ಹಬ್ಬದ ಸಡಗರ ಈಗಾಗಲೇ ಎಲ್ಲೆಲ್ಲೂ ಮನೆ ಮಾಡಿದೆ. ಹಲವು ಕಡೆ ೩-೪ ದಿನ ಸಂಕ್ರಾಂತಿ ಹಬ್ಬವನ್ನು ಆಚರಣೆ ಮಾಡುತ್ತಾರೆ. ಒಂದೊಂದು ಕಡೆ, ಒಂದೊಂದು ಪ್ರಾಂತ್ಯದಲ್ಲಿ, ಒಂದೊಂದು ರೀತಿ ಇರುತ್ತದೆ. ವಿವೇಕಾನಂದರು ಇಂದಿನ ನಮ್ಮ ಯುವ ಜನತೆಗೆ ಸಾಕಷ್ಟು ಸ್ಫೂರ್ತಿ ಎಂದೇ ಹೇಳಬಹುದು. ವಿವೇಕಾನಂದರ ಮಾತು ಎಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ಮಾತನ್ನು ಇವತ್ತು ನಾವು ಅಳವಡಿಸಿಕೊಳ್ಳಬೇಕಾಗಿದೆ.
ನಾವು ಪ್ರತಿಯೊಂದನ್ನು ಅಡ್ಡದಾರಿ ಶಾರ್ಟ್ ಕಟ್ ರೀತಿಯಲ್ಲಿ ಹಣ, ಮನೆ, ಕಾರು ಇದ್ದರೆ ನಾವು ಗೆದ್ದಿದ್ದೇವೆ ಎಂದುಕೊಳ್ಳುತ್ತೀವಿ. ಅದು ಗೆಲುವಲ್ಲ.! ಪರಿಸರವನ್ನು ಬೆಳೆಸಿಕೊಳ್ಳಿ, ಕುಟುಂಬವನ್ನು ಬೆಳೆಸಿಕೊಳ್ಳಿ, ಅಭಿವೃದ್ಧಿ ಎಂದರೆ ಅದು ಹಣವಿರುವ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ ಖುಷಿ ಇರುವುದಿಲ್ಲ ಗಮನಿಸಿ ನೋಡಿ. ಸಂಸ್ಕಾರಗಳನ್ನು ಬೆಳೆಸಿ ಮಕರ ಸಂಕ್ರಾಂತಿಗೆ ಒಂದಿಷ್ಟು ಬೆಳವಣಿಗೆಯನ್ನು ರೂಢಿಸಿಕೊಳ್ಳಿ ಮಾಡಿಕೊಳ್ಳಿ. ಧರ್ಮದ ಹಾದಿಯಲ್ಲಿ ನ್ಯಾಯದ ರೀತಿಯಲ್ಲಿ ಹೋದರೆ ಖಂಡಿತ ದುಡ್ಡು ಬರಲಿದೆ. ಅದನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿ ಶುಭವಾಗಲಿದೆ.
ಇಂದಿನ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ,
ಮೇಷ– ಸ್ವಂತ ನಿರ್ಧಾರ, ಸ್ವಂತ ಕೆಲಸ, ಸಂತ ವ್ಯವಹಾರ ದಿಟ್ಟ ನಿರ್ಧಾರದಿಂದ ಗೆಲ್ಲುವಿರಿ. ಅದರಲ್ಲೂ ಸರ್ಕಾರಿ ಕೆಲಸ, ಸರ್ಕಾರಿ ಯೋಜನೆಗಳು, ವ್ಯವಹಾರದಲ್ಲಿ ಇರುವಂತವರಿಗೆ ಅದ್ಭುತ ಪ್ರಗತಿಯ ಸಂಕೇತ. ನೋಡ ತಕ್ಕಂತ ಒಂದು ದಿನ ಚೆನ್ನಾಗಿದೆ.
ವೃಷಭ– ಸ್ವಲ್ಪ ತಂದೆ ಸ್ಥಾನದ ವ್ಯಕ್ತಿಗಳು, ಹಿರಿಯರು, ಗುರುಗಳು, ಏನಾದರೊಂದು ಸಣ್ಣಪುಟ್ಟ ಮಾತು, ಜಗಳವೂ ಕಿರಿಕಿರಿ ಅನಾರೋಗ್ಯವು, ಟೆನ್ಷನ್, ತಲೆ ಭಾರದಿಂದ ಬಳಲುವಿರಿ. ಓಂ ನಮಃ ಶಿವ ಎಂದು ನೂರೆಂಟು ಬಾರಿ ಜಪ ಮಾಡಿಕೊಳ್ಳಿ ಒಳ್ಳೆಯದಾಗಲಿದೆ.
