ದಿನ ಭವಿಷ್ಯ 11 ಡಿಸೆಂಬರ್ 2019.!

0
358

ಡಿಸೆಂಬರ್ ಮಾಸದ ವ್ಯಕ್ತಿಗಳ ವಿಶೇಷತೆ ಬಗ್ಗೆ ಶ್ರೀ ರವಿಶಂಕರ್ ಗುರೂಜಿಯವರು ಇಂದಿನ ಸಂಚಿಕೆಯಲ್ಲಿ ತಿಳಿಸಿಕೊಟ್ಟಿದ್ದಾರೆ. ಹೌದು, ನೀವು ಫೇಲ್ಯೂರ್ ಪರ್ಸನ್, ತುಂಬಾ ಜನ ನಿಮ್ಮನ್ನು ಅಂದಿರುತ್ತಾರೆ. ಇವನಿಗೆ ಆ ಯೋಗ್ಯತೆ ಇಲ್ಲ, ಇವನಿಗೆ ಏನಕ್ರೀ ಕೊಡ್ತೀರಾ? ಇವನು ಏನನ್ನೂ ಮಾಡಲಾರಾ? ಅವನು ಕಾಲಿಟ್ಟಿದ್ ಕಡೆ ಎಲ್ಲಾ ಐರನ್ ಲೆಗ್.. ಈ ರೀತಿ ಮಾತಾಡ್ ತಕ್ಕಂತಹವರು ಡಿಸೆಂಬರ್ ಮಾಸದಲ್ಲಿ ಹುಟ್ಟಿದವರ ಬಗ್ಗೆ ತುಂಬಾ ಜನ ಮಾತನಾಡುವುದನ್ನು ನಾನು ಕೇಳಿದ್ದೇನೆ.

ಆದರೆ ನಿಮಗೆ ಗೊತ್ತಿದೆಯಾ ಅಪರಿಮಿತ, ಅಗಣಿತ ಸಂಪತ್ತನ್ನು ಸಂಪಾದಿಸುವುದರಲ್ಲಿ ನೀವೇನಾದರೂ ಹೆಜ್ಜೆ ಇಟ್ಟರೆ ನಿಮಗೆ ನೀವೇ ಸಾಟಿ. ಆದರೆ ನೀವು ನಿಲ್ಲಬೇಕು ಅಷ್ಟೇ. ಕೆಲವರು ಹೇಳ್ತಿರ್ತಾರೆ ಬಲು ದೊಡ್ಡ ಮೋಸಗಾರ ಸಾರ್ ಅವನು.. ಮೋಸ ಮಾಡ್ಕೊಂಡೆ ವ್ಯಾಪಾರದಲ್ಲಿ ಮುಂದೆ ಬಂದ ಎಂದು..ನೋಡೋಣ ನೀವು ಚೀಟ್ ಮಾಡಿ ನಿಮಗೆ ಧೈರ್ಯವಿದೆಯಾ! ಎಲ್ಲಾ ಬರೀ ಕ್ರಾಸ್ ವರ್ಡ್ ಅದನ್ನು ಕಂಡು ಹಿಡಿಯೋಕೆ ಆಗುವುದಿಲ್ಲ ಸಾರ್.. ನೋಡೋಣ ನೀವು ಮಾಡಿ.

ಜಿಯೊ ಬರುವಾಗ ಕಡಿಮೆ ರೇಟಿಗೆ ಕೊಟ್ಟರೂ, ಫ್ರೀ ಕೊಟ್ಟರೂ ಇವತ್ತು ರೇಟು ನೋಡಿ…ಜಂಪ್ ಮಾಡಿ ಇಟ್ಟಿದ್ದಾರೆ.. ಅನುಭವಿಸಲಾರೆರೀ ಇರಲಾರೆರೀ. ಕೈಯಲ್ಲಿ ಇದೆ ಬಿಸಿ ತುಪ್ಪ..ಅಡಿಕ್ಟ್ ಆಗಿಬಿಟ್ಟಿದ್ದೀರಿ.. ಜೀಯೋ ಕೊಟ್ಟ ಇಂಟರ್ನೆಟ್ ಅವರಿಗೆ ಫೋನ್ ಮಾಡು, ವಿಡಿಯೋ ಕಾಲ್ ಮಾಡು ಮಾತಾಡೋ ..ಆಲ್ಮೋಸ್ಟ್ ೪೦ ಟು- ೫೦ ಪರ್ಸೆಂಟ್ ಜಂಪಾಗಿದೆ. ಅಂದರೆ ೩೦೦ ರುಪಾಯಿ ನೀವು ತಿಂಗಳಿಗೆ ಏನು ಬಿಲ್ ಕಟ್ಟುತ್ತಿದ್ದರೆ ಇವತ್ತು ಹೆಚ್ಚು ಕಡಿಮೆ ೪೦೦ ರೂ ರಿಂದ ೪೫೦ ರುಪಾಯಿ ಕಟ್ಟುವಷ್ಟು ಮಟ್ಟಿಗೆ ತಂದು ಬಿಟ್ಟಿದ್ದಾರೆ.

