ದಿನ ಭವಿಷ್ಯ 17 ಸೆಪ್ಟೆಂಬರ್ 2019

0
372

ಸೋಮವಾರ ಹುಟ್ಟಿದ ವ್ಯಕ್ತಿಗಳ ವಿಶೇಷತೆಗಳ ಬಗ್ಗೆ ಹಿಂದಿನ ಸಂಚಿಕೆಯಲ್ಲಿ ಶ್ರೀ ರವಿಶಂಕರ್ ಗುರೂಜಿಯವರು ತಿಳಿಸಿಕೊಡುತ್ತಿದ್ದರು, ಇಂದಿನ ಸಂಚಿಕೆಯಲ್ಲೂ ಕೂಡ ಮುಂದುವರಿಸಿದ್ದಾರೆ. ಸೋಮವಾರ ಅಂತ ಹೇಳಿದರೆ ಸಾಕು ಸೋಮವಾರ ಶಿವನ ವಾರ ಅಷ್ಟು ವಿಶೇಷ. ಕಲಾವಿದರಾಗಿದ್ದೀರ, ತುಂಬಾ ಹೆಸರು ಮಾಡಿದ್ದೀರಿ, ಜನಗಳು ನಿಮ್ಮನ್ನು ಇಷ್ಟಪಡುತ್ತಿದ್ದಾರೆ ಅಂದರೆ ಅದು ಒಂದು ರೀತಿಯ ಜಾ‍ದುವೇ ಇರಬಹುದು. ಹೌದು, ಭಗವಂತನ ಆಶೀರ್ವಾದ ನಿಮ್ಮ ಮೇಲೆ ಸಂಪೂರ್ಣವಾಗಿ ಇದೆ. ಸೋಮವಾರ ಹುಟ್ಟಿದ ವ್ಯಕ್ತಿಗಳ ಕ್ರಿಯೇಟಿವಿಟಿ ಏನು ಎಂದರೆ ನೀವು ರಾಕೆಟ್ ನಷ್ಟು ವೇಗದಲ್ಲಿ ಇರುತ್ತೀರಿ. ಅಗಾಧ ನೆನಪಿನ ಶಕ್ತಿ, ಅಗಾಧ ವಾಕ್ಪಟು ನೀವು ಅಂದುಕೊಂಡದ್ದನ್ನು ಹಿಡಿದುಕೊಂಡರೆ ಅದನ್ನು ಸಾಧಿಸುವವರೆಗೂ ಬಿಡುವುದಿಲ್ಲ. ಸಾರ್ವಜನಿಕವಾಗಿ ಯೋಚಿಸುವ ವ್ಯಕ್ತಿತ್ವ ನಿಮ್ಮದು. ನಿಮ್ಮ ಕಣ್ಣಿನೊಳಗೆ ಒಂದು ಶಕ್ತಿ ಅಡಗಿದೆ. ನೀವು ವಿಪರೀತ ಮಾತನಾಡುತ್ತೀರಿ, ಇಲ್ಲ ಮಾತನಾಡುವುದೇ ಇಲ್ಲ! ಸುಮ್ಮನೆ ಮೌನವಾಗಿ ಕುಳಿತು ಕೊಳ್ಳುತ್ತೀರಿ. ಮಾತನಾಡಲಿಕ್ಕೆ ನಿಂತರೆ ಅದ್ಭುತವಾಗಿ ಮಾತನಾಡುತ್ತೀರಿ. ನಿಮ್ಮ ಶಕ್ತಿ ಮುಂದುಗಡೆ ನಿಜವಾಗಲು ಬೇರೆ ಶಕ್ತಿಗಳನ್ನು ಲೆಕ್ಕ ಹಾಕಿಕೊಂಡರೆ ಯಾವ ಶಕ್ತಿಯೂ ನಿಮ್ಮ ಮುಂದಿಲ್ಲ ಎನ್ನಬಹುದು. ಅದನ್ನು ನೀವು ಅರಿತುಕೊಂಡು ಮುಂದೆ ಸಾಗಬೇಕು.

