ದಿನ ಭವಿಷ್ಯ 22 ಸೆಪ್ಟೆಂಬರ್ 2019

0
500

ಶ್ರೀ ರವಿಶಂಕರ್ ಗುರೂಜಿ ಅವರು ಹಿಂದಿನ ಸಂಚಿಕೆಯಲ್ಲಿ ಮುಖದ ಬಂಗಿನ ಬಗ್ಗೆ ತಿಳಿಸಿಕೊಡುತ್ತಿದ್ದರು, ಇಂದಿನ ಸಂಚಿಕೆಯಲ್ಲೂ ಮುಂದುವರಿಸಿದ್ದಾರೆ. ರಾಹು ಪ್ರಭಾವ ಇರುವುದರಿಂದ ಪ್ರತಿಯೊಬ್ಬ ಮನುಷ್ಯನು ಭಯದಲ್ಲಿ ಬದುಕುತ್ತಾನೆ. ನೋಡಿ ಈ ಬಂಗು ಇರುವುದರಿಂದ ಅದು ರಾಹು ಪ್ರಭಾವನ್ನು ತೋರಿಸುತ್ತದೆ. ಅತಿ ಮುಖ್ಯವಾಗಿ ಹಣೆಯ ಮೇಲೆ ಬಂಗು ಇದ್ದರೆ, ಖಂಡಿತಾ ಅಧಿಕಾರ ಭಂಗವಾಗಲಿದೆ ಇಲ್ಲ ಆರೋಗ್ಯ ಭಂಗ.! ಬಹುದೊಡ್ಡ ಮೋಸ ಎದುರಾಗಲಿದೆ. ಬಹುದೊಡ್ಡ ಪ್ರತಿಷ್ಠೆಯಲ್ಲಿ, ಸರ್ಕಾರಿ ಮಟ್ಟದ ಕೆಲಸದಲ್ಲಿ ಇರುವವರಿಗೆ ನಿಮ್ಮ ಹಣೆಯಲ್ಲಿ ಒಂದು ಬಂಗು ಇದ್ದರೆ ಖಂಡಿತ ಒಂದು ರೀತಿಯ ತೊಳಲಾಟ ಎದುರಾಗಲಿದೆ ಜಾಗರೂಕತೆ. ಸ್ತ್ರೀಯರಿಗೆ ಹಣೆಯಲ್ಲಿ ಬಂಗು ಇದ್ದರೆ ಖಂಡಿತ ತಂದೆಯ ಆಯುಷ್ಯ, ಗಂಡನ ಆಯುಷ್ಯ, ಹಿರಿಯರ ಆರೋಗ್ಯದಲ್ಲಿ ಒಂದು ಭಂಗ ಉಂಟಾಗಲಿದೆ. ನಿಮ್ಮ ಜೀವನದಲ್ಲಿ ನೀವು ಒಬ್ಬರೇ ಹೋರಾಡಬೇಕಾಗುತ್ತದೆ. ಗಂಡು ರೀತಿಯಲ್ಲಿ ಹೋರಾಡಬೇಕಾಗುತ್ತದೆ. ಮನೆಯ ಹಿರಿಯರ ಜೀವನದಲ್ಲಿ ಒಂದು ಕುತ್ತು, ಹಿರಿಯರೇ ನಿಮಗೆ ಶಾಪವಾಗಲಿದ್ದಾರೆ ಎಂಬ ಭಾವ. ಹಣೆಯ ಮೇಲೆ ಬಂಗು ಇದ್ದರೆ ಖಂಡಿತ ನಿಮ್ಮ ಆಯುಷ್ಯದಲ್ಲಿ ಒಂದು ಏರುಪೇರು ಆಗಲಿದೆ. ರಾಹುವಿನ ಪ್ರಭಾವ ಹೇಗೆ ಇರಲಿದೆ ಎಂಬುದನ್ನು ಮತ್ತಷ್ಟು ಮುಂದಿನ ಸಂಚಿಕೆಯಲ್ಲಿ ಶ್ರೀ ರವಿಶಂಕರ್ ಗುರೂಜಿಯವರು ತಿಳಿಸಿಕೊಡಲಿದ್ದಾರೆ.

