ದಿನ ಭವಿಷ್ಯ 17 ಡಿಸೆಂಬರ್ 2019!

0
361

ಮಿಥುನ ರಾಶಿಯವರಿಗೆ ಗ್ರಹಣದ ಛಾಯೆ, ಪ್ರಭಾವ ಹೇಗಿರಲಿದೆ ಎಂಬುದನ್ನು ಶ್ರೀ ರವಿಶಂಕರ್ ಗುರೂಜಿಯವರು ಇಂದಿನ ಸಂಚಿಕೆಯಲ್ಲಿ ತಿಳಿಸಿಕೊಟ್ಟಿದ್ದಾರೆ. ಈ ೨೬ ನೇ ತಾರೀಖು ಬರುವ ಗ್ರಹಣದಲ್ಲಿ ನೀವೇನಾದರೂ ದೊಡ್ಡ ಅಧಿಕಾರಿಯಾಗಿದ್ದರೆ, ಅಲ್ಲೊಂದು ತೊಂದರೆ ಉಂಟು. ೬೦ರ ಆಸು-ಪಾಸು ಬಹುದೊಡ್ಡ ರಾಜಕೀಯ ಸ್ಥಾನ, ಉದ್ಯೋಗ ಸ್ಥಾನ, ಅಧಿಕಾರ ಸ್ಥಾನ ನಿಮಗೆ ರಾಜಕೀಯ ಸನ್ಯಾಸವೇ ಎದುರಾಗಬಹುದು. ಸೂರ್ಯ ಬಂದು ಹೃದಯ ಕಾರಕ. ಹಾಗಾಗಿ ಹೃದಯ ಸಂಬಂಧಿ ಕಾಯಿಲೆಗಳು ಆತ್ಮಕಾರಕ, ಪಿತೃಕಾರಕ, ಯೋಗ್ಯಕಾರಕ.

ನಿಮಗೆ ಇದ್ದಂತಹ ಧೈರ್ಯ ತಾಕತ್ತು ಎಲ್ಲವೂ ಅಡಗಿ ಹೋಗುತ್ತದೆ. ಆ ರೀತಿಯ ಒಂದು ಪ್ರಭಾವವಿರುತ್ತದೆ. ೬೦ರ ಆಸುಪಾಸಿನ ವಯಸ್ಸಿನವರು ದೊಡ್ಡ ಸ್ಥಾನದಲ್ಲಿದ್ದರೆ ಅವರಿಗೆ ಬಹುದೊಡ್ಡ ತೊಂದರೆಯು ಎದುರಾಗಲಿದೆ ಜಾಗರೂಕತೆ. ಸೂರ್ಯ ಗ್ರಹಣ ನಿಮಗೆ ಯಾವ ಹೊತ್ತಲ್ಲಾದರೂ ಆಪತ್ತನ್ನು ತಂದಿಡಬಹುದು. ನಿಮ್ಮ ಅಧಿಕಾರ ಸ್ಥಾನಕ್ಕೆ ಯಾವ ತೊಂದರೆಯನ್ನೂ ಬೇಕಾದರೂ ತಂದಿಡಬಹುದು. ಯಾವುದನ್ನು ತಡೆಯಲು ನಮ್ಮ ಕೈಯಲ್ಲಿ ಆಗುವುದಿಲ್ಲ. ನಮಗೆ ಬರುವುದನ್ನು ಅನುಭವಿಸಲೇಬೇಕು.

 

ಈ ಗ್ರಹಣ ನಿಮ್ಮ ಆರೋಗ್ಯಕ್ಕೆ ಮೊದಲು ಪೆಟ್ಟು ಕೊಡುತ್ತದೆ, ಆ ನಂತರ ನಿಮ್ಮ ಅಧಿಕಾರಕ್ಕೆ ಪೆಟ್ಟು ನೀಡಲಿದೆ. ಸರ್ಕಾರಿ ಮಟ್ಟದ ಕೆಲಸ ,ಕಾರ್ಯ, ಪ್ರಾಜೆಕ್ಟ್, ಯೋಜನೆಗಳು ಮಾಡುತ್ತಿದ್ದರೆ, ಮಾಡಿದ್ದೀರ ಅಂದರೆ, ಗ್ರಹಣದ ಮೊದಲ ಪೆಟ್ಟು ನಿಮ್ಮ ಮೇಲೆ ಬೀರಲಿದೆ. ನಿಮ್ಮ ಜೊತೆ ಇರುವವರೇ ನಿಮ್ಮನ್ನು ಬಿಟ್ಟು ಹೋಗುವಂಥ ಪ್ರಸಂಗಗಳು ಎದುರಾಗಬಹುದು. ಯಾಕೆಂದರೆ ಗ್ರಹಣದ ಛಾಯೆ, ನಿಮಗೆ ಸಪ್ತಮ ಸ್ಥಾನದಲ್ಲಿ ನಡೆಯುತ್ತಿದೆ. ಹತ್ತಿರದಲ್ಲಿ ಎಲ್ಲಾದರೂ ರಾಘವೇಂದ್ರ ಸ್ವಾಮಿ ಸನ್ನಿಧಿ ಅಥವಾ ಹನುಮನ ಸನ್ನಿಧಿಗೆ ಹೋಗಿ ಬರುವುದರಿಂದ ನಿಮಗೆ ಒಂದು ಧೈರ್ಯ ಬಲ ಸಿಗಲಿದೆ.