ಹೂವ ಇಟ್ಟಹಾಗೆ ತಂದಿಟ್ಟಿದ್ದಾರೆ. ನಮ್ಮ ಕೈಯಲ್ಲಿ ಗಾಡಿ ಕೊಟ್ರು ಫ್ರೀಯಾಗಿ ಪೆಟ್ರೋಲ್ ಅವರದ್ದೇ.! ರಿಲಯನ್ಸ್ ಪೆಟ್ರೋಲ್. ಅವರದ್ದೇ ಹಾಕಿಕೊಳ್ಳಬೇಕು. ಒಂದು ವರ್ಷ ಫ್ರೀ ಅಂತ ಕೊಟ್ರು.. ಜುಮ್ಮಂತ ಎಲ್ಲರ ಮುಂದೆ ಓಡಾಡಿಕೊಂಡು ಇದ್ವಿ ..ಈಗ ಪೆಟ್ರೋಲಿಗೆ ದುಡ್ಡು ದಿಢೀರನೇ ಜೋರು ಮಾಡಿದ್ದಾರೆ. ಅಂಥದ್ದೊಂದು ರೀತಿಯ ದೂರಗಾಮಿ ಆಲೋಚನೆ, ವಿವೇಚನಾ ಡಿಸೆಂಬರ್ ನಲ್ಲಿ ಹುಟ್ಟಿದವರಿಗೆ ಬರುತ್ತದೆ. ಸಾಮಾನ್ಯರಲ್ಲ ನೀವು. ನಿಮ್ಮ ತಾಕತ್ತು ಇನ್ನಷ್ಟಿದೆ ಅದರ ಬಗ್ಗೆ ತಿಳುಸುತ್ತೇನೆ. ಇವತ್ತಿನ ದಿನ ಭವಿಷ್ಯಕ್ಕೆ ಬಂದು ಬಿಡೋಣ.

ಇಂದಿನ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳೋಣ,

ಮೇಷ – ಚೆನ್ನಾಗಿದೆ ಸುಖಕರವಾಗಿದೆ. ಕುಟುಂಬದಲ್ಲಿ ಸಂತಸದ ದಿನ. ಉದ್ಯೋಗದಲ್ಲೂ ನೆಮ್ಮದಿಯ ದಿನ.. ಒಂದು ರೀತಿ ಹಾಲು, ಬೆಣ್ಣೆ ತುಪ್ಪದ ತರ ಶುಭವಾಗಲಿ.

 

ವೃಷಭ–  ಆರೋಗ್ಯ ಕಡೆ ನೋಡಿ ಮಾನಸಿಕವಾಗಿಯೂ ದೈಹಿಕವಾಗಿಯೂ. ಸ್ಟ್ರೆಸ್ಗೆ ಒಳಗಾಗುತ್ತೀರಿ ಇವತ್ತು ಜಾಗರೂಕತೆ. ಯಾಕೋ ಮನಸ್ಸಿಗೆ ನೋವು, ಮನಸ್ಸಿಗೆ ಯಾರೋ ನೋವು ಮಾಡೋದು? ಹತ್ತಿರದವರೆ ಪರವಾಗಿಲ್ಲ ಚೆನ್ನಾಗಿರಿ. ನನ್ನವನು ತಾನೇ ಅಂದಿದ್ದು.. ನನ್ನಾಕೆ ತಾನೇ ಅಂದಿದ್ದು ಎಂದು ಬಿಡಿ.

 

ಮಿಥುನ – ತಳಮಳ. ಯಾವುದೋ ಒಂದು ಧಾವಂತಮ, ಯಾವುದೋ ಒಂದು ದಿಗಿಲು, ಯಾವುದೋ ಒಂದು ಭಯ. ಯಾವುದೋ ಒಂದು ಲೆಕ್ಕಾಚಾರದ ಏರುಪೇರು ಆಗಿಬಿಡುತ್ತಾ ಅನ್ನುವತಕ್ಕಂತಹದ್ದು. ಮಿಥುನ ರಾಶಿಯವರು ಯಾವಾಗಲೂ ಯೋಜನೆ ರೂಪಿಸುವುದರಲ್ಲಿ ಸಿದ್ಧಹಸ್ತರು.ಆದರೆ ಇವತ್ತು ಯಾಕೋ ಒಂದು ತಳಮಳ ದೇವಿಗೊಂದು ಸಣ್ಣ ದರ್ಶನ ಮಾಡಿ ಮನಸ್ಸಿನ ತಳಮಳ ದೂರವಾಗುತ್ತದೆ.

