ವೃಷಭ ರಾಶಿಯವರಿಗೆ ಗ್ರಹಣದ ಪರಿಣಾಮಗಳ ಬಗ್ಗೆ ರವಿಶಂಕರ್ ಗುರೂಜಿ ಅವರು ಇಂದಿನ ಸಂಚಿಕೆಯಲ್ಲಿ ತಿಳಿಸಿಕೊಟ್ಟಿದ್ದಾರೆ. ಧನುರ್ಮಾಸ ಪ್ರಾರಂಭವಾಗುತ್ತಿದೆ ಆದಷ್ಟು ಎಲ್ಲರೂ ಬೆಳಗಿನ ಜಾವವೇ ಎದ್ದು ಧನುರ್ಮಾಸದ ವಿಶೇಷವಾಗಿ ತಣ್ಣೀರು ಸ್ನಾನವನ್ನು ಮಾಡಬೇಕು. ತಣ್ಣೀರು ಸ್ನಾನ ಮಾಡುವುದರಿಂದ ಮೈ-ಕೈ ನೋವು, ಕೀಲು ನೋವು ಇವೆಲ್ಲವೂ ಶೀಘ್ರವಾಗಿ ಸರಿಹೋಗುತ್ತದೆ. ಅದರಲ್ಲೂ ನೀವು ತಿಳಿದುಕೊಳ್ಳಬೇಕಿರುವುದು ತಣ್ಣೀರು ಸ್ನಾನ ಅಂದರೆ ಹರಿಯುವ ನದಿಯ ಸ್ನಾನ, ಬಾವಿಯ ನೀರು ಅಥವಾ ಸಮುದ್ರದ ಸ್ನಾನ. ಅದನ್ನು ಹೊರತುಪಡಿಸಿ ಟ್ಯಾಂಕ್ ನೀರು, ಸಂಪಿನ ನೀರನ್ನು ಬಳಸಬೇಡಿ.
ವೃಷಭ ರಾಶಿಯವರಿಗೆ ಗ್ರಹಣ ಅಷ್ಟಮದಲ್ಲಿ ನಡೆಯುತ್ತಿದೆ. ಅಷ್ಟಮ ಸ್ಥಾನ ಎಂದರೆ ಅಲ್ಲೊಂದು ಆಪತ್ತು, ಮೃತ್ಯು, ಸಾವು ಇದರ ಒಂದು ಸಂಕೇತವನ್ನು ತೋರಿಸುತ್ತದೆ. ತಂದೆಗೆ, ಬುದ್ದಿಗೆ, ಆರೋಗ್ಯಕ್ಕೆ, ಕೋರ್ಟು ಸಮಸ್ಯೆ, ಶುಭ ಕಾರ್ಯ ಸಮಸ್ಯೆ, ಧರ್ಮ ಕಾರ್ಯ ಮಾಡಲು ಬಿಡುವುದಿಲ್ಲ.ಧರ್ಮಕ್ಕೆ ಹೋಗುತ್ತೀವಿ, ಧರ್ಮ ಮಾರ್ಗವನ್ನು ಹಿಡಿಯುತ್ತೇವೆ ಅಂದರೆ ಅಲ್ಲಿ ಯಾರಾದರೂ ಒಬ್ಬರು ನಿಮ್ಮನ್ನು ತಡೆಯುತ್ತಾರೆ.
ನೀವೇನಾದರೂ ಅಧರ್ಮವಂತರಾಗಿದ್ದರೆ ಜೈಲು ಶಿಕ್ಷೆ, ಕೋರ್ಟ್ ಶಿಕ್ಷೆ ನಿಮಗೆ ಕಟ್ಟಿಟ್ಟಬುತ್ತಿಯಾಗಿ ದಾರಿಯನ್ನು ಮಾಡಿಕೊಡುತ್ತದೆ.ಗ್ರಹಣದ ಹೊಡೆತದಿಂದ ಪಾರಾಗಲು ಅಮ್ಮನವರ ಕ್ಷೇತ್ರ ಅಥವಾ ಶಿವ ಕ್ಷೇತ್ರಕ್ಕೆ ಹೋಗಿ ಬನ್ನಿ. ಧರ್ಮಸ್ಥಳ,ಮುರುಡೇಶ್ವರ, ನಂಜುಂಡೇಶ್ವರ, ಪಾಣಿಯಕಂ ಈ ಕ್ಷೇತ್ರಗಳಿಗೆ ಹೋಗಿ ಉಳಿದುಕೊಳ್ಳಿ. ಇಂತ ಕ್ಷೇತ್ರಗಳಿಗೆ ಹೋಗಿ ಗ್ರಹಣದ ದಿನ ಅಲ್ಲೇ ಉಳಿದುಕೊಂಡು, ಅಲ್ಲಿ ಕೊಡುವ ಪ್ರಸಾದವನ್ನು ಸೇವಿಸಿ ನಂತರ ಮಾರನೇ ದಿನ ನದಿ ಸ್ನಾನ ಮಾಡಿಕೊಂಡು ಬನ್ನಿ ಬಹಳ ಒಳ್ಳೆಯದು.