ಇಂದಿನ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ,

ಮೇಷ– ಸ್ವಲ್ಪ ದಾಂಪತ್ಯ, ಕೌಟುಂಬಿಕ ವಿಚಾರದಲ್ಲಿ ತೊಳಲಾಟ ಎದುರಾಗಲಿದೆ. ಕುಟುಂಬದ ವಿಚಾರದಲ್ಲಿ ಗಂಡ-ಹೆಂಡತಿ ಅಥವಾ ಸ್ತ್ರೀ ವಿಚಾರದಲ್ಲಿ ಒಂದು ಕಿರಿಕಿರಿ ಉಂಟಾಗಲಿದೆ. ವಿಷ್ಣುಸಹಸ್ರನಾಮವನ್ನು ಕೇಳುತ್ತಾ ನಿಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ ಒಳ್ಳೆಯದಾಗಲಿದೆ.

ವೃಷಭ– ಸ್ವಲ್ಪ ಆರೋಗ್ಯದ ಬಗ್ಗೆ ಗಮನವಿರಲಿ ಒಂದು ತೊಳಲಾಟ ಉಂಟಾಗಲಿದೆ. ಅಂದುಕೊಂಡಂತಹ ಕಾರ್ಯಗಳು ನೆರವೇರುವುದಿಲ್ಲಾ. ತುಂಬಾ ದೊಡ್ಡ ಕೆಲಸ ,ಕಾರ್ಯಗಳನ್ನು ನಿರ್ಧಾರ ಮಾಡಿಕೊಳ್ಳಬೇಡಿ ಯಾಕೆಂದರೆ ಒಂದು ತಳಮಳ ಮಾಡಿಟ್ಟು ಬಿಡಲಿದೆ ಜಾಗೃತ.

ಮಿಥುನ– ಯಾಕೋ ಕಾಣದ ದೇವರ ಮೊರೆ ಹೋಗುತ್ತೀರಿ. ಏನು ಮಾಡಿದರೂ ನನ್ನ ಕೆಲಸದಲ್ಲಿ ಪ್ರಗತಿ ಕಾಣುತ್ತಿಲ್ಲ ಎಂದು ಯೋಚಿಸುತ್ತೀರಿ. ಮಧ್ಯಾಹ್ನದ ನಂತರ ಅದ್ಭುತ ಸುದ್ದಿಯನ್ನು ಕೇಳ್ತೀರಿ. ಉದ್ಯೋಗದ ನಿಮಿತ್ತ, ಕೆಲಸ, ಕಾರ್ಯಗಳ ವಿಚಾರದಲ್ಲಿ ಪ್ರಗತಿ ಕಾಣುತ್ತಿರಿ ಒಳ್ಳೆಯದಾಗಲಿ.

ಕಟಕ– ಪರಸ್ಥಳ, ಪ್ರದೇಶದ ಉದ್ಯೋಗ, ಟ್ರಾವೆಲ್, ಸ್ಟೋರ್ಸ್, ಕೆಮಿಕಲ್ಸ್, ಮೆಡಿಸನ್ಸ್, ಲ್ಯಾಬ್ ಟೆಕ್ನಿಷಿಯನ್ ಇಂಥ ಕೆಲಸ ಕಾರ್ಯಗಳು ತೊಡಗಿಸಿಕೊಂಡಿರುವವರಿಗೆ ಪ್ರಗತಿ ಕಾಣ ತಕ್ಕಂತ ಒಂದು ದಿನ ಚೆನ್ನಾಗಿದೆ.

ಸಿಂಹ -ತಂದೆ, ಹಿರಿಯರು, ಬಾಸ್ ,ಅಣ್ಣ ,ಅತ್ತಿಗೆ ಇಂಥವರಿಂದ ಒಂದು ಸಣ್ಣ ಮಾತು ಕೇಳಬೇಕಾಗಿದೆ. ನಮ್ಮ ಮನಸ್ಸು ಸ್ವಲ್ಪ ಮೈಲಿಗೆ.! ಇನ್ನೊಬ್ಬರ ಬಗ್ಗೆ ಹೆಚ್ಚು ಚಿಂತೆ ಮಾಡುತ್ತೀರಿ. ಸ್ವಲ್ಪ ದುರ್ಗಾ ಆರಾಧನೆ ಮಾಡಿಕೊಳ್ಳಿ, ದುಡುಕಬೇಡಿ ಯಾವ ಕೆಲಸದಲ್ಲೂ ನಿರ್ಧಾರ ತೆಗೆದುಕೊಳ್ಳಬೇಡಿ. ತಂದೆಯ ಆರೋಗ್ಯದಲ್ಲಿ ಏರುಪೇರು ಇದ್ದರೆ ಹೆಚ್ಚು ಗಮನ ನೀಡಿ ಒಳ್ಳೆಯದಾಗಲಿದೆ.

