ಡಿಸೆಂಬರ್ ತಿಂಗಳಲ್ಲಿ ಹುಟ್ಟಿದವರ ವಿಶೇಷತೆಗಳ ಬಗ್ಗೆ ಶ್ರೀ ರವಿಶಂಕರ್ ಗುರೂಜಿ ಅವರು ಇಂದಿನ ಸಂಚಿಕೆಯಲ್ಲೂ ತಿಳಿಸಿಕೊಟಿದ್ದಾರೆ. ಡಿಸೆಂಬರ್ ಮಾಸದಲ್ಲಿ ಹುಟ್ಟಿದವರೇ ಒಂದು ಬ್ರ್ಯಾಂಡ್ ನಿಮಗೆ ನೀವೇ ಸಾಟಿ. ಯೋಗಿಗಳೊಂದಿಗೆ ನೀವಿದ್ದರೆ ನಿಮಗೆ ನೀವೇ ಯೋಗಿ. ರೋಗಿಗಳೊಂದಿಗೆ ಇದ್ದರೆ ನಿಮಗೆ ನೀವೇ ಬೋಗಿ. ಜೋಗಿಗಳ ಜೊತೆಯಿದ್ದರೆ ನಿಮಗೆ ನೀವೇ ಜೋಗಿ ಆ ರೀತಿಯ ಒಂದು ಪ್ರಭಾವ ನಿಮಗಿರುತ್ತದೆ. ನಿಮಗೆ ಎಷ್ಟೇ ಕಷ್ಟ ಬಂದರೂ ಕೂಡ ಅದನ್ನು ಈಜಿ, ನಿಂತು, ಎದುರಿಸಿ ಧೈರ್ಯದಿಂದ ಮುನ್ನುಗ್ಗುತ್ತೀರಿ. ಆ ಒಂದು ಸಾಮರ್ಥ್ಯ ಡಿಸೆಂಬರ್ ತಿಂಗಳಲ್ಲಿ ಹುಟ್ಟಿದವರಿಗೆ ಮಾತ್ರ ಇರುತ್ತದೆ.
ಹೀಗಾಗಿ ಡಿಸೆಂಬರ್ ಮಾಸದಲ್ಲಿ ಹುಟ್ಟಿರುವವರು ಯೋಚಿಸಬೇಡಿ, ಕೊರಗಬೇಡಿ ನಿಮಗೆ ಎರಡನೇ ಅವಕಾಶ ಸಿಕ್ಕೇ ಸಿಗುತ್ತದೆ. ನಿಧಾನವೇ ಪ್ರಧಾನ.! ಕಾಯುವಿಕೆ ಇದ್ದರೆ, ತಾಳ್ಮೆಯಿಂದ ಕಾಯ್ದರೆ ನಿಮಗೆ ನೀವೇ ಅದ್ಭುತ. ಡಿಸೆಂಬರ್ ಮಾಸದಲ್ಲಿ ಹುಟ್ಟಿದವರ ವಿಶೇಷತೆ ಮತ್ತಷ್ಟಿದೆ ಮುಂದಿನ ಸಂಚಿಕೆಯಲ್ಲಿ ರವಿಶಂಕರ್ ಗುರೂಜಿ ಅವರು ತಿಳಿಸಿಕೊಡಲಿದ್ದಾರೆ. ಇಂದು ಮೃಗಶಿರ ರಾಹು ರಾಹು ತತ್ವದಲ್ಲಿ ದ್ದಾನೆ ಕೇಂದ್ರದಲ್ಲಿ ಶನಿ ಕೇತು ಗುರು ಎಲ್ಲರೂ ಸೇರಿಕೊಂಡಿದ್ದಾರೆ ಅಲ್ಲೊಂದು ಪ್ರಪಾತವೇ ನಡೆಯಲಿದೆ ಜಾಗರೂಕತೆ.
ಪ್ರತಿಯೊಬ್ಬರು ಇವತ್ತು ಹೊಸಿಲಿನ ಹೊರಗಡೆ ದೀಪವನ್ನು ಹಚ್ಚುವ ಪ್ರಯತ್ನ ಮಾಡಿ ಹಚ್ಚುವುದನ್ನು ಮಾಡಿ ಒಳ್ಳೆಯದಾಗುತ್ತದೆ. ತುಳಸಿ ದೀಪವು ಮಣ್ಣಿನ ದೀಪವು ೮ಬೆಲ್ಲದ ದೀಪವು ಕುಂಬಳಕಾಯಿಯ ದೀಪವು ದಯವಿಟ್ಟು ಹಚ್ಚಿ ಯಾವುದೋ ಅಪಾಯದ ಸೂಚನೆ ಇದು. ಏನೋ ಒಂದು ಬಿರುಗಾಳಿ ಇನ್ನೊಂದು ಎಡವಟ್ಟು ಹುಡುಕಿಕೊಂಡು ಬರುವಂತಹ ಸನ್ನಿವೇಶಗಳು ಉಂಟು.
ಇಂದಿನ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ,

