ದಿನ ಭವಿಷ್ಯ 06 ಸೆಪ್ಟೆಂಬರ್ 2019

0
889

ಮನುಷ್ಯನ ಸೃಷ್ಟಿಯಲ್ಲಿ ಭಗವಂತ ಅಲ್ಲೊಂದು ಮನಸ್ಸು ಎಂಬುದನ್ನು ಬಿಟ್ಟಿರುತ್ತಾನೆ. ಬೇರೆ ಯಾವ ಪ್ರಾಣಿ, ಪಕ್ಷಿಗಳಿಗೂ ಇಲ್ಲದ ಮನೋಶಕ್ತಿಯನ್ನು ಮನುಷ್ಯನಿಗೆ ನೀಡಿರುತ್ತಾನೆ. ಅದನ್ನು ಯಾವ ರೀತಿ ಬೇಕಾದರೂ ಉಪಯೋಗಿಸಬಹುದು. ದುಃಖದಲ್ಲಿ ಅಥವಾ ಖುಷಿಯಲ್ಲಿ ಜೀವನವನ್ನು ತೆಗೆದುಕೊಂಡು ಹೋಗುವ ಶಕ್ತಿ ನಿಮ್ಮಲ್ಲಿದೆ. ಕ್ಷಣ ಮಾತ್ರದಲ್ಲಿ ನೀವು ಅಂದುಕೊಂಡದ್ದನ್ನು ಸಾಧಿಸಬಹುದು. ನೀವಂದುಕೊಂಡಿದ್ದನ್ನು ನೀವು ಮಾಡಬಹುದು. ದುಃಖಕ್ಕೂ ಹೋಗಬಹುದು. ಇದಕ್ಕೆ ಒಂದು ದೊಡ್ಡ ಪರಿಹಾರವನ್ನೇ ತಿಳಿಸುತ್ತೇನೆ. ಮನಃಶಾಂತಿ ಹಾಗೂ ನೆಮ್ಮದಿಗೋಸ್ಕರ ಆಯಿತು ಅಂದರೆ ಎಲ್ಲಿಯಾದರೂ ನಂದಿ ವಿಗ್ರಹ ಇದ್ದರೆ ತಂದುಕೊಳ್ಳಿ. ಮನೆಯಲ್ಲಿ ನಂದಿ ವಿಗ್ರಹವನ್ನು ಇಟ್ಟು ಪೂಜೆ ಮಾಡುವುದು ಬಹಳ ಶ್ರೇಷ್ಠ. ನಂದಿಯನ್ನು ಶಿವನ ಮುಂದೆ ತಂದಿಟ್ಟುಕೊಂಡು ಯಾವುದಾದರೂ ಪ್ರದೋಶದಲ್ಲಿ ಪೂಜೆಯನ್ನು ಆರಂಭ ಮಾಡಿಕೊಳ್ಳಿ.

