ಮೇಷ ರಾಶಿಗೆ ಗ್ರಹಣ ಹೇಗಿರಲಿದೆ ಎಂದರೆ ನಿಮ್ಮ ಭಾಗ್ಯಸ್ಥಾನದಲ್ಲಿ ನಡೆಯುತ್ತಿದೆ ಎಚ್ಚರಿಕೆ. ನಿಮ್ಮ ಪೂರ್ವ ಪುಣ್ಯ ಸ್ಥಾನಾಧಿಪತಿ ಬಂದು ಸೇರಿಕೊಂಡಿದ್ದಾನೆ. ಆಚಾರ್ಯರಾದ ಆ ಒಂದು ತತ್ವ, ಪರಿಪೂರ್ಣ ಬದಲಾಗುವುದು ಹೊರಟು ಸಿದ್ಧಾಂತಗಳು ಬದಲಾಗುತ್ತದೆ. ನಿಮಗೆ ತಿಳಿದಿದೆಯೋ, ಇಲ್ಲವೋ ಬಾಲಿವುಡ್ ನಟ ಶಮಿ ಕಪೂರ್ ದೇವರನ್ನು ನಂಬದ ವ್ಯಕ್ತಿ. ಯಾವುದೇ ಸಿದ್ಧಾಂತಗಳಿಗೂ ಅವರು ಅಡಿಕ್ಟ್ ಆಗಿರಲಿಲ್ಲ ಆದರೆ ದಿನೇ ದಿನೇ ಕಳೆಯುತ್ತ ಅವರಲ್ಲಿ ಒಬ್ಬ ಯೋಗಿ ಹೊರಬಂದರು, ದೈವ ಗುಣಗಳನ್ನು ಅನುಸರಿಸಿಕೊಂಡು ಹಲವಾರು ಜನರಿಗೆ ಪಾಠ ಮಾಡುತ್ತಾರೆ.
ಧರ್ಮ ಕರ್ಮಾಧಿಪತಿ ಯೋಗವಿದ್ದರೆ ಅಂಥದ್ದೊಂದು ಶಕ್ತಿ ಇದ್ದಕ್ಕಿದ್ದ ಹಾಗೆ ಬಂದು ಬಿಡುತ್ತದೆ. ಅಂಥ ವ್ಯಕ್ತಿಗಳನ್ನು ಹುಡುಕಿಕೊಂಡು ಹೋಗಿ ಒಂದು ಸೇವೆ ಪೂಜೆ, ತಾಂಬೂಲ ಕೊಡಿ. ಕೆಲಸ ಮಾಡಿ ಈ ಒಂದು ಹನ್ನೊಂದು ದಿನಗಳಲ್ಲಿ ನಿಮ್ಮ ತಂದೆ ತಾಯಿ ಜೊತೆ ದೇವಾಲಯಕ್ಕೆ ಹೋಗಿ ತುಲಾಭಾರ ಸೇವೆಯನ್ನು ನಿರ್ವಹಿಸಿ. ನಂಜುಂಡೇಶ್ವರ, ಮಹದೇಶ್ವರ, ಧರ್ಮಸ್ಥಳ, ಮುರುಡೇಶ್ವರ ಕ್ಷೇತ್ರಗಳಿಗೆ ಭೇಟಿ ನೀಡಿ ತುಲಾಭಾರ ಸೇವೆ ಸಲ್ಲಿಸಿ ಬಹಳ ಒಳ್ಳೆಯದು. ನಿಮ್ಮ ಭಾಗ್ಯಸ್ಥಾನದಲ್ಲಿ ಶನಿ- ಗುರು-ಕೇತು ಸೇರಿಕೊಂಡಿದ್ದಾರೆ. ಹಾಗಾಗಿ ಶಿವ ಕ್ಷೇತ್ರಗಳಿಗೆ ನೀವು ಹೆಚ್ಚು ಭೇಟಿ ನೀಡಬೇಕು.