ಮಿಥುನ– ಇಂಕ್ರಿಮೆಂಟ್, ಸಂಕ್ರಾಂತಿಯ ಒಂದು ಫಲ ನಿಮಗೆ ತಂದುಕೊಡಲಿದೆ. ದಿಟ್ಟ ನಿರ್ಧಾರ, ಸ್ವಂತ ವ್ಯವಹಾರ, ಅದ್ಭುತ ಪ್ರಗತಿ. ಸ್ವಲ್ಪ ಕೋಪಿಷ್ಠ ಆಗಿರುತ್ತೀರಿ ಅದನ್ನು ಕಡಿಮೆ ಮಾಡಿಕೊಳ್ಳಿ.
ಕಟಕ– ಧೈರ್ಯವಂತರು, ಸ್ಥೈರ್ಯವಂತರು ಪರಿಪೂರ್ಣ ಲಕ್ಷಣ ನಿಮ್ಮ ಜಾತಕಕ್ಕೆ. ಕರ್ಕಾಟಕ ರಾಶಿಯವರಿಗೆ ಅದ್ಭುತ ಪ್ರಗತಿ ಇದೆ ಯೋಚಿಸಲೇ ಬೇಡಿ. ಧೈರ್ಯದಿಂದ ಹೆಜ್ಜೆ ಇಡುವುದರ ಬಗ್ಗೆ ಗಮನ ನೀಡಿ ಗೆಲುವು ನಿಮ್ಮದೆ.
ಸಿಂಹ– ರಾಜ ಲಾಂಛನ, ರಾಜ ಗೌರವ, ಮಿಲಿಟರಿ ಡಿಫೆನ್ಸ್, ರಕ್ಷಣಾ ಇಲಾಖೆ, ಪೊಲೀಸ್ ಇಲಾಖೆ, ಪೊಲೀಸ್ ಆಫೀಸರ್, ಲೀಗಲ್ ಡಿಪಾರ್ಟ್ಮೆಂಟ್ ಆ ರೀತಿಯ ಉನ್ನತ, ಹುದ್ದೆ ಸ್ಥಾನ ಅಥವಾ ನಿಮ್ಮದೇ ಕೆಲ ಸರಕಾರಗಳ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರೆ ವಿಶೇಷ ಪ್ರಗತಿಯ ದಿನ, ವಾಕ್ದೋಷ ಇರುತ್ತದೆ ಜಾಗರೂಕತೆ.
ಕನ್ಯಾ– ಸ್ವಲ್ಪ ಖರ್ಚು ಜಾಸ್ತಿ! ಮನೆಯವರಿಗೋಸ್ಕರ, ಕುಟುಂಬಕ್ಕೋಸ್ಕರ ಓಡಾಟ, ಜವಾಬ್ದಾರಿಗೋಸ್ಕರ ದೊಡ್ಡ ಸ್ಥಾನಕ್ಕೋಸ್ಕರ ಇದ್ದರೂ ಖುಷಿ, ಸಂಭ್ರಮ ಆನಂದದ ದಿನ. ಇವತ್ತು ಒಂದು ಶುಭವಾರ್ತೆಯನ್ನು ಕೇಳುತ್ತೀರಿ. ಖಂಡಿತ ಇದೆ ಶುಭವಾಗಲಿದೆ.
ತುಲಾ-ಇಂದು ನಿಮ್ಮ ದಿನ ಚೆನ್ನಾಗಿದೆ. ನಿಮ್ಮ ಎದುರು ಇರುವವರ ಬಗ್ಗೆ ನಿಮ್ಮ ಪಾರ್ಟ್ನರ್ಶಿಪ್ ಬಂಧುಗಳು ಅವರಿಗೆ ಇನ್ನಷ್ಟು ದೊಡ್ಡ ನೆರಳು ಕೊಡುವಂಥ ದಿನವಾಗಿರುವಂತೆ ದಿನ ಯೋಚಿಸಬೇಡಿ. ಸ್ವಲ್ಪ ಕಿರಿಕಿರಿ ಮನಸ್ಸಿಗೆ ಬೇಸರ ಇರುತ್ತದೆ.
