ದಿನ ಭವಿಷ್ಯ 16 ಸೆಪ್ಟೆಂಬರ್ 2019

0
574

ಸೋಮವಾರ ಹುಟ್ಟಿದ ವ್ಯಕ್ತಿಗಳ ವಿಶೇಷತೆಗಳ ಬಗ್ಗೆ ಶ್ರೀ ರವಿಶಂಕರ್ ಗುರೂಜಿಯವರು ಇಂದಿನ ಸಂಚಿಕೆಯಲ್ಲಿ ತಿಳಿಸಿಕೊಟ್ಟಿದ್ದಾರೆ. ಸೋಮವಾರ ಹುಟ್ಟಿದ ವ್ಯಕ್ತಿಗಳ ತಾಕತ್ತು, ಅವರ ವಿದ್ವತ್ತು, ಜ್ಞಾನದ ಬಗ್ಗೆ ಹೇಳುವುದಾದರೆ ಅದ್ಭುತ. ನಿಮಗೆ ಯೋಗ ಇಲ್ಲ ಅಂದರೂ, ಯೋಗ್ಯತೆ ಇಲ್ಲ ಅಂದರೂ, ಯಾರೇ ಏನೇ ಅಂದರೂ ನಿಮಗೆ ಮಾತ್ರ ನಿಮ್ಮ ಬದುಕಿನಲ್ಲಿ ಒಂದು ಬಿರುಗಾಳಿ ಇದ್ದೇ ಇರುತ್ತದೆ. ನಿಮಗೆ ಎಷ್ಟೇ ನೋವಿದ್ದರೂ ನಿಮ್ಮ ಮನಸ್ಸಿನಲ್ಲಿಯೇ ಇಟ್ಟುಕೊಂಡು ಕೊರಗುತ್ತೀರಿ. ನಿಮ್ಮ ಮನಸ್ಸಿನ ಆಸೆ, ಆಕಾಂಕ್ಷೆಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಅದಕ್ಕೆ ಬೀಗ ಹಾಕಿ ಸುಮ್ಮನೆ ನೋಡುತ್ತಿರುತ್ತೀರಿ ಆ ರೀತಿಯ ಪ್ರಭಾವ ನಿಮ್ಮ ಮೇಲಿರುತ್ತದೆ. ನಿಮ್ಮ ದಿನದ ಪ್ರಕಾರ ಕೈಗೆ ಬಂದದ್ದು ಬಾಯಿಗೆ ಬರದ ಪರಿಸ್ಥಿತಿ. ಹೌದು, ಯಾರದೋ ಸೂತ್ರದಂತೆ ನೀವು ಆಟವಾಡಬೇಕಾಗುತ್ತದೆ. ಸೋಮವಾರ ಹುಟ್ಟಿದ ವ್ಯಕ್ತಿಗಳು ನೋವನ್ನು ಎದೆಯಲ್ಲಿ ಇಟ್ಟುಕೊಂಡು, ಹೆಚ್ಚು ಮಾತನಾಡುವುದಿಲ್ಲ. ಇನ್ನೊಬ್ಬರ ನೋವಿಗೆ ಬೇಗ ಮರಗುತ್ತೀರಿ, ಆಸರೆಯಾಗುತ್ತೀರ ಆ ಒಂದು ಸ್ವಭಾವ ನಿಮ್ಮದು. ಸೋಮವಾರ ಹುಟ್ಟಿದ ವ್ಯಕ್ತಿಗಳ ತಾಕತ್ತಿನ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಮುಂದಿನ ಸಂಚಿಕೆಯಲ್ಲಿ ತಿಳಿಸಿಕೊಡಲಿದ್ದಾರೆ.

