ದಿನ ಭವಿಷ್ಯ 12 ಡಿಸೆಂಬರ್ 2019.!

0
308

ಡಿಸೆಂಬರ್ ಮಾಸದಲ್ಲಿ ಹುಟ್ಟಿದ ವ್ಯಕ್ತಿಗಳ ವಿಶೇಷತೆಗಳ ಬಗ್ಗೆ ರವಿಶಂಕರ್ ಗುರೂಜಿಯವರು ಇಂದಿನ ಸಂಚಿಕೆಯಲ್ಲೂ ತಿಳಿಸಿಕೊಟ್ಟಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಹುಟ್ಟಿದವರು ನಿಮಗೆ ನೀವೇ ಶಾಪ. ಯಾರಾದರೂ ನಿಮಗೆ ಬೆರಳು ಮಾಡಿ ನೀವು ಕೆಟ್ಟವರು ತಪ್ಪು ಮಾಡಿದ್ದೀರಾ ಎಂದು ಬೆರಳು ಮಾಡಿ ತೋರಿಸಿದರೆ, ನೀವು ಸಪ್ಪೆ ಮುಖ ಹಾಕಿಕೊಂಡು ತಟಸ್ಥರಾಗುತ್ತೀರಿ. ನಿಮಗೆ ನಿಮ್ಮ ಸ್ನೇಹಿತರು, ಹಿತೈಷಿಗಳು ಯಾರಾದರೂ ನಿಮ್ಮನ್ನು ಬೆಂಬಲಿಸಿ ಉತ್ತೇಜಿಸಿ ನಿಮ್ಮ  ತಾಕತ್ತಿನ ಬಗ್ಗೆ ಅರಿವು ಮೂಡಿಸಿದರೆ ನೀವು ಸಾಧನೆಯ ಹಾದಿಯನ್ನು ಹಿಡಿಯುತ್ತೀರಿ.

ನಿಮ್ಮ ಗೆಲುವಿನ ಬಗ್ಗೆ ನಿಮಗೆ ಒಂದು ರೀತಿ ಭಯ, ಭ್ರಮೆ ಕಾಡುತ್ತಿರುತ್ತದೆ. ಇದು ನಿಜವಾ ನನಗೆ ಹೀಗೇ ಆಗುತ್ತಿದೆಯಾ ಎಂದು ಯೋಚಿಸುವವರ ಸಂಖ್ಯೆ ಡಿಸೆಂಬರ್ ಮಾಸದಲ್ಲಿ ಹುಟ್ಟಿರುವ ವ್ಯಕ್ತಿಗಳಲ್ಲಿ ಹೆಚ್ಚಾಗಿರುತ್ತದೆ. ಡಿಸೆಂಬರ್ ನಲ್ಲಿ ಹುಟ್ಟಿದ ವ್ಯಕ್ತಿಗಳು ನಿಮ್ಮಲ್ಲಿ ಆ ಒಂದು ತಾಕತ್ತು, ವರ್ಚಸ್ಸು ಇದೆ ಬಳಸಿಕೊಳ್ಳಬೇಕು. ಸಾಮಾನ್ಯ ಕಂಡಕ್ಟರ್ಕೆ ಕೆಲಸ ಆರಂಭಿಸಿದವರು ಇಂದು ಸೂಪರ್ ಸ್ಟಾರ್ ಆಗಿ ಮಿಂಚಿದ್ದಾರೆ. ಅವರು ಕೂಡ ಡಿಸೆಂಬರ್ ಮಾಸದಲ್ಲೇ ಹುಟ್ಟಿದವರು. ತನ್ನ ಸಾಧನೆಯ ಬಗ್ಗೆ ಯಾವ ಮುಂದಾಲೋಚನೆ ಇಲ್ಲದೆ ಆತ್ಮೀಯರ ಮಾತು, ಬೆಂಬಲದಿಂದ ಪ್ರೇರಣೆ ಪಡೆದು ತಮ್ಮ ಸಾಧನೆಯ ಛಲವನ್ನು ಹಿಡಿದು ಇಂದು ಸೂಪರ್ ಸ್ಟಾರ್ ಆಗಿ ಬೆಳೆದು ನಿಂತಿದ್ದಾರೆ. ಅವರೇ ಸೂಪರ್ ಸ್ಟಾರ್ ರಜನಿಕಾಂತ್.

