ದಿನ ಭವಿಷ್ಯ 18 ಡಿಸೆಂಬರ್ 2019.!

0
153

ಸಿಂಹ ರಾಶಿಯವರಿಗೆ ಗ್ರಹಣದ ಛಾಯೆ, ಪ್ರಭಾವ ಹೇಗಿರಲಿದೆ ಎಂಬುದನ್ನು ಶ್ರೀ ರವಿಶಂಕರ್ ಗುರೂಜಿಯವರು ಇಂದಿನ ಸಂಚಿಕೆಯಲ್ಲಿ ತಿಳಿಸಿಕೊಟ್ಟಿದ್ದಾರೆ. ಯಾವುದೋ ಗುರು ಶಾಪ, ದೇವ ಶಾಪ, ತಂದೆ ಶಾಪ, ಮಾತು ಶಾಪ ಇದಕ್ಕೆ ಒಳಗಾಗುವುದಂತೂ ಖಚಿತ. ಯಾರೊಂದಿಗೂ ಜಗಳವಾಡಲು ಹೋಗಬೇಡಿ. ಮಾತಿಗೆ ಮಾತು ಬೆಳೆಸಬೇಡಿ, ನಾನೇ ಬುದ್ಧಿವಂತ ,ನಾನೇ ಧೈರ್ಯವಂತ ,ನಾನೇ ಹಣವಂತ, ನಾನೇ ಸಿರಿವಂತ ಎಂದು ನುಗ್ಗಿ ಜಗಳ ಮಾಡಲು ಮುಂದಾಗಬೇಡಿ ಅಲ್ಲೊಂದು ತೊಂದರೆಯುಂಟು ಜಾಗರೂಕತೆ. ನನ್ನಿಂದಲೇ ಎಲ್ಲವೂ ನಡೆಯುತ್ತಿದೆ ಎಂಬ ಅಹಂ, ಗರ್ವವನ್ನು ಕಟ್ಟಿಟ್ಟು ಕೆಲಸ ಮಾಡಿ ಇಲ್ಲಾಂದ್ರೆ ಯಾವುದೋ ದೊಡ್ಡ ತೊಂದರೆ ಅಪ್ಪಳಿಸಲಿದೆ.

ಮಕ್ಕಳ ಆರೋಗ್ಯದ ಕಡೆ, ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ಕೊಡುವುದು ಒಳ್ಳೆಯದು. ಯಾವುದೋ ಹಿರಿಯರ ಶಾಪಕ್ಕೆ ಒಳಗಾಗುತ್ತೀರಿ, ಯಾರದೋ ಹಿರಿಯರ ಶಾಪ, ಮನೆಯಲ್ಲಿ ಹಿರಿಯರ ಅಪಮೃತ್ಯು ಘಟನೆ ನಡೆದಿರುತ್ತದೆ. ಇದಕ್ಕೆ ಪರಿಹಾರ ಗಯ ಅಥವಾ ಗೋಕರ್ಣಕ್ಕೆ ಹೋಗಿ ಪಿತೃಶಾಂತಿ, ಪ್ರೇತ ಶಾಂತಿ ಮಾಡಿಸಿಕೊಳ್ಳಿ ನಿಮ್ಮ ಮನೆಯಲ್ಲಿ ಯಾವುದೋ ಹಿರಿಯರು, ಮನಸ್ತಾಪ, ಬೇಸರ ಯಾವುದೋ ಕಾರಣದಿಂದಾಗಿ ಮೃತ್ಯುವನ್ನು ಹೊಂದಿದ್ದಾರೆ. ಹಾಗಾಗಿ ಅವರ ಶಾಂತಿಯನ್ನು, ಪಿತೃಶಾಂತಿ ಮಾಡಿಸಿಕೊಳ್ಳುವುದು ಒಳ್ಳೆಯದು.

