ದಿನ ಭವಿಷ್ಯ 10 ಜನವರಿ 2020!

0
231

ಮೇಷ– ಇವತ್ತು ಹುಳಿ ಪ್ರಭಾವ! ಒಡಹುಟ್ಟಿದವರ ವಿಚಾರ, ಮನೆಯವರ ವಿಚಾರದಲ್ಲಿ, ಕುಟುಂಬದವರ ವಿಚಾರದಲ್ಲಿ, ಧೈರ್ಯದ ವಿಚಾರದಲ್ಲಿ ಮುಖ್ಯ ನಿರ್ಧಾರ, ಮುಖ್ಯ ಕೆಲಸ, ಮುಖ್ಯ ವ್ಯವಹಾರ, ತುಂಬಾ ದೊಡ್ಡ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಡಿ.

 

ವೃಷಭ– ವೃತ್ತಿ ಸ್ಥಾನದಲ್ಲಿ ಒಂದು ಗ್ರಹಣ ಛಾಯೆ ಇರುವುದರಿಂದ, ರಾಹು ಛಾಯೆ ಇರುವುದರಿಂದ ಯಾರೋ ಹುಳಿಯಾಗುತ್ತಾರೆ. ಮನಸ್ಸಿಗೆ ನೋವು ಮಾಡುವುದು ಇಂಥ ಒಂದು ಪರಿಸ್ಥಿತಿ ಎದುರಾಗಲಿದೆ ದುಡುಕಬೇಡಿ. ಸೂಕ್ಷ್ಮವಾಗಿ ಗಮನಿಸಿ ನೋಡಿ ಇವತ್ತು ಯಾವುದಾದರೂ ಪಶು ಪಕ್ಷಿಗಳಿಗೆ ಒಂದಿಷ್ಟು ಸೇವೆ ಮಾಡಿ ಒಳ್ಳೆಯದಾಗಲಿದೆ.

 

ಮಿಥುನ– ಇವತ್ತು ಆದಷ್ಟು ಹೊರಗಡೆ ತಿನ್ನಲು ಹೋಗಬೇಡಿ. ಮಾತು, ಜಗಳ, ಉದ್ರೇಕ, ಉಲ್ಪಣ ಅದಷ್ಟು ಸೌಮ್ಯವಾಗಿ ಇರಲು ಪ್ರಯತ್ನ ಮಾಡಿ ಯಾವ ಕಾಂಟ್ರವರ್ಸಿ ಬೇಡ! ದುಡಕಬೇಡಿ.

 

ಕಟಕ– ಬೆಳಗ್ಗಿನಿಂದ ಸಂಜೆಯವರೆಗೂ ಮಂತ್ರ ಅನುಷ್ಠಾನ! ಯಾವುದಾದರು ವಿಗ್ರಹವಿಟ್ಟುಕೊಳ್ಳಿ. ಮನೆಯಲ್ಲಿ ಗ್ರಹಣ ಛಾಯೆ ಇರುವ ಸಮಯದಲ್ಲಿ ಗರ್ಭಿಣಿ ಸ್ತ್ರೀಯರು, ವಯಸ್ಸಾದವರು, ಅಕಾಲಿಕ ವ್ಯಾಧಿಯಿಂದ ಬಳಲುತ್ತಿರುವವರು ಪುಟ್ಟ ವಿಗ್ರಹವನ್ನು ತಂದಿಟ್ಟುಕೊಂಡು ಅಮ್ಮನವರ ವಿಗ್ರಹ ಇಟ್ಟು ಕೆಂಪು ಪುಷ್ಪವನ್ನಿಟ್ಟು ದುಂ ದುರ್ಗೆಯ ನಮಃ ಎಂದು ಜಪ ಮಾಡಿಕೊಳ್ಳಿ. ಮನಸ್ಸಿಗೆ ನೆಮ್ಮದಿ ದೊರೆಯುವುದು ಸಂಧ್ಯಾ ಕಾಲದಲ್ಲಿ ಪುಟ್ಟ ದೀಪವನ್ನು ಹೊರಗಡೆ ಹಚ್ಚಿಕೊಳ್ಳಿ.

 

ಸಿಂಹ– ಇಂದು ನಿಮ್ಮ ದಿನ ಚೆನ್ನಾಗಿದೆ. ವಿಕೃತ ಭಾವ! ಯಾರನ್ನೂ ನಂಬುವುದಿಲ್ಲ. ನಿಮ್ಮ ಬಳಿ ಎಷ್ಟು ಹುಳಿ ಇದೆ ಗೊತ್ತಾ.? ಅಹಂಕಾರ ಪ್ರಚೋದನೆ ಇರುತ್ತದೆ ಜಾಗರೂಕತೆ.

