ದಿನ ಭವಿಷ್ಯ 17 ಜನವರಿ 2020!

0
531

ಜನವರಿ ತಿಂಗಳಲ್ಲಿ ಹುಟ್ಟಿದವರ ವಿಶೇಷತೆಗಳೇನು ಎಂಬುದನ್ನು ರವಿಶಂಕರ್ ಗುರೂಜಿ ಅವರು ಇಂದಿನ ಸಂಚಿಕೆಯಲ್ಲಿ ತಿಳಿಸಿಕೊಟ್ಟಿದ್ದಾರೆ. ಜನವರಿಯಲ್ಲಿ ಹುಟ್ಟಿರುವ ವ್ಯಕ್ತಿಗಳ ಒಂದು ತಾಕತ್ತೇ ಬೇರೆ ಸೂರ್ಯ ಪ್ರಭಾವ ಶನಿ ಪ್ರಭಾವ ಗುರು ಪ್ರಭಾವ ಕುಜ ಪ್ರಭಾವ ಇರುತ್ತದೆ. ಯಾಕೋ ಜನವರಿಯಲ್ಲಿ ಹುಟ್ಟಿದಂತಹ ವ್ಯಕ್ತಿಗಳು ಹುಟ್ಟು ಹೋರಾಟಗಾರರು ಯಾವುದಕ್ಕೂ ಸುಮ್ಮನಾಗುವುದಿಲ್ಲ ಒಪ್ಪಿಕೊಳ್ಳುವುದಿಲ್ಲ. ಕುಟುಂಬವನ್ನು ತುಂಬಾ ಪ್ರೀತಿಯಿಂದ ಇಷ್ಟಪಡುತ್ತೀರಿ ಒಪ್ಪಿಕೊಳ್ಳುತ್ತೀರಿ ಆದರೆ ಕಾರಣಾಂತರಗಳಿಂದ ಕುಟುಂಬದಿಂದ ದೂರವಿರುವ ತಕ್ಕಂತ ಪ್ರಸಂಗ ಜನವರಿ ಮಾಸದಲ್ಲಿ ಹುಟ್ಟಿರುವೆ ವ್ಯಕ್ತಿಗಳಿಗೆ ಇರುತ್ತದೆ.

 

 

ಯಾಕೋ ಕುಟುಂಬದ ವಿಚಾರದಲ್ಲಿ ಅಲ್ಲೊಂದು ಸಮಾಧಾನ ನಿಮ್ಮ ತಂದೆಯನ್ನು, ತಾಯಿಯನ್ನು ಹೆಚ್ಚು ಪ್ರೀತಿಸುವಂತ ವ್ಯಕ್ತಿತ್ವ, ಒಡಹುಟ್ಟಿದವರನ್ನು ಅಷ್ಟು ಪ್ರೀತಿಸುತ್ತೀರಿ. ಆದರೆ ಅಲ್ಲಿ ಎಲ್ಲೋ ಒಂದು ಹುಳಿ !ಜನವರಿ ಮಾಸದಲ್ಲಿ ಹುಟ್ಟಿರುವ ವ್ಯಕ್ತಿಗಳು ಒಂದು ತಂದೆಯಿಂದ ದೂರವಾಗುತ್ತಾರೆ, ಇಲ್ಲ ಉದ್ಯೋಗ ನಿಮಿತ್ತ, ವಿದ್ಯಾಭ್ಯಾಸ ನಿಮಿತ್ತ, ಯಾವುದೋ ನಿಮಿತ್ತ ದೂರವಿರುವ ಒಂದು ಪ್ರಸಂಗ ಎದುರಾಗುತ್ತದೆ. ಇಲ್ಲವೇ ತಂದೆಯ ವಿಚಾರಗಳಲ್ಲಿ ಒಂದು ವೈರುಧ್ಯ ಉಂಟಾಗುತ್ತದೆ. ಚಿಕ್ಕ ವಯಸ್ಸಿಗೆ ತಂದೆ ತಾಯಿಯರಿಂದ ದೂರವಿರುವುದು ದೂರ ಹೋಗುವುದು ಎಂದು ಪ್ರಸಂಗಗಳು ಖಂಡಿತ ಇರುತ್ತದೆ.