ಹೌದು, ರಜನಿಕಾಂತ್ ಅವರು ಕೂಡ ಡಿಸೆಂಬರ್ ಮಾಸದಲ್ಲಿ ಹುಟ್ಟಿದವರು ಹಾಗೂ ಅವರ ಸ್ನೇಹಿತರಾಗಿ ನಿಂತು ಸಾಥ್ ನೀಡಿದ್ದು ಕೆ.ಬಾಲಚಂದ್ರ ಅವರು. ನಿಮಗೂ ಇದೇ ರೀತಿ ಕೈ ಹಿಡಿದುಕೊಂಡು ನಡೆಸುವ ಸ್ನೇಹಿತರು ಸಿಗಬೇಕು. ಡಿಸೆಂಬರ್ ಮಾಸದಲ್ಲಿ ಹುಟ್ಟಿರುವವರ ವಿಶೇಷತೆ ಮತ್ತಷ್ಟಿದೆ, ಮುಂದಿನ ಸಂಚಿಕೆಯಲ್ಲಿ ರವಿಶಂಕರ್ ಗುರೂಜಿಯವರು ತಿಳಿಸಿಕೊಡಲಿದ್ದಾರೆ.

ಇಂದಿನ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ,

ಮೇಷ– ಭೂಮಿ, ಮನೆಗೆ ಸಂಬಂಧಿಸಿದ ಯೋಜನೆ, ಆರ್ಕಿಟೆಕ್ಟ್, ಇಂಜಿನಿಯರ್ಸ್, ಮಷಿನರಿ ದೊಡ್ಡ ಕನ್ಸ್ಟ್ರಕ್ಷನ್ ಲೈನ್ ನಲ್ಲಿ ಕೆಲಸ ಮಾಡುತ್ತಿದ್ದರೆ ಅಭಿವೃದ್ಧಿಯ ದಿನ.

 

ವೃಷಭ- ಕುಜ-ರಾಹು ಸಂಧಿ ನಿಮಗಿದೆ. ಏನಾದರೂ ಪೆಟ್ಟು, ಗಾಯ, ಇನ್ಫೆಕ್ಷನ್ ,ಇಂಜುರಿ ಜಾಗರೂಕತೆ. ನರಸಿಂಹರ ಆಲಯಕ್ಕೆ ಹೋಗಿ ದೀಪ ಹಚ್ಚಿ ಬನ್ನಿ ಒಳ್ಳೆಯದಾಗಲಿದೆ.

 

ಮಿಥುನ- ನಿಮ್ಮವರೇ ನಿಮ್ಮ ಬೆನ್ನಿಗೆ ಚೂರಿ ಹಾಕಿದ್ದಾರೆ. ಸೋದರ, ಸ್ನೇಹಿತರು, ಪರಮಾಪ್ತರು ನಿಮಗೆ ಉಲ್ಟಾ ಹೊಡೆಯಲಿದ್ದಾರೆ. ಅದರ ಪ್ರಭಾವ ನೋಡುತ್ತಿದ್ದೀರಿ ಅದು ಉಲ್ಬಣಿಸಲಿದೆ ಜಾಗರೂಕತೆ. ನರಸಿಂಹರ ಜಪ ಮಾಡಿಕೊಳ್ಳಿ ಒಳ್ಳೆಯದಾಗಲಿದೆ.

 

ಕಟಕ- ಇಂದು ಎಂಥ ನದಿಯನ್ನಾದರೂ ಈಜುವಿರಿ. ಈಜಿ ಒಳ್ಳೆಯದೇ. ಕೈ ಸಾಲ ಯೋಜನೆಯಲ್ಲಿ ಯಶಸ್ಸು ಉಂಟು, ಪ್ರಯತ್ನ ಮಾಡಿ ಆಸ್ತಿ ಜಾಗ ಯಾವುದೋ ಒಂದು ಪ್ರಯೋಗವಿದೆ.

 

ಸಿಂಹ- ಉದ್ಯೋಗದಲ್ಲಿ ಪ್ರಗತಿ, ಆಡಳಿತ ವಿಭಾಗದಲ್ಲಿ ಪ್ರಗತಿ, ರಕ್ಷಣಾ ಇಲಾಖೆ, ಪೋಲೀಸ್ ಇಲಾಖೆ, ಬೆಂಕಿ, ಕನ್ಸ್ಟ್ರಕ್ಷನ್, ಇಂಜಿನಿಯರ್ ಆಗಿದ್ದರೆ ಚೆನ್ನಾಗಿದೆ ಶುಭವಾಗಲಿ.