ಪುಣ್ಯ ಕ್ಷೇತ್ರದಲ್ಲಿ ಗಣಪತಿ ಹಾಗೂ ಶಿವಕ್ಷೇತ್ರವಿದ್ದರೆ ಭೇಟಿ ನೀಡಿ ಬನ್ನಿ, ಅಥವಾ ಯಾರಾದರೂ ಹಿರಿಯರು, ಬಡವರು, ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಹೋಗಿ ಹಿರಿಯರಿಗೆ ತಾಂಬೂಲ,ಹೊಸ ವಸ್ತ್ರ ಅಥವಾ ಬೆಳ್ಳಿ ಲೋಟ, ಬೆಳ್ಳಿ ತಟ್ಟೆಯನ್ನು ಅರ್ಪಿಸಿ ಅವರ ಆಶೀರ್ವಾದ ಪಡೆದುಕೊಳ್ಳಿ. ೨೬ನೆ ಗ್ರಹಣದ ದಿನ ರಕ್ಷಾ ದಾರವನ್ನು ನಿಮ್ಮ ಕೈಗೆ ಕಟ್ಟಿಕೊಳ್ಳಿ. ಇದನ್ನು ಪಡೆಯಲು ರವಿಶಂಕರ್ ಗುರೂಜಿ ಅವರ ಕಚೇರಿಗೆ ಹೋಗಿ ಪಡೆದುಕೊಳ್ಳಿ ದೊರೆಯುತ್ತದೆ. ರಕ್ಷಾ ದಾರವನ್ನು ತೆಗೆದುಕೊಂಡ ಮೇಲೆ ಅದನ್ನು ಮನೆ ದೇವರ ಮುಂದೆ ಇಟ್ಟು ಪೂಜೆ ಮಾಡಿ ನಂತರ ನಿಮ್ಮ ತಂದೆ,ತಾಯಿ,ಗಂಡ,ಹೆಂಡತಿ, ಆತ್ಮೀಯರ ಬಳಿ ಕೇಳಿ ಕಟ್ಟಿಸಿಕೊಳ್ಳಿ ಶುಭವಾಗಲಿ.
ಇಂದಿನ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ,
ಮೇಷ– ಇಂದು ನಿಮ್ಮ ದಿನ ಚೆನ್ನಾಗಿದೆ. ಬುದ್ಧಿ ಉಪಯೋಗಿಸಿ ಸರ್ಕಾರ ಕೆಲಸ, ಕಾರ್ಯ ಮಾಡಿದರೆ ಖಂಡಿತ ಒಂದು ಯಶಸ್ಸು, ಅವಕಾಶಗಳ ಸಂಗಮ ನೋಡ ತಕ್ಕಂತ ಒಂದು ಅದ್ಭುತವಾದ ದಿನ ಚೆನ್ನಾಗಿದೆ.
ವೃಷಭ– ಒಂದು ತೇಜಸ್ಸು, ಒಂದು ಗತ್ತು ನಿಮ್ಮಲ್ಲಿರಲಿದೆ. ಧೈರ್ಯವಾಗಿ ಯಾವ ಕೆಲಸದಲ್ಲಾದರೂ ಹೆಜ್ಜೆ ಇಡಿ.ಎನ್ನನ್ನು ಬೇಕಾದರೂ ಗೆಲ್ಲುವಂಥ ತಾಕತ್ತು ನಿಮಗಿರಲಿದೆ. ಸ್ವಲ್ಪ ಅಂಜಿಕೆ ಭಾವ ನಿಮಗೆ ಹೆಚ್ಚು. ದುರ್ಗಾ ಮಾತೆ ಜಪವನ್ನು ಮಾಡಿಕೊಳ್ಳಿ ಶುಭವಾಗಲಿದೆ.
