ಊಟವನ್ನು ಹೇಗೆ ಮಾಡಿದರೆ ತೊಂದರೆ ಎಂಬ ವಿಚಾರದ ಬಗ್ಗೆ ಶ್ರೀ ರವಿಶಂಕರ್ ಗುರೂಜಿ ಅವರು ಇಂದಿನ ಸಂಚಿಕೆಯಲ್ಲಿ ತಿಳಿಸಿಕೊಟ್ಟಿದ್ದಾರೆ. ಯಾರು ಊಟವನ್ನು ಬರೀ ಬೆರಳಿನಲ್ಲಿ ತೆಗೆದುಕೊಂಡು ತಿನ್ನುತ್ತೀರೋ ನಾಲ್ಕು ಬೆರಳು, ಎರಡು ಬೆರಳು ಇರಬಹುದು ಆ ರೀತಿಯಲ್ಲಿ ತಿನ್ನುವಂಥ ಪ್ರಸಂಗ ಇರುವವರಿಗೆ ನಿತ್ಯ ದಾರಿದ್ರ ಸಂಕಲ್ಪವು ತಪ್ಪುವುದಿಲ್ಲ. ಎಷ್ಟು ಹಣ ಬಂದರೂ ನಿಲ್ಲುವುದಿಲ್ಲ.!
ಅತಿ ಮುಖ್ಯವಾಗಿ ಮನೆಯಲ್ಲಿ ಒಗ್ಗಟ್ಟು ಒಡೆದು ಹೋಗುತ್ತದೆ, ಮನೆಯಲ್ಲಿ ನೆಮ್ಮದಿ ಇರುವುದಿಲ್ಲ ಖುಷಿ ಇರುವುದಿಲ್ಲ! ಶತ್ರುಗಳು ಹೆಚ್ಚಾಗುತ್ತಾರೆ ಮಿತ್ರರು ಕಡಿಮೆಯಾಗುತ್ತಾರೆ. ಲಕ್ಷ್ಮಿ ಕಡಿಮೆ ಫಲವನ್ನು ನೀಡುತ್ತಾಳೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಮನಸ್ಥಿತಿ ಕುಂಠಿತವಾಗುತ್ತದೆ. ವೈರಾಗ್ಯ ಭಾವ, ನಾನು ಎಂಬ ಅಹಂಕಾರ ಮೂಡುತ್ತದೆ. ಆ ರೀತಿ ತಿನ್ನುವುದರಿಂದ ಹೊಟ್ಟೆಯೂ ತೃಪ್ತಿಯಾಗುವುದಿಲ್ಲ, ಮನಸ್ಥಿತಿಯೂ ಸರಿಯಿರುವುದಿಲ್ಲ. ಇದನ್ನೆಲ್ಲ ಮೀರಿ ನಮ್ಮ ದೇಹದೊಳಗೆ ಇರುವ ಶಿವ ಕೂಡ ತೃಪ್ತನಾಗುವುದಿಲ್ಲ.
ಶಿವ ತೃಪ್ತನಾಗಿಲ್ಲ ಎಂದರೆ ನಿಮ್ಮ ಚಿಂತನ, ಮಂಥನ ತೃಪ್ತಿ ಆಗುವುದಿಲ್ಲ ಎಲ್ಲದಕ್ಕೂ ಪೆಟ್ಟೇ.! ಕೆಟ್ಟ ಚಿಂತನೆ, ಕೆಟ್ಟ ಆಲೋಚನೆ, ಇನ್ನೊಬ್ಬರನ್ನು ಕೆಟ್ಟದ್ದಾಗಿ ನೋಡುವುದು, ಜಾತಿ, ಮತ, ಧರ್ಮ ಎಂದು ದೂಡುವುದು ಆ ರೀತಿ ಉದ್ಭವವಾಗುತ್ತದೆ. ಹಿಂದೆ ಹಿರಿಯರು ಊಟ ಮಾಡುತ್ತಿದ್ದೆ ಒಂದು ಪದ್ಧತಿ ಒಂದು ಕಡೆ ಆದರೆ, ಈ ೫ ಬೆರಳುಗಳಲ್ಲಿ ಊಟ ತಿನ್ನಬಾರದು.! ಊಟವನ್ನು ಈ ಬೆರಳುಗಳಲ್ಲಿ ತಿನ್ನುವ ಪ್ರವೃತ್ತಿ ಇದ್ದರೆ ನಿಮ್ಮ ಹಮ್ಮು, ಬಿಮ್ಮು, ಅಹಂಕಾರವನ್ನು ಇನ್ನಷ್ಟು, ಮತ್ತಷ್ಟು ಹೆಚ್ಚು ಮಾಡುತ್ತದೆ. ಅಂದ, ಹೆಸರು, ಅಧಿಕಾರವನ್ನು ಕೆಡಿಸುತ್ತದೆ.
