ದಿನ ಭವಿಷ್ಯ 15 ಸೆಪ್ಟೆಂಬರ್ 2019

0
1345

ಇವತ್ತಿನಿಂದ ಮಹಾಲಯ ಪಕ್ಷ ಆರಂಭ. ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೆ ಮೂರು ಗುಣಗಳಿರುತ್ತವೆ ಒಂದು ಪಿತೃಋಣ, ಅತಿ ಮುಖ್ಯವಾಗಿ ಎರಡನೆಯದು ಗುರು ಋಣ, ಮೂರನೆಯದು ರಿಷಿ ಋಣ ಇವುಗಳನ್ನು ನಾವು ನಿಭಾಯಿಸಿಕೊಂಡು ಹೋಗಬೇಕು. ಮನುಷ್ಯನಾದ ಮೇಲೆ ಈ ಮೂರು ಗುಣಗಳನ್ನು ಪಾಲಿಸಲೇಬೇಕು, ನಿಭಾಯಿಸಿಕೊಂಡು ಹೋಗಲೇಬೇಕು. ಹಿರಿಯರು ಹಲವು ವರ್ಷಗಳಿಂದ ಪಾಲಿಸಿಕೊಂಡು ಬಂದಿದ್ದಾರೆ. ನಮಗೊಂದು ಸಂಸ್ಕಾರ, ನಮಗೆ ಪೂಜೆ ಹಲವಾರು ರೀತಿಯ ಭಂಡಾರವನ್ನು ನಮ್ಮ ಹಿರಿಯರು ತುಂಬಿಸಿ ನಮ್ಮನ್ನು ಕಾಪಾಡಿದ್ದಾರೆ. ಯಾವ ಪಶು, ಪಕ್ಷಿಗೆ ಇಲ್ಲದ ವಾಕ್ಚಾತುರ್ಯ, ಮೇಧಾಶಕ್ತಿ ,ಬುದ್ಧಿಶಕ್ತಿಯನ್ನು ಭಗವಂತ ಮನುಷ್ಯನಿಗೆ ಪಾಲಿಸಿದ್ದಾನೆ. ಈ ಹದಿನೈದು ದಿನ ಪಿತೃ ಋುಣ ಮುಂದುವರಿಯಲಿದೆ. ನಾವು ಮಾಡತಕ್ಕಂತಹ ಹೋಮ, ಹವನ, ಯಜ್ಞ, ಯಾಗ ಮಾಡುವಾಗ ಹವಿಸ್ಸನ್ನು ಅರ್ಪಿಸುತ್ತೇವೆ. ಈ ಮೂಲಕ ದೇವತೆಗಳಿಗೆ ನಮ್ಮ ಕೋರಿಕೆಯನ್ನು ಅರ್ಪಿಸುತ್ತೇವೆ. ನಮ್ಮ ಜೀವನಕ್ಕೆ ಪಿತೃಗಳ ಆಶೀರ್ವಾದ ತುಂಬಾ ಮುಖ್ಯವಾದದ್ದು, ಧರ್ಮಶಾಸ್ತ್ರದಲ್ಲಿ ಒಂದು ಕಟ್ಟಪ್ಪಣೆ! ಏನಾದರೂ ಒಂದು ದೇವ ಶಾಪ ಇದ್ದರೆ ನೂರಕ್ಕೆ ನೂರು ಭಾಗವೂ ಪರಿಹಾರಗಳನ್ನು ತೆಗಯಬಹುದು.