ಇಂದಿನ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ,

ಮೇಷ– ಇಂದು ನಿಮ್ಮ ದಿನದಾರಂಭ ಸ್ವಲ್ಪ ಗಲಿಬಿಲಿ ಆದರೂ ನಿಭಾಯಿಸಿಕೊಂಡು ಹೋಗುತ್ತೀರಿ. ಮಧ್ಯಾಹ್ನದ ನಂತರ ವಿಶೇಷ ಪ್ರಗತಿ ಒಂದು ರೀತಿಯ ಧೈರ್ಯ ,ಉತ್ಸಾಹ, ಸರ್ಕಾರಿ ಮಟ್ಟದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವವರಿಗೆ ಒಳ್ಳೆ ಅನುಕೂಲ ನೋಡುವಂಥ ದಿನ ಚೆನ್ನಾಗಿದೆ ಶುಭವಾಗಲಿ.

ವೃಷಭ– ಇಂದು ನಿಮ್ಮ ದಿನ ಪರವಾಗಿಲ್ಲ. ಸ್ವಲ್ಪ ದೊಡ್ಡ ಅಧಿಕಾರಿಗಳಾಗಿದ್ದೀರ, ಅಧಿಕಾರಿ ವರ್ಗದಲ್ಲಿ ಇದ್ದರೆ, ಸಣ್ಣ ದಾರಿಯಲ್ಲಿ ದುಡ್ಡು ಮಾಡಿದ್ದರೆ ಅದು ನಿಮ್ಮ ಕುತ್ತಿಗೆಗೆ ಬರಲಿದೆ ಎಚ್ಚರಿಕೆ.! ಸರ್ಕಾರಿ ವರ್ಗದಲ್ಲಿ ಇದ್ದರಂತೂ ಬಹಳ ಎಚ್ಚರಿಕೆಯಿಂದ ಇರಬೇಕು ಜಾಗೃತೆ ವಹಿಸಿ ಒಳ್ಳೆಯದಾಗಲಿ.

ಮಿಥುನ– ಇಂದು ನಿಮ್ಮ ದಿನ ಪರವಾಗಿಲ್ಲ. ಒಂದು ರೀತಿ ಯೋಗಿ ಪಡೆದದ್ದು ಯೋಗಿಗೆ, ಜೋಗಿ ಪಡೆದದ್ದು ಜೋಗಿಗೆ. ಆ ರೀತಿಯ ಒಂದು ಪ್ರಭಾವ ನೋಡುತ್ತೀರಿ. ನೀವೇನು ಕಷ್ಟ ಪಡುತ್ತಿದ್ದೀರಿ, ಬುದ್ಧಿ ಉಪಯೋಗಿಸಿ ಮಾಡತಕ್ಕಂತಹ, ಮಾತಿಗೆ ಸಂಬಂಧಿಸಿದ ಉದ್ಯೋಗ, ವ್ಯವಹಾರದಲ್ಲಿ, ಅದ್ಭುತ ಪ್ರಗತಿ. ಅದರಲ್ಲೂ ಕೃಷಿಕರಿಗೆ ಹಾಲು, ಬೆಣ್ಣೆ, ತುಪ್ಪ, ಮಜ್ಜಿಗೆ, ಹಣ್ಣುಗಳ ಬೆಳೆ, ಕಬ್ಬು, ಹಣ್ಣುಗಳ ಬೆಳೆ ಮಾಡುತ್ತಿರುವವರಿಗೆ ಒಳ್ಳೆಯ ಲಾಭವನ್ನು ನೋಡುವಂಥ ದಿನ ಚೆನ್ನಾಗಿದೆ ಶುಭವಾಗಲಿ.

ಕಟಕ– ಒಂದು ಸಣ್ಣ ಸಣ್ಣ ವಿಚಾರಗಳನ್ನು ದೊಡ್ಡ ಮಟ್ಟದಲ್ಲಿ ತೆಗೆದುಕೊಳ್ಳುತ್ತೀರಿ. ಆತುರ, ದುಡುಕು ಸ್ವಭಾವ ಒಳ್ಳೆಯದಲ್ಲ ಆದಷ್ಟು ಪ್ರಾಣಾಯಾಮ ಮಾಡುವುದನ್ನು ರೂಢಿಸಿಕೊಳ್ಳಿ ಒಳ್ಳೆಯದು.