ಅಹಂಕಾರ ಇರುವವರು ಈ ಬೆರಳುಗಳಲ್ಲಿ ತಿನ್ನಬಾರದು ತುಂಬಾ ಅಹಂಕಾರ ಇದ್ದರೆ ದುರಹಂಕಾರ ಇರುವವರಿಗೆ ನಾನೇ ಎನ್ನುವವರಿಗೆ ಈ ಬೆರಳುಗಳಿಗೆ ಪೆಟ್ಟು ಬೀಳುವುದು. ಪಡೆದುಕೊಂಡಿರುವ ಗೌರವ, ಕೀರ್ತಿ, ಸನ್ಮಾನ ,ಹೆಸರು, ಪ್ರತಿಷ್ಠೆ ಮಣ್ಣು ಪಾಲಾಗಿ ಹೋಗುತ್ತದೆ. ಕೆಲ ಪೂಜಾರಿಗಳು ದೇವಸ್ಥಾನದಲ್ಲಿ ಪ್ರಸಾದವನ್ನು ನೀಡಬೇಕಾದರೆ ಅಥವಾ ದೇವರಿಗೆ ಅರ್ಚನೆ ಮಾಡಬೇಕಾದರೆ ತಮ್ಮ ಬೆರಳಿನಲ್ಲಿ ಬಹಳ ವಿಚಿತ್ರವಾಗಿ ಹಾಕುತ್ತಾರೆ ಪ್ರಸಾದ ನೀಡುತ್ತಾರೆ. ಬೆರಳಿನಲ್ಲಿ ಎಸೆಯುವ ರೀತಿ ಮಾಡುತ್ತಾರೆ. ಆ ರೀತಿ ಮಾಡಿದವರೂ ಶಾಪಗ್ರಸ್ತರಾಗುತ್ತಾರೆ. ಮತ್ತಷ್ಟು ಈ ಊಟದ ಪದ್ಧತಿ ಬಗ್ಗೆ ಇದೆ, ಯಾವ ಬೆರಳಿನಲ್ಲಿ ತಿಂದರೆ ಏನು ಫಲ? ಎಂಬುದನ್ನು ಮುಂದಿನ ಸಂಚಿಕೆಯಲ್ಲಿ ಗುರೂಜಿ ತಿಳಿಸಿಕೊಡಲಿದ್ದಾರೆ.
ಇಂದಿನ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ,
ಮೇಷ– ಗುರು ಸಾರದಲ್ಲಿ ಚಂದ್ರನಿದ್ದಾನೆ. ಇನ್ನೂ ವಿಶೇಷ ಆ ಶುಕ್ರ ಕುಜ ಸಾರದಲಿದ್ದು, ಶುಕ್ರನಿಂದ ಕುಜ ವಿಶೇಷವಾಗಿ ಕೇಂದ್ರದಲ್ಲಿರುವ ಕಾರಣ ಭೂಮಿ, ಮನೆ, ಹಣಕಾಸು, ಫ್ಲ್ಯಾಟ್ ಮೇಲೆ ಜಾಗ, ಡೆವಲೆಪ್ಮೆಂಟ್ ,ಲೋನ್ ಈ ತೆರೆದ ವಿಚಾರಗಳಲ್ಲಿ ಓಡಾಟ ಮಾಡುತ್ತಿರುವವರಿಗೆ ವಿಶೇಷವಾದ ಲಾಭ ದೊರೆಯಲಿದೆ ಶುಭವಾಗಲಿ.