ಮಿಥುನ– ಕಷ್ಟ ಪಡ್ತೀರಿ, ಆದರೆ ಒಂದು ರೆಕಗ್ನಿಷನ್ ಸಿಗುವುದಿಲ್ಲ ಎಂಬ ಯೋಚನೆ ನಿಮಗಿರುತ್ತದೆ. ಅದರ ಬಗ್ಗೆ ಅಷ್ಟು ಯೋಚನೆ ಮಾಡಬೇಡಿ. ಕೊಡುವುದಕ್ಕೆ ಅವರ್ಯಾರು, ತೆಗೆದುಕೊಳ್ಳೋದಿಕ್ಕೆ ನೀವ್ಯಾರು ಭಗವಂತ ಕೊಡಲಿದ್ದಾನೆ ಯೋಚಿಸಬೇಡಿ. ಯಾರೋ ಬಂದು ನಿಮ್ಮ ತಲೆಯನ್ನು ಕೆಡಿಸಲು ಪ್ರಯತ್ನ ಮಾಡುತ್ತಾರೆ ಅದಕ್ಕೆ ತಲೆಕೆಡಿಸಿಕೊಳ್ಳದೇ ಜಾಗರೂಕತೆಯಿಂದ ವಹಿಸಿ ಧೈರ್ಯದಿಂದ ಮುನ್ನುಗ್ಗಿ ಶುಭವಾಗಲಿದೆ.
ಕಟಕ– ಇದು ಸ್ವಲ್ಪ ಗಲಿಬಿಲಿ ದಿನವೇ. ವ್ಯವಹಾರಗಳ ನಿಮಿತ್ತ ಬಹಳ ತಲೆ ಕೆಡಿಸಿಕೊಳ್ಳುತ್ತೀರಿ ಹೆಚ್ಚು ದುಡ್ಡು ಬಂದರೂ ಕಷ್ಟ,ಕಡಿಮೆ ದುಡ್ಡಿದ್ದರೂ ಕಷ್ಟ ಆ ರೀತಿಯ ಪ್ರಭಾವ ಉಂಟಾಗಲಿದೆ. ಪೂರ್ಣ ಗಲಿಬಿಲಿ, ಗಲಿಬಿಲಿಯಿಂದ ಏನಾದ್ರೂ ಒಂದು ಎಡವಟ್ಟು ಮಾಡಿಕೊಳ್ಳುತ್ತೀರಿ. ಆದಷ್ಟು ವಿಷ್ಣುಸಹಸ್ರನಾಮ ಪಾರಾಯಣ ಮಾಡಿ ಒಳ್ಳೆಯದಾಗಲಿದೆ.
ಸಿಂಹ– ಗಲಿಬಿಲಿಯಲ್ಲಿ ಇಂದು ಏನಾದರೂ ಒಂದು ಮರೆತು ಕೀ, ವಸ್ತುಗಳು ಹೋಗುತ್ತದೆ. ಯಾವುದೋ ಕಲಬೆರಕೆಯ ವ್ಯಾಪಾರ, ಮೋಸದ ವ್ಯಾಪಾರ ಇಂಥ ಒಂದು ಒದ್ದಾಟಕ್ಕೆ ಸಿಲುಕಿಕೊಳ್ಳುತ್ತೀರಿ ಜಾಗರೂಕತೆ.
ಕನ್ಯಾ-ಇವತ್ತು ಗುಬ್ಬಚ್ಚಿ ಮರಿಯ ಹಾಗೆ ಇರುತ್ತೀರಿ. ಕಾಲಿಗೆ ಗೆಜ್ಜೆ ಕಟ್ಟಿದರೆ ಹೇಗೆ ಶಬ್ದ ಕೇಳಿ ಬರುತ್ತದೋ, ಹಾಗೆ ನೀವು ಸ್ವಲ್ಪ ನಿಮ್ಮ ಕೆಲಸವನ್ನು ಖುಷಿಯ ಭಾವದಿಂದ ಮಾಡುತ್ತೀರಿ. ನಿಮ್ಮ ಕೆಲಸ ಕಾರ್ಯಗಳನ್ನು ಸಾಧಿಸಿಕೊಳ್ಳುವ ಅದ್ಭುತವಾದ ದಿನ.
ತುಲಾ– ಇಂದು ನಿಮ್ಮ ದಿನ ಚೆನ್ನಾಗಿದೆ. ಕಾಸಿಗೆ ತಕ್ಕಂತೆ ಕಜ್ಜಾಯ. ನಿಮ್ಮ ಶ್ರಮಕ್ಕೆ ತಕ್ಕಂತೆ ಫಲ ದೊರೆಯಲಿದೆ.ಕಸ್ಟಮರ್ ಸರ್ವೀಸ್, ಇಂಡಸ್ಟ್ರಿ, ಸರ್ವಿಸಿಂಗ್ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದರೆ ಅದ್ಭುತವಾದಂತಹ ದಿನ ಒಳ್ಳೆಯ ಪ್ರಗತಿ ಕಾಣುತ್ತೀರಿ ಶುಭವಾಗಲಿದೆ.