ಕನ್ಯಾ– ಬೆಳಗ್ಗೆ ಎದ್ದಾಗಲೇ ತಲೆ ಭಾರ, ಕುತ್ತಿಗೆ ನೋವು, ಸೊಂಟ ನೋವು ಕಾಡಲಿದೆ. ವಿಪರೀತ ಉಷ್ಣ ಸಮಸ್ಯೆ, ಅಸಿಡಿಟಿ, ಗ್ಯಾಸ್ಟ್ರಿಕ್, ಕಣ್ಣಿನ ತೊಂದರೆಗಳು ಈ ರೀತಿಯ ತೊಂದರೆಗಳು ಕಾಡುತ್ತವೆ. ಬಿಲ್ವಪತ್ರೆಯನ್ನು ಚೆನ್ನಾಗಿ ಕುದಿಸಿ ಅದನ್ನು ಕಷಾಯ ರೂಪದಲ್ಲಿ ಸೇವಿಸಿ ಬಹಳ ಒಳ್ಳೆಯದು. ಹೆಚ್ಚು ಹಣವನ್ನು ಜೇಬಿನಲ್ಲಿ ಇಟ್ಟುಕೊಂಡು ಹೋಗಬೇಡಿ ಜಾಗರೂಕತೆ.

ತುಲಾ– ಕೊಡುವುದು, ತೆಗೆದುಕೊಳ್ಳುವುದು, ಪ್ರಯಾಣ, ವ್ಯವಹಾರ, ಉದ್ಯೋಗ, ನಂಬಿಕೆ ದ್ರೋಹ ಎಲ್ಲವೂ ಇಂದು ನೋಡುತ್ತೀರಿ ಜಾಗರೂಕತೆ. ದುಡುಕಬೇಡಿ, ನಂಬಬೇಡಿ ನಿಮ್ಮ ಮನಸ್ಸು ನಿಮ್ಮ ಸ್ಥಿತಿಗತಿಯಲ್ಲಿ ಇರುವುದಿಲ್ಲ. ಆದಷ್ಟು ಗಣಪತಿಯ ಅನುಷ್ಠಾನ, ಗಣಪತಿಗೆ ಒಂದು ಸೇವೆ ಪೂಜೆ, ಸಂಕಲ್ಪವನ್ನು ಮಾಡಿಕೊಳ್ಳಿ ಒಳ್ಳೆಯದಾಗಲಿದೆ.

ವೃಶ್ಚಿಕ– ಆರೋಗ್ಯ, ಕುಟುಂಬ, ತಂದೆ, ಮಾವ, ಹಿರಿಯರು, ಗಂಡ ,ಅತ್ತಿಗೆ, ಅಜ್ಜ ಇವರ ಆರೋಗ್ಯದಲ್ಲೊಂದು ತಲ್ಲಣ ಉಂಟಾಗಲಿದೆ. ಆದರೂ ಮಧ್ಯಾಹ್ನದ ನಂತರ ನಿಮ್ಮ ಕೆಲಸ ಕಾರ್ಯಗಳಲ್ಲಿ ಪ್ರಗತಿ ಕಾಣಲಿದೆ. ಸ್ತ್ರೀಯರಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಖರ್ಚುವೆಚ್ಚಗಳು ಜಾಸ್ತಿಯಾಗಲಿದೆ.