ವೃಶ್ಚಿಕ– ಮಾಡುವ ಕೆಲಸ, ಕಾರ್ಯ, ವ್ಯವಹಾರ ಎಲ್ಲದರಲ್ಲೂ ಪ್ರಗತಿ ಅದ್ಭುತವಾದಂತಹ ದಿನ. ವಿಶೇಷ ಪ್ರಗತಿ ಏನು ಯೋಚಿಸುವಂಥ ತೊಂದರೆಯಿಲ್ಲ. ವಿಶೇಷವಾಗಿ ಸ್ವಂತ ಬಿಸಿನೆಸ್, ಸ್ವಂತ ವ್ಯವಹಾರ, ಕಲಾ ವೇದಿಕೆ, ಟೀಚರ್, ಶಾಲಾ ಕಾಲೇಜು ಇಂಥ ದೊಡ್ಡ ಸಂಸ್ಥೆಯಲ್ಲಿ ಯೋಜಕರಾಗಿದ್ದರೆ ಅದ್ಭುತ ಪ್ರಗತಿ.
ಧನಸ್ಸು– ಉದ್ಯೋಗದಲ್ಲಿ ಪ್ರಮೋಶನ್ ಶುಭ ಸುದ್ದಿ, ಶುಭವಾರ್ತೆ, ಬದಲಾವಣೆ ಹೊಸ ಉದ್ಯೋಗ ಇತ್ತ ನಿಮ್ಮ ಚಿತ್ತ ಮೂಡಿದರೆ ಖಂಡಿತ ನೆರವೇರುವಂಥದ್ದು ಹೆಜ್ಜೆ ಇಡಿ ಸಂಕ್ರಾಂತಿಯ ಪರಿಪೂರ್ಣ ಲಾಭ ದೊರೆಯಲಿದೆ.
ಮಕರ– ಸ್ವಲ್ಪ ಬೇವು-ಬೆಲ್ಲ ಎರಡೂ ಉಂಟು. ದಿನದಾರಂಭ ಸ್ವಲ್ಪ ತಳಮಳಗೊಂಡು ದಿನದಂತ್ಯಕ್ಕೆ ವೃತ್ತಿಗೆ ಸಂಬಂಧಿತ, ವ್ಯವಹಾರ ಸಂಬಂಧಿತ ಯಾರೋ ಹಿರಿಯರು, ಅನುಭವಸ್ತರಿಂದ ಸಹಾಯ ಪಡೆಯುವಿರಿ.
ಕುಂಭ– ಸ್ವಲ್ಪ ತಳಮಳ, ಗೊಂದಲ, ತೆಗೆದುಕೊಳ್ಳುವುದು, ಕೊಡುವುದು, ಲೇವಾದೇವಿ ವ್ಯವಹಾರಗಳು, ತೊಳಲಾಟ ಉಂಟು ಎಚ್ಚರಿಕೆ! ಕಾಗದ ಪತ್ರಗಳು ಸಹಿ ಹಾಕುವುದು, ಕೊಡುವುದು ಬಹಳ ಜಾಗರೂಕತೆ. ಭಾಗ್ಯಸ್ಥಾನ ಸೂರ್ಯ ವಿಶೇಷ ಶುಭ ಸುದ್ದಿಯನ್ನು ನಿಮಗೆ ತಂದುಕೊಡುತ್ತಾನೆ. ವ್ಯಾವಹಾರಿಕವಾಗಿ ವ್ಯಾಪಾರ ನಿಮಿತ್ತ, ಕುಟುಂಬ ನಿಮಿತ್ತ, ಕೇಳ ತಕ್ಕಂತ ಒಂದು ಅದ್ಭುತ ದಿನ.
ಮೀನ– ಸ್ವಲ್ಪ ಸಾಲದ ಬಾಧೆ, ಕುಟುಂಬದ ಬಾಧೆ, ಹೊರೆಯ ಬಾಧೆ, ಮಕ್ಕಳ ಚಿಂತೆ, ಮನೆಯವರ ಚಿಂತೆ, ಉದ್ಯೋಗದ ಚಿಂತೆ, ಉದ್ಯೋಗದಲ್ಲಿ ಪ್ರಗತಿಯ ಚಿಂತೆ, ಯಶಸ್ಸು ನಿಮ್ಮದೇ! ಗೌರವ ನಿಮ್ಮದೇ ಆತಂಕಕ್ಕೆ ಒಳಗಾಗುವಂತ ಅವಶ್ಯಕತೆ ಇಲ್ಲ ಶುಭವಾಗಲಿದೆ.