ದೋಷದ ಸಂದರ್ಭದಲ್ಲಿ ೨೦ ಅಥವಾ ೨೭ ದಿನಗಳ ಪೂಜೆಯನ್ನು ನೆರವೇರಿಸಬೇಕು. ಆರಂಭ ಮಾಡಿದ ನಂತರ ಯಾವುದೇ ಕಾರಣಕ್ಕೂ ಮತ್ತೆ ನಿಲ್ಲಿಸಬಾರದು ಎಚ್ಚರಿಕೆ! ತಿಳಿದಿರಲಿ. ಒಂದು ಪ್ರದೋಶದಿಂದ ಆರಂಭವಾಗಿ ಕಡಿಮೆ ಅಂದರೆ ೧೬ ರಿಂದ ೨೧ ಪ್ರದೋಷ ಪೂರ್ಣಗೊಳಿಸಬೇಕು. ಬಿಲ್ವಪತ್ರೆಯನ್ನು ತೆಗೆದುಕೊಂಡು ೧೦೧ ಬಿಲ್ವಪತ್ರೆಯನ್ನು ಆಯ್ಕೆ ಮಾಡಿ ಶುಭ್ರವಾಗಿ ಇಟ್ಟುಕೊಂಡು. ಇನ್ನೊಂದು ಖಾಲಿ ಬಟ್ಟಲಲ್ಲಿ ನಂದಿ ವಿಗ್ರಹವನ್ನು ಇಟ್ಟುಕೊಂಡು ಒಂದು ಪುಟ್ಟ ಮಂತ್ರವನ್ನು ಹೇಳಿಕೊಳ್ಳಿ. ನಮಗೆ ಇಷ್ಟವಾದದ್ದು ನಮಗೆ ಸಿಕ್ಕರೆ ತುಂಬಾ ಖುಷಿ ಇಲ್ಲವಾದರೆ, ದುಃಖ ಈ ಸ್ವಭಾವ ನಮ್ಮದು. ಮನೆಯಲ್ಲಿ ಯಾವಾಗಲೂ ಸದಾ ಕೆಟ್ಟ ಭಾಷೆ, ಕೆಟ್ಟ ಮಾತು, ಕೆಟ್ಟ ಚಿಂತನೆ, ಕೆಟ್ಟ ಆಲೋಚನೆ ಮಾಡುವುದರಿಂದ ಇನ್ನಷ್ಟು ಮನಶಾಂತಿ ಕೆಡುತ್ತೆ ನೆನಪಿನಲ್ಲಿಟ್ಟುಕೊಳ್ಳಿ. ಅಳುವುದು, ಕೊರಗುವುದು ಮತ್ತಷ್ಟು ನಿಮ್ಮ ನೆಮ್ಮದಿಯನ್ನು ಹಾಳು ಮಾಡುತ್ತದೆ. ಮನಃಶಾಂತಿಯನ್ನು ಕೆಡಿಸುತ್ತದೆ. ಯಾವ ವ್ಯಕ್ತಿ ದುಃಖದಲ್ಲಿ ಮುಳುಗಿರುತ್ತಾನೆ ಅವನಿಗೆ ಯಾವುದು ಒಳ್ಳೆಯದು ಕಾಣಿಸುವುದಿಲ್ಲ. ಪ್ರಪಂಚದಲ್ಲಿ ಏನಾಗುತ್ತಿದೆ ತಿಳಿಯುವುದಿಲ್ಲ. ನಮ್ಮ ಗುರುಗಳು ದೊಡ್ಡ ಮಂತ್ರ ಜಪಿಸಲು, ಸ್ಮರಿಸಲು ಹೇಳಿಕೊಟ್ಟಿದ್ದಾರೆ. ಯಾರಿಗೆ ವಿಪರೀತ ಈ ರೀತಿಯ ಸಮಸ್ಯೆಗಳು ಎದುರಾಗುತ್ತಿದೆ ಮನಃಶಾಂತಿಯನ್ನು ಕಳೆದುಕೊಳ್ಳುತ್ತಿದ್ದಾರೆ, ಅಂಥವರು ನಂದಿ ವಿಗ್ರಹವನ್ನು ಮನೆಯಲ್ಲಿ ಒಂದು ಬಟ್ಟಲಿನಲ್ಲಿ ತಂದಿಟ್ಟುಕೊಳ್ಳಿ. ಮತ್ತೊಂದು ಬಟ್ಟಲಿನಲ್ಲಿ ಬಿಲ್ವಪತ್ರೆಯನ್ನು ಆಯ್ದು ತೊಳೆದು ಇಟ್ಟುಕೊಳ್ಳಿ.