 

ಕರ್ಕಾಟಕ – ರೂಪಿಸುವ ಯೋಜನೆ ಯಾವುದಿದ್ದರೂ ಇವತ್ತು ನಿಮಗೆ ವಿಜಯ. ಅದರಲ್ಲೂ ಸೂರ್ಯ ದೃಷ್ಟಿ, ಕುಜ ಬೇರೆ ಯೋಗಕಾರಕ ನಿಮಗೆ..ಸುಖ ಬಲವಿದ್ದು ಯೋಗ ಸ್ಥಾನವನ್ನೇ ನೋಡುತ್ತಿದ್ದಾನೆ ಚೆನ್ನಾಗಿದೆ. ಪ್ರಯತ್ನ ಮಾಡಿ ನಿಮ್ಮ ಪ್ರಯತ್ನದಲ್ಲಿ ಗೆಲುವು ನಿಶ್ಚಿತ. ಆದರೆ ಗುರುವಿನ ಆಶೀರ್ವಾದ ತೆಗೆದುಕೊಳ್ಳಿ ಯಾಕೆಂದರೆ ಯಾಕೆಂದರೆ ಗುರು ನಿಮಗೆ ಅಷ್ಟಮದಲ್ಲಿದ್ದಾನೆ.

 

ಸಿಂಹ – ಚೆನ್ನಾಗಿದೆ. ಆದರೆ ಸ್ವಲ್ಪ ಉದ್ಯೋಗ ನಿಮಿತ್ತ, ಸ್ವಂತ ಉದ್ಯೋಗ, ಸ್ವಂತ ವ್ಯಾಪಾರ, ಸ್ವಂತ ವ್ಯವಹಾರ ಇತರದೊಂದು ವಿಚಾರದಲ್ಲಿ ಸ್ವಲ್ಪ ಖರ್ಚು ವೆಚ್ಚಗಳು ಸ್ವಲ್ಪ ಜಾಸ್ತಿ.. ತೊಳಲಾಡುತ್ತೀರಿ!

 

ಕನ್ಯಾ – ನಿಮಗೂ ಚಂದ್ರನಿಗೂ ಆಗುವುದಿಲ್ಲ. ಯಾವುದೋ ಅತ್ತೆ ವಿಚಾರ, ತಾಯಿ ವಿಚಾರ, ಹತ್ತಿರದ ಬಂಧುವಿನ ವಿಚಾರದಲೊಂದು ಸ್ಫೋಟ, ವಿಸ್ಫೋಟ, ಮಾತಿನ ಸ್ಫೋಟ ಇಲ್ಲ ಆರೋಗ್ಯ ಸ್ಫೋಟ ಏನೋ ಒಂದು ಅಪಶ್ರುತಿಯೊಂದು ಬಡಿಯುವತಕ್ಕದ್ದು ಆಗುತ್ತದೆ. ವಿಷ್ಣು ಸಹಸ್ರನಾಮವನ್ನು ಕೇಳಿ.. ಯಾಕೆ ಎಂದರೆ ಚಂದ್ರ ಶುಕ್ರನ ಮನೆಯಲ್ಲಿದ್ದಾನೆ.

 

ತುಲಾ– ಉದ್ಯೋಗದಲ್ಲಿ ಒಂದು ರೀತಿ ನೀರಿಂದ ತೆಗೆದು ಬಿಸಾಕಿದ ಮೀನಿನ ರೀತಿ. ಯಾಕೋ ಇಲ್ಲಾ ಸಾರ್.. ಯಾಕೊ ಆಗ್ತಿಲ್ಲ ಸರ್. ಇಷ್ಟು ಮಾಡಬೇಕು ಅಂದ್ಕೊಂಡ್ರೆ ಸಾರ್ ಇಷ್ಠೆ ಮಾಡ್ಬೇಕು ಅಂದ್ಕೊಂಡ್ ಅಷ್ಟು ದೊಡ್ಡ ಡಬ್ಬದಲ್ಲಿ ಹಾಕಿದರೆ ಅಂಥದ್ದೊಂದು ಅನಿಸುತ್ತದೆ. ದುರ್ಗಾ ಮಂತ್ರವನ್ನು ಜಪ ಮಾಡಿಕೊಳ್ಳಿ..ಸಮಾಧಾನವಗುತ್ತದೆ.