ಸಿಂಹ– ಇಂದು ಯಾವುದೋ ಒಂದು ವಸ್ತುವನ್ನು ಎಲ್ಲೋ ಬಿಟ್ಟು ಮರೆತು ಹೋಗಿ ಎಡವಟ್ಟು ಮಾಡಿಕೊಳ್ಳುತ್ತೀರಿ. ಕಷ್ಟಪಟ್ಟು ಮಾಡಿದ್ದನ್ನು ಇನ್ನೊಬ್ಬರಿಗೆ, ಇನ್ನೊಬ್ಬರ ಪಾಲಿಗೆ ಬಿಟ್ಟುಕೊಡುತ್ತೀರ ಅಂತಾ ಒಂದು ಸಂದರ್ಭ ಎದುರಾಗಲಿದೆ ಜಾಗೃತ.

ಕನ್ಯಾ– ಕಾಸಿಗೆ ತಕ್ಕಂತೆ ಕಜ್ಜಾಯ. ನೀವು ಎಷ್ಟು ಕಷ್ಟ ಪಡುತ್ತೀರಿ, ಎಷ್ಟು ಓದುತ್ತೀರಿ, ಎಷ್ಟು ಸಾಧನೆ ಮಾಡುತ್ತೀರಿ ಅಷ್ಟು ನಿಮಗೆ ಫಲಶ್ರುತಿ. ಒಂದು ರೀತಿಯ ಶೃಂಗಾರ ಭಾವ, ಅಲಂಕಾರಿಕ ಭಾವ ಎಲ್ಲವೂ ಬದಲಾಗುತ್ತದೆ. ತುಂಬಾ ಖುಷಿಯಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತೀರಿ ಶುಭವಾಗಲಿ.

ತುಲಾ– ಕೆಲಸ, ಕಾರ್ಯ, ಕುಟುಂಬ, ಅಪ್ಪ, ಅಮ್ಮ, ಹಿರಿಯರ ವಿಚಾರದಲ್ಲಿ ಏನೋ ಒಂದು ತಳಮಳ ಉಂಟಾಗಲಿದೆ. ಉದ್ಯೋಗದಲ್ಲಿ ತಳಮಳ, ಸ್ಥಾನ ಬದಲಾವಣೆ ಇಂಥ ಪರಿಸ್ಥಿತಿಗಳು ಎದುರಾಗಲಿದೆ ಆದರೂ ನಿಭಾಯಿಸಿಕೊಂಡು ಹೋಗುತ್ತೀರಿ. ಶಿವಾಲಯಕ್ಕೆ ಭೇಟಿ ನೀಡಿ ಶಿವನ ಸ್ಮರಣೆ ಮಾಡಿಕೊಳ್ಳಿ ಒಳ್ಳೆಯದಾಗಲಿದೆ.

ವೃಶ್ಚಿಕ– ಭೂಮಿ,ಮನೆ, ವಾಣಿಜ್ಯ, ವ್ಯಾಪಾರ,ವ್ಯವಹಾರ, ಸ್ವಂತ ಉದ್ಯೋಗ ,ಸರ್ಕಾರಿ ವ್ಯವಹಾರ ,ಅಧಿಕಾರಿ ವರ್ಗದಲ್ಲಿ ಇದ್ದರೆ ಮಧ್ಯಾಹ್ನದ ನಂತರ ಅದ್ಭುತ ಲಾಭವನ್ನು ನೋಡುತ್ತೀರಿ ಶುಭವಾಗಲಿದೆ.