ವೃಷಭ– ಇಂದು ನಿಮ್ಮ ದಿನ ಚೆನ್ನಾಗಿದೆ. ಪ್ರಗತಿ ದೊರೆಯುತ್ತದೆ ಆದರೆ ಪರಿಶ್ರಮದ ದಿನ. ಸಮಯದ ಹಿಂದೆ ನಿಂತುಕೊಳ್ಳಿ ವಿನಃ ಹಣದ ಹಿಂದೆ ನಿಂತು ಕೊಳ್ಳಬೇಡಿ. ದುಡ್ಡು ಎಲ್ಲವನ್ನೂ ಕೊಡಿಸಲು ಸಾಧ್ಯವಿಲ್ಲ.! ತಂದೆ, ತಾಯಿ, ಪ್ರೀತಿ ಇದ್ಯಾವುದನ್ನು ಹಣದಿಂದ ಕೊಂಡುಕೊಳ್ಳಲು ಸಾಧ್ಯವಿಲ್ಲ.!
ಮಿಥುನ– ಮಾಡುತ್ತಿರುವ ಕೆಲಸದಲ್ಲಿ ಏನೂ ಕಷ್ಟಪಟ್ಟಿದ್ದೀರಿ ಅದಕ್ಕೆ ಪೂರ್ಣವಾಗಿ ಫಲವನ್ನು, ಹೆಸರನ್ನು ಗೌರವವನ್ನು ಪಡೆಯುತ್ತೀರಿ. ಹೆಸರು, ಕೀರ್ತಿ, ಗೌರವ ತಾನಾಗಿ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ.
ಕಟಕ– ಆಹಾರ, ಕುಟುಂಬದ ಜವಾಬ್ದಾರಿಗಳಲ್ಲಿ ತೊಳಲಾಟ ಇದ್ದರೂ ನಿಭಾಯಿಸಿಕೊಂಡು ಹೋಗುತ್ತಿರಿ. ಸ್ವಲ್ಪ ಕೈ ಸಾಲ ಇದ್ದರೆ ಅದಲು ಬದಲಿನ ಚಿಂತೆಯೂ ಇರಲಿದೆ. ಸೊಂಟ ನೋವು, ಮೈ ಕೈ ನೋವು, ತಲೆ ನೋವು ಇದ್ದರೆ ಎಚ್ಚರಿಕೆ.
ಸಿಂಹ– ಚಂದ್ರ ಪರಿಪೂರ್ಣವಾಗಿ ನಿಮ್ಮನ್ನು ಗುರು ಸಾರದಲ್ಲಿ ನೋಡುತ್ತಿರುವುದರಿಂದ ಮಕ್ಕಳು, ಮನೆ, ಕುಟುಂಬ, ಹೆಸರಿನಲ್ಲಿ ವೃದ್ಧಿ! ಅವರ ಹೆಸರಿನಲ್ಲಿ ಮಾಡುತ್ತಿರುವಂತಹ ಶುಭ ಕಾರ್ಯಗಳಲ್ಲಿ ವೃದ್ಧಿ. ಅದರಲ್ಲೂ ಅಲಂಕಾರ ವ್ಯವಹಾರಗಳಲ್ಲಿ, ಕಲೆಕ್ಷನ್ ವ್ಯವಹಾರಗಳಲ್ಲಿ, ಇರುವಂತವರಿಗೆ ವಿಶೇಷ ಅಭಿವೃದ್ಧಿ.
ಕನ್ಯಾ– ಇವತ್ತು ಖುಷಿಯ ದಿನ.! ಆನಂದ, ಸುತ್ತಾಟ, ಓಡಾಟ, ಖರ್ಚು ವೆಚ್ಚ ಹೆಚ್ಚಾಗಲಿದೆ. ಲೆಕ್ಕಾಚಾರದ ಖರ್ಚು ಉಂಟಾಗಲಿದೆ.
ತುಲಾ– ಮಕ್ಕಳಿಗೋಸ್ಕರ, ಮನೆ ಅವರಿಗೋಸ್ಕರ, ಹಿರಿಯರಗೋಸ್ಕರ ಅವರ ಯೋಗಕ್ಷೇಮಕ್ಕಾಗಿ ಯಾವುದೋ ಇನ್ವೆಸ್ಟ್ಮೆಂಟ್ ಮಾಡಲು ಯೋಚಿಸುತ್ತಿದ್ದೀರಿ ಮಾಡಿ ಶುಭ ದೊರೆಯುವ ದಿನ. ಸ್ವಲ್ಪ ಭಯ ಪಡುತ್ತೀರಿ ಮುಂದೇನು? ಮುಂದೆ ಏನಾಗುತ್ತದೆ ಎಂದು? ಭಯಪಡುವ ಅವಶ್ಯಕತೆಯಿಲ್ಲ ಏನಾಗಬೇಕೋ ಅದು ಆಗಲಿದೆ.
