ಜನವರಿ ಮಾಸದಲ್ಲಿ ಹುಟ್ಟಿರುವ ವ್ಯಕ್ತಿಗಳ ವಿಶೇಷತೆಗಳ ಬಗ್ಗೆ ಶ್ರೀ ರವಿಶಂಕರ್ ಗುರೂಜಿ ಅವರು ಇಂದಿನ ಸಂಚಿಕೆಯಲ್ಲಿ ತಿಳಿಸಿಕೊಟ್ಟಿದ್ದಾರೆ. ಅವರಿಗೆ ಒತ್ತಡ ಇರುವುದರಿಂದ ವಾಯು ಸಮಸ್ಯೆ ಹೃದಯ, ಉಸಿರಾಟದ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತೀರ. ಹಲ್ಲಿನ ಸಮಸ್ಯೆಗಳು, ಹಲ್ಲನ್ನು ಕೀಳಿಸುವುದು, ರೂಟ್ ಕೆನಾಲ್ ಮಾಡಿಸುವುದು, ಕೂದಲು ಹೊಂದಿರುವುದು, ಶೀತದಿಂದ ಬಳಲುವುದು ಎರಡು ಪ್ರವೃತ್ತಿಯ ಬಳಲಿಕ್ಕೆ ನಿಮಗಿರುತ್ತದೆ. ಕೋಪ ಬಂದರೆ ನಿಮ್ಮನ್ನು ಯಾರೂ ತಡೆಯಲು ಆಗುವುದಿಲ್ಲ.
ನಿಮ್ಮ ಪಕ್ಕದಲ್ಲಿ ನಿಂತರೆ ಮುಗಿದು ಹೋಯಿತು ದುರ್ಯೋಧನನ ಕೋಪ ನಿಮಗಿರುತ್ತದೆ. ನಿಮ್ಮ ಕೋಪವನ್ನು, ನಿಮ್ಮ ಸಿಟ್ಟನ್ನು, ನಿಮ್ಮ ತೇಜಸ್ಸನ್ನು, ನಿಮ್ಮ ಕಾರ್ಯಕ್ಷೇತ್ರದಲ್ಲಿ ಹಾಕಿ. ನೀವು ಮಹಾ ಕೋಪಿಷ್ಠರು, ಕೋಪವನ್ನು ನಿಯಂತ್ರಿಸಿಕೊಳ್ಳಲು ಎಡವುತ್ತೀರಿ. ಉದ್ಯೋಗದ ದೊಡ್ಡ ಸ್ಥಾನ ಪಡೆದುಕೊಂಡಿದ್ದರೆ, ಐಪಿಎಸ್ ಪೊಲೀಸ್, ಮಿಲಿಟರಿ ಡಿಫೆನ್ಸ್ ಈ ರಂಗ ಬೇಗ ನಿಮಗೆ ಒಲಿಯುತ್ತದೆ. ಏಕೆಂದರೆ ನೀವು ಸ್ವಲ್ಪ ಕುಟುಂಬದಿಂದ ದೂರವಿರುತ್ತೀರಿ. ಅಂತ ಪರಿಸ್ಥಿತಿ ಇರಲಿದೆ. ಆ ಕುಟುಂಬದ ವಿಚಾರದಲ್ಲಿ ಒಂದು ತಳಮಳ! ಉದ್ಯೋಗ ನಿಮಿತ್ತವೊ, ನಿಮಗೆ ಚಿಂತನೆ, ಬೆಳವಣಿಗೆ ನಿಮಿತ್ತವೊ ಚಿಂತನೆ ಇರುತ್ತದೆ.