ಇಂದಿನ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ,

ಮೇಷ– ಸ್ವಲ್ಪ ಆರೋಗ್ಯ ವಿಚಾರದ ಕಡೆ ಗಮನ ಕೊಡಿ. ಭೂಮಿ ವಿಚಾರದಲ್ಲಿ ದುಡುಕಬೇಡಿ ಯಾವುದಾದರೂ ಒಂದು ಕಂಟಕ ಎದುರಾಗಲಿದೆ. ಹಿರಿಯರ ಬಳಿ ಚರ್ಚೆ ಮಾಡಿಕೊಂಡು ಹೆಜ್ಜೆ ಇಡುವುದು ಒಳ್ಳೆಯದು ಶುಭವಾಗಲಿದೆ.

ವೃಷಭ– ದೂರ ಪ್ರಯಾಣ,ಇಂದು ವ್ಯವಹಾರಕ್ಕೆ ಸಂಬಂಧಿಸಿದ ಹಾಗೆ ಬಹುದೊಡ್ಡ ಅರೆಸ್ಟ್, ಬಹುದೊಡ್ಡ ಜವಾಬ್ದಾರಿಗಳು, ನಿರ್ಧಾರಗಳು, ಮಷಿನರಿ, ಎಂಜಿನಿಯರ್ ,ರಕ್ಷಣಾ ಇಲಾಖೆ ಗೌರವಾನ್ವಿತ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೀರಿ ಎಲ್ಲೋ ಒಂದು ಅಪಮಾನ, ಅವಮಾನ ಪೆಟ್ಟು ತಿನ್ನುವ ಸನ್ನಿವೇಶಗಳು ನೋಡುತ್ತೀರಿ. ನ್ಯಾಯಬದ್ಧವಾಗಿ ಬದುಕುವುದು ಒಳ್ಳೆಯದು ಶುಭವಾಗಲಿ.

ಮಿಥುನ– ಆರೋಗ್ಯ ಜಾಗೃತ, ವ್ಯವಹಾರ ಜಾಗೃತ, ಪ್ರಯಾಣ ಜಾಗೃತ. ಆರೋಗ್ಯದಲ್ಲೊಂದು ಗಂಡ, ವ್ಯವಹಾರದಲ್ಲಿ ಒಂದು ಗಂಡ ಉಂಟಾಗಲಿದೆ. ಇಂದು ಏನೋ ಒಂದು ಎಡವಟ್ಟು ನಿಮಗೆ ಕಾಡಲಿದೆ ಜಾಗರೂಕತೆ ಒಳ್ಳೆಯದಾಗಲಿದೆ.

ಕಟಕ– ಇಂದು ನಿಮ್ಮ ದಿನ ಪರವಾಗಿಲ್ಲ ಚೆನ್ನಾಗಿದೆ. ಆತುರಾತುರದಿಂದ ನಿಮ್ಮ ಕೆಲಸವನ್ನು ಗಡಿಬಿಡಿ ಮಾಡಿಕೊಳ್ಳುತ್ತೀರಿ. ದುಡುಕು ನಿರ್ಧಾರಗಳಿಂದ ಒಂದು ಪೆಟ್ಟು ತಿನ್ನುತ್ತೀರಿ. ಧಾನ್ಯದ ಬೆಳೆಗಾರರು, ರೈತರಿಗೆ ಸ್ವಲ್ಪ ಅವರೆಕಾಯಿ, ತೋಟದ ಅವರೆಕಾಯಿ, ತೊಗರಿ ಕಾಳು ಈ ರೀತಿಯ ಧಾನ್ಯಗಳನ್ನು ಬೆಳೆಸುತ್ತಿರುವವರು ಸ್ವಲ್ಪ ಜಾಗರೂಕತೆ ನಷ್ಟದ ಪೆಟ್ಟು ಉಂಟು.

ಸಿಂಹ– ಇಂಜಿನಿಯರಿಂಗ್, ಕನ್ಸ್ಟ್ರಕ್ಷನ್, ಗ್ರಾನೈಟ್ ಪ್ಲಂಬಿಂಗ್, ಎಲೆಕ್ಟ್ರಿಕಲ್ ಇಂಥ ಒಂದು ಉದ್ಯೋಗ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿರುವವರಿಗೆ ಸಮಾಧಾನಕರ ದಿನವಾಗಿರಲಿದೆ ಶುಭವಾಗಲಿ.