ಪೂಜೆ ಪುನಸ್ಕಾರಗಳಿಂದ, ದಾನಗಳಿಂದ ನೂರರಲ್ಲಿ ಶೇ.ಅರವತ್ತರಷ್ಟು ಪರಿಹಾರ ಮಾಡಿಕೊಳ್ಳಬಹುದು. ಆದರೆ ಪಿತೃಶಾಪ, ಪಿತೃ ಶಾಪಕ್ಕೆ ಒಳಗಾದರೆ ಬಹು ಕಷ್ಟ.! ಅದಕ್ಕೆ ನಮ್ಮ ಹಿರಿಯರು ಇಡೀ ಪರ್ವಕಾಲದಲ್ಲಿಯೇ ಈ ಮಹಾಲಯ ಅಮಾವಾಸ್ಯೆ, ಈ ಪಿತೃಪಕ್ಷದ ಸಂದರ್ಭದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದು. ಬರೀ ಪಿತೃಗಳಿಗೆ ಸಮರ್ಪಿತ ಅವರನ್ನು ನೆನೆಪಿಸಿಕೊಳ್ಳಬೇಕು ಎಂದು ಮೀಸಲಿಟ್ಟಿದ್ದರು. ಅನ್ನ ತಿನ್ನುವಾಗ ಮಾತಾಡಬಾರದು, ಯಾಕೆ ಮಾತನಾಡಬಾರದು ಎಂಬುದನ್ನು ಹಾಗೂ ಅನ್ನ ತಿನ್ನುವಾಗ ಮಧ್ಯದಲ್ಲಿ ನೀರು ಕುಡಿಯಬಾರದು, ಅನ್ನ ತಿನ್ನುವ ಹದಿನೈದು ನಿಮಿಷ ಮುಂಚಿತವಾಗಿ ನೀರು ಕುಡಿಯಬೇಕು ಈ ರೀತಿಯ ಒಂದು ಸಿದ್ಧಾಂತಗಳನ್ನು, ಧರ್ಮ ಆಚರಣೆಗಳನ್ನು, ಪೂಜಾ ಆಚರಣೆಗಳನ್ನು ನೀತಿಶಾಸ್ತ್ರವನ್ನು ಇವೆಲ್ಲವನ್ನು ನಮಗೆ ಹಿರಿಯರು ತಿಳಿಸಿಕೊಟ್ಟಿದ್ದಾರೆ. ಅವರನ್ನು ನೆನೆಸಿಕೊಳ್ಳುವ ಪಕ್ಷ ಅವರ ಹೆಸರಿನಲ್ಲಿ ಈ ಹದಿನೈದು ದಿನಗಳಲ್ಲಿ ನಾವು ಅವರ ಹೆಸರಿನಲ್ಲಿ ಮಾಡುವ ನಿತ್ಯ ಭಕ್ಷ್ಯ ಭೋಜನಗಳ ರೂಪದಲ್ಲಿ ನಮ್ಮ ಶಕ್ತಿಯನ್ನು ಮೀರಿ ನಾವು ಐದು ಜನ ಬಡವರಿಗೆ ಉಣಬಡಿಸಿ ಅವರ ಮೂಲಕ ತೃಪ್ತಿಗೊಳಿಸುವುದು ಈ ಕಾರ್ಯದ ಮಹತ್ವವಾಗಿರಲಿದೆ.

ಯಾವುದಾದರೂ ಗೋವಿಗೆ ನಿತ್ಯ ಒಂದು ಊಟವನ್ನು ತೆಗೆದಿಟ್ಟು ಗೋವಿಗೆ ತಿನಿಸುತ್ತಾ ಬರುತ್ತಿದ್ದರೆ, ಪಿತೃ ಶಾಪದಿಂದ ದೂರವಾಗಬಹುದು. ಮಕ್ಕಳಿಲ್ಲ, ಹುಟ್ಟಿದ ಮಕ್ಕಳಲ್ಲಿ ಬೆಳವಣಿಗೆಯಿಲ್ಲ, ಮಕ್ಕಳು ದಿಕ್ಕಾಪಾಲಾಗಿದ್ದಾರೆ, ಅಪಮೃತ್ಯುಗೆ ಒಳಗಾಗಿದ್ದಾರೆ, ವಂಶೋದ್ಧಾರಕರಿಲ್ಲ ಅಲ್ಲಿ ಎಲ್ಲೋ ಒಂದು ಪಿತೃ ಶಾಪ ಅಡಗಿದೆ ಎಂಬ ಸೂಚನೆ ನೀವು ತಿಳಿದುಕೊಳ್ಳಬೇಕಾಗಿದೆ. ಈ ಹದಿನೈದು ದಿನ ನೀವು ಪುಟ್ಟದಾಗಿ ಒಗ್ಗರಣೆ ಹಾಕಿದ, ಬೇಯಿಸಿದ ಅಡುಗೆಯನ್ನು ತಿನ್ನಬೇಡಿ. ಆ ಫಲತಾಂಬೂಲ, ಹಾಲು ,ಹಣ್ಣು ಹಂಪಲು ಈ ರೀತಿಯ ಆಹಾರವನ್ನು ಸೇವನೆ ಮಾಡಿ ಒಳ್ಳೆಯದು. ಯಾವುದಾದರೂ ತುಂಬಿದ ಗೋವಿಗೆ ಹೋಗಿ ಊಟವನ್ನು ತಿನ್ನಿಸಿದರೆ, ಆ ಪಿತೃ ಶಾಪದಿಂದ ವಿಮೋಚನೆಯಾಗಬಹುದು. ನಾಳಿನ ಸಂಚಿಕೆಯಲ್ಲಿ ಪಿತೃ ಶಾಪದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿಸಿಕೊಡಲಿದ್ದಾರೆ ಶ್ರೀ ರವಿಶಂಕರ್ ಗುರೂಜಿಯವರು.

