ದಿನ ಭವಿಷ್ಯ 24 ಸೆಪ್ಟೆಂಬರ್ 2019

0
638

ಮಂಗಳವಾರ ಹುಟ್ಟಿದ ವ್ಯಕ್ತಿಗಳ ವಿಶೇಷತೆಗಳ ಬಗ್ಗೆ ಶ್ರೀ ರವಿಶಂಕರ್ ಗುರೂಜಿ ಅವರು ಇಂದಿನ ಸಂಚಿಕೆಯಲ್ಲೂ ಮುಂದುವರಿಸಿದ್ದಾರೆ. ಮಂಗಳವಾರ ಹುಟ್ಟಿದ ವ್ಯಕ್ತಿಗಳು ಸ್ಫೋರ್ಟ್ಸ್ ಲೈನ್’ಗೆ ಪ್ರಯತ್ನ ಮಾಡಿ ಒಳ್ಳೆಯದು. ಹುಟ್ಟು ಯೋಧನ ಗುಣವಿರುತ್ತದೆ. ಮಂಗಳವಾರ ಹುಟ್ಟಿದ ವ್ಯಕ್ತಿಗಳು ಸಾಮಾನ್ಯರಲ್ಲ. ಕಲಿಯುತ ಕಲಿಯುತ ಎಲ್ಲವೂ ಬರಲಿದೆ. ಮಂಗಳವಾರ ನಿಮಗೆ ಮಂಗಳವೇ. ನರಸಿಂಹನ ಪ್ರಭಾವ ,ಹನುಮನ ಪ್ರಭಾವ ನಿಮಗೆ ಇರಲಿದೆ. ನಿಮಗೆ ನಿಜವಾಗಲೂ ವಿದ್ಯೆಯ ವಿಚಾರದಲ್ಲಿ ಸ್ವಲ್ಪ ಎಳದಾಟವೇ. ವ್ಯವಹಾರದಲ್ಲಿ ಅಷ್ಟು ಯಶಸ್ಸು ಕಾಣುವುದಿಲ್ಲ. ಯಾರಾದರೂ ನಿಮಗೆ ವ್ಯವಹಾರದ ಜ್ಞಾನವನ್ನು ಹಿಡಿದು ಗೈಡ್ ಮಾಡಿದರೆ ಖಂಡಿತ ಯಶಸ್ಸನ್ನು ನೋಡುತ್ತೀರಿ.

ನಿಮ್ಮಲ್ಲಿ ಅಗಾಧ ಶಕ್ತಿಯಿದೆ ಸೋಲನ್ನು ನೋಡಬೇಡಿ ಸೋಲಿನ ಬಗ್ಗೆ ಯೋಚನೆಯೂ ಮಾಡಬೇಡಿ ಯಾರೋ ಬಂದು ಸೋಲಿನ ಬಗ್ಗೆ ನಿಮ್ಮ ಬಳಿ ಮಾತನಾಡುತ್ತಾರೆ ಪದೇ ಪದೇ ಸೋಲಿನ ಬಗ್ಗೆ ಯಾರು ಮಾತನಾಡುತ್ತಾರೆ ಅವರಿಂದ ದೂರವಿರಿ. ಮಂಗಳವಾರ ಹುಟ್ಟಿದವರಿಗೆ ಬೇರೆಯವರಿಂದಲೇ ಕುತ್ತು. ಸದಾ ನೆಗೆಟಿವ್ ಹೇಳಿ ನಿಮ್ಮನ್ನು ಕುಗ್ಗಿಸುತ್ತಾರೆ. ನಿಮ್ಮ ಬಲದ ಬಗ್ಗೆ ನಿಮಗೆ ನಂಬಿಕೆ ಇರಲಿ, ಅದರ ಕಡೆ ಹೆಚ್ಚು ಗಮನ ಕೊಟ್ಟು ಮುನ್ನುಗ್ಗುವುದು ಒಳ್ಳೆಯದು. ನೀವು ಬೇರೆಯವರ ಮಾತಿಗೆ ಹೆಚ್ಚು ಕುಗ್ಗುತ್ತಿರ. ಇನ್ನೊಬ್ಬರ ಮಾತಿಗೆ ಹೆದರಬೇಡಿ, ಗಮನ ಕೊಡಬೇಡಿ ನೀವು ಅಂದುಕೊಂಡಿರುವುದನ್ನು ಸಾಧಿಸುವ ಕಡೆ ಗಮನವನ್ನು ನೀಡಿ ಖಂಡಿತ ಯಶಸ್ಸನ್ನು ನೋಡುತ್ತೀರಿ. ಮಂಗಳವಾರದವರು ಯಾವುದೇ ರಂಗವಾದರೂ ಕುಗ್ಗದೇ, ಹಿಗ್ಗದೆ ಮುಂದಕ್ಕೆ ಹೆಜ್ಜೆ ಇಡಿ ಒಳ್ಳೆಯದಾಗಲಿದೆ.