ಪ್ರದೋಶವನ್ನು ‘ ನಂದಿ ಗಾಯತ್ರಿ ಮಂತ್ರ’ ದಿಂದ ಶುರು ಮಾಡುವುದು ಒಳ್ಳೆಯದು ಮಂತ್ರವನ್ನು ಜಪಿಸುವ ಮೂಲಕ ನಂದಿಯ ಮೇಲೆ ಬಿಲ್ವಪತ್ರೆಯನ್ನು ಅರ್ಪಿಸಿ ಬಹಳ ಒಳ್ಳೆಯದಾಗಲಿದೆ. ಈ ಮಂತ್ರವನ್ನು ಜಪ ಸಿದ್ಧಿ ಮಾಡಿದರೆ ಒಂದು ಲಕ್ಷ ಹದಿನೆಂಟು ಸಾವಿರ ಜಪ ಎಂದು ಹೇಳುತ್ತಾರೆ. ಆ ಸಂದರ್ಭದಲ್ಲಿ ಮಡಿ ಇರಬೇಕು ನೀವು ಸಂಸಾರಸ್ಥರಾಗಿದ್ದರೆ, ನಿಮ್ಮ ಸಹಜ ಜೀವನದಲ್ಲಿ ಏನೂ ತೊಂದರೆಯಿಲ್ಲ. ದಾಂಪತ್ಯ, ಊಟ ಉಪಚಾರ ತೊಂದರೆಯಿಲ್ಲ. ಪ್ರದೋಷ ಮಾಡಿ ಶುರು ಮಾಡುವುದಕ್ಕಿಂತ ಮುಂಚೆ ಮನೆಯಲ್ಲಿ ಸೂತಕವಾಗಬಾರದು! ಎಲ್ಲೂ ಹೊರಗಡೆ ತಿನ್ನಬಾರದು! ಈ ನಿಯಮಗಳನ್ನು ಪಾಲಿಸಬೇಕು. ಪ್ರತಿ ನಿತ್ಯ ಹನ್ನೊಂದು ಬಾರಿಯಾದರೂ ಈ ಜಪ ಸಿದ್ಧಿಯನ್ನು ಮಾಡಿಕೊಳ್ಳಿ ನೋಡಿ ಆ ನಂತರ ನಿಮ್ಮ ಮನಶ್ಯಾಂತಿ ಹೇಗಿರಲಿದೆ ಎಂಬುದನ್ನು ಗಮನಿಸಿ ಒಳ್ಳೆಯದಾಗಲಿದೆ.

ಇಂದಿನ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ,

ಮೇಷ– ಸ್ವಂತ ಮನೆ, ಹಣಕಾಸು, ಖರ್ಚು ವೆಚ್ಚಗಳು, ಒದ್ದಾಟಗಳು, ಸ್ತ್ರೀ ವಿಚಾರದಲ್ಲಿ ಒಂದು ತೊಳಲಾಟ. ಸ್ತ್ರೀಗೆ ಸಂಬಂಧಿಸಿದ ವ್ಯವಹಾರ, ಉದ್ಯೋಗ, ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವವರಿಗೆ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲವಿಲ್ಲ ಎಂಬ ಕೊರಗಿರುತ್ತದೆ ಯೋಚಿಸಬೇಡಿ ಒಳ್ಳೆಯದಾಗಲಿದೆ.

ವೃಷಭ– ನಿಮ್ಮ ಪರಿಶ್ರಮಕ್ಕೆ ತಕ್ಕಂತೆ ಫಲವನ್ನು ನೋಡುತ್ತೀರಿ ಆದರೆ ಕೊರಗುತ್ತೀರಿ. ಯೋಗಿ ಪಡೆದದ್ದು ಯೋಗಿಗೆ, ಜೋಗಿ ಪಡೆದದ್ದು ಜೋಗಿಗೆ. ನಾವು ಪಡೆದುಕೊಂಡು ಬಂದದ್ದು, ನಮಗೆ ಲಾಭ ನಷ್ಟಗಳ ಬಗ್ಗೆ ಆಲೋಚಿಸಬೇಡಿ ಭಗವಂತನಿಗೆ ಗೊತ್ತು ಯಾವಾಗ ಲಾಭವನ್ನು ತುಂಬಿಸಿಬೇಕು ಎಂಬುದು ಶುಭವಾಗಲಿ.

ಮಿಥುನ– ಸ್ವಲ್ಪ ಇರುವ ಕೆಲಸ ಕಾರ್ಯಗಳಲ್ಲಿ ಆತಂಕ ಉಂಟಾಗುವ ಪರಿಸ್ಥಿತಿಯಾಗಿದೆ. ಯಜಮಾನನಾಗಿ ನಿಮ್ಮ ಕೆಲಸದಲ್ಲಿ ನೀವು ಅಂದುಕೊಂಡಿದ್ದನ್ನು ಮಾಡಿ ಫಲಾಫಲಗಳನ್ನು ಭಗವಂತನಿಗೆ ಬಿಟ್ಟುಬಿಡಿ ಶುಭವಾಗಲಿದೆ.

