ದಿನ ಭವಿಷ್ಯ 14 ಡಿಸೆಂಬರ್ 2019.!

0
388

೨೬ನೇ ತಾರೀಖು ಗ್ರಹಣದ ಛಾಯೆ ಮೂಡಲಿದೆ. ಗ್ರಹಣದ ಎಫೆಕ್ಟ್ ನಿಮಗೆ ಕಾಡಲಿದ್ದು, ಎಲ್ಲೋ ಒಂದು ಆತಂಕ, ಭಯ ಗ್ರಹಗಳ ಆಧಿಪತ್ಯದಲ್ಲಿ ನಾವೆಲ್ಲರೂ ಇರುವುದರಿಂದ ಗ್ರಹಣ ಪ್ರವೇಶದ ಉತ್ತರಭಾಗದಲ್ಲಿ ಬೆಂಕಿ ಉರಿಯುತ್ತಿದೆ. ಅದರ ಜೊತೆಯಲ್ಲಿ ನಾಯಕರು ಮಾತನಾಡುತ್ತಿರುವ ಮಾತುಗಳು ಬೆಂಕಿಯ ಸ್ಪರ್ಶವನ್ನು ತೋರಿಸುತ್ತಿದೆ. ದೊಡ್ಡ ದೊಡ್ಡ ವ್ಯಕ್ತಿಗಳು ಎಲ್ಲಿ ಏನನ್ನು ಮಾತನಾಡಬೇಕು, ಯಾವುದನ್ನು ಮಾತನಾಡಬೇಕು ಎಂಬುದನ್ನು ಅರಿತುಕೊಂಡಿಲ್ಲ. ಭಾರತದ ಸಂಸ್ಕೃತಿ, ಸಂಪ್ರದಾಯವನ್ನು ತುಳಿದು ಹಾಕುವಲ್ಲಿ ಮುಂದಾಗುತ್ತಿದ್ದಾರೆ. ತುಂಬಾ ತಿಳಿದುಕೊಂಡಿರುವವರು ಮಾತನ್ನು ಹೆಚ್ಚು ಆಡುವುದಿಲ್ಲ ಅದು ಗ್ರಹಣದ ಛಾಯೆ.

ಪ್ರತಿಯೊಬ್ಬರು ತಮ್ಮ ತಮ್ಮ ಮನೆಯಲ್ಲಿ ದೀಪವನ್ನು ಗ್ರಹಣದ ದಿನ ಹಚ್ಚುವುದು ಬಹಳ ಒಳ್ಳೆಯದು. ಗ್ರಹಣದ ಛಾಯೆ ಹನ್ನೆರಡು ರಾಶಿಗಳ ಮೇಲೆ ಇರಲಿದೆ ಜಾಗರೂಕತೆ. ಇತ್ತೀಚೆಗೆ ಮದುವೆ ಆಗಿರುವವರು ಇಪ್ಪತ್ತೊಂದು ದಿನ, ಹನ್ನೊಂದು ದಿನದಲ್ಲಿ ಮದುವೆಯಾಗಿರುವವರನ್ನು ಬಿಟ್ಟು ಇನ್ನ ಪ್ರತಿಯೊಬ್ಬರಿಗೂ ಕೂಡ ಗ್ರಹಣದ ಛಾಯೆ ಕಾಡಲಿದೆ ಎಚ್ಚರಿಕೆ. ಧನಸ್ಸು ರಾಶಿಯವರಿಗೆ ಹೆಚ್ಚು ಪ್ರಮಾಣದಲ್ಲಿ ಗ್ರಹಣ ತೊಂದರೆ ಕಾಡಲಿದೆ. ವೃಶ್ಚಿಕ, ಮಕರ, ವೃಷಭ ರಾಶಿಗೆ ವಿಶೇಷವಾಗಿ ಅದರಲ್ಲಿ ಧನುಸ್ಸು ರಾಶಿಗೆ ಅಷ್ಟಮದಲ್ಲಿ ತಕ್ಕಂತೆ ಆ ಒಂದು ಪ್ರಭಾವ ಉಂಟಾಗಲಿದೆ. ವೃಷಭ ರಾಶಿಗೆ ಅತ್ತೆ ಭಾವ ಕಟಕರಾಶಿ ಇವರ ಮೇಲೆಯೂ ಕೂಡ ಗ್ರಹಣದ ಛಾಯೆ ನೇರವಾಗಿ ಹೊಡೆಯಲಿದೆ. ಜೊತೆಗೆ ಒಂದು ಎಡವಟ್ಟನ್ನು ಸೂಚಿಸುತ್ತದೆ.