ಹಾಗಾಗಿ ಈ ರಂಗವನ್ನು ಆಯ್ಕೆ ಮಾಡಿಕೊಂಡರೆ ಅಮೂಲ್ಯ ಅವಕಾಶಗಳು, ಸವಲತ್ತುಗಳು ತಂದುಕೊಡುವಂತ ತಾಕತ್ತು ನಿಮಗಿರುತ್ತದೆ. ಜನವರಿ ಮಾಸದಲ್ಲಿ ಹುಟ್ಟಿರುವ ವ್ಯಕ್ತಿಗಳು ಇಪ್ಪತ್ತ್ನಾಲ್ಕು ಗಂಟೆ ನಿರಂತರವಾಗಿ ಕೆಲಸ ಮಾಡುವ ತಾಕತ್ತು ಪರಿಶ್ರಮ ನಿಮ್ಮಲ್ಲಿರುತ್ತದೆ. ಧೃತಿಗೆಡದೆ ಸೋಲನ್ನೂ ಕೂಡ ಜಯವನ್ನಾಗಿ ಮಾಡಿಕೊಳ್ಳುವ ತಾಕತ್ತು ನಿಮಗಿರುತ್ತದೆ. ಜನವರಿ ಮಾಸದಲ್ಲಿ ಹುಟ್ಟಿರುವ ವ್ಯಕ್ತಿಗಳಿಗೆ ಸೋಲೇ ಬಹುದೊಡ್ಡ ಗೆಲುವು. ನೀವು ದೇವರನ್ನು ನಂಬುವುದಿಲ್ಲ! ನಿಮ್ಮ ಕಾರ್ಯಕ್ಷೇತ್ರವೇ ನಿಮಗೆ ದೇವರು, ನಿಮ್ಮ ಕೆಲಸವೇ ನಿಮ್ಮ ದೇವರು. ನಿಮ್ಮ ವೃತ್ತಿಯೇ ನಿಮ್ಮ ದೇವರು, ನಿಮ್ಮ ಕೃಷಿಯೇ ನಿಮ್ಮ ದೇವರು, ಒಳ್ಳೆಯದನ್ನು ಮಾಡಬೇಕು ಸಮಾಜಕ್ಕೆ ಒಂದು ಕೊಡುಗೆ ಕೊಡಬೇಕು ಆ ನಿಟ್ಟಿನಲ್ಲಿ ನೀವು ಕೆಲಸ ಮಾಡುತ್ತಿದ್ದೀರಿ. ಅದೇ ನಿಮಗೆ ಕಾಪಾಡುತ್ತದೆ.
ಮೋಸದ ಬುದ್ಧಿ ನಿಮಗೆ ಇರುವುದಿಲ್ಲ. ಮೋಸದ ವ್ಯಕ್ತಿತ್ವ, ಮೋಸದ ಚಿಂತನೆ, ಮೋಸದ ಒಲವು ನಿಮಗಿರುವುದಿಲ್ಲ. ನಿಮ್ಮ ಜೀವನದಲ್ಲಿ ಕೆಲ ಕಹಿ ಘಟನೆಗಳು ನಡೆದಿರುತ್ತವೆ ಅದರ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳಿ. ಗೌರವಕ್ಕೆ ಚ್ಯುತಿ ಬರದ ಹಾಗೆ ಹಿಂದೊಂದು, ಮುಂದೊಂದು ನಡೆದುಕೊಳ್ಳದ ಹಾಗೆ ಹೋಗುವುದು ಒಳ್ಳೆಯದು. ಕೆಲವರು ಮುಂದೆ ನಾಟಕ ಮಾಡುತ್ತಾರೆ, ಹಿಂದೆ ಕತ್ತಿ ಮಸೆಯುತ್ತಾರೆ. ಹಿಂದೆ ಇನ್ನೊಬ್ಬರನ್ನು ಹಾಳು ಮಾಡಬೇಕು ಎಂಬ ಪ್ರವೃತ್ತಿ ಇರುತ್ತದೆ. ಆದರೆ ನಿಮಗೆ ಆ ಪ್ರವೃತ್ತಿ ಇರುವುದಿಲ್ಲ. ಒಂದು ರೀತಿ ಸನ್ಯಾಸಿ ಜೀವನ, ಗುರು ಜೀವನ, ಆಧ್ಯಾತ್ಮಿಕ ಜೀವನ ಅತಿಯಾದ ಆತ್ಮಿಕ ಇರುತ್ತದೆ. ಕಮ್ಯುನಿಕೇಷನ್ ಡಿಪಾರ್ಟ್ಮೆಂಟ್, ವ್ಯವಸ್ಥೆ, ಒಂದು ದೊಡ್ಡ ತಂಡವನ್ನು ನೀವು ಮುಂದಿವರಿಸುವ ಶಕ್ತಿ ನಿಮಗಿರುತ್ತದೆ. ಜನವರಿ ಹುಟ್ಟಿದ ವ್ಯಕ್ತಿಗಳ ಶಕ್ತಿ ನಿಮ್ಮ ವ್ಯವಸ್ಥೆ, ತಾಕತ್ತಿನ ಬಗ್ಗೆ ಮತ್ತಷ್ಟು ತಿಳಿಸಿಕೊಡಲಿದ್ದಾರೆ ರವಿಶಂಕರ್ ಗುರೂಜಿ.