ಪಿತೃಶಾಂತಿ ಕಳೆಯಲು ಗ್ರಹಣದಲ್ಲಿ ಹನ್ನೊಂದು ಜನ ಅಥವಾ ೨೧ ಜನಕ್ಕೆ ಅಥವಾ ಐದು ಜನ ಬ್ರಾಹ್ಮಣರಿಗೆ ಉಣಬಡಿಸಿ. ಮನೆಯವರು ಎಲ್ಲರೂ ಅಡುಗೆಯನ್ನು ಸ್ವೀಕರಿಸುವ ಮುನ್ನ ಒಂದು ತಟ್ಟೆಗೆ ಅಡುಗೆಯನ್ನು ತೆಗೆದುಕೊಂಡು ಅದಕ್ಕೆ ಉಪ್ಪಿನಕಾಯಿ, ಹಪ್ಪಳ ಸೇರಿಸಿ ಅವರಿಗೆ ಉಣಬಡಿಸಿ ಇದರಿಂದ ಪಿತೃಶಾಪ, ಪ್ರೇತ ಬಾಧೆಯಿಂದ ತಪ್ಪಿಸಿಕೊಳ್ಳಬಹುದು.

ತಂದೆ ಶಾಪ, ತಾಯಿ ಶಾಪ, ಪಿತೃಶಾಪ, ಪುತ್ರ ಶಾಪ, ಆತ್ಮ ಶಾಪ, ಮಾತು ಶಾಪ ಇದರಿಂದ ಮುಕ್ತಿ ಹೊಂದಬೇಕು ಎಂದರೆ ನೀವಿದನ್ನು ಮಾಡಲೇಬೇಕು. ಹೊತ್ತು ಗೊತ್ತಿಲ್ಲದೆ ಯಾವುದೋ ಅಪಮಾನ, ಅವಮಾನ, ಸ್ತ್ರೀಯಿಂದಲೋ ಅಥವಾ ಪರಸ್ತ್ರೀ, ಪುರುಷ ಇವರಿಂದ ಯಾವುದೋ ಒಂದು ಎಳೆದಾಟ ಎದುರಾಗುತ್ತದೆ. ಯಾರೊಂದಿಗೂ ವಾದಕ್ಕೆ, ಜಗಳಕ್ಕೆ ಹೋಗಬೇಡಿ. ಬುದ್ಧಿ ಕಾರಕ ಕರ್ಮ ಫಲವಾಗಲಿದೆ. ನಿಮ್ಮ ಮಾತು, ಆಲೋಚನೆ ಯಾವುದು ನಿಮ್ಮ ಕೈಯಲ್ಲಿ ಇರುವುದಿಲ್ಲ ಎಚ್ಚರಿಕೆ ಇರಲಿ.

 

ಕನ್ಯಾ ರಾಶಿಯವರಿಗೆ ಗ್ರಹಣದ ಛಾಯೆ, ಪ್ರಭಾವ ಹೇಗಿರಲಿದೆ :

ಈ ಒಂದು ಗ್ರಹಣ ನಿಮ್ಮ ಸುಖ ಸ್ಥಾನಕ್ಕೆ ಬಂದಿದೆ. ಸುಖ ಸ್ಥಾನದಿಂದ ದಶಮ ಸ್ಥಾನಕ್ಕೆ, ಉದ್ಯೋಗ ಸ್ಥಾನ ಅಧಿಕ್ಕಾರ ಸ್ಥಾನದಲ್ಲಿ ನಡೆಯುತ್ತಿದೆ. ಪೂರ ಕಾಳಸರ್ಪ ದೋಷ ನಿಮ್ಮೊಂದಿಗೆ ಅಡಗಿದೆ. ನಿತ್ಯ ಇವತ್ತಿನಿಂದಲೇ ಎಲ್ಲಿಯಾದರೂ ಅಶ್ವತ ಕಟ್ಟೆ, ನಾಗರ ಕಟ್ಟೆಗೆ ನಿತ್ಯ ಗಂಧಾಭಿಷೇಕ ಆಗಲಿ. ಗ್ರಹಣದ ದಿನಕ್ಕೆ ಒಂದು ಬಿಂದಿಗೆ ಸ್ಟೀಲ್ ಬಿಂದಿಗೆ ಯಾವುದಾದರೂ ಪರವಾಗಿಲ್ಲ ಅಥವಾ ಲೋಹದ ಬಿಂದಿಗೆಯನ್ನು ತೆಗೆದುಕೊಂಡು ಅದಕ್ಕೆ ಸುಗಂಧ ದ್ರವ್ಯಗಳನ್ನು ಸೇರಿಸಿ ಗಂಧ ,ಫಲಪುಷ್ಪ, ಮಲ್ಲಿಗೆ, ಹೂವು, ಅರಿಸಿಣ, ಕುಂಕುಮಾ ಸೇರಿಸಿ ಆ ನೀರನ್ನು ಬೆಳಗ್ಗೆ ಅಶ್ವಥ ಕಟ್ಟೆ/ ನಾಗರಕಟ್ಟೆಗೆ ಅದನ್ನು ಬೆಳಗ್ಗೆ ೬: ೧೫ ನಿಮಿಷದ ಒಳಗೆ ಮಾಡಿ ಮುಗಿಸಿ ಬಹಳ ಒಳ್ಳೆಯದು.