ಕನ್ಯಾ– ಇಂದು ಏನೋ ಮಾಡಿಕೊಳ್ಳಲು ಹೋಗಿ ಏನೋ ಮಾಡಿಕೊಳ್ಳುತ್ತೀರಿ ಜಾಗೃತ. ಮನಸ್ಸಿಗೆ ಒಂದು ಖೇದ ಉಂಟಾಗಲಿದೆ. ಮಾನಸಿಕವಾಗಿ, ವ್ಯಾವಹಾರಿಕವಾಗಿ ಒಂದು ಪೆಟ್ಟು ನೋಡುತ್ತೀರಿ. ಮನೆಯಲ್ಲಿ ಇಂದು ದುರ್ಗಾ ಪೂಜೆಯನ್ನು ಮಾಡಿಕೊಳ್ಳಿ
ಕುಂಕುಮಾರ್ಚನೆ ಮಾಡಿಕೊಂಡು ಒಂ ದುಂ ದುರ್ಗೆಯ ನಮಃ ಎಂದು ಜಪ ಮಾಡಿಕೊಳ್ಳಿ ಒಳ್ಳೆಯದಾಗಲಿದೆ.

ತುಲಾ– ವ್ಯವಹಾರ ಪ್ರಗತಿ, ಭೂಮಿ ವಿಚಾರದಲ್ಲೊಂದು ಸುಳ್ಳು ಹೇಳಿ, ಮೋಸ ಮಾಡಿ ಲಾಭ ಮಾಡಿಕೊಳ್ಳಲು ಹೋಗಿ ನಷ್ಟ ತಿನ್ನುತ್ತೀರಿ ಜಾಗರೂಕತೆ. ಇಂದು ಯಾವುದೋ ಒಂದು ವ್ಯವಹಾರದಲ್ಲಿ ಸಿಲುಕಿ ಹಾಕಿಕೊಳ್ಳುತ್ತೀರಿ ಎಚ್ಚರಿಕೆ ವಹಿಸಿವುದು ಸೂಕ್ತ. ಈ ರೀತಿಯ ಒಂದು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಯಾರೋ ನಿಮ್ಮ ತಲೆ ಕೆಡಿಸಿ ನಿಮ್ಮನ್ನು ತಪ್ಪು ದಾರಿಗೆ ದೂಡುತ್ತಾರೆ ಎಚ್ಚರಿಕೆ.

ವೃಶ್ಚಿಕ– ಇಂದು ನಿಮ್ಮ ದಿನ ಚೆನ್ನಾಗಿದೆ. ಪ್ರಯಾಣದಲ್ಲಿ ಒಂದು ಜಾಗರೂಕತೆ. ಮನೆಯ ಜವಾಬ್ದಾರಿ ,ಕುಟುಂಬದ ಜವಾಬ್ದಾರಿ ,ವ್ಯವಹಾರದ ಜವಾಬ್ದಾರಿಯಲ್ಲಿ ಸ್ವಲ್ಪ ಎಳೆದಾಟ ಅನ್ನಿಸುತ್ತದೆ. ಏನೂ ಆಗುವುದಿಲ್ಲ ನಿಭಾಯಿಸಿಕೊಂಡು ಹೋಗುತ್ತೀರಿ. ಸ್ವಲ್ಪ ಉಷ್ಣ ಬಾಧೆಯಿಂದ ಬಳಲುತ್ತೀರಿ ಆದಷ್ಟು ಎಳನೀರನ್ನು ಸೇವಿಸುವುದು ಉತ್ತಮ. ಗಂಟಲಿನ ಸಮಸ್ಯೆಯಿಂದ ಬಳಸುತ್ತೀರಿ. ಬೆಂಕಿ, ಎಲೆಕ್ಟ್ರಿಕಲ್ ವಸ್ತುಗಳಿಂದ ದೂರವಿರುವುದು ಒಳ್ಳೆಯದು.

ಧನಸ್ಸು– ಕ್ರೀಡಾಪಟುಗಳು ಆಗಿದ್ದರೆ ಕ್ರೀಡಾ ಸಾಧನೆ ಮಾಡಬೇಕು ಅಂದುಕೊಂಡರೆ ಅದರಲ್ಲಿ ತೊಡಗಿಸಿಕೊಂಡಿದ್ದರೆ ಅದ್ಭುತ ಪ್ರಗತಿಯನ್ನು ನೋಡುತ್ತೀರಿ. ಒಳ್ಳೆ ಪೂರ್ಣ ಪ್ರಮಾಣದಲ್ಲಿ ಗೆಲುವನ್ನು ನೋಡುತ್ತೀರಿ ಶುಭವಾಗಲಿದೆ.