ಇಂದಿನ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ,
ಮೇಷ– ಮಾಡುವ ಕೆಲಸದಲ್ಲಿ ವಿಪರೀತ ಏಕಾಗ್ರತೆ ಮಾಡಲು ಹೋಗುತ್ತೀರಿ. ಹಿಂದೆ ಮುಂದೆ ಸದ್ದು, ಪ್ರತಿಯೊಂದನ್ನು ಆಲಿಸಬೇಕು ಆಲಿಸುವಲ್ಲಿ ಜಾಗರೂಕತೆ. ದುಡುಕಬೇಡಿ ಮಾತು ಆಲೋಚಿಸಿ ಚಿಂತಿಸಿ ಹೆಜ್ಜೆ ಇಡಿ.
ವೃಷಭ– ಪರಿಶ್ರಮಕ್ಕೆ ತಕ್ಕಂತ ಫಲ! ಆದರೆ ದುರಾಸೆಯ ಫಲ, ಬಿರುಕು ಫಲ್ಲ, ಯಾರಾದ್ರೂ ವ್ಯಕ್ತಿ ನಿಮ್ಮನ್ನು ಯಾವುದಕ್ಕೊ ದೂಡುವುದು ಎಚ್ಚರಿಕೆ.! ಯಾವುದೋ ಒಂದು ಮೋಸದ ಸಂಗತಿ ಎದುರಾಗಬಹುದು ಜಾಗರೂಕತೆ.
ಮಿಥುನ– ದೈವದರ್ಶನ, ಗುರುದರ್ಶನ, ಮಂತ್ರ ದರ್ಶನ, ಜ್ಞಾನವಂತರು, ಧರ್ಮವಂತರು, ಧರ್ಮಾಧಿಕಾರಿಗಳು, ದೇವರ ಕಾರ್ಯದಲ್ಲಿ ಇರುವವರಿಗೆ ವಿಶೇಷ ಪ್ರಗತಿ. ಧಾರ್ಮಿಕ ಬುದ್ಧಿ ಏನಾದರೂ ಇದ್ದರೆ ವಿಶೇಷವಾದಂಥ ದೇವಿ ಯೋಗವನ್ನು ನೋಡ ತಕ್ಕಂತ ದಿನ.
ಕಟಕ– ಸ್ವಲ್ಪ ಸುಖವಿದೆ ಆದರೆ ಕಹಿಯೂ ಉಂಟು. ಇರುವುದೆಲ್ಲವ ಬಿಟ್ಟು ಇಲ್ಲದೇ ಇರುವ ಕಡೆ ಬಗ್ಗೆ ಯೋಚನೆ ಮಾಡುತ್ತೀರಿ. ನರ್ವಸ್ ಪ್ರಾಬ್ಲಂ, ಸೈಕಾಲಜಿಕಲ್ ಪ್ರಾಬ್ಲಂ ಇರುವವರು ಜಾಗರೂಕತೆ. ಮನೆಯ ಹೊಸಿಲಿನ ಹೊರಗಡೆ ಪುಟ್ಟ ದೀಪವನ್ನು ನಿಂಬೆ ದೀಪವನ್ನು ಹಚ್ಚಿ.