ಇಂದಿನ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ,

ಮೇಷ– ಬುದ್ಧಿ, ಜ್ಞಾನ,ಸಿದ್ಧಿ, ಮೇದಸ್ಸು ಇಡೀ ಪ್ರಪಂಚದಲ್ಲಿ ಮನುಷ್ಯನಿಗೆ ಮಾತ್ರ ಈ ಶಕ್ತಿಗಳನ್ನು ಭಗವಂತ ನೀಡಿರುವುದು. ಒಳ್ಳೆಯದು ಮಾಡಲು, ಒಳ್ಳೆಯದು ಮಾತನಾಡಲು, ಒಳ್ಳೆಯದು ನೋಡಲು ಇದು ಅದ್ಭುತವಾದ ದಿನ. ನೆನೆಸಿಕೊಂಡು ಹೆಜ್ಜೆ ಇಡುವುದು ಒಳ್ಳೆಯದು ಶುಭವಾಗಲಿದೆ.

ವೃಷಭ– ಬುದ್ಧಿಯನ್ನು ಉಪಯೋಗಿಸಿ ಮಾಡುವ ತಕ್ಕಂತೆ ಕೆಲಸ ಕಾರ್ಯಗಳಲ್ಲಿ ವ್ಯವಹಾರಗಳಲ್ಲಿ, ಸರ್ವಿಸ್ ಬ್ಯಾಂಕಿಂಗ್, ಟೆಲಿಕಾಲರ್ ಸರ್ವಿಸ್ , ಸೇಲ್ಸ್ ಮಾರ್ಕೆಟಿಂಗ್, ಇಂಥ ವ್ಯವಹಾರ, ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದರೆ ಅದ್ಭುತ ಪ್ರಗತಿಯನ್ನು ನೋಡುತ್ತೀರಿ ಚೆನ್ನಾಗಿದೆ.

ಮಿಥುನ– ಇಂದು ನಿಮ್ಮ ದಿನ ಚೆನ್ನಾಗಿದೆ. ದಿನದಾರಂಭ ಸ್ವಲ್ಪ ತೊಳಲಾಟ ಆದರೂ ಕೋರ್ಟ್ ಸಮಸ್ಯೆ ಕಾನೂನು ಸಮಸ್ಯೆ ಏನಾದ್ರೂ ಸಿಲುಕ್ಕಿಕೊಂಡಿದ್ದರೆ, ವ್ಯವಹಾರ ವಿಚಾರ, ಹಣಕಾಸಿನ ವಿಚಾರ, ಯಾವುದೋ ಒಂದು ವಿಚಾರದಲ್ಲಿ ಖಂಡಿತ ಎಡವಟ್ಟು ಉಂಟಾಗಲಿದೆ. ತುಂಬಾ ದೊಡ್ಡ ಅಧಿಕಾರಿಗಳು ತುಂಬಾ ದೊಡ್ಡ ರಾಜಕಾರಣಿಗಳನ್ನು ಆಗಿದ್ದೇ ದೊಡ್ಡ ಕಂಟಕ ಎದುರಾಗಲಿದೆ ಜಾಗರೂಕತೆ.

ಕಟಕ– ಇಂದು ನಿಮ್ಮ ದಿನ ಚೆನ್ನಾಗಿದೆ. ರಾಮನ ಆಶೀರ್ವಾದ ನಿಮ್ಮ ಮೇಲೆ ಇದೆ. ಹನುಮನ ಕ್ಷೇತ್ರಕ್ಕೆ ಹೆಚ್ಚು ಭೇಟಿ ನೀಡಿ ಒಳ್ಳೆಯದಾಗಲಿದೆ. ನೀವು ಅಂದುಕೊಂಡಂತ ಕೆಲಸ ಕಾರ್ಯಗಳು ನೆರವೇರುತ್ತದೆ. ವಿಜಯ ಪ್ರಾಪ್ತಿ ದಿನ ಹತ್ತಿರದಲ್ಲೇ ಇದೆ ಶುಭಾವಾಗಲಿ.

ಸಿಂಹ– ಇಂದು ನಿಮ್ಮ ದಿನ ಚೆನ್ನಾಗಿದೆ. ಬ್ಯಾಂಕಿಂಗ್ ಸೆಕ್ಟರ್, ಲಾಯರ್, ಟೀಚರ್, ಮೆಡಿಕಲ್ ಲೈನ್ ಅನುಕೂಲ ಸಿಂಧು ವಾಗುವಂಥ ದಿನ. ಅಂದುಕೊಳ್ಳುವ ವಿದ್ಯೆಯನ್ನು ಸಾಧಿಸಿಕೊಳ್ಳುವ ಅದ್ಭುತವಾದ ದಿನ ಶುಭವಾಗಲಿ.