ಬಹುದೊಡ್ಡ ಸ್ಥಾನದಲ್ಲಿ, ಅಧಿಕಾರದಲ್ಲಿದ್ದರೆ ಇವತ್ತಿನಿಂದಲೇ ಶಿವನಿಗೆ ಒಂದು ಅರ್ಪಣೆ, ನೈವೇದ್ಯ ,ಪೂಜೆ, ಪುನಸ್ಕಾರ ಮಾಡಿಕೊಳ್ಳಿ. ನಿಮ್ಮ ಗುರುಗಳ ಹತ್ತಿರ ಅವರು ಪೂಜೆ ಮಾಡಿದ ಜಪ ಮಾಡಿದ ಮಾಲೆ ಇದ್ದರೆ ಅದನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ. ವಸ್ತ್ರವೋ, ಶಲ್ಯವೋ ಅವರು ಉಪಯೋಗಿಸುವ ಯಾವುದಾದರೂ ಒಂದು ವಸ್ತುವನ್ನು ದಾನವಾಗಿ ಪಡೆದು ನಿಮ್ಮೊಂದಿಗೆ ಇಟ್ಟುಕೊಳ್ಳಿ. ಗ್ರಹಣದ ದಿನ ಯಾರಾದರೂ ಆಚಾರ್ಯರಿಗೆ, ವಯಸ್ಸಾದವರಿಗೆ ಏನಾದರೂ ಸಿಹಿಯನ್ನು ಹಂಚಿ ಮನೆಯಲ್ಲಿರುವ ಹಿರಿಯರು, ತಂದೆ ,ತಾಯಂದಿರ ಆರೋಗ್ಯದಲ್ಲಿ ಏರುಪೇರು ಅಥವಾ ಯಾವುದಾದರೂ ತೊಂದರೆಗಳು ಉಂಟು ಜಾಗರೂಕತೆ.

ಇಂದಿನ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ,

ಮೇಷ– ಇಂದು ಸ್ವಲ್ಪ ಹುಳಿಯ ಭಾವ ನಿಮಗೆ ಕಾಡಲಿದೆ. ಯಾವುದೋ ವಿಚಾರಗಳು, ಕಳೆದು ಹೋದ ಅಧಿಕಾರ, ಪದವಿ, ಹಣಕಾಸಿನ ಏನೋ ಒಂದು ವಿಚಾರವಾಗಿ ತಳಮಳ. ಸಂಗಾತಿ, ಸ್ನೇಹಿತರ ರೂಪದಲ್ಲಿ ನೆಮ್ಮದಿಯನ್ನು ಪಡೆಯುತ್ತೀರಿ ಯೋಚಿಸಬೇಡಿ ಶುಭವಾಗಲಿದೆ.

 

ವೃಷಭ– ಇಂದು ಸ್ವಲ್ಪ ಹುಳಿಯ ಪ್ರಭಾವವೇ. ವಿದ್ಯಾರ್ಥಿ, ಕುಟುಂಬ, ಅದರಲ್ಲೂ ವಿದ್ಯಾರ್ಥಿಗಳಿಗೆ ಗ್ರಹಣದ ಪ್ರಭಾವವೇ. ತಂದೆ ತಾಯಂದಿರು ಮಕ್ಕಳ ಮೇಲೆ, ಅದರಲ್ಲೂ ಎಳೆ ಮಕ್ಕಳ ಮೇಲೆ ಗಮನವಿರಲಿ ಅವರ ಆರೋಗ್ಯದಲ್ಲಿ ಏರುಪೇರು ಆಗಲಿದೆ. ವಿದ್ಯಾರ್ಥಿಗಳಿಗೆ ಒಂದು ಎಡವಟ್ಟು ಕಾಡಲಿದೆ ಜಾಗರೂಕತೆ.