 

ಅತಿ ಮುಖ್ಯವಾಗಿ ಕೆಲ ನಕ್ಷತ್ರಗಳು, ಮೂಲಾ ನಕ್ಷತ್ರ ,ಮಖಾ ನಕ್ಷತ್ರ, ಅಶ್ವಿನಿ ನಕ್ಷತ್ರ, ಜ್ಯೇಷ್ಠ, ಶುಕ್ರ ನಕ್ಷತ್ರ, ಪೂರ್ವಾಷಾಢ, ನೇರವಾಗಿ ಇದರ ಪ್ರಭಾವವನ್ನು ಬೀರುವಂತ ಛಾಯೆ. ಅದರಲ್ಲೂ ಕೇತು ನಕ್ಷತ್ರಗಳು ಅಶ್ವಿನಿ, ಮಖ, ಮೂಲಾ, ಮೂರು ಕೂಡ ನಕ್ಷತ್ರಗಳಲ್ಲಿ ಕೊರತೆ ದಾರಿಗಳನ್ನು ಅದರ ಮೇಲೆ ಶುಕ್ರ ನಕ್ಷತ್ರಗಳ ಒಂದು ಛಾಯೆ, ಪೂರ್ವಾಷಾಢ, ಪೂರ್ವಫಾಲ್ಗುಣಿ ನಕ್ಷತ್ರ ಹಾಗೆಯೇ ಭರಣಿ ನಕ್ಷತ್ರದ ಮೇಲೆಯೂ ಕೂಡ ಈ ಗ್ರಹಣದ ಒಂದು ಛಾಯೆ ಇರಲಿದೆ. ಯಾಕೆಂದರೆ ಕೇತು ಶುಕ್ರ ಸಾರದಲ್ಲಿದ್ದಾನೆ. ಶುಕ್ರ ನಕ್ಷತ್ರದಲ್ಲಿ ಹುಟ್ಟಿದವರಿಗೆ ಇದರ ಒಂದು ಪ್ರಭಾವ. ಕೇತು ಅವರು ಮನಸ್ಸಿನಲ್ಲಿಯೇ ಇಟ್ಟುಕೊಂಡು ಇರುತ್ತಾರೆ.

ಯಾರೊಂದಿಗೂ ಹೇಳುವುದಿಲ್ಲ ಗಮನಿಸಿ ನೋಡಿ. ಊಹ ಲೋಕದಲ್ಲಿ, ಮನಸ್ಸಿನಲ್ಲಿ ಏನೋ ಒಂದು ಗೊಂದಲ, ಯೋಚನೆ ಮಾಡುವುದು. ಸುಮ್ಮನೆ ಇರುವವರಿಗೆ ಕೇತು ಪ್ರಭಾವ ಹೆಚ್ಚಿರುತ್ತದೆ. ಇಲ್ಲಿರುವ ಲೋಕ ನಾವು ನೋಡಿ ಗಮನಿಸಿ ಹೇಳುವುದಾದರೆ ಅದು ಬುದ್ಧಿ ಲೋಕ. ತಂದೆ, ತಾಯಂದಿರು ಈ ಗ್ರಹಣದ ದಿನ ಮಕ್ಕಳ ಬಗ್ಗೆ ಸೂಕ್ಷ್ಮ ಜಾಗ್ರತೆ ವಹಿಸಿ. ಅದರಲ್ಲೂ ತುಂಟ ಮಕ್ಕಳಿದ್ದರೆ ಹೆಚ್ಚು ಗಮನ ನೀಡಬೇಕು. ಒಬ್ಬರೇ ಮಕ್ಕಳು ಇದ್ದರೆ ತುಂಟ ಮಕ್ಕಳು, ಹೈಪರ್ ಆಕ್ಟಿವ್ ಆಗಿದ್ದರೆ ಅವರ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಅವರ ಮೇಲೆ ಒಂದು ಕಣ್ಣಿಡ ಬೇಕಾಗುತ್ತದೆ. ಮನೆಯ ಮುಂದುಗಡೆ ಸೂರ್ಯೋದಯಕ್ಕೂ ಮುಂಚೆ ತುಳಸಿ ಗಿಡದ ಹತ್ತಿರ ಒಂದು ದೀಪವನ್ನು ಹಚ್ಚಿ ಬಿಡಿ. ಪ್ರತಿಯೊಬ್ಬರು ಗ್ರಹಣ ಮೋಕ್ಷ ಮುಗಿಯುವವರೆಗೂ ತುಳಸಿ ದೀಪ ಹಚ್ಚುವುದು ಬಹಳ ಶ್ರೇಷ್ಠ ಒಳ್ಳೆಯದಾಗಲಿ.

