ದಿನ ಭವಿಷ್ಯ 12 ಜನವರಿ 2020!

0
217

ಇಂದು ಸ್ವಾಮಿ ವಿವೇಕಾನಂದರ ಜಯಂತಿ ಸ್ವಾಮಿ ವಿವೇಕಾನಂದರ ಬಗ್ಗೆ ನಾವು ಕೇಳಿದ್ದೇವೆ, ನೋಡಿದ್ದೇವೆ ಇಂದು ಅವರ ಜಯಂತಿ ಎಂದು ಆಚರಣೆ ಮಾಡುತ್ತಾರೆ. ನಿಜವಾಗಲೂ ವಿವೇಕಾನಂದರ ಆ ಮಾತುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದೇವಾ.? ಎಂಬ ಪ್ರಶ್ನೆ ಹಾಕಿಕೊಳ್ಳಬೇಕು. ಸ್ವಾಮಿ ವಿವೇಕಾನಂದರ ಸಿದ್ಧಾಂತ, ವ್ಯಕ್ತಿತ್ವ, ಭಾರತ ದೇಶದ ಬಗ್ಗೆ ಅವರಿಗಿದ್ದ ಗೌರವ ಅಪಾರವಾದದ್ದು.

 

ನಮ್ಮ ಸಂಸ್ಕಾರದ ಸಂಕೇತವಾಗಿ ಆ ಒಂದು ಪಗಡಿಯನ್ನು ತಲೆಯ ಮೇಲೆ ಹೊತ್ತಿದ್ದೇನೆ ಎಂದು ವಿವೇಕಾನಂದರು ಎಲ್ಲೇ ಹೋದರೂ ತಿಳಿ ಹೇಳುತ್ತಿದ್ದರು. ನಿಮ್ಮ ಸಂಸ್ಕಾರ ವರ್ಷದ ಆರಂಭದ ದಿನವೇ ಕುಡಿದು ತೂರಾಡುವುದು, ನಿಮ್ಮ ಸಂಸ್ಕಾರ ವರ್ಷದ ಆರಂಭದ ದಿನ ಕುಣಿದು ಕುಪ್ಪಳಿಸುವುದು, ಕುಟುಂಬ ಪೂಜೆ, ಸಂಸ್ಕಾರಗಳ ದಿನ ಅದಕ್ಕೆ ನಿಮ್ಮ ಸಂಸ್ಕಾರವನ್ನು ನನ್ನ ಕಾಲಿನಲ್ಲಿ ಹಾಕಿಕೊಂಡಿದ್ದೇನೆ ಎಂದು ಹೊರದೇಶದವ ಪ್ರಶ್ನೆಗೆ ಉತ್ತರಿಸುತ್ತಾರೆ. ನಾವು ಗಮನಿಸಿ ನೋಡುವುದಾದರೆ ವಿವೇಕಾನಂದರ ಒಂದೊಂದು ಮಾತು ನಮ್ಮನ್ನು ಚುರುಕು ಮುಟ್ಟಿಸುವಂಥ ಮಾತುಗಳು.

 

ವಿವೇಕಾನಂದರು ಸ್ತ್ರೀಯರಿಗೆ ಕೊಡುತ್ತಿದ್ದಂತ ಗೌರವವನ್ನು ನಾವು ನೋಡಿ ಕಲಿಯಬೇಕು. ನೀವು ನಿಮ್ಮಲ್ಲಿಯೇ ಒಂದು ಪ್ರಶ್ನೆ ಹಾಕಿಕೊಳ್ಳಿ! ನಾನು ಮಾಡುತ್ತಿರುವುದು ಸರಿಯೇ? ನಾನು ಇರುವುದು ಸರಿಯೇ ನನ್ನ ಕೆಲಸ ಸರಿಯಾಗಿ ನಡೆಯುತ್ತಿದೆಯೇ ಎಂದು ಕೇಳಿಕೊಳ್ಳಿ? ನಾನು ಮಾಡುತ್ತಿರುವ ಕೆಲಸ ತಪ್ಪೇ ಅಥವಾ ನನ್ನ ಕುಟುಂಬದವರಿಗೆ, ಮನೆಯವರಿಗೆ ಇದರಿಂದ ಲಾಭವಿದೆಯೇ? ಒಳ್ಳೆಯದಾಗುತ್ತದೆಯೇ? ಎಂಬ ಪ್ರಶ್ನೆಗಳನ್ನು ಹಾಕಿಕೊಳ್ಳಿ.!