ಇಂದಿನ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ,

ಮೇಷ– ಇಂದು ಸ್ವಲ್ಪ ತೊಳಲಾಟ, ಖರ್ಚಿನ ದಿನವಾಗಿರಲಿದೆ. ನಿಮ್ಮ ಹೊಟ್ಟೆಗಿಂತ ದೊಡ್ಡ ಖರ್ಚು ಯಾವುದೂ ಇಲ್ಲ! ಅದನ್ನು ಕಾಪಾಡಿಕೊಳ್ಳಬೇಕು. ಇಂದು ಆ ರೀತಿಯ ತೊಳಲಾಟ ಉಂಟಾಗಲಿದೆ ನಿಭಾಯಿಸಿಕೊಂಡು ಹೋಗುತ್ತೀರಿ ಶುಭವಾಗಲಿದೆ.

ವೃಷಭ– ಭಾನುವಾರದ ಪೂರ್ಣ ಮನರಂಜನೆ ನಿಮಗೆ ಇರಲಿದೆ. ಪಿತೃಪಕ್ಷಕ್ಕೆ ಇಂದಿನ ದಿನದಿಂದಲೇ ಆರಂಭ ಮಾಡಿಕೊಳ್ಳುತ್ತೀರಿ. ಯಾರಾದರೂ ಬ್ರಾಹ್ಮಣರ ಸೇವೆಯನ್ನು ಮಾಡಿ ಇನ್ನಷ್ಟು ಒಳ್ಳೆಯದಾಗಲಿದೆ. ಈ ಹದಿನೈದು ದಿನದೊಳಗೆ ಯಾರಾದರೂ ಗುರು ಸಮಾನರಾದವರಿಗೆ ಬ್ರಾಹ್ಮಣರಿಗೆ, ಆಚಾರ್ಯರಿಗೆ ಫಲ ತಾಂಬೂಲವನ್ನು ನಿವೇದನೆ ಮಾಡಿಕೊಳ್ಳಿ ಬಹಳ ಒಳ್ಳೆಯದಾಗಲಿದೆ.

ಮಿಥುನ– ವೈಯಕ್ತಿಕ ವಿಚಾರ, ವ್ಯವಹಾರ ವಿಚಾರಗಳಲ್ಲಿ ಪ್ರಗತಿ ಕಾಣುವಂತ ದಿನ ತುಂಬಾ ಚೆನ್ನಾಗಿದೆ. ಮನೆಗೆ ಅತಿಥಿಗಳ ಆಗಮನ, ಶಾಪಿಂಗ್, ಸುತ್ತಾಟ, ಓಡಾಟ ನೋಡ ತಕ್ಕಂತ ದಿನ. ವಿಮಾನ ಸೆಕ್ಟರ್ಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಅದ್ಭುತ ಪ್ರಗತಿ. ಏರ್ಪೋರ್ಟ್, ಗಗನಸಖಿಯಾಗಿ, ಕಸ್ಟಮ್ ಸರ್ವೀಸ್ ಇಂಥ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಅದ್ಭುತ ಪ್ರಗತಿ ಕಾಣತಕ್ಕಂತ ದಿನವಾಗಿರಲಿದೆ.

ಕಟಕ– ಪರಿಶ್ರಮವೇ.! ಆದರೆ ಏನೋ ಒಂದು ಭಾರ ಕಾಡಲಿದೆ. ಮನೆಯಲ್ಲಿ ಅಚಾತುರ್ಯ ಮರಣ ಕಟಕ ರಾಶಿಯವರಿಗೆ ಇರುತ್ತದೆ. ಯಾರೋ ಹಿರಿಯರು ನಿಮ್ಮ ಕುಟುಂಬದಲ್ಲಿ ನೋವಿಂದ, ಬಾಧೆಯಿಂದ ಹೋಗಿರುತ್ತಾರೆ. ಈ ಹದಿನೈದು ದಿನಗಳಲ್ಲಿ ಗುರುಗಳು ಹೇಳುವ ಒಂದು ಪರಿಹಾರವನ್ನು ಮಾಡಿಕೊಳ್ಳುವುದು ಒಳ್ಳೆಯದು. ಒಂದು ಊಟವನ್ನು ಹಸುವಿಗೆ ತಿನ್ನಿಸಲು ಪ್ರಯತ್ನ ಮಾಡಿ ಒಳ್ಳೆಯ ಅಭಿವೃದ್ಧಿ ಆಗಲಿದೆ. ಪಿತೃ ಶಾಪದಿಂದ ಹೊರ ಬರುತ್ತೀರಿ ಶುಭವಾಗಲಿ.