ವೃಶ್ಚಿಕ– ಪೂರ್ಣ ಗುರುವಿನ ದೃಷ್ಟಿ. ವ್ಯವಹಾರ, ವ್ಯಾಪಾರ, ಉದ್ಯೋಗ ನಿಮಿತ್ತ, ಕುಟುಂಬ ನಿಮಿತ್ತ ನೆಮ್ಮದಿಯನ್ನು ಕಾಣ ತಕ್ಕಂತ ಒಂದು ದಿನ. ಯೋಚಿಸಬೇಡಿ ಬದುಕು ಕಟ್ಟಿಕೊಳ್ಳುವಂತ ಅದ್ಭುತ ದಿನ. ಮನೆಯಲ್ಲಿ ಆತ್ಮೀಯರ ಆಗಮನ, ಮನೆಯಲ್ಲಿ ವಿಶೇಷ ಭೋಜನ ಶುಭವಾಗಲಿದೆ.
ಧನಸ್ಸು– ಒಡಹುಟ್ಟಿದವರ ವಿಚಾರದಲ್ಲಿ ಒಂದು ಜವಾಬ್ದಾರಿ, ಮನೆಯಲ್ಲಿ ಸ್ತ್ರೀಯರ ಕಿರಿಕಿರಿ, ಮಾನಸಿಕವಾಗಿ ಸ್ವಲ್ಪ ಮನಸ್ಸಿಗೆ ತಲ್ಲಣವಾದರೂ ಗಾಬರಿ ಪಡುವಂಥದ್ದೇನಿಲ್ಲ.!
ಮಕರ– ತುಂಬ ದಿನಗಳ ನಂತರ, ಆತ್ಮೀಯರು ಅವರ ಭೇಟಿ! ತುಂಬ ದಿನಗಳ ಪರಿಶ್ರಮದ ಕೆಲಸಗಳಲ್ಲಿ ಒಂದು ಪ್ರಗತಿ ಯಾರೋ ಗುರುಗಳ ಸಹಾಯ ದೊರೆಯುತ್ತದೆ. ಯೋಚಿಸಬೇಡಿ ಆ ಒಂದು ಪ್ರಭಾವ ಇರಲಿದೆ ಶುಭವಾಗಲಿ.
ಕುಂಭ– ಅಲಂಕಾರಿಕ, ಜ್ಯೋತಿಷ್ಯ, ವಾಸ್ತು ಈ ರೀತಿಯ ವ್ಯವಹಾರ, ಮಾಡರ್ನ್ ಟೆಕ್ನಾಲಜಿ, ಆರ್ಕಿಟೆಕ್ ಇತರ ವ್ಯವಹಾರ, ಗೋಶಾಲೆ ,ಆಸ್ಪತ್ರೆ, ಟ್ರೀಟ್ಮೆಂಟ್ ಈ ರೀತಿಯ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿರುವವರಿಗೆ ವಿಶೇಷ ಪ್ರಗತಿ.
ಮೀನ– ಮನೆ, ಮಕ್ಕಳು, ಹಿರಿಯರು, ಓಡಾಟ, ಸುತ್ತಾಟ, ಖರ್ಚು, ವೆಚ್ಚಗಳ, ಭಾಧೆ, ಬಳಲಿಕೆ, ಆಯಾಸ ಉಂಟು. ಸ್ವಲ್ಪ ಖರ್ಚು ಮಾಡಲಿಕ್ಕೆ ಹಿಂದೇಟು ಹಾಕುತ್ತೀರಿ. ಆದ್ರೂ ಶನಿ ಪ್ರಭಾವ ಅಲ್ಲವೇ ಒಂದು ವಾರದ ನಂತರ ವಿಶೇಷ ಶುಭ ಸುದ್ದಿಯನ್ನು ಕೇಳುತ್ತೀರಿ. ಈ ವರ್ಷ ಭೂಮಿ, ಮನೆ, ಯಾವುದಾದರೂ ಒಂದು ದಕ್ಕಿಸಿಕೊಳ್ಳುವ ತಾಕತ್ತು ನಿಮಗೆ ದೊರೆಯಲಿದೆ ಶುಭವಾಗಲಿ.