ವೃಶ್ಚಿಕ– ಯಾವುದೊ ಸಣ್ಣ ಪುಟ್ಟ ವ್ಯವಹಾರದಲ್ಲಿ ಕಿರಿಕಿರಿ ತೊಂದರೆ ಉಂಟಾಗಲಿದೆ. ಅಗ್ರಿಮೆಂಟ್, ಬರಹ ಇಲ್ಲದ ಪತ್ರ, ಕಾಗದ ಪತ್ರಗಳು ಇಲ್ಲದೇ ಸಹಿ ಹಾಕದೇ ಯಾವುದೇ ವ್ಯವಹಾರವನ್ನು ಮಾಡಬೇಡಿ ತೊಂದರೆ ಎದುರಾಗಲಿದೆ ಜಾಗರೂಕತೆ.
ಧನಸ್ಸು– ಬುಧ ಕೆಟ್ಟಷ್ಟು ನಿಮ್ಮ ಬುದ್ಧಿ ಹೆಚ್ಚಾಗುತ್ತದೆ. ಧನಸ್ಸು ರಾಶಿಯವರು ಕೆಟ್ಟವರಲ್ಲು ಕೂಡ ಒಳ್ಳೆತನ ಕಾಣುತ್ತದೆ. ನಿಮಗೆ ಒಂದು ಪ್ರವೃತ್ತಿ ಇರುತ್ತದೆ. ಅದು ಧನಸ್ಸು ರಾಶಿಯವರಿಗೆ ಮಾತ್ರ. ಎಂಥ ಅನ್ಯಾಯ ನಡೆಯುತ್ತಿದ್ದರೂ ಅದರಲ್ಲೂ ಧರ್ಮ ಹುಡುಕುವುದು ನಿಮ್ಮ ಒಂದು ಗುಣ ಒಳ್ಳೆಯದಾಗಲಿದೆ.
ಮಕರ– ಯಾವುದೇ ಕಾರ್ಯಕ್ಷೇತ್ರವಾದರೂ ಕೂಡ ಅಲ್ಲಿ ಗೆದ್ದು ಜಯವನ್ನು ಸಾಧಿಸಿಕೊಂಡು ಬರುತ್ತೀರಿ. ದುಡ್ಡು ದಿಢೀರ್, ಆಸೆ ದಿಢೀರ್, ಹಣಕಾಸು ಎಡವಟ್ಟು ಮಾಡಿಕೊಳ್ಳುತ್ತೀರಿ ಜಾಗರೂಕತೆ.
ಕುಂಭ– ಮಾತಿಗೆ ಸಂಬಂಧಿಸಿದ, ಲೆಕ್ಕಾಚಾರಕ್ಕೆ ಸಂಬಂಧಿಸಿದ, ಕಾಗದ ಪತ್ರಗಳಿಗೆ, ಸರ್ಕಾರಕ್ಕೆ ಸಂಬಂಧಿಸಿದ ,ಸರ್ಕಾರ ಉದ್ಯೋಗ, ಸರ್ಕಾರ ಕೆಲಸಗಳಲ್ಲಿ ಉನ್ನತ ಪ್ರಗತಿಯನ್ನು ನೋಡ ತಕ್ಕಂತ ಒಂದು ದಿನವಾಗಿರಲಿದೆ.
ಮೀನ– ನಿಮ್ಮ ಜೊತೆ ವ್ಯವಹಾರ ಮಾಡುವವರಿಗೆ ಹೆಚ್ಚು ಲಾಭ. ನಿಮಗಿಂತಲೂ ಅವರಿಗೆ ಅಧಿಕ ಲಾಭ ದೊರೆಯಲಿದೆ. ನಿಮ್ಮನ್ನು ಪ್ರತಿಯೊಬ್ಬರೂ ಅವರ ಕೆಲಸಕ್ಕೆ ಬಳಸಿಕೊಳ್ಳುತ್ತಾರೆ. ನಿಮ್ಮ ಸಹಾಯ ಎಲ್ಲರಿಗೂ ಬೇಕಾಗುತ್ತದೆ ಆ ರೀತಿ ಒಂದು ಪ್ರಭಾವ ನೋಡುತ್ತೀರಿ ಶುಭವಾಗಲಿ.