ಸಿಂಹ– ಎಂಥ ಕೆಲಸವನ್ನಾದರೂ, ಎಂಥ ಸಮಸ್ಯೆಗಳನ್ನಾದರೂ ಭೇದಿಸುವ, ಗೆಲ್ಲುವ ತಂತ್ರ ರೂಪಿಸುವ ತಾಕತ್ತು ನಿಮಗೆ ಇರುತ್ತದೆ. ಕಲಾವಿದರು, ರಂಗ ಕ್ಷೇತ್ರ, ಬಾಡಿ ಬಿಲ್ಡರ್ಸ್, ಕ್ರೀಡಾಪಟುಗಳು ಗೆಲುವು ನಿಶ್ಚಿತ.
ಕನ್ಯಾ– ರಾಹು ಒಂಚೂರು ತಳಮಳವೇ! ಆದರೂ ನಿಮಗೆ ಯಾವ ರೀತಿಯ ತಳಮಳ ನೀಡುವುದಿಲ್ಲ. ಇರತಕ್ಕಂಥ ಸ್ಥಾನ ಗಡಿಬಿಡಿಯ ವಾತಾವರಣಕ್ಕೆ ಒಳಗಾಗುತ್ತೀರಿ. ಬೂದು ಕುಂಬಳಕಾಯಿಯಲ್ಲಿ ದೃಷ್ಟಿ ತೆಗೆದು ಹಾಕಿ ಒಳ್ಳೆಯದು.
ತುಲಾ– ಭಾಗ್ಯ ಸ್ಥಾನದಲ್ಲಿ ರಾಹು ಇರುವುದರಿಂದ ಎಕ್ಸ್ಪೋರ್ಟ್- ಇಂಪೋರ್ಟ್, ಪರದೇಶ, ಮೀನು ಚರ್ಮ, ಕೈಗಾರಿಕೋದ್ಯಮ, ಆಯುರ್ವೇದ, ಯುನಾನಿ, ಡಾಕ್ಟರ್ಸ್ ,ನರ್ಸ್, ಲ್ಯಾಬ್ ರಿಪೋರ್ಟ್ ರ್ ವಿಶೇಷ ಪ್ರಗತಿ. ಆದರೆ ನಿಮಗೆ ಒಂದು ಕಾಯಿಲೆ ಇರುತ್ತದೆ. ಸ್ವಲ್ಪ ತುಳಸಿ ಗರಿಕೆಯನ್ನು ನೀರಿನಲ್ಲಿ ಹಾಕಿ ಶುದ್ಧವಾಗಿ ಕುಡಿಯಿರಿ.
ವೃಶ್ಚಿಕ– ಮೈಯೆಲ್ಲಾ ಬಾರ, ಮನಸ್ಸೆಲ್ಲ ಭಾರ ,ದೇಹವೆಲ್ಲ ಭಾರ, ವ್ಯವಹಾರ ಭಾರ ಯಾವುದೋ ಒಂದು ಭಾರ, ಹೊರೆ ನಿಮಗೆ ಕಾಡುತ್ತಿರುತ್ತದೆ. ಮನೆಯಲ್ಲಿ ಮೂಲೆ ಮೂಲೆಗೂ ಧೂಪ ಹಾಕಿ. ಆಯ್ತು ಅಂದರೆ ಅಷ್ಟ ದಿಗ್ಬಂಧನಗಳನ್ನು ತೆಗೆದುಕೊಂಡು ಮನೆಯಲ್ಲಿ ಹಾಕಿ, ಚಿಟಿಕೆ ಉಪ್ಪನ್ನು ಮನೆಯ ಮೂಲೆ ಮೂಲೆಗೂ ಹಾಕಿ. ಜೊತೆಗೆ ಚಿಟಿಕೆ ದೇವಿ ಅರಿಶಿಣವನ್ನು ಕೂಡ ಹಾಕಿ ಒಳ್ಳೆಯದಾಗಲಿದೆ.