 

ಮಿಥುನ– ಎಲ್ಲೋ ಒಡಹುಟ್ಟಿದವರ ವಿಚಾರವೋ, ಬಂಧು ಬಳಗದ ವಿಚಾರವೋ, ಹತ್ತಿರದವರ ವಿಚಾರವೋ, ಆರೋಗ್ಯ ವಿಚಾರವೋ, ಲೆಕ್ಕಚಾರದ ವಿವಾರವೋ ಬಹಳ ತಿಳಿದ ವ್ಯಕ್ತಿಗಳ ವಿಚಾರವೋ ಲೆಕ್ಕಾಚಾರದ ವಿಚಾರಗಳಲ್ಲಿ ತುಂಬಾ ಮನಸ್ಸಿಗೆ ಒಂದು ಘಾಸಿಯಾಗುವಂಥ ವಿಚಾರ ಕೇಳುತ್ತೀರಿ. ಸಂಧ್ಯಾ ಕಾಲದ ಒಳಗೆ ಚೇತರಿಸಿಕೊಳ್ಳುತ್ತೀರ ಯೋಚಿಸಬೇಡಿ ಶುಭವಾಗಲಿದೆ.

 

ಕಟಕ– ಮನೆ,ವ್ಯಾಪಾರ, ಕುಟುಂಬ, ವ್ಯವಹಾರ ಈ ವಿಚಾರದಲ್ಲಿ ಒಂದು ಒದ್ದಾಟ, ತೊಳಲಾಟ ,ತಳ್ಳಾಟ ಇರುತ್ತದೆ. ಸ್ವಲ್ಪ ದುರ್ಗಾ ಮಂತ್ರವನ್ನು ಜಪ ಮಾಡಿಕೊಳ್ಳಿ, ಈ ಭಯ ಹೆದರಿಕೆ ಇವೆಲ್ಲವೂ ಹೋಗುತ್ತದೆ. ಮನುಷ್ಯ ಅಂದ ಮೇಲೆ ಸಾಯುವವರೆಗೂ ಭಯ ಇದ್ದೇ ಇರುತ್ತದೆ. ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ ಶುಭವಾಗಲಿದೆ. ತುಪ್ಪದ ದೀಪವನ್ನು ಹಚ್ಚಿ ಸಮಾಧಾನ ದೊರೆಯಲಿದೆ.

 

ಸಿಂಹ– ಇಂದು ನೀವು ಯಾವ ಕೆಲಸವನ್ನು ಮಾಡುವುದಿಲ್ಲ. ಬೇರೆಯವರಿಗೂ ಅವರ ಕೆಲಸವನ್ನು ಮಾಡಲು ಬಿಡುವುದಿಲ್ಲ ಆ ರೀತಿಯ ಒಂದು ಮನಸ್ಥಿತಿ ಇರುತ್ತದೆ. ಮಧ್ಯಾಹ್ನದ ನಂತರ ಚೇತರಿಸಿಕೊಳ್ಳುತ್ತೀರಿ. ಯಾವ ತೊಂದರೆಯೂ ಇಲ್ಲ ನಿಭಾಯಿಸಿಕೊಂಡು ಹೋಗುತ್ತೀರಿ. ಹತ್ತಿರದಲ್ಲಿ ವಿನಾಯಕನ ಸನ್ನಿಧಿಗೆ ಹೋಗಿ ಗರಿಕೆ ಸೇವೆಯನ್ನು ಸಲ್ಲಿಸಿ ಒಳ್ಳೆಯದಾಗಲಿದೆ.

 

ಕನ್ಯಾ– ಎಲ್ಲೋ ಒಂದು ಮೋಕ್ಷದ ಚಿಂತೆ, ವೈರಾಗ್ಯದ ಚಿಂತೆ ಎಲ್ಲವೂ ಇದ್ದು, ನಾನು ಅದನ್ನು ಅನುಭವಿಸುತ್ತಿದ್ದೇನಾ.? ಎಂಬ ಪ್ರಶ್ನೆ ಕಾಡುತ್ತದೆ. ಮಧ್ಯಾಹ್ನದೊಳಗೆ ಅಥವಾ ಸಂಧ್ಯಾ ಕಾಲದ ಒಳಗೆ ಅದರ ಪೂರ್ಣ ಪ್ರಭಾವವನ್ನು ನೀವು ಪಡೆಯುತ್ತೀರಿ ಚಿಂತಿಸಬೇಡಿ. ವ್ಯಾಪಾರ, ವ್ಯವಹಾರ ನಿಮಿತ್ತ ಶುಭ ಸುದ್ದಿಯೊಂದನ್ನು ಕೇಳುತ್ತೀರಿ ಒಳ್ಳೆಯದಾಗಲಿದೆ.