 

ಕನ್ಯಾ– ಸಣ್ಣ ತೊಳಲಾಟ ಅದು ನಿಮ್ಮ ವಿರುದ್ಧವಾಗಿ ಇರುವುದಿಲ್ಲ! ಗೆಲ್ಲುವ ಸಲುವಾಗಿ ಅಲ್ಲ ಬದಲು ಗೆಲುವಾಗಿರುತ್ತದೆ. ಶತ್ರುಗಳನ್ನು ಗೆಲ್ಲುವಂತ ಒಂದು ದಿನ ಚೆನ್ನಾಗಿದೆ.

 

ತುಲಾ– ಭಾಗ್ಯ ಸ್ಥಾನದಲ್ಲಿ ಒಂದು ತೊಳಲಾಟ. ತಂದೆ, ತಾಯಿ, ಹಿರಿಯರ ಆರೋಗ್ಯ ಅದರಲ್ಲಿ ಜಾಗರೂಕತೆ. ಅವರ ಹೆಸರಿನಲ್ಲಿ ಅರ್ಚನೆ, ಅವರ ಹೆಸರಿನಲ್ಲಿ ಊಟವೂ, ವಸ್ತ್ರವೂ ಏನಾದರೂ ಒಂದು ಕೋಡಿ ಒಳ್ಳೆಯದಾಗುತ್ತದೆ.

 

ವೃಶ್ಚಿಕ– ಅಷ್ಟಮದಲ್ಲಿ ಒಂದು ಪ್ರಭಾವ ಜೋಪಾನ! ವಯಸ್ಸಾದವರು ಮತ್ತು ಅವರ ಆಲೋಚನೆ, ಕಿರಿಕಿರಿ, ನೋವು, ಸಂಕಟ ಹತ್ತಿರದವರಿಂದಲೊ, ಮಕ್ಕಳಿಂದಲೂ ಕದಲುತ್ತದೆ. ಆದಷ್ಟು ಹುಳಿ ಪದಾರ್ಥಗಳನ್ನು ಸೇವಿಸಬೇಡಿ.

 

ಧನಸ್ಸು– ಯಾರೂ ನಿಮಗೆ ಮೋಸ ಮಾಡುವುದು, ಮೋಸ ಮಾಡಿ ಹೋಗುವುದು ಈ ರೀತಿ ನಡೆಯುತ್ತದೆ. ವ್ಯವಹಾರ ನಂಬಿಕೆಗೆ ದ್ರೋಹ, ನಂಬಿಸಿ ಅಥವಾ ನೀವು ಯಾರಾದರನ್ನು ನಂಬಿಸಿ ಮೋಸ ಮಾಡುವುದು ಈ ರೀತಿಯ ಒಂದು ಪ್ರಸಂಗಗಳು ಉಂಟು ಜಾಗರೂಕತೆ.

 

ಮಕರ– ಫ್ರೆಂಡ್ ಶಿಪ್, ಪಾರ್ಟ್ನರ್ಶಿಪ್ ಹತ್ತಿರದವರಿಂದ ಬಹುದೊಡ್ಡ ಪೆಟ್ಟು, ನೋವು ಆದರೂ ಹಣಕಾಸಿನ ವಿಚಾರದಲ್ಲಿ ಯಾವ ರೀತಿಯ ತೊಂದರೆಯಿಲ್ಲ ಒಳ್ಳೆಯದಾಗುತ್ತದೆ.

 

ಕುಂಭ– ಅವಮಾನ, ಅಪಮಾನ, ತೊಳಲಾಟ ಈ ರೀತಿಯ ಒಂದು ಛಾಯೆ ಇರುತ್ತದೆ ಆದರಿಂದ ಬಳಲುತ್ತಿರುತ್ತಾರೆ. ಅದರಿಂದ ಹೊರಬರಲು ಮಂತ್ರ ಅನುಷ್ಠಾನ, ದೇವಿ ಅನುಷ್ಠಾನ, ದೇವಿ ದರ್ಶನ, ದೇವಿ ಪಾರಾಯಣ, ಪೂಜಾ, ಅಭಿಷೇಕ ಮಾಡಿಸಿ ಇರುವ ಹೊರೆ ಕಡಿಮೆಯಾಗುತ್ತದೆ.

 

ಮೀನ– ಸ್ವಲ್ಪ ತಾಯಿಯ ಬಗ್ಗೆ ದೂರದ ಪ್ರಯಾಣ, ದೂರದ ಕೆಲಸ, ದೂರದ ವ್ಯವಹಾರ, ಪರಸ್ಥಳ, ಪರದೇಶ ಈ ವಿಚಾರದಲ್ಲಿ ಒಂದು ತಳಮಳ.! ಇರಲಿದೆ ಜಾಗರೂಕತೆ. ಮಿಕ್ಕಂತೆ ಯಾವ ತೊಂದರೆ ಇಲ್ಲ ಶುಭವಾಗಲಿ.

LEAVE A REPLY

Please enter your comment!
Please enter your name here