 

ಇದನ್ನೆಲ್ಲಾ ನೀವು ಪ್ರಶ್ನೆ ಹಾಕಿಕೊಂಡು ನಿಮಗೊಂದು ಉತ್ತರ ಸಿಕ್ಕುತ್ತದೆ. ಆ ನಂತರ ನಿಮ್ಮಲ್ಲಿಯೂ ಒಬ್ಬ ವಿವೇಕಾನಂದರು ಇದ್ದಾರೆ ಎಂಬುದು ತಿಳಿಯುತ್ತದೆ. ನಿಮ್ಮೊಳಗಿರುವ ರಾಮಕೃಷ್ಣ ಪರಮಹಂಸರು ವಿವೇಕಾನಂದರು ಹೊರಗೆ ಬರಲಿ ಉತ್ತಮ ಕೆಲಸಗಳನ್ನು ಮಾಡಲಿ. ಧೈರ್ಯದಿಂದ ಹೆಜ್ಜೆ ಇಡಿ, ಪದವಿ ನಿಮ್ಮ ಜೊತೆಗೆ ಇರಲಿ ಸಾಧನೆಯತ್ತ ನೀವು ಮುಖ ಮಾಡಿ ಒಳ್ಳೆಯದಾಗಲಿ.

ಇಂದಿನ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ.

ಮೇಷ– ಸರ್ಕಾರ ಮಟ್ಟದ ಕೆಲಸ, ಕಾರ್ಯ, ಸ್ವಂತ ಕಾರ್ಯ, ಸ್ವಂತ ಬಿಸಿನೆಸ್, ವ್ಯವಹಾರಗಳು, ಹೂಡಿಕೆ ಯೋಜನೆಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿದ್ದರೆ ಕಂಡಿತ ಒಳ್ಳೆಯದಾಗುತ್ತದೆ ಶುಭಮಸ್ತು ತೊಂದರೆ ಇಲ್ಲ.

 

ವೃಷಭ– ಸ್ವಲ್ಪ ಭಾನುವಾರ, ಸೋಮವಾರದ ರೀತಿ ಇರುತ್ತದೆ ತಳಮಳದ ದಿನ. ಸೋಮವಾರದ ಕಮಿಟ್ಮೆಂಟ್ಸ್, ಜವಾಬ್ದಾರಿ ಈ ವಿಚಾರಗಳಲ್ಲಿ ತೊಳಲಾಟ ಅನುಭವಿಸುತ್ತೀರಿ ಗಾಬರಿಯಾಗಬೇಡಿ. ಏನು ಆಗಬೇಕೋ ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ! ಹೆದರಬೇಡಿ ಧೈರ್ಯದಿಂದ ಮುನ್ನುಗ್ಗಿ ಶುಭವಾಗಲಿದೆ.

 

ಮಿಥುನ– ಆರಂಭ ಸ್ವಲ್ಪ ಒತ್ತಡ ಇದ್ದರೂ ದಿನದಂತ್ಯಕ್ಕೆ ಶುಭವಾರ್ತೆ, ಶುಭ ಸುದ್ದಿಯನ್ನು ಕೇಳುತ್ತೀರಿ. ಭಾನುವಾರ ಆಗಿರುವ ಪರಿಣಾಮ ಸ್ನೇಹಿತರೊಡನೆ, ಮಿತ್ರ ಕುಟುಂಬದವರೊಡನೆ, ಆತ್ಮೀಯರೊಡನೆ ಭೋಜನಕೂಟ, ಮಾತಿನ ಕೂಟ ಪಡೆಯುತ್ತೀರಿ.

 

ಕಟಕ– ದಿನದ ಆರಂಭ ಸ್ವಲ್ಪ ಹುಳಿಯೇ! ಏನೋ ಆರೋಗ್ಯದಲ್ಲಿ ಏರುಪೇರು, ನಾವು ಯಾವುದಕ್ಕೆ ಹತ್ತಿರ ಇದ್ಧೆವೂ ಅದೇ ನಮಗೆ ಹೆಚ್ಚಾಗಿ ಬಾಧಿಸುತದೆ. ಹಾಗಾಗಿ ಯೋಚಿಸಬೇಡಿ ಮುಂದೆ ಹೆಜ್ಜೆ ಹಾಕಿ ಶುಭವಾಗಲಿದೆ. ಪುಟ್ಟದಾಗಿ ವಿಷ್ಣು ಸಹಸ್ರನಾಮ ಕೇಳಿ ಒಳ್ಳೆಯದಾಗುತ್ತದೆ.

 

ಸಿಂಹ– ಸ್ವಲ್ಪ ಕುಟುಂಬದ್ದು, ಮನೆಯದ್ದು, ಹಿರಿಯರದ್ದು ಆರೋಗ್ಯ ಜವಾಬ್ದಾರಿ ಖರ್ಚು ಇರಲಿದೆ. ಸಂಕ್ರಾಂತಿ ಹಬ್ಬ ಹತ್ತಿರ ಬರುತ್ತಿದೆ ಖರ್ಚು ವೆಚ್ಚಗಳು ಹೆಚ್ಚಾಗಲಿದೆ. ಸಂತೋಷಕ್ಕೆ ಖರ್ಚು ಮಾಡಿ ಒಳ್ಳೆಯದಾಗಲಿದೆ.