ಮಕರ– ಸ್ವಲ್ಪ ತೊಳಲಾಟ ಉಂಟಾಗಲಿದೆ. ಟೆನ್ಷನ್ ಹುಡುಕಿಕೊಂಡು ಬರುತ್ತದೆ. ಅಷ್ಟಮದಲ್ಲಿ ಒಂದು ಕುಜ ಆಗಲಿದೆ ಜಾಗರೂಕತೆ. ಸೋಮಾರಿತನ ಸಮಸ್ಯೆಗಳು, ಆರೋಗ್ಯದ ಬಗ್ಗೆ ಹೆಚ್ಚು ಗಮನವನ್ನು ನೀಡಿ. ಆರೋಗ್ಯದ ಬಗ್ಗೆ ಬೇಜವಾಬ್ದಾರಿ ಮಾಡುತ್ತಿದ್ದೀರಿ ಒಳ್ಳೆಯದಲ್ಲ ಜಾಗರೂಕತೆ.

ಕುಂಭ– ಮನೆ ,ಒಡಹುಟ್ಟಿದವರು, ಉದ್ಯೋಗ, ವ್ಯವಹಾರದ ವಿಚಾರದಲ್ಲಿ ಒಂದು ತಲ್ಲಣ ಎಡವಟ್ಟು, ತೊಳಲಾಟ ಉಂಟಾಗಲಿದೆ. ಭೂಮಿ ವಿಚಾರದಲ್ಲಿ, ಹೊಲ ,ತೋಟ, ಗದ್ದೆ ,ಜಾಗ, ಹಿರಿಯರ ಆಶೀರ್ವಾದವೊಂದು ನಿಮಗೆ ಕಾಪಾಡ ತಕ್ಕದ್ದು, ಗೆಲುವನ್ನು ತಂದುಕೊಡುವಂಥ ಶುಭ ಸಂದರ್ಭ ಒದಗಿ ಬರಲಿದೆ. ಆದಷ್ಟು ಇಂದು ಸುಬ್ರಹ್ಮಣ್ಯರ ಜಪವನ್ನು ಮಾಡಿಕೊಳ್ಳಿ ಬಹಳ ಒಳ್ಳೆಯದಾಗಲಿದೆ ಶುಭವಾಗಲಿ.

ಮೀನ– ಅಪೆಂಡಿಕ್ಸ್, ಅಲ್ಸರ್, ಶ್ವಾಸಕೋಶದಲ್ಲಿ ತೊಂದರೆ ಲಿವರ್’ನಲ್ಲಿ ತೊಂದರೆ ವಿಪರೀತ ಕುಡಿಯುವ ಚಟ ಇದ್ದರೆ ಆರೋಗ್ಯಕ್ಕೆ ಕುತ್ತು ತಂದುಕೊಡಲಿದೆ ಜಾಗರೂಕತೆ. ಅಷ್ಟಮಿ ಬೇರೆ ಆಕ್ಸಿಡೆಂಟ್ ಪ್ರಭಾವಗಳು ಎದುರಾಗಲಿವೆ ಎಚ್ಚರಿಕೆ. ಇಂದು ದ್ವಿಚಕ್ರ ವಾಹನಗಳನ್ನು ಕಡಿಮೆ ಮಾಡಿ. ಸರ್ಕಾರಿ ವಾಹನಗಳನ್ನು ಬಳಸಿಕೊಳ್ಳುವುದು ಒಳ್ಳೆಯದು. ಭೂಮಿ ಖರೀದಿ, ಜಾಗ ಖರೀದಿ ಮಾಡುವುದರ ಬಗ್ಗೆ ಯೋಚನೆ ಮಾಡುತ್ತಿದ್ದೀರಿ ದುಡುಕಬೇಡಿ ಒಳ್ಳೆ ಕೆಲಸ ಆಗಲಿದೆ ಶುಭವಾಗಲಿ.

LEAVE A REPLY

Please enter your comment!
Please enter your name here