ಮೇಷ– ಒಡಹುಟ್ಟಿದವರ ಜೊತೆ ನೋಡಿಕೊಂಡು, ವ್ಯವಹಾರದಲ್ಲಿ ನೋಡಿಕೊಂಡು ಜಾಗರೂಕತೆಯಿಂದ ನಿರ್ವಹಿಸಿ. ದುಡುಕಬೇಡಿ ಯಾರೋ ಹತ್ತಿರದವರಿಂದ ಒಂದು ಪುಟ್ಟ ಮೋಸವಿದೆ, ಭೂಮಿ ವಿಚಾರವಾಗಿ, ಮನೆ ತೆಗೆದುಕೊಳ್ಳುವುದು ಇಂಥ ವಿಚಾರದಲ್ಲಿ ಪೆಟ್ಟು ಉಂಟು ಜಾಗರೂಕತೆ.

ವೃಷಭ– ಸ್ವಲ್ಪ ಆತುರದ ನಿರ್ಣಯಗಳಿಂದ ಪೆಟ್ಟು ತಿನ್ನುತ್ತೀರಿ .ಕುಜ-ರಾಹು ಸಂಧಿ ಉಂಟು. ಯಾರೋ ಹತ್ತಿರದವರು ಪ್ರಚೋದನೆಗೆ ಒಳಪಡಿಸುತ್ತಾರೆ. ಸೆಕೆಂಡ್ ಹ್ಯಾಂಡ್ ವಸ್ತುಗಳನ್ನು ಖರೀದಿ ಮಾಡಬೇಡಿ. ಆದಷ್ಟು ಬಸ್ ಪ್ರಯಾಣ ಮಾಡುವುದು ಒಳ್ಳೆಯದು ಜಾಗರೂಕತೆ.

ಮಿಥುನ– ಊಟದಲ್ಲಿ ವಿಷ ಪ್ರಯೋಗ, ಮಾತಿನಲ್ಲಿ ವಿಷ ಪ್ರಯೋಗ, ಕೆಲಸದಲ್ಲಿ ವಿಷ ಪ್ರಯೋಗ ಉಂಟು. ಎಲ್ಲಾದರೂ ಕಾಳಿ ದೇವಿ, ಕಾಲ ಭೈರವಿ ಕ್ಷೇತ್ರಕ್ಕೆ ಹೋಗಿ ಬನ್ನಿ ಪುಟ್ಟದಾಗಿ ಅರಿಶಿನವನ್ನು ಪ್ರಸಾದವಾಗಿ ಸ್ವೀಕರಿಸಿ ಹಣೆಗೆ ಇಟ್ಟುಕೊಂಡು ನಂತರ ಹೊರಡಿ ಒಳ್ಳೆಯದಾಗಲಿದೆ.

ಕಟಕ– ಪ್ರಯಾಣಗಳಲ್ಲಿ ನಷ್ಟ, ಭೂಮಿ, ಮನೆಯ ವಿಚಾರಗಳಲ್ಲಿ ತೊಳಲಾಟ ಆದಷ್ಟು ಒದ್ದಾಡುತ್ತೀರಿ. ನಿಮ್ಮ ಸುತ್ತಮುತ್ತ ಎಲ್ಲಾದ್ರೂ ಅಶ್ವತ್ಥ ವೃಕ್ಷವಿದ್ದರೆ ಸ್ವಲ್ಪ ಅವಲಕ್ಕಿ, ಬೆಲ್ಲವನ್ನು ಚೆಲ್ಲಿ ಬನ್ನಿ ಒಳ್ಳೆಯದು.

ಸಿಂಹ– ಇವತ್ತು ಎಲ್ಲಾ ನನ್ನದೇ ಅನ್ನುವ ಭಾವ ನಿಮ್ಮಲ್ಲಿರುತ್ತದೆ. ಅದು ನ್ಯಾಯ, ಅನ್ಯಾಯ, ಮೋಸ ಆದಾಗ ಯಾವುದೇ ಇರಲಿ ನನ್ನದೇ ಎಂಬ ಒಂದು ಆರ್ಭಟ ನಿಮ್ಮಲ್ಲಿರುತ್ತದೆ.

ಕನ್ಯಾ– ಇವತ್ತು ನಿಮಗೆ ವಿಶೇಷವಾದಂಥ ದಿನ. ಎಂಥ ಕೆಲಸವನ್ನಾದರೂ ಯಶಸ್ವಿಯಾಗಿ ಮುಗಿಸಿಕೊಂಡು ಬರುವಂತಹ ಅದ್ಭುತವಾದಂತಹ ದಿನ. ಯೋಚಿಸಬೇಡಿ ಧೈರ್ಯದಿಂದ ಮುನ್ನುಗ್ಗಿ ಶುಭವಾಗಲಿದೆ.
ತುಲಾ– ತಂದೆಯ ಆರೋಗ್ಯದ ಕಡೆ ಹೆಚ್ಚು ಗಮನ ಕೊಡಿ. ತಂದೆಯ ಸಮಾನರಾದ ವ್ಯಕ್ತಿಗಳ ಜೊತೆ ಆದಷ್ಟು ಮಧುರವಾಗಿ ಇರುವುದು ಒಳ್ಳೆಯದು. ತುಂಬಾ ಜಾಗರೂಕತೆ ಫ್ಯಾಕ್ಟರಿ, ಬಿಸಿನೆಸ್, ಇಂದು ಸಾಲ ಮಾಡಲು ಹೋಗುತ್ತೀರಿ ದುಡುಕಬೇಡಿ ಜಾಗರೂಕತೆ.