ತಂದೆ ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕತೆ ವಹಿಸಿ. ಜೊತೆಗೆ ಇಂಥ ಕ್ಷೇತ್ರಗಳಲ್ಲಿ ಅವರ ಆರೋಗ್ಯ ಕುರಿತು ಪೂಜೆ ಸಲ್ಲಿಸಿ ಗೋಕರ್ಣಕ್ಕೆ ಹೋಗಿ ಒಂದು ಪಿತೃಶಾಪ ಮಾಡಿಸಿಕೊಳ್ಳಿ ಅತ್ಯುತ್ತಮವಾದದ್ದು. ೧ ಕೆಜಿ ಗೋಧಿ, ಏಳು ಕೇಜಿ ಹುರುಳಿಯನ್ನು ಯಾವುದಾದರೂ ವೃದ್ಧಾಶ್ರಮ, ಅನಾಥಾಶ್ರಮ ಇಲ್ಲ ಆಚಾರ್ಯರಿಗೆ ಅರ್ಪಿಸಿ ಬಹಳ ಒಳ್ಳೆಯದಾಗಲಿದೆ ಇಷ್ಟನ್ನು ಮಾಡಿಕೊಳ್ಳಿ ಶುಭವಾಗಲಿದೆ.
ಇಂದಿನ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ,
ಮೇಷ– ನಿಮ್ಮ ದಿನ ಚೆನ್ನಾಗಿದೆ. ಪರವಾಗಿಲ್ಲ ಸ್ವಲ್ಪ ಇವತ್ತು ದಿನ ಮಂದಗತಿಯಲ್ಲಿ ಇರುತ್ತದೆ. ಕೆಲಸವೂ ಕೂಡ ಮಂದಗತಿಯಲ್ಲಿ ಇರುತ್ತದೆ. ಹೊರಗೆ ಹೋಗಿ ಬನ್ನಿ ಊಟ, ಸುತ್ತಾಟ, ಓಡಾಟ, ಮಾಡಿಕೊಂಡು ಬನ್ನಿ ಅದ್ಭುತವಾದಂತಹ ದಿನ ಚೆನ್ನಾಗಿದೆ.
ವೃಷಭ– ಇಂದಿನಿಂದ ವಿಶೇಷವಾದಂತ ದಿನ. ಸುಖ, ಆನಂದ, ಸುತ್ತಾಟ, ನೆಮ್ಮದಿ ಇವುಗಳನ್ನು ಮಾಡತಕ್ಕಂತಹ ಒಂದು ದಿನ ಎಂಜಾಯ್. ಖರ್ಚು ಹೆಚ್ಚಾಗಲಿದೆ ಖುಷಿಗೋಸ್ಕರ, ಆನಂದ ಕ್ಕೋಸ್ಕರ ಮಕ್ಕಳಿಗೋಸ್ಕರ ಉಂಟಾಗಲಿದೆ.
ಮಿಥುನ– ನಿಮ್ಮ ಬಾಯಿಯಲ್ಲಿ ಬಿಸಿ ತುಪ್ಪ ಬಿದ್ದ ಹಾಗೆ ಉಗುಳು ಹಂಗಿಲ್ಲ ನುಂಗುವ ಹಾಗಿಲ್ಲ. ಯಾವುದೋ ವಿಚಾರ ನಿಮ್ಮೊಳಗೆ ಕೊರೆಯುತ್ತಾ ಕುಳಿತಿದೆ. ಯಾವುದೋ ಬಾಧೆಯಿಂದ ಬಳಲುತ್ತಿರುತ್ತೀರಿ, ನಿಮ್ಮ ಸ್ನೇಹಿತರು ಹತ್ತಿರದ ವ್ಯಕ್ತಿಗಳು ಅದನ್ನು ಕಳೆಯುತ್ತಾರೆ. ಅದರಿಂದ ನಿಮ್ಮನ್ನು ಮುಕ್ತ ಮಾಡುತ್ತಾರೆ ಹೆದರಬೇಡಿ. ಮನೆಯಲ್ಲಿ ಹೊಸ ಬಟ್ಟೆ ಧರಿಸುವುದು, ಹೊಸ ಚಪ್ಪಲಿ ಧರಿಸುವುದು ಮಾಡಿ ಬಹಳ ಒಳ್ಳೆಯದು.