 

ನೋಡಲಿಕ್ಕೆ ನೀವು ಸಾಮಾನ್ಯವಾಗಿದ್ದರೂ ಕೂಡ ತಾಕತ್ತು, ವರ್ಚಸ್ಸು ಬೇರೆ ರೀತಿಯೇ ಇರುತ್ತದೆ. ನಿಮ್ಮ ಜೀವನದ ಅನುಭವ ನಿಮ್ಮನ್ನು ಎತ್ತರದ ವ್ಯಕ್ತಿತ್ವಕ್ಕೆ ಕರೆದುಕೊಂಡು ಹೋಗುತ್ತದೆ. ನಿಮ್ಮ ನೋವುಗಳನ್ನು ಸಹಿಸಿಕೊಂಡು ಬಿಟ್ಟರೆ ಗೆಲುವು ಶತಸಿದ್ಧ. ನಿಮಗೆ ಕೆಲವೊಂದು ಕಾರಣಾಂತರಗಳಿಂದ ಪೊಲೀಸ್ ಕೋರ್ಟ್, ಕಟಕಟೆ, ಹೋರಾಟ, ಪ್ರಕೃತಿಯ ವಿಕೋಪಗಳನ್ನು ನೋಡ ತಕ್ಕಂತ ಒಂದು ಪ್ರಭಾವ! ಗೆಲುವನ್ನು ಪರಿವರ್ತಿಸಿವಲ್ಲಿ ನಿಮಗೆ ನೀವೇ ಸಾಟಿ. ಅಂಥದ್ದೊಂದು ತಾಕತ್ತು ನಿಮಗೆ ಇರುತ್ತದೆ. ಜನವರಿ ಸುಮ್ಮನಲ್ಲ ನಿಗೂಢ ವ್ಯಕ್ತಿಗಳು ನೀವು.

 

ನೋಡಲು ಸಾಮಾನ್ಯರಂತೆ ಕಂಡರೂ ನಿಮ್ಮ ಆತ್ಮವಿಶ್ವಾಸ ಅಪರಿಮಿತ ಸರಿಯಾದ ಆ ಒಂದು ಸಂಖ್ಯೆಗಳ ಜೋಡಣೆ ವ್ಯಕ್ತಿಗಳ ಜೋಡಣೆ ಗ್ರಹಗತಿಗಳ ಜೋಡಣೆ ಇದ್ದರೆ ವಿಶ್ವವಿಖ್ಯಾತಿ ಗಳಿಸುವುದು ಖಂಡಿತ.! ಇಲ್ಲವೇ ಒಂದು ಸಾಮಾನ್ಯ ವ್ಯಕ್ತಿಯಾಗಿ ಒಂದು ಸಂಸ್ಥೆಯಲ್ಲಿ ಸಾಮಾನ್ಯ ಕೆಲಸದಿಂದ ಅರ್ಜಿಯಿಂದ ಅತ್ಯುನ್ನತ ಸ್ಥಾನವನ್ನು ಪಡೆಯುವಷ್ಟು ತಾಕತ್ತು ದೇವರು ನಿಮಗೆ ದಯಪಾಲಿಸಿದ್ದಾನೆ ಹಿಡಿದುಕೊಳ್ಳಬೇಕು ಅಷ್ಟೇ.! ಎಂಥ ಸಮಸ್ಯೆ ಬಂದರೂ ಬಿರುಗಾಳಿ ಸುಂಟರಗಾಳಿ ಬಂದರೂ ಕೂಡ ಅದನ್ನು ಎದುರಿಸಿ ನಿಲ್ಲುವಂತಹ ಶಕ್ತಿ ಇರುತ್ತದೆ.

 