ಧನಸ್ಸು– ನಿಮ್ಮ ಯೋಗ್ಯತೆ, ಶಕ್ತಿ ಇದ್ದರೂ ನೀವು ಯಾರಿಗೂ ತಲೆ ಕೆಡಿಸಿಕೊಳ್ಳುವುದಿಲ್ಲ. ಇಂದು ನೀವು ಏನೇ ಮಾಡಿದರೂ ಅದು ಇನ್ನೊಬ್ಬರಿಗೆ ದಾರಿಯಾಗಲಿದೆ. ಬಿಟ್ಟುಕೊಡಿ ಯೋಚಿಸಬೇಡಿ ಶುಭವಾಗಲಿದೆ.

ಮಕರ– ವಿದ್ಯಾರ್ಥಿಗಳಿಗೆ ಸ್ವಲ್ಪ ತಲ್ಲಣ. ವಿದ್ಯೆಗೆ ಸಂಬಂಧಿಸಿದ ಹಾಗೆ ವಿದ್ಯೆ ಕ್ಷೇತ್ರಗಳನ್ನು ನಡೆಸುತ್ತಿದ್ದೀರಾ, ಪೂಜಾರಿ, ಧರ್ಮ ಸಂಸ್ಥಾಪಕರಾಗಿದ್ದೀರ, ಟ್ರಸ್ಟ್, ಎಕ್ಸ್ಪೋರ್ಟ್- ಇಂಪೋರ್ಟ್ ಇಂಥ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದೀರಿ ಸ್ವಲ್ಪ ಏರುಪೇರುಗಳಾದರೂ ಮಧ್ಯಾಹ್ನದ ನಂತರ ವ್ಯವಹಾರ ಅನುಕೂಲವಾಗಲಿದೆ ಯೋಚಿಸಬೇಡಿ. ಯಾವ ತೊಂದರೆಯೂ ಇಲ್ಲ ತಾಯಿಯ ಆಶೀರ್ವಾದ ಪಡೆದುಕೊಂಡು, ತಾಯಿಗೆ ಒಂದು ಸೇವೆಯನ್ನು ಅರ್ಪಿಸಿ ಒಳ್ಳೆಯದಾಗಲಿದೆ.

ಕುಂಭ– ಮನೆಯವರ ವಿಚಾರದಲ್ಲಿ,ಒಡಹುಟ್ಟಿದವರು, ಸೋದರಿಯ ವಿಚಾರದಲ್ಲಿ, ಒಂದು ಹಣಕಾಸು ಪೀಕಲಾಟ ಉಂಟಾಗಲಿದೆ ಜಾಗರೂಕತೆ. ದುಡುಕಬೇಡಿ ನಿಮ್ಮ ಹತ್ತಿರದವರಿಗೆ ಸಹಾಯ ಮಾಡಿ ಆದರೆ ತೊಂದರೆಗೆ ಸಿಲುಕಿಕೊಳ್ಳಬೇಡಿ. ಕುಂಭ ರಾಶಿಯವರು ಹೆಚ್ಚು ಜಾಗ್ರತೆ ವಹಿಸಿ ಶುಭವಾಗಲಿ.

ಮೀನ– ಆರೋಗ್ಯ, ಮನೆಯವರ, ಕುಟುಂಬದವರ ಸ್ಥಿತಿ, ಉದ್ಯೋಗದ ಸ್ಥಿತಿಯಲ್ಲಿ ಒಂದು ತಲ್ಲಣ ಗಾಬರಿ ಉಂಟಾಗಲಿದೆ. ಗುರು ರಾಘವೇಂದ್ರ ಸ್ವಾಮಿಗಳ ಮಂತ್ರವನ್ನು ಜಪ ಮಾಡಿಕೊಳ್ಳಿ ಬಹಳ ಒಳ್ಳೆಯದಾಗಲಿದೆ. ರಾಯರ ಆಶೀರ್ವಾದದಿಂದ ಬರುವ ಅಡ್ಡಿ ಆತಂಕಗಳು ದೂರವಾಗಲಿದೆ. ಮನೆಯ ಬಳಿ ಯಾವುದಾದರೂ ಮೂಕ ಪ್ರಾಣಿ, ಪಕ್ಷಿಗಳು ಕಾಣಿಸಿಕೊಂಡರೆ ಆಹಾರವನ್ನು ನೀಡಿ ಒಳ್ಳೆಯದಾಗಲಿದೆ.

LEAVE A REPLY

Please enter your comment!
Please enter your name here