ದಿನ ಭವಿಷ್ಯ 13 ಜನವರಿ 2020!

0
249

 

ಕೆಲವರು ಬರಿ ಬೆರಳಿನಲ್ಲಿ ಮಾತ್ರ ಊಟವನ್ನು ಮಾಡುತ್ತಾರೆ ಅಂಥದ್ದೊಂದು ದುರಭ್ಯಾಸ ಇರುತ್ತದೆ. ಬೆರಳಿನ ಎರಡನೇ ಗೆರೆಯನ್ನು ಬಳಸಿ ಊಟ ಮಾಡಿದರೆ ಏನಾಗುತ್ತದೆ ಎಂದರೆ ಅಲ್ಲೊಂದು ದೋಷ ಇರುತ್ತದೆ. ಕೆಲವರನ್ನು ಗಮನಿಸಿ ನೋಡಿದರೆ ಊಟವನ್ನು ಮಾಡುವ ಶೈಲಿಯ ವಿಚಿತ್ರವಾಗಿ ಇರುತ್ತದೆ. ಚಮಚವನ್ನು ಬಳಸಿ ವಿಚಿತ್ರವಾಗಿ ತಿನ್ನುತ್ತಾರೆ. ಅದನ್ನು ತಿನ್ನಬೇಕೊ ಅಥವಾ ತಿನ್ನಬಾರದೊ ಎಂಬುವ ರೀತಿಯಲ್ಲಿ ತಿನ್ನುತ್ತಾರೆ. ಈ ರೀತಿ ಊಟ ಮಾಡುವವರಿಗೆ ಒಂದು ದೋಷ ಇರುತ್ತದೆ.

ನಿಮ್ಮ ಜೊತೆ ಯಾರು ಸೇರುವುದಿಲ್ಲ, ಇನ್ನೊಬ್ಬರ ಮೇಲೆ ಅಸುಯೆ ಪಡುತ್ತೀರಿ. ಅಹಂಕಾರದ ಮೂಟೆ, ದುರಂಕಾರದಿಂದ ವರ್ತಿಸುತ್ತೀರಿ. ಮೊಂಡು, ಬೆಂಡು, ಜೊಂಡು ಮತ್ತೊಬ್ಬರ ಮಾತು ಕೇಳುವುದಿಲ್ಲ. ಈ ರೀತಿ ಊಟ ಮಾಡುವುದರಿಂದ ಸಂಸಾರ, ಕೌಟುಂಬಿಕವಾಗಿ ಒಬ್ಬಂಟಿಯಾಗಿ ಇರುವಂಥದ್ದು, ಇನ್ನು ಕಡೆಯ ಬೆರಳಿನವರೆಗೆ ಸೇರಿಸಿ ಊಟವನ್ನು ಕಲಿಸಿ ತಿನ್ನುವವರಿಗೆ ಎಷ್ಟು ದುಡಿದರೂ ಹಣ ಉಳಿಯುವುದಿಲ್ಲ.

ಕತ್ತೆ ರೀತಿ ದುಡಿಯುತ್ತಾರೆ. ಆದರೆ ಯಾವ ಹಣವೂ ಉಳಿಯುವುದಿಲ್ಲ.!ಯೋಗ್ಯತೆಯನ್ನು ನಿಮ್ಮ ಶಕ್ತಿ ನಿಮ್ಮ ಸಾಮರ್ಥ್ಯ ನಿಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಎಲ್ಲಾ ಲಕ್ಷಣಗಳನ್ನು ಭಗವಂತ ನಿಮ್ಮ ಮುಷ್ಟಿಯಲ್ಲಿ ಇಟ್ಟಿದ್ದಾನೆ. ಅದಕ್ಕೆ ಗೌರವ ಕೊಡುವುದನ್ನು ನಾವು ಕಲಿತಿಲ್ಲ. ಸಂಪೂರ್ಣವಾಗಿ ತಿಂದರೆ ಏನು ಫಲವಿದೆ,ಯಾವ ದೋಷವಿದೆ ಎಂಬುದರ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಇಂದಿನ ಸಂಚಿಕೆಯ ವಿಡಿಯೋ ವೀಕ್ಷಿಸಿ.