ಸಿಂಹ– ನಿಮ್ಮ ಬಳಿ ಎಲ್ಲ ಇದೆ ಆದರೆ ಯಾವ ಉಪಯೋಗ ಇಲ್ಲ ಎಂಬ ಚಿಂತೆ ಇಂದು ನಿಮಗೆ ಕಾಡಲಿದೆ. ಯಾವುದೋ ಅಪಮಾನಗಳು ನಿಮ್ಮ ಬೆನ್ನ ಮೇಲೆ ಹತ್ತಿ ಕೂತಿದೆ ಒಂದು ಭಾರ ನಿಮಗೆ ಕಾಡುತ್ತಿದೆ. ಇಂದು ಹನುಮರಿಗೆ ವೀಳ್ಯದೆಲೆಯ ಹಾರ ಅರ್ಪಿಸಿ ಒಳ್ಳೆಯದಾಗಲಿದೆ.

ಕನ್ಯಾ– ಇದು ನಿಮ್ಮ ದಿನ ಚೆನ್ನಾಗಿದೆ. ಒಂದು ರೀತಿ ಸ್ವಲ್ಪ ಒತ್ತಡದ ದಿನವಾಗಿರಲಿದೆ. ಕುಟುಂಬದ ಮನೆಯ ಜವಾಬ್ದಾರಿ. ತೀರಾ ಹೊರೆಯಾಗಲಿದೆ ಯೋಚನೆ ಬೇಡ ಒಳ್ಳೆಯದಾಗಲಿದೆ.

ತುಲಾ– ಭಾನುವಾರ ವಿಪರೀತ ಖರ್ಚು ಉಂಟಾಗಲಿದೆ. ಎಲ್ಲೋ ಒಂದು ಸುತ್ತಾಟ, ಬಂಗಾರ ವ್ಯಾಪಾರ, ವಸ್ತ್ರ ವ್ಯಾಪಾರದಲ್ಲಿ ಇರುವವರಿಗೆ ಒಂದು ತಟಸ್ಥ ಉಂಟಾಗಲಿದೆ. ಯಾವುದೇ ದೊಡ್ಡ ಕಾರ್ಯಗಳನ್ನು ಇಂದು ಮಾಡಲಿಕ್ಕೆ ಹೋಗಬೇಡಿ ಮುಖ್ಯ ಕೆಲಸ, ಮುಖ್ಯ ಹೂಡಿಕೆ, ಈ ಹದಿನೈದು ದಿನಗಳು ಮಾಡಬೇಡಿ ಜಾಗರೂಕತೆ.

ವೃಶ್ಚಿಕ– ಪರವಾಗಿಲ್ಲ, ಕಾಸಿಗೆ ತಕ್ಕಂತೆ ಕಜ್ಜಾಯ. ಗಾಡಿ, ಬಂಗಾರ, ಅಲಂಕಾರ, ಒಪ್ಪ, ಓರಣ, ಬ್ಯೂಟಿ ಪಾರ್ಲರ್ ಈ ಒಂದು ರೀತಿಯ ದಿನವಾಗಿರಲಿದೆ. ಹೊಸ ಬಟ್ಟೆ ಅಥವಾ ಚಪ್ಪಲಿಯನ್ನು ಖರೀದಿ ಮಾಡಲು ಇಂದು ಅದ್ಭುತವಾದಂತಹ ದಿನ ಒಳ್ಳೆಯದಾಗಲಿದೆ.

ಧನಸ್ಸು– ನಿಮ್ಮ ದಿನ ಚೆನ್ನಾಗಿದೆ ಆದರೆ ಯಾವುದೋ ಒಂದು ತುಂಟತನ ನಿಮಗೆ. ಸಂಗಾತಿಯೊಡನೆ ಸಣ್ಣ ಕಿರಿಕಿರಿ, ಸಂಗಾತಿ ಆರೋಗ್ಯದಲ್ಲಿ ಸಣ್ಣ ಏರುಪೇರು ಅಥವಾ ಸಂಗಾತಿಯ ದರ್ಪ ನಿಮಗೆ ಕಿರಿಕಿರಿ ಉಂಟು ಮಾಡಲಿದೆ. ಇಂಥ ಪ್ರಸಂಗಗಳು ನಿಮಗೆ ಎದುರಾಗಲಿವೆ. ಒಂದು ಬೊಗಸೆ ಎಳ್ಳೆಣ್ಣೆಯನ್ನು ಹನುಮನ ದೇವಾಲಯಕ್ಕೆ ಅರ್ಪಿಸಿ ಒಳ್ಳೆಯದಾಗಲಿದೆ.