ಇದನ್ನು ನೀವು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಬೆಳಗ್ಗೆ ಸ್ನಾನ ಮಾಡಿ ನಂತರ ಅದರಲ್ಲಿ ನೀರು ತುಂಬಿಸಿ ಈ ಸುಗಂಧ ದ್ರವ್ಯಗಳನ್ನು ಸೇರಿಸಿಕೊಂಡು ಪೂಜೆಯನ್ನು ಮಾಡುವುದು ಬಹಳ ಶ್ರೇಷ್ಠ.! ನಿಮ್ಮ ಗ್ರಹಣದ ದೋಷಗಳೆಲ್ಲ ಪರಿಹಾರವಾಗುತ್ತದೆ. ಎಲೆ ಅಡಿಕೆ ಇಟ್ಟು ಕರ್ಪೂರ ಇಟ್ಟು ಪೂಜೆ ಸಲ್ಲಿಸಿ. ಕನ್ಯಾ ರಾಶಿಯವರಿಗೆ ಒಳ್ಳೆಯದಾಗುತ್ತದೆ. ಯಜಮಾನ, ಯಜಮಾನಿಯ ಜೊತೆ ಒಂದು ತೊಂದರೆ ಎಡವಟ್ಟು ಜಗಳ ಅವರ ಆರೋಗ್ಯದಲ್ಲಿ ಒಂದು ಏರುಪೇರು ಉಂಟಾಗಲಿದೆ. ನಿಮ್ಮ ಬುದ್ಧಿ ಶಕ್ತಿ ನಿಮ್ಮ ಮಾತಿನ ಶಕ್ತಿ ನಿಮ್ಮೊಂದಿಗೆ ಇರುವುದಿಲ್ಲ. ನಿಮ್ಮ ಸ್ಥಿರತೆಯಲ್ಲಿ ಇರುವುದಿಲ್ಲ.

ಕನ್ಯಾ ರಾಶಿಯವರ ಹಾಗೆ ಲೆಕ್ಕಾಚಾರ ಯಾರೂ ಮಾಡುವುದಿಲ್ಲ. ಹಾಗಾಗಿ ಭಗವಂತ ನಿಮಗೆ ನಿಮ್ಮ ೪ನೇ ಹೆಜ್ಜೆಯಲ್ಲಿ ಒಂದು ಪೆಟ್ಟು ಕೊಟ್ಟಿರುತ್ತಾನೆ. ತಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಾಗ ಅಲ್ಲೂ ಕೂಡ ನೀವು ಬಾರಿ ಲೆಕ್ಕಾಚಾರ ಮಾಡಿ ಯೋಚನೆಗಳನ್ನು ಮಾಡುತ್ತೀರಿ. ನಿಮ್ಮ ಜೀವನದ ಐವತ್ತು ಭಾಗ ಹಣ. ಸಂಪತ್ತು, ಆಸ್ತಿ, ಮನೆ, ಪಟ್ಟ ಇದರ ಬಗ್ಗೆಯೇ ಯೋಚನೆ ಮಾಡುತ್ತೀರಿ. ಕನ್ಯಾ ರಾಶಿಯವರಿಗೆ ಸಂಗಾತಿಯ ಆರೋಗ್ಯದಲ್ಲೂ ಸಂಗಾತಿಯ ವಿಚಾರದಲ್ಲೂ ಒಂದು ಎಳದಾಟವಿದೆ ಜಾಗರೂಕತೆ.