ಇಂದಿನ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ,

ಮೇಷ– ಲೆಕ್ಕಾಚಾರ, ಬ್ಯಾಂಕಿಂಗ್, ವ್ಯವಹಾರ, ಅಕೌಂಟಿಂಗ್, ಟೀಚರ್, ಫೈನಾನ್ಷಿಯಲ್ ತೊಂದರೆಯಿಲ್ಲ ನಿಭಾಯಿಸಿಕೊಂಡು ಹೋಗುತ್ತೀರಿ ಶುಭವಾಗಲಿದೆ.

 

ವೃಷಭ– ಇಂದು ನಿಮ್ಮ ದಿನ ಚೆನ್ನಾಗಿದೆ. ಬುದ್ಧಿಶಕ್ತಿ, ಮೇಧಾ ಶಕ್ತಿ ಉಪಯೋಗಿಸಿ ಮಾಡುವ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ. ಟೆಕ್ನಿಕಲ್ ಸರ್ವಿಸ್, ಬ್ಯಾಂಕಿಂಗ್, ಲೇವಾದೇವಿ ಚೆನ್ನಾಗಿದೆ.

 

ಮಿಥುನ– ಏನೋ ಒಂದು ಲೆಕ್ಕಾಚಾರ, ಹಣದ ವಿಚಾರ ಒಂದು ರೀತಿ ಗಲಿಬಿಲಿ ಒದ್ದಾಡುತ್ತೀರಿ. ತುಂಬಾ ತಳಮಳಕ್ಕೆ ಒಳಗಾಗಬೇಡಿ ವಿಷ್ಣು ಸಹಸ್ರನಾಮ ಕೇಳಿ ಶುಭವಾಗಲಿದೆ.

 

ಕಟಕ– ಯಾವುದೇ ರೀತಿಯಲ್ಲಿ ಸಂಪಾದನೆ ಯೋಗ ಉಂಟು. ಮಾತಿನ ಶಕ್ತಿ, ಆಲೋಚನಾ ಶಕ್ತಿಯಿಂದ ಎಲ್ಲವನ್ನು ಸಾಧಿಸಿ ಕೊಳ್ಳುವಂಥ ಒಂದು ತಾಕತ್ತು ನಿಮಗಿರುತ್ತದೆ. ಆದರೆ ವ್ಯಕ್ತಿಗಳು ನಿಮ್ಮ ಬುದ್ಧಿಯನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ.

 

ಸಿಂಹ– ಯಾರೋ ನಿಮಗೆ ತಲೆ ಕೆಡಿಸುತ್ತಾರೆ. ಈ ರೀತಿ ದುಡ್ಡು ಮಾಡಬಹುದು, ಹಣ ಗಳಿಸಬಹುದು ಅಡ್ಡದಾರಿಯಲ್ಲಿ ಸಂಪಾದನೆ ಮಾಡಬಹುದು ಎಂದು ಅದಕ್ಕೆ ಗಮನ ಕೊಡಬೇಡಿ ಅಡ್ಡದಾರಿ ಸಂಪಾದನೆಯತ್ತ ನಿಮ್ಮ ಚಿತ್ತ ಸರಿಯಲ್ಲ ಜಾಗರೂಕತೆ.

 

ಕನ್ಯಾ– ಇಂದು ನಿಮ್ಮ ದಿನ ಚೆನ್ನಾಗಿದೆ. ಹಬ್ಬದ ಸಡಗರ ಇವತ್ತಿನ ದಿನದಿಂದಲೇ ಆರಂಭಗೊಳ್ಳುತ್ತದೆ. ಹಬ್ಬಕ್ಕಾಗಿ ಖರ್ಚು ವೆಚ್ಚ ಹೆಚ್ಚಾಗಲಿದೆ ಸ್ವಲ್ಪ ಖರ್ಚಿನ ದಿನ  ಶುಭವಾಗಲಿದೆ.

 

ತುಲಾ– ಟೆಕ್ನಿಕಲ್ ಲೈನ್ನಲ್ಲಿ ಇದ್ದೀರಿ, ಎಕ್ಸ್ಪೋರ್ಟ್ ಇಂಪೋರ್ಟ್ ವ್ಯವಹಾರಗಳಿಗೆ ಸಂಬಂಧಿಸಿದಂತೆ, ಇವೆಂಟ್ ಮ್ಯಾನೇಜ್ಮೆಂಟ್, ಕಲಾ ಮಾಧ್ಯಮ, ಕಲಾವಿದರಾಗಿದ್ದರೆ ಅದ್ಭುತ ಪ್ರಗತಿ ನೋಡ ತಕ್ಕಂತ ದಿನ.