ಕಟಕ– ಇಂದು ನಿಮ್ಮ ದಿನ ಚೆನ್ನಾಗಿದೆ. ಕಷ್ಟಪಟ್ಟಿದ್ದೀರಿ ಆದರೆ ಪೂರ್ಣ ಪ್ರಮಾಣದಲ್ಲಿ ಅದರ ಲಾಭವನ್ನು ಪಡೆಯುತ್ತಿಲ್ಲ ಎಂಬ ಕೊರಗು, ಚಿಂತೆ ನಿಮ್ಮನ್ನು ಕಾಡುತ್ತಿದೆ. ಯಾವುದೋ ಸ್ತ್ರೀ ವಿಚಾರದಲ್ಲಿ ಒಂದು ತೊಳಲಾಟ ಹೊರೆ ಅನ್ನಿಸುತ್ತದೆ. ಯಾರಿಂದಲೋ ಸಣ್ಣ ಅಪಶ್ರುತಿ ಎದುರು ಮಾತುಗಳು ಬರುತ್ತದೆ ಜಾಗರೂಕತೆ.
ಸಿಂಹ– ಸ್ವಲ್ಪ ಖರ್ಚಿನ ಚಿಂತೆ, ಮನೆಯಲ್ಲಿ ಸ್ತ್ರೀ ಸಂತಾನ, ಸ್ತ್ರೀಯಿಂದ ಯಾವುದೋ ಕೊಡುವುದು, ತೆಗೆದುಕೊಳ್ಳುವ ವಿಚಾರದಲ್ಲಿ ಒಂದು ತೊಂದರೆ. ಯಾವತ್ತೂ ಯಾವುದನ್ನು ಇಟ್ಟುಕೊಳ್ಳಬೇಡಿ ಧರ್ಮವನ್ನು ಪಾಲಿಸಿ ಅದನ್ನು ಅವರಿಗೆ ಮುಂಚಿತವಾಗಿ ಕೊಟ್ಟುಬಿಡಿ.
ಕನ್ಯಾ– ಇವತ್ತು ಏನೋ ಒಂದು ಆನಂದ, ಖುಷಿ ಯಾವುದೋ ನಗೆಗಡಲಲ್ಲಿ ತೇಲುತ್ತಾ ಇರುತ್ತೀರಿ. ನೀವು ಧರ್ಮವಾಗಿ ಯೋಚನೆ ಮಾಡಿ, ಒಳ್ಳೆಯದನ್ನು ಯೋಚನೆ ಮಾಡಿದರೆ ಒಳ್ಳೆಯದೇ ಆಗುತ್ತದೆ. ಗೆದ್ದರೆ ನಿಯೋಜನೆ ಮಾಡಿದರೆ ಕೆಟ್ಟದ್ದೇ ಆಗುತ್ತದೆ. ಇವತ್ತು ಆದರೆ ಪಶುವಿಗೆ ಒಂದಿಷ್ಟು ಬೆಲ್ಲವನ್ನು ಅರ್ಪಿಸಿ ಒಳ್ಳೆಯದಾಗಲಿದೆ.
ತುಲಾ– ಇಂದು ನಿಮ್ಮ ದಿನ ಚೆನ್ನಾಗಿದೆ. ವೃತ್ತಿ ಬದಲಾವಣೆ ನಿರೀಕ್ಷೆಯಲ್ಲಿದ್ದೀರಿ, ಮನೆ ಬದಲಾವಣೆ, ಜಾಗ ಬದಲಾವಣೆ, ಹೊಸ ಜಾಗ, ಹೊಸ ಯೋಚನೆಗಳ ಬಗ್ಗೆ ಆಲೋಚನೆ ಮಾಡುತ್ತಿದ್ದೀರಾ ಶುಭ ಸುದ್ದಿಯೊಂದನ್ನು ಕೇಳುತ್ತೀರಿ ಒಳ್ಳೆಯದಾಗಲಿದೆ.