 

ಗ್ರಹಣದ ದಿನ ಕನ್ಯಾ ರಾಶಿಯವರು ಯಾವುದಾದರೂ ಶಿವಾಲಯಕ್ಕೆ ಹಳೆ ಶಿವಾಲಯಕ್ಕೆ ಹೋಗಿ ಅಲ್ಲೇ ಉಳಿದುಕೊಂಡು ದೈವದ ಆಶೀರ್ವಾದ ಪಡೆದುಕೊಂಡು ಬನ್ನಿ, ಗ್ರಹಣ ಮುಗಿದ ನಂತರ ಪೂಜೆ ಪುನಸ್ಕಾರ ನಡೆಯಲಿದ್ದು, ಭಗವಂತನ ಆಶೀರ್ವಾದ ಪಡೆದುಕೊಂಡು ಬನ್ನಿ. ಮಕ್ಕಳ ಬಗ್ಗೆ ಗಂಭೀರ ಆಲೋಚನೆ ಮಾಡಿ ನೀವು ತಿಳಿದೋ ತಿಳಿಯದೆಯೋ ಯಾವುದೋ ಶಾಪಕ್ಕೆ ಒಳಗಾಗಿದ್ದೀರಿ. ಕನ್ಯಾ ರಾಶಿಯವರು ಜಾಗರೂಕತೆ. ಯಾರಾದರೂ ಬಡವರಿಗೆ ಅನಾಥರಿಗೆ, ಅಂಗನವಾಡಿ ಮಕ್ಕಳಿಗೆ, ಬಡಮಕ್ಕಳಿಗೆ ನಿಮ್ಮ ದರ್ಪವನ್ನು ತೋರಿಸಬೇಡಿ. ಅವರಲ್ಲಿ ಸ್ಟೇಟಸ್, ಸಿರಿತನವನ್ನು ನೋಡಬೇಡಿ. ಅವರನ್ನು ಕೀಳಾಗಿ ನೋಡಬೇಡಿ ಕನ್ಯಾ ರಾಶಿಯವರು ಜಾಗರೂಕತೆ.

ಇಂದಿನ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ,

ಮೇಷ– ಇಂದು ನಿಮ್ಮ ದಿನ ಚೆನ್ನಾಗಿದೆ. ಬಹು ಖುಷಿಯ ದಿನ, ಮನೆಯಲ್ಲಿ ಸಂಭ್ರಮ, ಸಡಗರ, ವ್ಯವಹಾರ ನಿಮಿತ್ತ, ಉದ್ಯೋಗ ನಿಮಿತ್ತ ,ಕುಟುಂಬ ನಿಮಿತ್ತ ಚೆನ್ನಾಗಿದೆ ಯೋಚಿಸಬೇಡಿ ಶುಭವಾಗಲಿದೆ.

 

ವೃಷಭ– ಇವತ್ತು ನಿಮಗೆ ಸ್ವಲ್ಪ ಗಾಬರಿಯ ದಿನ, ಆದರೂ ನಿಭಾಯಿಸಿಕೊಂಡು ಹೋಗುತ್ತೀರಿ. ನಿಮ್ಮ ಗತ್ತು, ತಾಕತ್ತಿಗೆ ಹೇಳಿ ಮಾಡಿಸಿದ ದಿನವಾಗಿರಲಿದೆ. ಮನೆಯಿಂದ ಹೊರ ಹೋಗುವ ಮುನ್ನ ಕುಂಕುಮ ಇಟ್ಟುಕೊಂಡು ಹೋಗಿ ಶುಭವಾಗಲಿದೆ.