ವೃಶ್ಚಿಕ– ಸರಕಾರಿ ಮಟ್ಟದ ಕೆಲಸ, ಕಾರ್ಯ, ಕಾಮಗಾರಿ ,ಟೆಂಡರ್ ಕಡೆ, ಸ್ವಂತ ಕಾರ್ಯ, ಸ್ವಂತ ವ್ಯವಹಾರ,  ಏಜೆಂಟ್ ಆ ರೀತಿ ಕೆಲಸ ಕಾರ್ಯಗಳಲ್ಲಿ ಇರುವವರಿಗೆ ಪ್ರಗತಿ ಇದೆ.

 

ಧನಸ್ಸು– ಸ್ವಂತ ಕಾರ್ಯ ಮಾಡುವಾಗ, ಸ್ವಂತ ಕೆಲಸ ನಿರ್ವಹಿಸುವಾಗ ಎಂದು ಯಾರಾದರೂ ಹಿರಿಯರ ಮಾತುಗಳನ್ನು ಕೇಳಿ ಹೆಜ್ಜೆ ಇಡುವುದು  ಸೂಕ್ತ. ಯಾವುದೇ ಕೆಲಸ ಮಾಡುವಾಗ ನಾಲ್ಕು ಜನರ ಬಳಿ ವಿಚಾರಿಸಿ ನಿರ್ವಹಿಸುವುದು ಬಹಳ ಒಳ್ಳೆಯದು. ಬರವಣಿಗೆಯಲ್ಲಿ ಕಾಗದ ಪತ್ರಗಳಲ್ಲಿ ವ್ಯವಹಾರ ನಡೆಸಿ ಶುಭವಾಗಲಿ.

 

ಮಕರ– ಯಾವುದೋ ಒಂದು ಬಡ್ಡಿ, ಚಕ್ರಬಡ್ಡಿ, ಹಣಕಾಸಿನ ವಿಚಾರ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ತಕ್ಕ ಲಾಭ ದೊರೆಯಲಿದೆ. ಹಣಕಾಸನ್ನು ನೋಡುತ್ತೀರಿ ಶುಭವಾಗಲಿದೆ.

 

ಕುಂಭ– ಕುಟುಂಬ ಬದ್ಧ ವ್ಯವಹಾರ, ಆಲೋಚನೆಯಿಂದ ವ್ಯವಹಾರದಲ್ಲಿ ಲಾಭ ನೋಡಬಹುದು. ಕೃಷಿ ಅಭಿವೃದ್ಧಿ ಫಲಿಸುವಂತ ದಿನ. ಚೆಕ್ಕು, ಡಾಕ್ಯುಮೆಂಟ್ಗಳು ಯಾವುದೇ ಇರಲಿ ಲೆಕ್ಕಪತ್ರಗಳು ಬರವಣಿಗೆಯಲ್ಲಿ ನೀಡುವುದು ಉತ್ತಮ. ದುಡುಕಬೇಡಿ ಜಾಗರೂಕತೆಯಿಂದ ವ್ಯವಹರಿಸಿ ಶುಭವಾಗಲಿ.

 

  • ಮೀನ– ಕೊಡುವುದು, ತೆಗೆದುಕೊಳ್ಳುವುದು, ಸ್ನೇಹಿತರು , ಆಪ್ತರು, ಆತ್ಮೀಯರು, ಸರ್ಕಾರ ಕೆಲಸ, ಹಿರಿಯರ ಕಡೆಯಿಂದ ಒಳ್ಳೆಯ ಗೌರವ, ಸನ್ಮಾನ, ಪಡೆಯುತ್ತೀರಿ. ನಿಮ್ಮ ಮಾತಿನ ಚಾಕಚಕ್ಯತೆ, ವಾಕ್ ಪಟ್ಟಿಗೆ ಎಲ್ಲರೂ ಬೆರಗಾಗುತ್ತಾರೆ.

LEAVE A REPLY

Please enter your comment!
Please enter your name here