ದಿನ ಭವಿಷ್ಯ 25 ಸೆಪ್ಟೆಂಬರ್ 2019

0
728

ಬುಧವಾರ ಹುಟ್ಟಿದ ವ್ಯಕ್ತಿಗಳ ವಿಶೇಷತೆಗಳ ಬಗ್ಗೆ ಶ್ರೀ ರವಿಶಂಕರ್ ಗುರೂಜಿ ಅವರು ಇಂದಿನ ಸಂಚಿಕೆಯಲ್ಲಿ ತಿಳಿಸಿಕೊಟ್ಟಿದ್ದಾರೆ. ಯೋಗ ಸಾಧನೆಗೆ ಹೊಸದೊಂದು ಎಕ್ಸಾಮ್ಸ್, ಕಾಂಪಿಟೇಟಿವ್ ಪರೀಕ್ಷೆಗಳಿಗೆ ಸಿದ್ಧರಾಗಬೇಕು ಎಂಬ ಯೋಚನೆಗಳಿದ್ದರೆ ವಿಶೇಷ ಬಲ ತಂದುಕೊಡುವಂಥ ಅದ್ಭುತವಾದಂತಹ ದಿನವಾಗಿರಲಿದೆ. ನಿಮ್ಮಲ್ಲಿರುವ ಶಕ್ತಿ, ಪ್ರತಿಯೊಬ್ಬ ಮನುಷ್ಯನ ಹುಟ್ಟಿನಲ್ಲೊಂದು ಗುಟ್ಟಿದೆ. ಯಾರೂ ಪರಿಪೂರ್ಣರಲ್ಲ.! ನಿಮಗೆ ಗೊತ್ತಿಲ್ಲದೇ, ನಿಮ್ಮೊಳಗೆ ಒಂದು ಅದ್ಭುತವಾದ ಶಕ್ತಿ ಇರುತ್ತದೆ. ಅದನ್ನು ಬಳಸಿಕೊಳ್ಳುವುದರ ಬಗ್ಗೆ ಯೋಚನೆ ಮಾಡಿ ಅದನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡರೆ ನಿಮಗೆ ಸರಿಸಾಟಿ ಯಾರೂ ಇಲ್ಲ. ತುಂಬಾ ಬೇಗ ಗ್ರಹಿಸುವಂತಾ ಶಕ್ತಿ ಬುಧವಾರ ಹುಟ್ಟಿದ ವ್ಯಕ್ತಿಗಳಲ್ಲಿ ಇರುತ್ತದೆ.

ನಿಮ್ಮ ಶಕ್ತಿಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುತ್ತೀರ. ಜನ್ಮತಃ ಒಂದು ವಿದ್ವತ್ತು ನಿಮಗೆ ಬಂದಿರುತ್ತದೆ. ಬುಧನ ಸಂಪೂರ್ಣ ಗ್ರಹ ತತ್ತ್ವ ನಿಮ್ಮಲ್ಲಿರುತ್ತದೆ. ನಿಮಗೆ ಗೊತ್ತಿಲ್ಲದೇ ಇರುವಂತಹ ಒಂದು ಸತ್ಯ ಏನೆಂದರೆ ನೀವು ಯಾವ ರಂಗದಲ್ಲಿ ಇರುತ್ತೀರೋ ಅದನ್ನು ನೀವು ಸರಿಯಾದ ರೀತಿಯಲ್ಲಿ ಇಡಿದುಕೊಂಡರೆ ನೀವೇ ಸಾಧಕರು. ನೀವು ಇದ್ದ ಕಡೆ ಒಂದು ನಗು, ತುಂಟಾಟ ಎಲ್ಲವೂ ಸಮ್ಮತವಾಗಿ ಇರತಕ್ಕಂಥ ಮಹಾಶಕ್ತಿ ನಿಮ್ಮೊಳಗಿದೆ. ಸದಾ ಹಸನ್ಮುಖಿಯಾಗಿ ಇರುತ್ತೀರಿ. ಕೋಪ ಬರುತ್ತದೆ, ಆದರೂ ಆ ಕ್ಷಣಕ್ಕೆ ಅಷ್ಟೇ.! ಬುಧವಾರ ಹುಟ್ಟಿದ ವ್ಯಕ್ತಿಗಳಿಗೆ ವ್ಯಾಪಾರಿ ಬುದ್ಧಿ ಇರಲಿದೆ. ಜೀವನದ ಆರಂಭದಲ್ಲಿ ಸ್ವಲ್ಪ ಕಷ್ಟ ಪಟ್ಟಿರುತ್ತೀರಿ. ಹಾಗಾಗಿ ದುಡ್ಡಿನ ಬಗ್ಗೆ ಬಹಳ ಎಚ್ಚರಿಕೆ ವಹಿಸುತ್ತಿರಿ. ಬುಧವಾರ ಹುಟ್ಟಿದ ವ್ಯಕ್ತಿಗಳ ಬಗ್ಗೆ ಇನ್ನಷ್ಟು ವಿಚಾರಗಳನ್ನು ಗುರೂಜಿಯವರು ಮುಂದಿನ ಸಂಚಿಕೆಯಲ್ಲಿ ತಿಳಿಸಿಕೊಡಲಿದ್ದಾರೆ.