ವೃಶ್ಚಿಕ– ಇವತ್ತು ಒಂದು ರೀತಿ ನಶೆಯಲ್ಲಿ ಇರುತ್ತೀರಿ. ಬಾರದ ನಶೆ, ಖುಷಿಯ ನಶೆ, ಕುಟುಂಬದವರ ನಶೆ ಇರಲಿದೆ. ಮಧ್ಯಾಹ್ನದ ನಂತರ ಎಲ್ಲ ಸರಿ ಹೋಗಲಿದೆ, ತಿಳಿಯಾಗಲಿದೆ ಯಾವ ಒತ್ತಡವೂ ಇಲ್ಲ ಚೆನ್ನಾಗಿದೆ.
ಧನಸ್ಸು– ಇಂದು ನಿಮ್ಮ ಕೆಲಸ ಬಹಳ ಮಂದಗತಿಯಲ್ಲಿ ಸಾಗುತ್ತದೆ. ಆದರೆ ಹೊರಗಡೆ ಓಡಾಟ, ಸುತ್ತಾಟ, ಯಾವುದೋ ಭೋಜನಕೂಟ, ಆತ್ಮೀಯರನ್ನು ಭೇಟಿ ಮಾಡುವುದು ಇಂಥ ಸನ್ನಿವೇಶಗಳು ಎದುರಾಗಲಿವೆ. ಇವತ್ತು ಏನೋ ಒಪ್ಪ ,ಓರಣ, ಸಂಭ್ರಮ, ಹೊಸ ವಸ್ತ್ರವನ್ನು ಧರಿಸುತ್ತೀರಿ ಅಲಂಕಾರ ಮಾಡಿಕೊಳ್ಳುತ್ತೀರಿ ಚೆನ್ನಾಗಿದೆ.
ಮಕರ– ನಿಮ್ಮ ಸಂಗಾತಿಯಿಂದಲೋ, ಪತಿಯಿಂದಲೋ ಕುಟುಂಬದವರಿಂದಲೋ ಆತ್ಮೀಯರಿಂದಲೋ ಕುಟುಂಬದ ವ್ಯಕ್ತಿಗಳಿಂದಲೋ ನಿಮಗೆ ಯಾವುದೋ ಒಂದು ಸಹಾಯ ದೊರಕಲಿದೆ ಶುಭ ಸುದ್ದಿಯೊಂದು ಬರಲಿದೆ ಶುಭವಾಗಲಿ.
ಕುಂಭ– ನಿಮಗೆ ನೀವೇ ಶತ್ರು, ನಿಮ್ಮವರೇ ಶತ್ರು ನಿಮ್ಮ ಹತ್ತಿರದವರೇ ನಿಮಗೆ ಶತ್ರು. ವ್ಯವಹಾರದಲ್ಲಿ ಸ್ತ್ರೀ ಸಂಬಂಧಿತವಾಗಿ ವ್ಯಾಪಾರ ವಹಿವಾಟು, ಬೆಳ್ಳಿ, ಬಂಗಾರ ವಸ್ತುಗಳ ವ್ಯಾಪಾರ ಇದ್ದರೂ ಕೂಡ ಅದನ್ನು ಅನುಭವಿಸಲಾರಿರೀ. ತಾಯಿ ಸಮಾನರಾದವರಿಗೆ ಹಣ್ಣು- ಹಂಪಲು ಏನಾದರೂ ಒಂದು ಸಿಹಿ ನೀಡಿ ಒಳ್ಳೆಯದಾಗಲಿದೆ.
ಮೀನ– ಇಂದು ನಿಮಗೆ ಬಹಳ ವಿಶೇಷವಾದಂಥ ದಿನ. ನಿಮ್ಮ ಯೋಚನೆ ಮಕ್ಕಳ ಆರೋಗ್ಯದ ಬಗ್ಗೆ, ಮಕ್ಕಳ ಕೆಲಸಗಳ ಬಗ್ಗೆ ಯೋಚನೆ ಮಾಡುತ್ತಿರುತ್ತೀರಿ. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡುವುದು ಒಳ್ಳೆಯದು ಜಾಗರೂಕತೆ.