ಇಂದಿನ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ,

ಮೇಷ– ಎಲ್ಲೋ ಒಂದು ಎಳೆದಾಟ. ಒಡಹುಟ್ಟಿದವರ ಜೊತೆ, ನಾನು ಸಾಧಿಸುತ್ತೇನೆ, ಕೆಲಸವನ್ನು ಮುಗಿಸುತ್ತೇನೆ ಎಂಬ ಆತಂಕ ನಿಮ್ಮಲ್ಲಿರುತ್ತದೆ. ಇಂದು ದುರ್ಗಾ ಮಂತ್ರವನ್ನು ಜಪಿಸಿ ಇಂದು ಯಾವುದೇ ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಹುಳಿಯ ಪ್ರಭಾವ, ಮನೆಯ ವಿಚಾರವೋ ಯಾರದ್ದೋ ವಿಚಾರದಲ್ಲಿ ಇದೆ ಜಾಗರೂಕತೆ.

ವೃಷಭ– ಮನಸ್ಸು ಹುಳಿಯಾದಾಗ ಎಲ್ಲೋ ತಾಯಿಯ ವಿಚಾರ, ಮನೆಯವರ ವಿಚಾರ, ಮಾಡುತ್ತಿರುವ ಕೆಲಸದಲ್ಲಿ ಯಾವುದೋ ಒಂದು ಪ್ರಚೋದನೆ, ಕೆಟ್ಟ ಮಾತು, ಕೆಟ್ಟ ಯೋಚನೆ’ ಉನ್ಮಾದ, ಕೋಪ, ಕಿರುಚು ಉಂಟಾಗಲಿದೆ. ಮನೆಯ ಮುಂದೆ ಒಂದು ಬೆಲ್ಲದ ದೀಪವನ್ನು ಹಚ್ಚಿ ರಾಹು ಪ್ರಭಾವ ದೂರವಾಗಲಿದೆ ಶುಭವಾಗಲಿ.

ಮಿಥುನ– ಅಧಿಕಾರ, ಅಂತಸ್ತು, ಪ್ರತಿಷ್ಠೆ ,ಪದವಿ, ರಾಜಕೀಯ, ಬಹುದೊಡ್ಡ ಮೇಲಾಧಿಕಾರಿಯ ಸ್ಥಾನ, ದೊಡ್ಡ ಸ್ಥಾನದಲ್ಲಿ ಇದ್ದರೆ ಕತ್ತರಿಯ ಪ್ರಭಾವ. ಸಾಮಾನ್ಯ ವರ್ಗದವರಿಗೆ ಅಂಥ ಸಮಸ್ಯೆ ಇಲ್ಲ. ಹತ್ತಿರದವರಿಂದ ಮೋಸ ಆಗುವ ಪ್ರಭಾವಗಳ ಇರಲಿದೆ. ಹತ್ತಿರದಲ್ಲಿ ಎಲ್ಲಾದರೂ ಪುಣ್ಯ ಕ್ಷೇತ್ರಗಳಿದ್ದರೆ ಭೇಟಿ ನೀಡಿ ಒಳ್ಳೆಯದಾಗಲಿದೆ.