ಇಂದಿನ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ,

ಮೇಷ– ಇಂದು ನಿಮಗೆ ಗಲಿಬಿಲಿಯ ದಿನ. ಸ್ವಲ್ಪ ನೋಡಿಕೊಂಡು ಎಚ್ಚರಿಕೆಯಿಂದ ಮುನ್ನುಗ್ಗಿ. ಇಂಡಸ್ಟ್ರೀಸ್, ಮಾರ್ಕೆಟಿಂಗ್, ಟೆಲಿಕಮ್ಯೂನಿಕೇಷನ್ ಇಂಥ ವ್ಯವಹಾರದಲ್ಲಿ ತೊಡಗಿಸಿಕೊಂಡವರಿಗೆ ಒಂದು ರೀತಿಯ ತಲ್ಲಣವಾದರೂ ಶುಭ ಸುದ್ದಿ ಕೇಳುತ್ತೀರಿ ದುಡುಕಬೇಡಿ ಜಾಗರೂಕತೆ.

ವೃಷಭ– ಇಂದು ನಿಮ್ಮ ದಿನ ಚೆನ್ನಾಗಿದೆ. ವಿಪರೀತ ರಾಜಯೋಗ, ನಿಮಗೆ ಸ್ಟಾಕ್ ಮಾರ್ಕೆಟ್, ವ್ಯವಹಾರ ,ಬೆಳ್ಳಿ ಕಸ್ಟಮರ್ ಸರ್ವೀಸ್ ಇಂಥ ಒಂದು ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರೆ ವಿಶೇಷ ಪ್ರಗತಿ ಕಾಣ ತಕ್ಕಂತ ದಿನ.

ಮಿಥುನ– ಇಂದು ನೀವು ನಿಮ್ಮ ಮಾತಿನ ಮೇಲೆ ನಿಗಾವಿರಲಿ, ಎಚ್ಚರಿಕೆಯಿಂದ ಮಾತನಾಡುವುದು ಒಳ್ಳೆಯದು. ನಿಮಗಿಂತ ಮೇಲಿರುವ ವ್ಯಕ್ತಿಗಳು ತುಂಬಾ ಜನರು ಇದ್ದಾರೆ. ತೂಕವಾಗಿ ಮಾತನಾಡುವುದು ಒಳ್ಳೆಯದು. ನೀವು ಮಾಡುವ ಕೆಲಸವನ್ನು ಮೂರ್ನಾಲ್ಕು ಜನರ ಬಳಿ ಕೇಳಿ ಮಾಡುವುದು ಒಳ್ಳೆಯದು ದುಡುಕಬೇಡಿ ಜಾಗರೂಕತೆ.

ಕಟಕ– ನಿಮ್ಮ ತಲೆ ಕೆಡಿಸಿ, ಬುದ್ಧಿ ಕೆಡಿಸಿ ,ಮನಸ್ಸು ಕೆಡಿಸಿ ಅದರಲ್ಲಿ ಇದರಲ್ಲಿ ಹೂಡಿಕೆ ಮಾಡಿ ಎಂದು ಅಲ್ಪ ಲಾಭಕ್ಕಾಗಿ ನಿಮ್ಮ ತಲೆ ಕೆಡಿಸುತ್ತಾರೆ ಜಾಗರೂಕತೆ. ನಿಮ್ಮನ್ನು ಮೋಸ ಮಾಡಿ ಹಳ್ಳಕ್ಕೆ ತಳ್ಳುವ ಯೋಚನೆ ಮಾಡುತ್ತಾರೆ ಹೆಚ್ಚು ಜಾಗೃತ ವಹಿಸಬೇಕಾಗಿದೆ. ಇಂದು ಯಾವುದೋ ಎಡಬಿಡಂಗಿ ವ್ಯವಹಾರಗಳಲ್ಲಿ ಸಿಲುಕಿ ಹಾಕಿಕೊಳ್ಳುತ್ತೀರಿ ಹುಷಾರ್.

ಸಿಂಹ– ಮತ್ತೊಂದು ಮುಖ, ಇಂದು ನೀವು ಮಾಡುವ ಕೆಲಸಗಳಲ್ಲಿ ಸ್ವಲ್ಪ ಎರಡು ದಾರಿ ನೋಡುತ್ತೀರಿ. ಇಂದು ಬಹಳ ಎಚ್ಚರಿಕೆಯಿಂದ ಕೆಲಸ ಮಾಡಿ ಒಳ್ಳೆಯದಾಗಲಿದೆ.

ಕನ್ಯಾ– ಮಾಡುವ ಕೆಲಸ, ಕಾರ್ಯ ವ್ಯವಹಾರಗಳಲ್ಲಿ ವಿಶೇಷ ಪ್ರಗತಿ. ರೈತರಿಗೆ ಒಳ್ಳೆಯ ದಿನ. ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವವರು ವಿಶೇಷ ಪ್ರಗತಿಯನ್ನು ನೋಡುತ್ತೀರಿ ಶುಭವಾಗಲಿದೆ.