 

ತುಲಾ– ನೀವು ಧರ್ಮಮಾರ್ಗದಲ್ಲಿ ಇದ್ದರೆ ಧರ್ಮವೇ ನಿಮ್ಮನ್ನು ರಕ್ಷಿಸುತ್ತದೆ. ನಿಮ್ಮ ಧರ್ಮವನ್ನು ನಂಬಿಕೊಂಡು, ಯಾವ ಅಪೇಕ್ಷೆ ಇಲ್ಲದೆ ಮಾಡಿಕೊಂಡು ಹೋಗಿ ಅ ಧರ್ಮದ ಹಾದಿ ನಿಮ್ಮನ್ನು ಉಳಿಸುತ್ತದೆ.

 

ವೃಶ್ಚಿಕ– ಇಂದು ನಿಮ್ಮ ದಿನ ಚನ್ನಾಗಿದೆ. ಯಾವ ರೀತಿಯ ತೊಂದರೆಗಳಿಲ್ಲ ಹೆದರಬೇಡಿ. ಇವತ್ತು ಸ್ವಲ್ಪ ಹುಳಿಯ ಪ್ರಭಾವವೇ. ಯಾವುದೋ ಕೈ- ಕಗ್ಗಂಟು ಎದುರಾಗಲಿದೆ ಆದರೂ ನಿಭಾಯಿಸಿಕೊಂಡು ಹೋಗುತ್ತೀರಿ. ಮನೆಯಲ್ಲಿ ಇವತ್ತು ತುಪ್ಪದ ದೀಪವನ್ನು ಹಚ್ಚಿ ಒಳ್ಳೆಯದಾಗಲಿದೆ.

 

ಧನಸ್ಸು– ತಂದೆ, ಹಿರಿಯರ ಯಾವುದೋ ಒಂದು ಕೆಲಸವನ್ನು ನಿರ್ವಹಿಸಿಕೊಂಡು ಹೋಗುತ್ತಿದ್ದರೆ. ಒಳ್ಳೆಯ ಲಾಭ, ಶುಭ ಸಂಕೇತವನ್ನು ನೋಡುತ್ತೀರಿ. ಹೆಚ್ಚಾಗಿ ಹಿರಿಯರ ಆರೋಗ್ಯದ ಬಗ್ಗೆ ಗಮನ ಕೊಡುವುದು ಒಳ್ಳೆಯದು.

 

ಮಕರ– ಪ್ರಯಾಣದಲ್ಲಿ ಅನಾನುಕೂಲತೆ, ವ್ಯವಹಾರದಲ್ಲಿ ನಿಮ್ಮ ಲೆಕ್ಕಾಚಾರ ತಾರು ಮಾರು. ದೂರದ ಪ್ರಯಾಣದ ಬಗ್ಗೆ ಯೋಚನೆಯನ್ನು ಬಿಟ್ಟು ಅದನ್ನು ಮುಂದೂಡಿ ಒಳ್ಳೆಯದಾಗಲಿದೆ.

 

ಕುಂಭ– ಇವತ್ತು ಸ್ವಲ್ಪ ವೈರಾಗ್ಯ ಭಾವ ನಿಮಗಿರಲಿದೆ. ನಿಮ್ಮ ಒಳ್ಳೆಯತನಕ್ಕೆ ಬೆಲೆ ಇರುವುದಿಲ್ಲ. ಬೇವಿಗೆ ಎಷ್ಟು ಸಿಹಿಯನ್ನು ಸೇರಿಸಿದರೂ ಅದರ ಕಹಿಯನ್ನು ಬಿಡುವುದಿಲ್ಲ. ನೀವು ಎಷ್ಟೇ ಧರ್ಮದಲ್ಲಿ ಸಹಾಯ ಮಾಡಿದರೂ ಕೂಡ ಅದನ್ನು ನೆನಪಿಸಿಕೊಂಡು ನೀತಿ ನಿಯಮವನ್ನು ಅನುಸರಿಸುವ ವ್ಯಕ್ತಿಗಳು ಬಹಳ ಕಡಿಮೆ. ಹತ್ತಿರದವರಿಂದಲೇ ಮನಸ್ಸಿಗೆ ಘಾಸಿಯಾಗುತ್ತದೆ ನಿಮ್ಮ ಧರ್ಮವನ್ನು ನೀವು ಮಾಡಿಕೊಂಡು ಹೋಗಿ ಶುಭವಾಗಲಿದೆ.

 

ಮೀನ– ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ, ಮಿಕ್ಕಂತೆ ಉದ್ಯೋಗ, ವ್ಯವಹಾರ, ವ್ಯಾಪಾರ ನೆಮ್ಮದಿಯ ದಿನ. ಖುಷಿಯ ದಿನ, ಸಂಭ್ರಮದ ದಿನವಾಗಿರಲಿದೆ ಯೋಚಿಸಬೇಡಿ ಶುಭವಾಗಲಿದೆ.

LEAVE A REPLY

Please enter your comment!
Please enter your name here