ಸಣ್ಣಪುಟ್ಟ ಸಮಸ್ಯೆಗಳು ನಿಮ್ಮನ್ನು ಕದಲಿಸುವುದಿಲ್ಲ. ೨೧ರ ಆಸು ಪಾಸಿನ ಪುರುಷರಾಗಿದ್ದರೆ ಕೆಲವೊಂದು ಅಭ್ಯಾಸ ದುರಭ್ಯಾಸಗಳಿಗೆ ದಾಸರಾಗುವಂತೆ ಸಂದರ್ಭಗಳು ಹೆಚ್ಚಿರುತ್ತದೆ. ಸಾಮಾನ್ಯವಾಗಿ ಹೃದಯದಿಂದ ಚಿಂತಿಸುವಂತೆ ವ್ಯಕ್ತಿತ್ವ ನಿಮ್ಮದು ಹಾಗಾಗಿ ಹೃದಯಕ್ಕೆ ಸಂಬಂಧಿಸಿದ ವೇದನೆ ನಮ್ಮನ್ನು ಕಾಡುತ್ತಿರುತ್ತದೆ. ಯಾವ ಓದನ್ನು ಓದಿಕೊಂಡರೆ ನಿಮಗೆ ಸಮಗ್ರವಾಗಿ ಅರ್ಥೈಸಿಕೊಳ್ಳಬಹುದು ಎಂಬುದನ್ನು ಮುಂದಿನ ಸಂಚಿಕೆಗಳಲ್ಲಿ ತಿಳಿಸಿಕೊಡಲಿದ್ದಾರೆ.

ಇಂದಿನ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ,

ಮೇಷ– ಸ್ವಲ್ಪ ಪರಿಶ್ರಮ ದಿನ ಕುಜ ಶನಿ ಸಾರದಲ್ಲಿ ತಾನೇ ದಿನದ ಆರಂಭ ಮಂದಗತಿ ಮಾಡೋಣ ನೋಡೋಣ ಇಂದು ಇರುತ್ತೀರಿ ಯಾವ ಕೆಲಸ ಮಾಡಬೇಕು ಅದನ್ನು ಮೊದಲು ಮಾಡುವುದಿಲ್ಲ ಯಾವುದು ವಿಳಂಬವಾಗ ಬೇಕೋ ಅದನ್ನು ಬೇಗ ಮಾಡುತ್ತೀರಿ ಆ ರೀತಿಯ ಒಂದು ಭಾವ. ಸ್ವಲ್ಪ ಮನೆಯಲ್ಲಿ ಪುಟ್ಟ ತುಪ್ಪದ ದೀಪ ಹಚ್ಚಿ! ಹಚ್ಚಿದ್ದರೆ ಅದರ ದರ್ಶನ ಮಾಡಿಕೊಂಡು ಹೋಗಿ ಶುಭವಾಗಲಿದೆ.

 

ವೃಷಭ– ಮೆಷಿನರಿ ಫ್ಯಾಕ್ಟರಿ ಎಂಬ ದೊಡ್ಡ ಬೆಂಕಿ ಪೊಲೀಸ್ ರಕ್ಷಣಾ ಇಲಾಖೆ ರಕ್ಷಣಾ ಹಣಕ್ಕೆ ಸ್ಥಾನದಲ್ಲಿದ್ದರೆ ಸ್ವಲ್ಪ ಪರಿಶ್ರಮದ ದಿನ ಏನೋ ಒಂದು ಒತ್ತಡದ ಛಾಯೆ, ದೊಂಬಿ, ಗಲಾಟೆ, ಇರಲಿದೆ ಜಾಗರೂಕತೆ ಕಿರಿಕಿರಿಯ ಒಂದು ಭಾವವೇ ಆದರೂ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವವರಿಗೆ ನಿಮ್ಮ ಯೋಗ್ಯತೆಗೆ ತಕ್ಕ ಪರಿಶ್ರಮ ಫಲ.

 

ಮಿಥುನ– ಏನಾದರೊಂದು ಕಿರಿಕಿರಿ ಪಡೆಯತಕ್ಕದ್ದು ವಿದ್ಯಾರ್ಥಿಗಳಿಗೆ ಒಂದು ಸಣ್ಣ ಹಿನ್ನಡೆ, ಬದಲಿಗೆ ಬುಧನ ಮನೆ ವಿದ್ಯೆಯ ಮನೆ ಸ್ವಲ್ಪ ವಿದ್ಯೆ ಕಡೆ ಗಮನ ಕೊಡುವುದಿಲ್ಲ ಕ್ರೀಡಾಪಟುಗಳಿಗೆ ಹೊಡೆತ ಬೀಳುವುದು ಮಿಷನರಿ ವಿಭಾಗದಲ್ಲಿ ಇರುವವರಿಗೆ ಸಣ್ಣ ಗಾಯಗಳಾಗಬಹುದು ಸುಬ್ರಹ್ಮಣ್ಯರಿಗೆ ಸಣ್ಣ ಅರ್ಚನೆ ಸಂಕಲ್ಪ ಮಾಡಿಕೊಳ್ಳಿ ಶುಭವಾಗಲಿದೆ.