 

ಕನ್ಯಾ– ಪರಿಶ್ರಮಕ್ಕೆ ತಕ್ಕಂತ ಫಲ ಒಳ್ಳೆಯ ವಿಸ್ಮಯಕಾರಿ ಫಲ ದೊರೆಯಲಿದೆ. ಅಂತ ಒಂದು ಶಕ್ತಿ ನಿಮ್ಮಲ್ಲಿದೆ ಚೆನ್ನಾಗಿದೆ.

 

ತುಲಾ– ಎಣ್ಣೆ, ಹಾಲು, ತುಪ್ಪ, ಮೊಸರು, ಮಜ್ಜಿಗೆ ,ಪೆಟ್ರೋಲ್, ಲಿಕ್ಕರ್, ಗ್ಯಾಸ್, ತುಂಬಾ ದೊಡ್ಡ ದೊಡ್ಡ ವ್ಯವಸ್ಥೆ ಲಾಯರ್, ಜಡ್ಜ್ ಇಂಥ ಒಂದು ಕೆಲಸದಲ್ಲಿ ಇರುವವರಿಗೆ ಒಳ್ಳೆಯ ದಿನವಾಗಿರಲಿದೆ.

 

ವೃಶ್ಚಿಕ– ವೃತ್ತಿಪರವಾಗಿ, ವ್ಯವಹಾರ ಪರವಾಗಿ, ಹಣಕಾಸಿನ ಪರವಾಗಿ ಸ್ವಲ್ಪ ನೆಮ್ಮದಿಯ ದಿನವಾಗಿರಲಿದೆ ಆದರೆ ಸ್ವಲ್ಪ ಓಡಾಟ ಖರ್ಚಿನ ದಿನ.

 

ಧನಸ್ಸು– ಯಾವುದೊ ಹುಳಿ ಪ್ರಭಾವ! ಆರದ ಗಾಯ, ಮುಗಿಯದ ಗಾಯ, ಕೆದಕಿ ನಿಮ್ಮನ್ನು ಕಾಡುವಂಥ ಒಂದು ಸನ್ನಿವೇಶಗಳು ಇಂದು ಹುಡುಕಿಕೊಂಡು ಬರುತ್ತವೆ. ನಡೆಯುವ ಹಾದಿಯಲ್ಲಿ ಇವೆಲ್ಲ ಇದ್ದದ್ದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಹೆಜ್ಜೆ ಇಡಿ ಶುಭವಾಗಲಿದೆ.

 

ಮಕರ– ಯಾವ ರೀತಿಯ ತೊಂದರೆ ಇಲ್ಲ. ಆದರೆ ಸ್ವಲ್ಪ ಗಾಬರಿಯಾಗುತಿರಿ. ಮುಂದೇನು? ಜವಾಬ್ದಾರಿ, ಪಾರ್ಟ್ನರ್ಶಿಪ್ ,ಹಣ ವಿಚಾರ, ದೂರದ ಕೆಲಸ, ದೂರದ ವಿಚಾರವಾಗಿ ತಲೆ ಕೆಡಿಸಿಕೊಳ್ಳುತ್ತೀರಿ ಅದರ ಪಾಡಿಗೆ ಅದು ಆಗುತ್ತದೆ ಯೋಚಿಸಬೇಡಿ.

 

ಕುಂಭ– ಪ್ರಕೃತಿಯ ಹೊರೆ, ಕುಟುಂಬದ ಹೊರೆ, ಏನೋ ಒಂದು ಬಾಧೆ ಬಾಧಿಸುತ್ತಿದೆ. ಯಾವುದೋ ಹಳೆಯ ವಿಚಾರ, ತಂದೆ ಕಡೆಯಿಂದ, ಮನೆಯ ಕಡೆಯಿಂದ, ಹಣಕಾಸಿನ ವಿಚಾರದಲ್ಲಿ ಹುಳಿ ಪ್ರಭಾವವಾಗಿ ಕಾಡುತ್ತದೆ. ಭಾನುವಾರ ಖುಷಿಯ ದಿನ ಶುಭವಾಗಲಿದೆ.

 

 

ಮೀನ– ತುಂಬಾ ವರ್ಷಗಳಿಂದ ಶ್ರಮ ಪಟ್ಟಿದ್ದಿರ, ಆದರೆ ನೀವಂದುಕೊಂಡ ಸಾಧನೆಯನ್ನು ಮಾಡಲು ಇಂದಿಗೂ ಕೂಡ ಆಗಿಲ್ಲ. ಅದರ ಒಂದು ನೋವು ನಿಮ್ಮಲ್ಲಿ ಕಾಡುತ್ತಿದೆ. ಈ ಸಂಕ್ರಾಂತಿ ಆದ ನಂತರ ನಿಮಗೆ ಶುಭ ಸುದ್ದಿಯ ಬೆಲ್ಲ ದೊರೆಯುತ್ತದೆ. ಸಾಧನೆಯ ಹಾದಿಯನ್ನು ನಿಮ್ಮ ಶ್ರಮಕ್ಕೆ ತಕ್ಕ ಫಲ ದೊರೆಯುತ್ತದೆ ಶುಭೋದಯ.

LEAVE A REPLY

Please enter your comment!
Please enter your name here