ಕಟಕ– ಗಡಿಬಿಡಿಯ ದಿನ ಆತಂಕದ ದಿನ. ಯಾರೋ ಏನೋ ಮಾಡಿಸಿದ್ದಾರೆ ಎಂಬ ಯೋಚನೆಯಲ್ಲಿದ್ದಾರೆ. ಯಾವ ಘಟನೆಗಳು ನಮಗೆ ಸಂಭವಿಸಿಲ್ಲ ಅದರ ಬಗ್ಗೆ ಯೋಚಿಸಬೇಡಿ. ಸಿಹಿ ಯಾವಾಗಲೂ ಸಿಹಿಯೇ, ಕಹಿ ಯಾವಾಗಲೂ ಕಹಿ ಅದನ್ನು ಅರ್ಥ ಮಾಡಿಕೊಳ್ಳಿ. ನಿಮ್ಮ ಕಾರ್ಯವನ್ನು ಮನೋ ಏಕಾಗ್ರತೆಯಿಂದ ಮಾಡಿಕೊಂಡು ಹೋಗಿ. ಇಂದು ಬಾಲಾಜಿ ಸನ್ನಿಧಿಗೆ ಭೇಟಿ ನೀಡಿ ಅಥವಾ ಯಾರಾದರೂ ವೃದ್ಧರಿಗೆ ಊಟವನ್ನು ಅರ್ಪಿಸಿ ಒಳ್ಳೆಯದಾಗಲಿದೆ.

ಸಿಂಹ– ಇಂದು ನಿಮ್ಮ ದಿನ ಚೆನ್ನಾಗಿದೆ. ಇರುವುದೆಲ್ಲವನ್ನು ಬಿಟ್ಟು ಇರುವುದಿಲ್ಲದಿರುವುದರ ಕಡೆ ನಿಮ್ಮ ಮನಸ್ಸು ಹಾರುತ್ತೆ. ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬುದನ್ನು ನೀವು ಅನುಸರಿಸಬೇಕು, ಅರ್ಥ ಮಾಡಿಕೊಳ್ಳಬೇಕಾಗಿದೆ. ಜಾಗೃತ ಒಳ್ಳೆಯದಾಗಲ್ಲಿದೆ.

ಕನ್ಯಾ– ಬೊಗಸೆಗೆ ತಕ್ಕಂತ ಕಜ್ಜಾಯ ನೆನಪಿಟ್ಟುಕೊಳ್ಳಿ. ಕೆಲಸದ ಬಗ್ಗೆ ಹೆಚ್ಚು ಗಮನವಿರಲಿ. ಇಂದು ಒಳ್ಳೆ ಕೆಲಸಕ್ಕೆ ತ್ಯಾಗವನ್ನು ಮಾಡಿ ದೊಡ್ಡವರಾಗಿ ಒಳ್ಳೆಯದಾಗಲಿದೆ.

ತುಲಾ– ಇಂದು ನಿಮಗೆ ವಿಶೇಷವಾದಂತಹ ದಿನ. ನಿಮ್ಮ ಪರಿಶ್ರಮಕ್ಕೆ ತಕ್ಕಂತ ಫಲ ಸಿಗಲಿದೆ. ಲಾಯರ್, ಅಡ್ವೋಕೇಟ್, ಸಮಾಜ ಮಾರ್ಗದರ್ಶಕರ ಹುದ್ದೆಯಲ್ಲಿದ್ದರೆ ಅದ್ಭುತವಾದಂತಹ ಪ್ರಗತಿ ನೋಡುತಕ್ಕಂತ ದಿನ ಚೆನ್ನಾಗಿದೆ. ಯಾವ ತೊಂದರೆಯೂ ಇಲ್ಲ ಯೋಚಿಸಬೇಡಿ ಶುಭವಾಗಲಿದೆ.

ವೃಶ್ಚಿಕ– ಪರಿಶ್ರಮದ ದಿನ, ಎಲ್ಲೋ ಒಂದು ಮಾಡಿದ ಕೆಲಸಕ್ಕೆ ಪ್ರತಿಫಲ ದೊರೆಯುವಂತೆ ದಿನ. ಯಾಕೋ ಮನಸ್ಸು ತಿಳಿಯಾಗಿಲ್ಲ. ಹಿರಿಯರ ಮಾತಿನಿಂದ ಒಂದು ಮನಸ್ಸಿಗೆ ಬೇಸರ ಉಂಟಾಗುತ್ತದೆ. ಸಂಜೆಯ ಒಳಗೆ ಒಂದು ಶುಭ ಸುದ್ದಿಯನ್ನು ಕೇಳುತ್ತೀರಿ ಒಳ್ಳೆಯದಾಗಲಿದೆ.