 

ಕಟಕ– ಕುಟುಂಬದ ಬಗ್ಗೆ, ಮನೆಯ ಬಗ್ಗೆ, ಆರೋಗ್ಯದ ಬಗ್ಗೆ ,ವ್ಯವಹಾರದ ಬಗ್ಗೆ ಎಲ್ಲೋ ಒಂದು ತಲ್ಲಣ. ಕಳೆದು ಹೋದ ಘಟನೆ ವಿಚಾರಗಳನ್ನು ಮತ್ತೆ ಮತ್ತೆ ಕೆದಕಿ ಅದರ ಬಗ್ಗೆ ಆಲೋಚನೆ ಮಾಡುವ ಪ್ರಭಾವ ಇರಲಿದೆ. ಯಾವುದೋ ಒಂದು ಮಾಯೆಗೆ ಒಳಗಾಗುವಂಥ ಪರಿ ಉಂಟು. ಮನೆಯ ಬಾಗಿಲಿಗೆ ಮಾವಿನ ಎಲೆ, ಬೇವಿನ ಎಲೆಯನ್ನು ತಂದು ಕಟ್ಟುವುದು ಬಹಳ ಒಳ್ಳೆಯದು.

 

ಸಿಂಹ– ಇಂದು ನಿಮ್ಮ ದಿನ ಚೆನ್ನಾಗಿದೆ. ವಿಪರೀತ ಪ್ರಚೋದಕ, ಅಪ್ರಚೋದಕ ಎರಡೂ ನೀವಾಗುತ್ತೀರಿ. ಯಾವುದೋ ಬೇರೆ ರೀತಿಯ ವಿಚಾರಗಳು ನಿಮ್ಮನ್ನು ಕೆದಕುವುದು ಅಥವಾ ನೀವೇ ಅದನ್ನು ಕೆದಕಿಕೊಂಡು ಹೋಗುವುದು ಯಾರನ್ನಾದರೂ ಮೋಸ ಮಾಡಿ ಆದರೂ ನಾನು ಮೇಲೆ ಬರಬೇಕು ಎಂಬ ಪ್ರಚೋದನೆ ನಿಮ್ಮ ಮೇಲೆ ಉಂಟಾಗಲಿದೆ ಜಾಗರೂಕತೆ.

 

ಕನ್ಯಾ– ರಾಹು ನಿಮಗೆ ಮಿತ್ರ, ಚಂದ್ರ ನಿಮಗೆ ಒಳ್ಳೆಯದು. ಒಳ್ಳೆಯ ಸುದ್ದಿ, ಒಳ್ಳೆಯ ಮಾತು, ಒಳ್ಳೆಯ ಕ್ಷಣಗಳು , ವಿಶೇಷ ಸುದ್ದಿ, ಆನಂದ ಉಂಟು. ಒಂದು ಸಂಪ್ರೀತಿ ಪಡೆಯುವ ಸುಯೋಗ ಕೂಡ ಉಂಟು. ಆದ್ರೂ ರಾಹು ಪ್ರಭಾವ ನಿಮ್ಮ ಮೇಲೆ ಬೀರಲಿದೆ ಜಾಗರೂಕತೆ. ಮನೆ ದೇವರಿಗೆ ಒಂದು ಪುಟ್ಟ ತುಪ್ಪದ ದೀಪ ಹಚ್ಚಿ ಒಳ್ಳೆಯದಾಗಲಿದೆ.

 


ತುಲಾ– ಉದ್ಯೋಗ ವಿಚಾರದಲ್ಲಿ ಒಂದು ಗಾಬರಿ, ತಳಮಳ, ಆತಂಕ, ಭಯ ಏನೋ ಒಂದು ರೀತಿ ಒಳಗಾಗುತ್ತೀರಿ. ಮುಂದೆ ಏನಾಗಲಿದೆ ಎಂಬ ಭಯ ನಿಮಗೆ ಕಾಡುತ್ತದೆ. ಏನೇ ಆದರೂ ನೀವೇ ಈಜಿ ಜಯಿಸಬೇಕು. ವಯಸ್ಸಾದ ತಂದೆ ತಾಯಿಯರ ಆರೋಗ್ಯದ ಕಡೆ ಗಮನ ನೀಡಿ ಒಳ್ಳೆಯದಾಗಲಿದೆ.