ತುಲಾ– ದೂರದ ವ್ಯವಹಾರಗಳಲ್ಲಿ ಸ್ವಲ್ಪ ಚೆಕ್ಕುಗಳು ಆಗಬಹುದು. ಎಕ್ಸ್ಪೋರ್ಟ್, ಇಂಪೋರ್ಟ್ಗಳಲ್ಲಿ ತೊಡಗಿಸಿಕೊಂಡಿದ್ದೀರಿ. ಟ್ರಾವೆಲ್ಸ್ ,ಎಂಟರ್ಟೈನ್ಮೆಂಟ್, ಥಿಯೇಟರ್, ಕ್ಲಬ್, ರೆಸ್ಟೋರೆಂಟ್ ಇದರಲ್ಲಿ ಸ್ವಲ್ಪ ತೊಳಲಾಟ ಎದುರಾಗಲಿದೆ. ಒಂದು ಒಳ್ಳೆ ಅನುಕೂಲ ನೋಡುವಂಥ ದಿನ ಚೆನ್ನಾಗಿದೆ ಶುಭವಾಗಲಿ.

ವೃಶ್ಚಿಕ– ಇಂದು ನೀವು ಕಷ್ಟಪಟ್ಟು ಲಾಭವನ್ನು ನೋಡುವಂಥ ದಿನವಾಗಿರಲಿದೆ. ಇಂದು ಎಚ್ಚರಿಕೆಯಿಂದ ಹೆಜ್ಜೆ ಇಡುವುದು ಒಳ್ಳೆಯದು, ಯಶಸ್ಸನ್ನು ನೋಡುತ್ತೀರಿ ಶುಭವಾಗಲಿದೆ.

ಧನಸ್ಸು– ಉದ್ಯೋಗದಲ್ಲಿ ಒಂದು ತಳಮಳ. ಕೊಡುವ ತೆಗೆದುಕೊಳ್ಳುವ ವ್ಯವಹಾರದಲ್ಲಿ ಒಂದು ತಳಮಳ ಜಾಗರೂಕತೆ ದುಡುಕಬೇಡಿ. ಯಾರೋ ಬಂದು ಹೇಳುವ ಮಾತಿಗೆ ನೀವು ತುಂಬಾ ಯೋಚನೆ ಮಾಡುತ್ತೀರಿ. ಎಡವಟ್ಟು ಮಾಡಿಕೊಳ್ಳುತ್ತೀರಿ. ಅಡ್ಡದಾರಿ ಸಂಪಾದನೆ ಇವೆಲ್ಲ ಬೇಡ ಒಳ್ಳೆಯದಲ್ಲ ಜಾಗರೂಕತೆ.

ಮಕರ– ಡ್ಯಾನ್ಸರ್, ಆ್ಯಕ್ಟರ್, ಮ್ಯೂಸಿಷಿಯನ್, ಚಲನಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವವರು, ಎಂಟರ್ಟೈನ್ಮೆಂಟ್, ಇಂಡಸ್ಟ್ರಿ, ಅಡುಗೆ, ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡವರಿಗೆ ಅದ್ಭುತ ಪ್ರಗತಿ ನೋಡಕ್ಕಂತ ದಿನವಾಗಿರಲಿದೆ. ಭೂಮಿ ವ್ಯವಹಾರಗಳಲ್ಲಿ ಒಂದು ಪೆಟ್ಟು ಉಂಟು ಜಾಗರೂಕತೆ.

ಕುಂಭ– ಯಾರೋ ನಿಮಗೆ ಕೊಡಬೇಕಾದ ದುಡ್ಡಿನ ವ್ಯವಹಾರದಲ್ಲಿ ಸ್ವಲ್ಪ ಎಡವಟ್ಟು ಆದರೂ ವಿಪರೀತ ರಾಜಯೋಗ ನಿಮಗೆ ಇದೆ. ಧೈರ್ಯದಿಂದ ಹೆಜ್ಜೆ ಇಡುವುದು ಒಳ್ಳೆಯದು. ಉತ್ತಮ ಲಾಭವನ್ನು ನೋಡುವಂಥ ದಿನ ಚೆನ್ನಾಗಿದೆ ಶುಭವಾಗಲಿ.

ಮೀನ– ಭೂಮಿ, ಮನೆ, ವ್ಯವಹಾರ, ಇಂಜಿನಿಯರಿಂಗ್, ಆರ್ಕಿಟೆಕ್ಟ್, ಪ್ಲಂಬಿಂಗ್, ಮೆಕ್ಯಾನಿಕ್, ಡಿಫೆನ್ಸ್ ಲೈನ್ ಅದ್ಭುತ ಪ್ರಗತಿ ಕಾಣ ತಕ್ಕಂತ ದಿನವಾಗಿರಲಿದೆ ಚೆನ್ನಾಗಿದೆ ಒಳ್ಳೆಯದಾಗಲಿ.

LEAVE A REPLY

Please enter your comment!
Please enter your name here