ಕನ್ಯಾ– ಕುಟುಂಬ ವಿಚಾರ, ಉದ್ಯೋಗ ವಿಚಾರದಲ್ಲೊಂದು ತಲ್ಲಣ ಉಂಟಾಗಲಿದೆ. ಇಂದು ನಿಮಗೆ ಎರಡು ದೋಣಿಯ ಮೇಲೆ ಕಾಲಿಟ್ಟ ಪರಿಸ್ಥಿತಿ ಎದುರಾಗಲಿದೆ. ನಿಮ್ಮ ವ್ಯವಹಾರ, ಕುಟುಂಬ, ಹಣಕಾಸು ವಿಚಾರದಲ್ಲಿ ಭಯದ ಛಾಯೆ ಮೂಡುತ್ತದೆ. ಹಣೆಗೆ ಕುಂಕುಮ ಇಟ್ಟುಕೊಂಡು ಹೋಗಿ ಒಳ್ಳೆಯದಾಗಲಿದೆ.

Golden horoscope zodiac vector signs. Astrology symbols set isolated on black background illustration

ತುಲಾ– ಮಕ್ಕಳ ವಿಚಾರದಲ್ಲಿ ಹೆಚ್ಚು ತಲೆ ಕೆಡಿಸಿಕೊಳ್ಳುತ್ತೀರಿ. ಯಾವುದೋ ಉದ್ಯೋಗ, ವ್ಯವಹಾರದಲ್ಲಿ ಒಂದು ತೊಂದರೆ ಎದುರಾಗಲಿದೆ. ಸಂಜೆಯ ಹೊತ್ತಿಗೆ ಶುಭ ಸುದ್ದಿಯೊಂದನ್ನು ಕೇಳುತ್ತೀರಿ.

ವೃಶ್ಚಿಕ– ಬಹುದೊಡ್ಡ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೀರಿ. ಉದ್ಯೋಗ ನಿಮಿತ್ತ ,ವ್ಯವಹಾರ ನಿಮಿತ್ತ ತುಂಬಾ ಚೆನ್ನಾಗಿದೆ. ನಿಮ್ಮ ಜೀವನದಲ್ಲಿ ಬಹುದೊಡ್ಡ ಲಾಭ ಸ್ಥಾನ ಉಂಟಾಗಲಿದೆ. ನೀವು ಮುಟ್ಟಿದ್ದೆಲ್ಲ ಚಿನ್ನವೇ ಶುಭವಾಗಲಿ.

ಧನಸ್ಸು– ಒಂದು ಆಪತ್ತು ನಿಮಗೆ ಎದುರಾಗಲಿದೆ ಜಾಗರೂಕತೆ. ನಿಮ್ಮ ವ್ಯವಹಾರದಲ್ಲಿ, ಕೆಲಸ, ಕುಟುಂಬ ಜವಾಬ್ದಾರಿಗಳನ್ನು ಸರಿಯಾದ ರೀತಿಯಲ್ಲಿ ತೆಗೆದುಕೊಂಡು ಹೋಗಲು ಅದ್ಭುತವಾದ ದಿನ ಯಶಸ್ಸು ಖಂಡಿತ ನಿಮ್ಮದಾಗಲಿದೆ ಒಳ್ಳೆಯದಾಗಲಿ.

ಮಕರ– ಎಲ್ಲೋ ಒಂದು ಕುಟುಂಬ ವಿಚಾರ, ಹತ್ತಿರದವರಿಂದ ಮನಸ್ಸಿಗೆ ಒಂದು ನೋವು ಉಂಟಾಗಲಿದೆ. ನಿಮಗೆ ಹತ್ತಿರದವರೇ ಹೆಚ್ಚು ನೋವು ಕೊಡುವುದು ಆದಷ್ಟು ನಿಮ್ಮ ಕೆಲಸದ ಬಗ್ಗೆ ಹೆಚ್ಚು ಗಮನ ನೀಡಿ ಒಳ್ಳೆಯದಾಗಲಿದೆ.

ಕುಂಭ-ಇಂದು ನಿಮ್ಮ ದಿನ ಚೆನ್ನಾಗಿದೆ. ಯಾವುದೋ ಒಂದು ಕುಟುಂಬದ ಬಾಧೆ ನಿಮ್ಮನ್ನು ಕಾಡುತ್ತದೆ. ವ್ಯವಹಾರದ ಬಾಧ್ಯತೆ, ಯಜಮಾನನ ಬಾಧ್ಯತೆಯಿಂದ ತೊಳಲಾಟ ಕಾಡಲಿದೆ. ವಿನಾಯಕನ ಆಶೀರ್ವಾದ ಪಡೆದುಕೊಳ್ಳಿ ಶುಭವಾಗಲಿದೆ.

ಮೀನ– ರೈತರಾಗಿ ಒಂದು ಅಮೂಲ್ಯ ಹೆಸರು ಪಡೆಯುತ್ತೀರಿ. ಖುಷಿಯ ಸುದ್ದಿ ಕೇಳುತ್ತೀರಿ. ಮಕ್ಕಳ ವಿಚಾರದಲ್ಲಿ ಒಂದು ಶುಭ ಸುದ್ದಿ, ಒಂದು ಶುಭ ಕಾರ್ಯ ನಡೆಯಲೇಬೇಕು ಅದು ನಡೆಯುತ್ತದೆ ಒಳ್ಳೆಯದಾಗಲಿದೆ.

LEAVE A REPLY

Please enter your comment!
Please enter your name here