 

ಮಿಥುನ– ಇಂದು ನಿಮಗೆ ತುಂಟ ತನವೇ. ವಯ್ಯಾರ, ಅಲಂಕಾರ, ಒಪ್ಪ, ಓರಣ, ಸಡಗರ ಹೇಳತೀರದು. ವಿಶೇಷ ಸುತ್ತಾಟ, ಓಡಾಟ, ಸ್ನೇಹಿತರೊಡನೆ, ಆತ್ಮೀಯರೊಡನೆ ಭೋಜನ ಕೂಟ ಇವೆಲ್ಲವೂ ದೊರೆಯುತ್ತದೆ. ಖುಷಿಯ ದಿನ ಸಂತಸದ ದಿನ ಒಳ್ಳೆಯದಾಗಲಿ.

 

ಕಟಕ– ಆತ್ಮೀಯರನ್ನು ಭೇಟಿ ಮಾಡುತ್ತೀರಿ. ವ್ಯಾಪಾರ ನಿಮಿತ್ತ,ವ್ಯವಹಾರ ನಿಮಿತ್ತ ಹಣಕಾಸು ದೊರೆಯಲಿದೆ. ಆದರೆ ಅದು ನೀರಿನಂತೆ ಖರ್ಚಾಗಲಿದೆ.

 

ಸಿಂಹ– ಇವತ್ತು ನಿಮಗೆ ಹುಟ್ಟಿದ ದಿನ ಹಾಗೆ ಇರಲಿದೆ. ನೀವು ಹೇಗೆ ಇರುತ್ತೀರಿ ಹಾಗೆ ಅಲಂಕಾರ ಮಾಡಿಕೊಂಡು ಖುಷಿಯಿಂದ ಇರುತ್ತೀರಿ. ಮನೆಯಲ್ಲಿ ಖುಷಿಯ ವಾತಾವರಣವಿರುತ್ತದೆ. ಸಂತಸದ ಛಾಯೆ ಒಳ್ಳೆಯದಾಗಲಿದೆ.

 

 

ಕನ್ಯಾ– ಕನ್ಯಾ ರಾಶಿ ಇವತ್ತು ನಿಮಗೆ ಸೆಲೆಬ್ರೇಷನ್ ದಿನ. ಯಾವುದೋ ಒಂದು ವಿಚಾರದಲ್ಲಿ ಶುಭ ಸುದ್ದಿ ಕೇಳುತ್ತೀರಿ. ಇವತ್ತು ಸಂಪೂರ್ಣವಾಗಿ ನೀವು ಸಂತಸದಿಂದ ಕೂಡಿರುತ್ತೀರ. ಖುಷಿಯ ದಿನ ಎಂಜಾಯ್ ಮಾಡಿ ಒಳ್ಳೆಯದಾಗಲಿ.

 

ತುಲಾ– ತುಲಾ ರಾಶಿಯವರು ಇವತ್ತು ಸಿಕ್ಕಾಪಟ್ಟೆ ಖರ್ಚು ಮಾಡುತ್ತೀರಿ. ಶಾಪಿಂಗ್, ಓಡಾಟ, ಸುತ್ತಾಟ, ವಸ್ತ್ರ ಖರೀದಿ ಏನಾದರೂ ಒಂದರಲ್ಲಿ ತೊಡಗಿಸಿಕೊಂಡು ಖರ್ಚುವೆಚ್ಚ ಹೆಚ್ಚಾಗಲಿದೆ. ಮನೆಯವರಿಗೋಸ್ಕರ, ಕುಟುಂಬಕ್ಕೋಸ್ಕರ ಖರ್ಚು, ಮನೆಯಲ್ಲಿ ಆನಂದವೇ. ರೈತರಿಗೆ, ಕೃಷಿಕರು ಉತ್ತಮ ಲಾಭವನ್ನು ನೋಡುವಂಥ ಒಂದು ದಿನ ಚೆನ್ನಾಗಿದೆ.

