂಬಾ ಚುರುಕಾಗಿ ಎಡವಿ ಬೀಳುವಂಥ ಪರಿಸ್ಥಿತಿ ಕೂಡ ಇರಲಿದೆ ಜಾಗರೂಕತೆ. ಬುದ್ಧಿ ಉಪಯೋಗಿಸಿ ಮಾಡುವಂತಹ ಕೆಲಸಗಳಲ್ಲಿ ವಿಶೇಷ ಪ್ರಗತಿ.

 

ಕುಂಭ– ಸಾಧ್ಯವಾಗದ್ದನ್ನು ಸಾಧಿಸುವ ಯೋಗ.! ವ್ಯವಹಾರ ನಿಮಿತ್ತ, ಕುಟುಂಬ ನಿಮಿತ್ತ ,ಶುಭ ಸುದ್ದಿಯೊಂದನ್ನು ಕೇಳುವಂತಹ ಒಂದು ಯೋಗ ಇರಲಿದೆ. ಲೇವಾದೇವಿ, ಟೆಕ್ನಿಕಲ್, ಆ್ಯಪ್ ಡೆವಲಪ್ಮೆಂಟ್, ಈ ಒಂದು ಕಮಿಷನ್ ಏಜೆಂಟ್, ಕಲಾ ಪ್ರಪಂಚ ಚೆನ್ನಾಗಿದೆ.

 

ಮೀನ– ಕುಂಭ ದ್ರೋಣ ಮಳೆ, ಆ ರೀತಿಯ ಒಂದು ಪ್ರಭಾವವನ್ನು ವ್ಯವಹಾರ ನಿಮಿತ್ತ, ಕುಟುಂಬ ನಿಮಿತ್ತ ನೋಡತಕ್ಕಂತ ಒಂದು ಯೋಗ ಇರಲಿದೆ ಚೆನ್ನಾಗಿದೆ ಒಳ್ಳೆಯದಾಗಲಿ.

LEAVE A REPLY

Please enter your comment!
Please enter your name here