ಧನಸ್ಸು– ತೊಳಲಾಟ ಇರಲಿದೆ. ದುಡುಕಬೇಡಿ ಆತುರದ ನಿರ್ಧಾರ, ಕಹಿ ಘಟನೆ ಆಗುವ ಅನಾಹುತದ ಬಗ್ಗೆ ಯೋಚನೆ ಮಾಡುತ್ತೀರಿ. ಅದರ ಬಗ್ಗೆ ಭಾರ ಇಟ್ಟುಕೊಳ್ಳುತ್ತೀರಿ. ಇವತ್ತು ಹುಳಿ ಪದಾರ್ಥಗಳಿಂದ ದೂರವಿರಿ. ಆಯ್ತು ಅಂದರೆ ಬದನೆ ಕಾಯಿ, ತೊಂಡೆಕಾಯಿ, ಆಲೂಗಡ್ಡೆ, ಸೋರೆಕಾಯಿ ಇಂಥ ಒಂದು ೫ ತರಕಾರಿಗಳನ್ನು ಯಾರಾದರೂ ವಯಸ್ಸಾದವರಿಗೆ ಧಾನ ಮಾಡಿ ತುಂಬಾ ಒಳ್ಳೆಯದಾಗುತ್ತದೆ.
ಮಕರ– ಕಲಾವಿದರು, ಕ್ಯಾಮೆರಾಮನ್, ಟೆಕ್ನಿಷಿಯನ್ಸ್, ಜರ್ನಲಿಸ್ಟ್, ಸಿಬಿಐ, ಸಿಐಡಿ, ಕ್ರೈಮ್ ಡಿಪಾರ್ಟ್ಮೆಂಟ್, ಲಾಯರ್, ಕ್ರಿಮಿನಲ್, ಭೂಮಾಪನ ಇಲಾಖೆ, ಎಕ್ಸ್ಪೋರ್ಟ್, ಇಂಪೋರ್ಟ್, ಈ ರೀತಿ ವ್ಯವಹಾರ, ಇಲಾಖೆ ಇರುವವರಿಗೆ ವಿಶೇಷ ಅನುಕೂಲ ನೋಡ ತಕ್ಕಂತ ದಿನ.
ಕುಂಭ– ದೈವ ಕಾರ್ಯದ ಒಂದು ಸಂಗಮ, ಸನ್ನಿವೇಶ, ದಾರಿ ದರ್ಶನ, ಸ್ತ್ರೀ ಮುಖೇನ ಸಹಾಯ, ಸ್ತ್ರೀಯರಿಗೆ ಸಂಬಂಧಿಸಿದ ವ್ಯವಹಾರ, ಬಟ್ಟೆ, ಎಕ್ಸ್ಪೋರ್ಟ್ ಇಂಪೋರ್ಟ್ ತರಕಾರಿ ಈ ರೀತಿಯ ವ್ಯವಹಾರ ಉದ್ಯೋಗದಲ್ಲಿ ಇರುವವರಿಗೆ ಪ್ರಗತಿ ಬೆಳ್ಳಿ ಇದ್ದರೂ ಬಂಗಾರದ ಕಡೆ ಗಮನ ಕೊಟ್ಟರೆ ಪೆಟ್ಟು.
ಮೀನ– ಚಂದ್ರ ಅಷ್ಟಮದ ರಾಹು ಸಾರದಲ್ಲಿದ್ದಾನೆ. ತಾಯಿ ಆರೋಗ್ಯ, ನಿಮ್ಮ ಆರೋಗ್ಯ, ನಿಮ್ಮ ಮನಸ್ಥಿತಿ ದಿನವೊಂದು ಧಾವಂತ. ಅತಿ ಮುಖ್ಯವಾಗಿ ಮೀನ ರಾಶಿಯವರಿಗೆ ಒಂದು ಎಡಗಾಲಿಗೆ ಕಪ್ಪು ದಾರವನ್ನು ಕಟ್ಟಿಕೊಳ್ಳುವುದು ಉತ್ತಮ. ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸ್ವಲ್ಪ ಹೆಚ್ಚು ಪ್ರವೃತ್ತಿ ಇರುತ್ತದೆ ಎಚ್ಚರಿಕೆ. ಮನೆ ಮುಂದೆ ದೀಪ, ಬೃಂದಾವನ ದೀಪ, ತುಳಸಿ ದೀಪ, ದೇವಿ ದೀಪಾ ಇದನ್ನು ಮಾಡಿ ಒಳ್ಳೆಯದಾಗಲಿದೆ.