ಧನಸ್ಸು– ಆರೋಗ್ಯದ ಕಡೆ ಹೆಚ್ಚು ಗಮನವಿರಲಿ. ಮನಸ್ಸಿನ ಆರೋಗ್ಯದ ಕಡೆ ಕೂಡ ಗಮನವಿರಲಿ. ಕೆಲವರು ನಮ್ಮ ತಲೆ ಕೆಡಿಸಲು ಉದ್ದೇಶದಿಂದ ಬರುತ್ತಾರೆ. ಅವರ ಕಡೆ ಹೆಚ್ಚು ಗಮನ ಕೊಡಬೇಡಿ. ಕಷ್ಟಪಟ್ಟು ನೀವು ಅಂದುಕೊಂಡದ್ದನ್ನು ಸಂಪಾದಿಸಿಕೊಳ್ಳಿ ಒಳ್ಳೆಯದಾಗಲಿದೆ.

ಮಕರ– ಇಂದು ನಿಮಗೆ ಖರ್ಚು ಹೆಚ್ಚಾಗಲಿದೆ. ಉದ್ಯೋಗದಲ್ಲಿ ಯಾಕೋ ಮಾಡುತ್ತಿರುವ ಕೆಲಸದಲ್ಲಿ ನೆಮ್ಮದಿ ಇಲ್ಲ. ಹನುಮನ ಆಲಯಕ್ಕೆ ಭೇಟಿ ನೀಡಿ ಒಂದು ಬೊಗಸೆ ವಿಳೆದೆಲೆಯನ್ನು ನೀಡಿ ಒಳ್ಳೆಯದಾಗಲಿದೆ.

ಕುಂಭ– ಇಂದು ನಿಮ್ಮ ದಿನ ಚೆನ್ನಾಗಿದೆ. ತುಂಟತನದ ದಿನ,ಸುತ್ತಾಟ ಒಡಾಟ. ಆತ್ಮೀಯರನ್ನು ಭೇಟಿ ಮಾಡುವುದು. ವ್ಯವಹಾರದಲ್ಲಿ ಪ್ರಗತಿ. ಸ್ವಂತ ಕಾರ್ಯ, ಸಂತ ವ್ಯವಹಾರದಲ್ಲಿ ಬಹುದೊಡ್ಡ ಯಶಸ್ಸನ್ನು ನೋಡುತ್ತೀರಿ ಒಳ್ಳೆಯದಾಗಲಿದೆ.

ಮೀನ– ನಿಮ್ಮ ವೃತ್ತಿಗೆ, ವ್ಯವಹಾರಕ್ಕೆ ಸಂಬಂಧಿಸಿದಂತ ಕೆಲಸವನ್ನು ನಿರ್ವಹಿಸಿ. ದೇಶದಲ್ಲಿ ಯುದ್ಧ ಭೀತಿ ಒಂದು ಎದುರಾಗಲಿದೆ ಎಂದು ಹೇಳಿದ್ದೆ ಅದು ನೀವು ನೋಡುತ್ತಿದ್ದೀರಿ. ನಾನು ಹೇಳಿದ್ದೇ ಸರಿ ಎಂದು ಊಹಿಸಬೇಡಿ. ನನ್ನಿಂದಲೂ ಕೂಡ ತಪ್ಪುಗಳು ಆಗಿದೆ. ಅದೇ ರೀತಿ ನೀವು ಯಾರೋ ಹೇಳುತ್ತಾರೆ ಎಂದು ತಲೆ ಕೆಡಿಸಿಕೊಳ್ಳಬೇಡಿ ಕಾರ್ಯವನ್ನು ಪೂರ್ಣಗೊಳಿಸಿ ಧೈರ್ಯವಾಗಿ ಮುಂದಕ್ಕೆ ಹೆಜ್ಜೆ ಇಡಿ ಒಳ್ಳೆಯದಾಗಲಿದೆ.

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here