 

ಕಟಕ– ಸ್ವಲ್ಪ ಪರಿಶ್ರಮ ಪಡಬೇಕಾಗುತ್ತದೆ. ಅದಕ್ಕೆ ಚೈತನ್ಯ ಧೈರ್ಯ ಇರುವುದರಿಂದ ಪರಿಶ್ರಮಕ್ಕೆ ತಕ್ಕಂತೆ ಬೆಲೆಯನ್ನು ಉದ್ಯೋಗ ನಿಮಿತ್ತ ವ್ಯವಹಾರ ನಿಮಿತ್ತ ನೋಡುತ್ತೀರಿ ಒಳ್ಳೆ ಯೋಗ ಹೆಸರು ಕೂಡ ಪಡೆಯುತ್ತೀರಿ.

 

ಸಿಂಹ– ಟೆಕ್ನಿಕಲ್ ಲೈನ್, ಸರ್ವಿಸಿಂಗ್, ಮೆಂಟೇನೆನ್ಸ್ ಎಲೆಕ್ಟ್ರಿಕಲ್ ಎಲೆಕ್ಟ್ರಾನಿಕ್ಸ್ ಪ್ಲಂಬಿಂಗ್ ಆರ್ಕಿಟೆಕ್ಟ್ ಇಂಜಿನಿಯರ್ಸ್ ಈ ರೀತಿ ವಿಭಾಗಗಳೇ ಕೆಲಸ ಕಾರ್ಯ ಮಾಡುತ್ತಿರುವರಿಗೆ ವಿಶೇಷ ಅಭಿವೃದ್ಧಿ.

 

ಕನ್ಯಾ– ಕಲಾವಿದರಾಗಿದ್ದರೆ ಆ ಟೆಸ್ಟ್ ಗಳಾಗಿದ್ದರೆ ಡಾನ್ಸ್ ಮ್ಯೂಸಿಕ್ ಮ್ಯೂಸಿಕಲ್ ಇನ್ಸ್ಟ್ರೂಮೆಂಟ್ಸ್ ರೀತಿಯ ವ್ಯಾಪಾರ ವ್ಯವಹಾರ ಕಸ್ಟಮರ್ ಸರ್ವೀಸ್ ಈ ರೀತಿ ವ್ಯಾಪಾರ ವ್ಯವಹಾರಗಳು ತೊಡಗಿಸಿಕೊಂಡಿರುವವರಿಗೆ ವಿಶೇಷ ಪ್ರಗತಿ.

 

ತುಲಾ– ಪ್ರಯಾಣ ದಲ್ಲೊಂದು ಗಡಿಬಿಡಿ ಆಗುವ ಕೆಲಸದಲ್ಲಿ ಏನೋ ಒಂದು ಮಂಕು ಛಾಯೆ ಇಲ್ಲೊಂದು ಕಿರಿಕಿರಿ ಇಲ್ಲೊಂದು ಬೆಂಕಿ ಕೋಪ ಸಿಟ್ಟು ತಳಮಳ ನೋಡ ತಕ್ಕಂತೆ ಒಂದು ದಿನ. ಸ್ಕಂದ ಕವಚ ಕೇಳ ತಕ್ಕಂತ ಕೆಲಸ ಮಾಡಿ ಸ್ವಲ್ಪ ಸಮಾಧಾನ ದೊರೆಯಲಿದೆ.

 

ವೃಶ್ಚಿಕ ದಿನದಾರಂಭ ನಿಧಾನವಾದರೂ ದಿನದ ಅಂತ್ಯಕ್ಕೆ ಮಧ್ಯಾಹ್ನದ ನಂತರಕ್ಕೆ ವೃತ್ತಿ ದಿನಸಿ ದವಸ ಧಾನ್ಯ ತುಂಬ ದೊಡ್ಡ ದೊಡ್ಡ ಫ್ಯಾಕ್ಟರಿ ನಡೆಸುತ್ತಿದ್ದರೆ ಇಂಡಸ್ಟ್ರಿ ಅಭಿವೃದ್ಧಿಯ ಸಂಕೇತವನ್ನು ನೋಡಕ್ಕಂತ ಒಂದು ದಿನ ಚೆನ್ನಾಗಿದೆ.