ಧನಸ್ಸು– ನಿಮ್ಮ ಜೊತೆಯಲ್ಲಿ ಇರುವವರಿಗೆ ಹೆಚ್ಚು ಲಾಭ.! ನಿಮ್ಮ ಸಹೋದ್ಯೋಗಿಗಳಿಗೆ ಲಾಭ ದೊರೆಯಲಿದೆ. ನಿಮ್ಮ ಮಾತಿಗೆ ಇಂದು ಚಲಾವಣೆ ಸಿಗುವುದಿಲ್ಲ. ಬೇರೆಯವರ ಮಾತಿನಿಂದ ನಿಮ್ಮ ಮನಸ್ಸಿಗೆ ಒಂದು ಗಲಿಬಿಲಿ ಉಂಟಾಗಲಿದೆ. ಆದರೆ ಇಂದು ದುರ್ಗಾದೇವಿಗೆ ಒಂದು ನಮಸ್ಕರಿಸಿ ಹೋಗಿ ಒಳ್ಳೆಯದಾಗಲಿದೆ.

ಮಕರ– ಕಲಾವಿದರು ಆಗಿದ್ದರೆ ಅದ್ಭುತ ಪ್ರಗತಿ ಕಾಣುವಂತ ದಿನ. ಸ್ತ್ರೀ ಉದ್ಯೋಗಿಗಳಿಂದ ಸಹಕಾರ, ಸ್ತ್ರೀಗೆ ಸಂಬಂಧಿಸಿದ ವ್ಯಾಪಾರ ವಹಿವಾಟುಗಳಲ್ಲಿ, ಹಣಕಾಸು ಲೆಕ್ಕಾಚಾರದಲ್ಲಿ ಅಭಿವೃದ್ಧಿ ಲಭಿಸಲಿದೆ ಯೋಚಿಸಬೇಡಿ ಶುಭವಾಗಲಿದೆ.

ಕುಂಭ -ಆರೋಗ್ಯದಲ್ಲಿ ಸ್ವಲ್ಪ ತೊಂದರೆ ಕಾಡಲಿದೆ. ಯಾಕೋ ಒತ್ತಡ, ಮೆಮೊರಿ ಸಮಸ್ಯೆ ಗಡಿಬಿಡಿಯಿಂದ ನಿಮ್ಮ ದಿನವನ್ನು ಶುರು ಮಾಡುತ್ತೀರಿ. ಇಂದು ಆದರೆ ಬಾಯಿಗೆ ಎರಡು ಬಿಲ್ವಪತ್ರೆಯನ್ನು ಹಾಕಿಕೊಳ್ಳಿ ಜೊತೆಗೆ ವಿಷ್ಣು ಸಹಸ್ರನಾಮವನ್ನು ಪಠಿಸಿ ಒಳ್ಳೆಯದಾಗಲಿದೆ.

ಮೀನ– ಇಂದು ಯಾವುದೋ ಒಂದು ಸಣ್ಣ ವಿಚಾರಕ್ಕೆ ಕೋಪಗೊಳ್ಳುತ್ತೀರ. ದ್ವೇಷ ಸಾಧಿಸುತ್ತೀರಿ, ಬೇಸರ ಪಡುತ್ತೀರಿ, ಗಾಬರಿ ಪಡುತ್ತೀರಿ, ಆರೋಗ್ಯ ಸಮಸ್ಯೆಯಲ್ಲಿ ಒದ್ದಾಡುತ್ತೀರಿ ಇಂಥ ಪರಿಸ್ಥಿತಿ ನೋಡುತ್ತೀರಿ. ಇವತ್ತು ಎರಡು ಬಾರಿಯಾದರೂ ಅರ್ಧ ಗಂಟೆಗೆ ವಿಷ್ಣು ಸಹಸ್ರನಾಮವನ್ನು ಹೇಳುವುದು ಅಥವಾ ಬಾಲಾಜಿ ದೇವಾಲಯಕ್ಕೆ ತುಳಸಿಯನ್ನು ಅರ್ಪಿಸಿ ಒಳ್ಳೆಯದಾಗಲಿದೆ.

LEAVE A REPLY

Please enter your comment!
Please enter your name here