ವೃಶ್ಚಿಕ– ಹೊರಗಡೆ ತಿನ್ನಲು ಹೋಗಬೇಡಿ. ಫಂಕ್ಷನ್, ಪಾರ್ಟಿ, ಪೆಟ್ಟು, ಗಾಯ, ಇನ್ಫೆಕ್ಷನ್ ಮನಸ್ಸಿಗೆ ನೋವು ಎಂಥದ್ದೋ ಒಂದು ತಳಮಳ ಇರಲಿದೆ. ಹನುಮನ ಜಪ ಮಾಡಿ ಹನುಮಾನ ಕ್ಷೇತ್ರಕ್ಕೆ ಹೋಗಿ ಬನ್ನಿ ಒಳ್ಳೆಯದಾಗಲಿದೆ.

ಧನಸ್ಸು– ಪಾರ್ಟನರ್ ಶಿಪ್, ಫ್ರೆಂಡ್ ಶಿಪ್, ಬಿಜಿನೆಸ್, ಸ್ನೇಹಿತರ ಜೊತೆ ಆತ್ಮೀಯರ ಜೊತೆ ಮಾಡುತ್ತಿರುವ ವ್ಯವಹಾರ ಕಡೆ ಸ್ವಲ್ಪ ಆಲೋಚನೆ ಭದ್ರವಾಗಿ ಹೆಜ್ಜೆ ಇಡುವುದು ಒಳ್ಳೆಯದು ದುಡುಕಬೇಡಿ.

ಮಕರ– ಸ್ವಲ್ಪ ಪಾಲುದಾರಿಕೆ ವ್ಯವಹಾರದಲ್ಲಿ ಒಂದು ಮೋಸ ಉಂಟು. ಮೊದಲೇ ನೀವು ಹೆಚ್ಚಾಗಿ ಮೋಸಕ್ಕೆ ತುತ್ತಾಗುತ್ತಿದ್ದೀರ, ತುಂಬಾ ಎಚ್ಚರಿಕೆಯಿಂದ ಕೆಲಸಗಳನ್ನು ನಿರ್ವಹಿಸಿ ಯೋಚಿಸಿ ಕೇಳಿ ತಿಳಿದುಕೊಂಡು ಮಾಡುವುದು ಒಳ್ಳೆಯದು. ಜೈಲು, ಕೋರ್ಟು, ಅವ್ಯವಹಾರ ಯಾವುದೋ ಒಂದು ನಿಮ್ಮನ್ನು ಹುಡುಕಿಕೊಂಡು ಬರುವಂತ ಸನ್ನಿವೇಶಗಳಿವೆ ಜಾಗರೂಕತೆ.

ಕುಂಭ– ಯಾವುದೋ ಹಳೆಯದ್ದೋ, ಇತ್ತೀಚೆಗೆ ನಡೆದ ವಿಚಾರಗಳನ್ನು ಕೇದಕಲಿಕ್ಕೆ ಹೋಗಬೇಡಿ. ಹನುಮಾನ್ ಚಾಲೀಸ್ ಕೇಳಿ, ವಿಷ್ಣು ಸಹಸ್ರನಾಮ ಕೇಳಿ, ದೇವಿ ಪಾರಾಯಣ ಕೇಳಲಿಕ್ಕೆ ಪ್ರಯತ್ನ ಮಾಡಿ ಬಹಳ ಒಳ್ಳೆಯದು.

ಮೀನ– ಒಂದು ಮೂಗಿಗೆ ಪೆಟ್ಟು, ಹಲ್ಲಿಗೆ ಪೆಟ್ಟು, ಕಾಲಿಗೆ ಪೆಟ್ಟು, ರಕ್ತಸ್ರಾವ, ಪೈಲ್ಸ್, ಪಿಸ್ತೂಲ, ಇರುವವರಿಗೆ ಒಂದು ತೊಂದರೆಗಳು ಎದುರಾಗಲಿವೆ ತುಂಬ ಎಚ್ಚರಿಕೆ. ರಾಮನ ಶಾಸ್ತ್ರಜ್ಞ ಸುಂದರ ಕಾಂಡವನ್ನು ಓದಿ, ಎಲ್ಲ ರಾಶಿಯವರು ಓದಿ ಬಹಳ ಒಳ್ಳೆಯದು ಶುಭವಾಗಲಿ.