 

ಧನಸ್ಸು ಪರಿಶ್ರಮಕ್ಕೆ ಬೆಲೆಯುಂಟು ಬುದ್ಧಿವಂತಿಕೆಗೆ ಬೆಲೆ ಉಂಟು ಆದರೆ ಬರುವ ಸಂಭಾವನೆ ಕಡಿಮೆ ಇಲ್ಲ ಖರ್ಚು ಹೆಚ್ಚು ಉಂಟು ಆ ಒಂದು ಭಾವ ಮೂಡುತ್ತದೆ ಅದರ ಬಗ್ಗೆ ಗಮನ ಕೊಡಬೇಡಿ ಭಗವಂತ ಹೆಚ್ಚು ಕೊಟ್ಟಷ್ಟು ಹೆಚ್ಚು ಭಾರವನ್ನು ಕೊಡುತ್ತಾನೆ ಒಳ್ಳೆಯದೇ ಆಗುತ್ತದೆ ಯೋಚಿಸಬೇಡಿ.

 

ಮಕರ– ಸಪ್ತಮಾಧಿಪತಿ ಭಾಗ್ಯದಲ್ಲಿದ್ದು ಭಾಗ್ಯಾಧಿಪತಿ ವಿಶೇಷವಾಗಿ ನಿಮ್ಮ ಮನೆಯಲ್ಲಿ ಬಂದಿರುವುದರಿಂದ ಅಭಿವೃದ್ಧಿಯ ಸಂಕೇತ ಸ್ವಂತ ತಂದೆ ಕಾರ್ಯ ತನಗೆ ಸಂಬಂಧಿಸಿದ ವ್ಯವಹಾರ ಅಣ್ಣನ ಜೊತೆ ಸೇರಿಕೊಂಡು ಮಾಡಿದ್ರು ವ್ಯವಹಾರ ಭೂಮಿ ವ್ಯವಹಾರಗಳು ವಿಶೇಷ ಪ್ರಗತಿ ಕಾಣುತ್ತ ಒಂದು ದಿನ.

 

ಕುಂಭ– ಸ್ವಲ್ಪ ತಳಮಳವೇ ಚಂದ್ರ ಕುಜ ಕುಜನ ನಕ್ಷತ್ರದಲ್ಲಿ ಇರುವುದರಿಂದ ಏನಾದರೊಂದು ಕಿರಿಕಿರಿ ಓಡಾಟ ಸುತ್ತಾಟ ಎಳೆದಾಟ ಇವನ್ನು ನೋಡ ತಕ್ಕಂತ ಒಂದು ಭಾವ ಉಂಟು ಜಾಗರೂಕತೆ. ಆದಷ್ಟು ನೀವು ಕೂಡ ಸ್ಕಂದ ಕವಚವನ್ನು ಕೇಳಿ ಆಯಿತು ಅಂದರೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಪುಟ್ಟದಾಗಿ ಬೆಲ್ಲದ ದೀಪವನ್ನು ಹಚ್ಚಿ ನಿಮ್ಮ ಪ್ರಯತ್ನಕ್ಕೆ ಪರಿಪೂರ್ಣ ಫಲವನ್ನು ನೋಡುತ್ತೀರಿ.

 

ಮೀನ– ಯೋಗಕಾರಕ ಕುಜನ ಸಾರದಲ್ಲಿ ಇರುವುದರಿಂದ ಆ ಕುಜ ನಿಮ್ಮ ಭಾಗ್ಯದಲ್ಲಿ ಇರುವುದರಿಂದ ಭಾಗ್ಯೋದಯ ವೃತ್ತಿ ಸಂಬಂಧಿತವಾಗಿ ವ್ಯವಹಾರ ಸಂಬಂಧಿತವಾಗಿ ಕುಟುಂಬ ಸಂಬಂಧಿತವಾಗಿ ಶುಭ ಸುದ್ದಿಯೊಂದನ್ನು ಕೇಳುವಿರಿ ಒಳ್ಳೆಯದಿದೆ ಎಲ್ಲರಿಗೂ ಶುಭವಾಗಲಿ.

LEAVE A REPLY

Please enter your comment!
Please enter your name here