 

ಕನ್ಯಾ– ಗಂಡ, ಹೆಂಡತಿ ವಿಚಾರದಲ್ಲಿ ಸಣ್ಣ ಎಳೆದಾಟ ಉಂಟು ಜಾಗರೂಕತೆ. ಸಂಸಾರ ಎಂಬ ನೌಕೆಯಲ್ಲಿ ಇದ್ದದ್ದೇ ಎದುರಿಸಿ ಕನ್ಯಾರಾಶಿ ಕೆಂಡದ ರಾಶಿ ಎನ್ನುತ್ತಾರೆ ಜಾಗರೂಕತೆ.

 

ತುಲಾ- ಇಂದು ಬೆಲ್ಲದ ದೀಪ ಹಚ್ಚಲೇಬೇಕು ಇವತ್ತು. ಸಿಹಿ ಪೊಂಗಲ್ ಹಂಚ್ಚಲೇಬೇಕು. ಕಹಿ,ಒಗರು, ಜಗಳ ಇಲ್ಲಸಲ್ಲದ ವಿಚಾರಗಳು, ಕೋರ್ಟ್ ಯಾವುದೋ ಒಂದು ಕೆದಕುವ ವಿಚಾರ ಉಂಟು. ವಿಷ್ಣು ಸಹಸ್ರನಾಮ ಪಠಿಸಿ ಒಳ್ಳೆಯದಾಗಲಿದೆ.

 

ವೃಶ್ಚಿಕ -ಎಂಥ ಯುದ್ಧವಾದರೂ ಗೆಲ್ಲುವ ದಿನ. ಗುರುವಿನ ಸಾಕ್ಷಾತ್ಕಾರ ನಿಮ್ಮ ಮೇಲೆ ಇದೆ ಬಂದಿರುವ ಹಣ, ಮನೆಗೋಸ್ಕರ, ಭೂಮಿಗೆ ಖರ್ಚು ಆಗಲಿದೆ ಒಳ್ಳೆಯದಾಗಲಿ.

 

ಧನಸ್ಸು- ಗೆಲುವು ನಿಮ್ಮದೆ. ಯಾವ ಕಾರ್ಯವಾದರೂ ರಾಜಕಾರ್ಯ, ರಾಜಕಾರಣಿಯಾಗಿದ್ದರೆ, ಜಡ್ಜ್, ಡಿಫೆನ್ಸ್, ಪೊಲೀಸ್ ಆಗಿದ್ದರೆ ವಿಶೇಷ ಸನ್ಮಾನ, ಗೌರವ ಪಡೆಯುತ್ತೀರಿ ಶುಭವಾಗಲಿದೆ.

 

ಮಕರ- ನಿಮಗೂ ಕುಜನಿಗೂ ಆಗುವುದಿಲ್ಲ. ಭೂಮಿ, ಮನೆ, ಸೋದರನ ಜೊತೆ, ಸೋದರಿಯ ಜೊತೆ ಕಲಹ, ಜಗಳ ,ಮನಸ್ತಾಪ ಇರಲಿದೆ ಸ್ವಲ್ಪ ಶಾಂತಚಿತ್ತರಾಗಿ ಜಾಗರೂಕತೆ.

 

ಕುಂಭ– ಇಂದು ನಿಮ್ಮ ದಿನ ಚೆನ್ನಾಗಿದೆ. ಭೂಮಿಯ ವಿಚಾರದಲ್ಲಿ ಒಂದು ಪ್ರಗತಿ, ಸಾಲ ಮಾಡಿಯಾದರೂ ಒಂದು ಕಮಿಟ್ಮೆಂಟ್ ಮಾಡಿಕೊಳ್ಳುತ್ತೀರಿ. ಕೂಡಿ ಬರುವಂತ ಸುಯೋಗ ಉಂಟು ಚೆನ್ನಾಗಿದೆ ಶುಭವಾಗಲಿ.

 

ಮೀನ– ಎಂಥ ಕೆಲಸವನ್ನಾದರೂ ಕೂಡ ಸಾಧಿಸಿಕೊಳ್ಳುವ ಶಕ್ತಿ, ತಾಕತ್ತು ನಿಮ್ಮಲ್ಲಿದೆ. ಪ್ರಗತಿಯನ್ನು ನೋಡಕ್ಕಂತ ದಿನ ಗೆಲುವನ್ನು ನೋಡ್ತೀರಿ ಒಳ್ಳೆಯದಾಗಲಿದೆ.

LEAVE A REPLY

Please enter your comment!
Please enter your name here