ಮಕರ-ಎಲ್ಲವೂ ಶುಭವೇ ನಿಮಗೆ ದಿಢೀರ್ ಪಾರ್ಟಿ, ಫಂಕ್ಷನ್, ಮದುವೆ, ಶುಭ ಕಾರ್ಯಕ್ಕೆ ಹೋಗಿ ಬರುವಂತ ದಿನವಾಗಿರಲಿದೆ. ಆತ್ಮೀಯರನ್ನು ಭೇಟಿ ಮಾಡುವುದು, ಹಳೆಯ ಸ್ನೇಹಿತರನ್ನು ಭೇಟಿ ಮಾಡುವುದು ಇಂಥ ಶುಭಯೋಗ ನಿಮಗೆ ಕೂಡಿ ಬಂದಿದೆ ಚೆನ್ನಾಗಿದೆ. ಭೋಜನ ಪ್ರಿಯರು, ವಸ್ತ್ರ ಪ್ರಿಯರಾಗಿದ್ದೀರಿ ಚೆನ್ನಾಗಿದೆ ಯಾವ ತೊಂದರೆ ಇಲ್ಲ ಶುಭವಾಗಲಿದೆ.

ಕುಂಭ -ತಟ್ಟೆ ತುಂಬಾ ಸಿಹಿ ನೋಡುತ್ತೀರಿ ಆದರೆ ತಿನ್ನಲು ನಿಮಗೆ ಯೋಗವಿಲ್ಲ ಇಂಥ ಸಂದರ್ಭ ನಿಮಗೆ ಎದುರಾಗಲಿದೆ. ದೈವ ನಿಮಗೆ ಹಂಚಲು ಕೊಟ್ಟಿದ್ದಾನೆ ಹಂಚಿ, ಹಂಚುವುದು ಒಳ್ಳೆಯದು. ಕುಟುಂಬದ ಸ್ತ್ರೀಯರಲ್ಲಿ, ವ್ಯಾವಹಾರಿಕ, ಹಣಕಾಸಿನ, ಕೌಟುಂಬಿಕ ಸಾಂಸಾರಿಕ ಬಾಧೆ ಕಾಣಿಸಲಿದೆ ಅವರಿಗೆ ಕಾವಲಾಗಿ ನೀವು ನಿಂತುಕೊಳ್ಳುತ್ತೀರ ಒಳ್ಳೆಯದಾಗಲಿದೆ.

ಮೀನ– ಆತಂಕ ಭಯ ನಿಮ್ಮಲ್ಲಿ ಕಾಡಲಿದೆ. ತೀರಾ ಆತಂಕದಿಂದ ನಿಮ್ಮ ಕೆಲಸಗಳನ್ನು ಆತುರದಿಂದ ಮಾಡುತ್ತಿದ್ದೀರಿ. ಆರೋಗ್ಯ, ಮನಸ್ಸು ಕುಟುಂಬದಲ್ಲಿ ತಲೆಕೆಡಿಸಿಕೊಂಡು ಯಾವುದೋ ಯೋಚನೆ ಮಾಡುತ್ತಿದ್ದೀರಿ. ಒಂದು ರೀತಿಯ ತಳಮಳದಲ್ಲಿ ನೀವು ಸಿಲುಕಿಕೊಂಡಿದ್ದೀರಿ. ಮನೆಯಲ್ಲಿ ಒಂದು ಶುಭ ಕಾರ್ಯ ನಡೆಯುವುದುಂಟು. ಮನೆಗೆ ಸ್ತ್ರೀ ಆಗಮನ ಆಗಲಿದೆ. ಮನೆಯಲ್ಲಿ ಪೂಜೆ ಪುನಸ್ಕಾರ ನಡೆಯಲಿದೆ. ಈ ರೀತಿಯ ಒಂದು ಶುಭ ಕಾರ್ಯಗಳು ಉಂಟಾಗಲಿದೆ. ಸ್ತ್ರೀಯೊಬ್ಬರಿಂದ ಒಂದು ಮೋಸ ಆಗಲಿದೆ ಜಾಗೃತ.

LEAVE A REPLY

Please enter your comment!
Please enter your name here