 

ವೃಶ್ಚಿಕ – ಎಷ್ಟು ದೊಡ್ಡದಾದರೂ ಈಜಬಲ ತಕ್ಕಂತಹ ಸಾಮರ್ಥ್ಯ.. ಈಜಿ ಇವತ್ತು. ಎಲ್ಲಿವರೆಗೂ ಓಡುತ್ತೀರಿ ಓಡಿ.. ಕಾರ್ಯ ಯಶಸ್ಸು ನಿಮ್ಮದು ಎಷ್ಟು ದೂರವಾದರೂ ಓಡಿ ತೊಂದರೆ ಇಲ್ಲ.

 

ಧನಸ್ಸು – ಶುಭ ಸುದ್ದಿಯೊಂದನ್ನು ಆಕಸ್ಮಿಕ ವಿಚಾರಗಳಲ್ಲಿ ಕೆಲವೊಂದನ್ನು ಪಡೆಯುತ್ತೀರಿ ಶುಭವಿದೆ. ಸ್ತ್ರೀಯರಿಗೆ ಸಂಬಂಧಿಸಿದ ವ್ಯಾಪಾರ, ವ್ಯವಹಾರ, ಹಣಕಾಸು ಆಫರ್, ವಿಟಿಯು, ಸೊಸೈಟಿ, ಬ್ಯಾಂಕಿಂಗ್ ಇಂಥದ್ದೊಂದು ಸೆಕ್ಟರ್ ಗಳಲ್ಲಿ ಕೆಲಸ ಮಾಡುತ್ತಿದ್ದರೆ ಅನುಕೂಲತೆಯನ್ನು ನೋಡುತ್ತೀರಿ.

 

ಮಕರ – ಹತ್ತಿರದವರಿಂದ ಲಾಭ, ಹತ್ತಿರ ದವರಿಂದ ಸಹಯೋಗ ಏನೋ ಎಕ್ಸ್ಪೆಕ್ಟ್ ಮಾಡ್ತಿದ್ರಿ ಬರಬೇಕಾಗುತ್ತೆ, ದುಡ್ಡು ಬರ್ತಿಲ್ಲ ನೋಡ್ತಿಲ್ಲ, ಹೋಗ್ತಿಲ್ಲ, ಮಾಡ್ತಿಲ್ಲ ಅಂತದ್ದೊಂದು ತೊಳಲಾಟ. ಯಶಸ್ಸಿನ ಫಲವೇ ಇರುವಂತಹ ಅದ್ಭುತವಾದಂತಹ ದಿನ ಪ್ರಯತ್ನ ಮಾಡಿ.

 

ಕುಂಭ -ಹಾಲು, ಬೆಣ್ಣೆ, ತುಪ್ಪ, ಮೊಸರು, ಸಕ್ಕರೆ, ಟ್ರಾವೆಲ್ಸ್, ಜ್ಯೂಸು, ಎಂಟರ್ ಟೈನ್ಮೆಂಟ್, ಇಂತಹ ಒಂದು ವಿಭಾಗ ಕೆಲಸ ಕಾರ್ಯದಲ್ಲಿರುವವರಿಗೆ ಶುಭ ಸುದ್ದಿ ಚೆನ್ನಾಗಿದೆ.

 

ಮೀನ– ಮೀನ ರಾಶಿಯವರಿಗಂತು ಸುಮ್ಮನೆ ಒಂದು ಬೊಗಸೆ ನೀರು ನಷ್ಟು ಆಸೆ ಪಟ್ಟಿದ್ದೆ ಸಾರ್.. ಹಂಡೆ ನೀರು ಸಿಗುತ್ತೆ ಇವತ್ತು ನಿಮಗೆ. ಸ್ವಲ್ಪ ಸ್ವೀಟ್ ಆಸೆಪಟ್ಟೆ ಸಾರ್… ಪೂರ ಭಂಡಾರವೇ ಸ್ವೀಟ್ ಅಂಗಡಿ ನೋಡ್ಕೊ ಹೋಗು ಅನ್ನೋ ಹಾಗೆ ಇವತ್ತಿನ ನಿಮ್ಮ ವೃತ್ತಿಪರವಾಗಿಯೂ, ಕೌಟುಂಬಿಕೆ ಪರವಾಗಿಯೂ, ಶುಭ ಸುದ್ದಿಗಳನ್ನು ಕೇಳುತ್ತೀರಿ ಚೆನ್ನಾಗಿದೆ.

LEAVE A REPLY

Please enter your comment!
Please enter your name here