 

ವೃಶ್ಚಿಕ– ವ್ಯವಹಾರ ನಿಮಿತ್ತ, ಕುಟುಂಬ ನಿಮಿತ್ತ ಸಣ್ಣ ಒಂದು ತೊಳಲಾಟ ಎಡವಟ್ಟು ಉಂಟಾಗಲಿದೆ. ಅದಕ್ಕೆ ದಾರಿಯೂ ಸಿಗಲಿದೆ ಯೋಚಿಸಬೇಡಿ ಆದಷ್ಟು ಇಂದು ಹುಳಿ ಪದಾರ್ಥದಿಂದ ದೂರವಿರಿ ಒಳ್ಳೆಯದು.

 

ಧನಸ್ಸು– ರಾಹು-ಕೇತು ಶಕ್ತಿಯನ್ನು ತಡೆಯುವುದು ಗುರು ಮಾತ್ರ. ಆದ್ದರಿಂದ ಇವತ್ತು ರಾಮನಾಮ ಸುಂದರ ಕಾಂಡವನ್ನು ಪಾರಾಯಣ ಮಾಡುವುದು ಒಳ್ಳೆಯದು ಶುಭವಾಗಲಿದೆ. ಉನ್ಮಾದಕ್ಕೆ ಒಳಗಾಗಿ ಕೆಟ್ಟವರಾಗುತ್ತೀರಿ.

 

ಮಕರ– ಪಾಲುದಾರಿಕೆ, ಕೊಡುವುದು, ತೆಗೆದುಕೊಳ್ಳುವುದು ವಿಚಾರದಲ್ಲಿ ಒಂದು ವಿಚಿತ್ರವಾಗಿ ದುಡ್ಡು ಕಾಸು ನೋಡುತ್ತೀರಿ. ಸ್ವಲ್ಪ ಎಚ್ಚರಿಕೆ.! ದುಡ್ಡು ಕಾಸಿನ ವಿಚಾರದಲ್ಲಿ ಏನಾದರೂ ಒಂದು ಎಡವಟ್ಟು ಆಗಲಿದೆ. ಬರವಣಿಗೆ ಇಲ್ಲದೇ ಹಣವನ್ನು ಪಡೆಯಬೇಡಿ, ಹಣವನ್ನು ಕೊಡಬೇಡಿ ಜಾಗರೂಕತೆ.

 

ಕುಂಭ– ಡಾಕ್ಟರ್ ಅಥವಾ ತುಂಬ ದೊಡ್ಡ ಅಧಿಕಾರದಲ್ಲಿ ಇದ್ದರೆ ಗೌರವ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ನೀವೆಷ್ಟು ಕಷ್ಟಪಟ್ಟಿದ್ದೀರಿ ಅದಕ್ಕೆ ತಕ್ಕಂತ ಪ್ರತಿಫಲವನ್ನು ನೋಡುವಂಥ ದಿನವಾಗಿರಲಿದೆ. ಎಂದು ಸಾಧಿಸುವ ದಿನವನ್ನು ನೋಡುತ್ತೀರಿ. ಅದು ಎಲ್ಲೋ ಒಂದು ಕಡೆ ವೈರಾಗ್ಯ ಭಾವ ತಲ್ಲಣ ಉಂಟಾಗಲಿದೆ.

 

ಮೀನ– ಮಕ್ಕಳ ಕಡೆ, ತಾಯಿಯ ಕಡೆ, ತಂದೆಯ ಕಡೆ, ಹಾಲು, ಬೆಣ್ಣೆ, ತುಪ್ಪ ,ಮೊಸರು, ಮಜ್ಜಿಗೆ, ಸಕ್ಕರೆ, ಟ್ರಾವೆಲ್ಸ್, ಟೀಚರ್, ಅಡ್ವೊಕೇಟ್, ರಕ್ಷಣಾ ಇಲಾಖೆ ಹುದ್ದೆಯಲ್ಲಿ ಇದ್ದರೆ ಯಾವುದಾದರೂ ಒಂದು ಕೆಟ್ಟ ಪ್ರಭಾವ ಉಂಟು. ಗಣಪತಿಯ ಅನುಷ್ಠಾನ ಮಾಡಿಕೊಳ್ಳಿ ಓಂ ಗಂ ಗಣಪತಿಯೇ ನಮಃ ಎಂದು ನಾಮಸ್ಮರಣೆ ಮಾಡಿ ಒಳ್ಳೆಯದಾಗಲಿದೆ.

LEAVE A REPLY

Please enter your comment!
Please enter your name here