 

ವೃಶ್ಚಿಕ– ಇವತ್ತು ತುಂಬಾ ಉತ್ಸಾಹದಲ್ಲಿದ್ದೀರ. ದೇಹ ಕರಗಿಸುವುದು, ದೇಹ ಕಟ್ಟುಮಸ್ತು ಆಗಿಟ್ಟುಕೊಳ್ಳುವ ಬಗ್ಗೆ ಯೋಚನೆ ಮಾಡುತ್ತೀರಿ. ತುಂಬಾ ವೇಗವಾಗಿ ಕೆಲಸ ಮಾಡಲು ಹೋಗುತ್ತೀರಿ. ಅತಿ ವೇಗ ಬೇಡ ಎಡವಟ್ಟು ಮಾಡಿಕೊಳ್ಳುತ್ತೀರಿ. ಖುಷಿ ಸಂಭ್ರಮದ ಜೊತೆ ಸಣ್ಣ ಎಳೆದಾಟವೂ ಉಂಟು ಜಾಗರೂಕತೆ.

 

ಧನಸ್ಸು– ಇವತ್ತು ನೀವು ಯಾರ ಮಾತನ್ನೂ ಕೇಳುವುದಿಲ್ಲ. ಕೇಳುವ ಪರಿಸ್ಥಿತಿಯಲ್ಲಿ ಇರುವುದಿಲ್ಲ. ನನ್ನ ಮಾತೇ ವೇದಾಂತ, ಸಿದ್ಧಾಂತ ಎಂದುಕೊಳ್ಳುತ್ತೀರಿ. ಬ್ಯೂಟಿಪಾರ್ಲರ್, ಮೇಕಪ್, ಕಲಾ ಪ್ರಪಂಚದಲ್ಲಿ ತೊಡಗಿಸಿಕೊಂಡಿದ್ದರೆ ಅದ್ಭುತ ಪ್ರಗತಿಯನ್ನು ನೋಡ ತಕ್ಕಂತ ದಿನ.

 

ಮಕರ– ತುಂಟತನಕ್ಕೆ ಯಾವ ತೊಂದರೆ ಇಲ್ಲ. ನೀವೇನು ಕಷ್ಟಪಟ್ಟಿದ್ದೀರ ಆ ಶ್ರಮಕ್ಕೆ ತಕ್ಕಂತೆ ಫಲ ದೊರೆಯಲಿದೆ. ಸ್ತ್ರೀಯರಿಗೆ ಸಂಬಂಧಿಸಿದ ವ್ಯಾಪಾರ, ವ್ಯವಹಾರ, ಕಲಾ ಪ್ರಪಂಚದಲ್ಲಿದ್ದರೇ ತೊಳಲಾಟ ಇರುತ್ತದೆ.

 

ಕುಂಭ– ಏನೋ ಒಂದು ತುಂಟತನ, ಸಂಭ್ರಮವನ್ನು ನೋಡುತ್ತೀರಿ. ಖುಷಿಯ, ಶುಭ ಸುದ್ದಿಯೊಂದನ್ನು ಕೇಳುತ್ತೀರಿ. ನಿಮ್ಮ ಶ್ರಮಕ್ಕೆ ತಕ್ಕಂತೆ ಫಲವನ್ನು ಪರಿಪೂರ್ಣ ಫಲವನ್ನು ನೋಡುತ್ತೀರಿ. ಒಂದು ಬೊಗಸೆ ಹಣ ,ಒಂದು ಬೊಗಸೆ ಖುಷಿ ನಿಮಗಿರಲಿದೆ.

 

ಮೀನ– ಉದ್ಯೋಗದಲ್ಲೂ ವ್ಯವಹಾರದಲ್ಲಿ ಒಂದು ಸಣ್ಣ ಕಿರಿಕಿರಿ. ಮಹಿಳೆಯರಿಗೆ ಸಂಬಂಧಿಸಿದ ಹಾಗೆ ಹೊಟ್ಟೆ ನೋವು, ತಲೆ ನೋವು, ಪೈಲ್ಸ್, ಪಿಸ್ತೂಲ ಬಾಧೆಗಳು ಕಾಡಲಿದೆ.

LEAVE A REPLY

Please enter your comment!
Please enter your name here