ದಿನ ಭವಿಷ್ಯ 09 ಜನವರಿ 2020!

0
294

ಊಟವನ್ನು ಹೇಗೆ ತಿನ್ನಬೇಕು ಎಂಬುದರ ಬಗ್ಗೆ ರವಿಶಂಕರ್ ಗುರೂಜಿ ಅವರು ಇಂದಿನ ಸಂಚಿಕೆಯಲ್ಲಿ ತಿಳಿಸಿಕೊಟ್ಟಿದ್ದಾರೆ. ಊಟವನ್ನು ಬಲಗೈಯಿಂದಲೇ ತಿನ್ನಬೇಕು. ಎಡಗೈನಿಂದ ಯಾವುದೇ ಕಾರಣಕ್ಕೂ ತಿನ್ನಬಾರದು ಅದು ದೂಶ್ಯ ಎಂದು ಹೇಳುತ್ತಾರೆ. ಮನುಷ್ಯನ ಊಟವೇ ಒಂದು ಶಕ್ತಿ, ರೂಪಕ ಹೀಗಾಗಿಯೇ ಶಕ್ತಿ ಅನ್ನಪೂರ್ಣೇಶ್ವರಿ ಎಂದು ಹೇಳುವುದು. ಅಮ್ಮನನ್ನು ನೆನಪಿಸಿಕೊಂಡು ಊಟವನ್ನು ಶುರು ಮಾಡುವುದು ಒಂದು ಪದ್ಧತಿ.! ಬೌಲ್, ಸ್ಪೂನ್ನಲ್ಲಿ ಊಟ ಮಾಡುವುದು ಎಷ್ಟು ಸರಿ! ಕೈಯಿಂದ ಊಟ ಮಾಡಿದರೆ ಏನು ಫಲ ಎಂಬುದನ್ನು ನಮ್ಮ ಹಿರಿಯರು ತಿಳಿಸಿಕೊಟ್ಟಿದ್ದಾರೆ.

 

ಯಾವುದೇ ಕಾರಣಕ್ಕೂ ಸ್ಪೂನ್ಗಳನ್ನು ಬಳಸುತ್ತಿರಲಿಲ್ಲ. ಊಟವನ್ನು ಕೈಯಿಂದಲೇ ಮಾಡುವುದು ಬಹಳ ಒಳ್ಳೆಯದು ಅದರ ಬದಲು ಹೆಚ್ಚಾಗಿ ಇಂದಿನ ದಿನಗಳಲ್ಲಿ ಕಾಣುತ್ತಿರುವುದು ಸ್ಪೂನ್ನ್ಗಳನ್ನು ಬಳಕೆ ಮಾಡಿ ಊಟ ಮಾಡುತ್ತಿರುವುದು ಒಂದು ಬಾರಿ, ಎರಡು ಬಾರಿ ಆದರೆ ಸರಿ.! ಪ್ರತಿಬಾರಿ ಸ್ಪೂನ್ನನಲ್ಲಿ ತಿಂದರೆ ನಿಮ್ಮ ಆರೋಗ್ಯದ ಗತಿಯೇನು.? ಊಟವನ್ನು ಮಾಡುವಾಗ ಸಂಪೂರ್ಣ ಕೈ ಬೆರಳುಗಳನ್ನು ಬಳಸಿ ಅಚ್ಚುಕಟ್ಟಾಗಿ ತಿನ್ನಬೇಕು. ಈ ಒಂದು ಪದ್ಧತಿಯನ್ನು ಅನುಸರಿಸುವ ಬದಲು ಹಲವರು ಚಮಚವನ್ನು ಬಳಸಿ ಊಟ ಮಾಡುತ್ತಾರೆ. ನಮ್ಮ ಹಿರಿಯರು ಅನೇಕ ವಿಚಾರಧಾರೆಗಳನ್ನು ಊಟ ಮಾಡುವಾಗ ತಿಳಿಸುತ್ತಿದ್ದರೂ.

ಊಟ ಮಾಡುವಾಗ ಪಂಕ್ತಿಯಲ್ಲಿ ಕುಳಿತು ಊಟ ಮಾಡುವುದು, ನೆಲದ ಮೇಲೆ ಕುಳಿತು ಊಟ ಮಾಡುವುದು ಒಂದು ಪದ್ಧತಿ.! ಊಟ ಮಾಡುವಾಗ ಅದರದೇ ಆದ ಗೌರವವಿದೆ. ಅನ್ನವನ್ನು ಸ್ವೀಕರಿಸುವಾಗ ಸಂಪೂರ್ಣವಾಗಿ ಐದು ಬೆರಳು ಕೂಡ ಮುಟ್ಟಬೇಕು ಮೂರು ಬೆರಳಿನಲ್ಲಿ ತಿನ್ನುವುದು ಆ ಪದ್ಧತಿಯನ್ನು ಬಿಟ್ಟು ಬಿಡಿ.

 

 

ಅದು ಮಹಾ ದೋಷ.! ಊಟವನ್ನು ಊಟದ ರೂಪದಲ್ಲಿಯೇ ಮಾಡಬೇಕು ತಾಯಿ ಜಗನ್ ಮಾತೆಯನ್ನು ನೆನಪಿಸಿಕೊಂಡು ಭಕ್ತಿಯಿಂದ ಸ್ವೀಕರಿಸಬೇಕು ವಿನಃ ಮೂರು ಬೆರಳಿನಲ್ಲಿ, ಕುಂಕುಮ ಇಡುವ ಬೆರಳಿನಲ್ಲಿ ಮಾತ್ರ ಸ್ವೀಕರಿಸುವುದು ಬಹಳ ತಪ್ಪು! ಮಹಾಪಾಪವೂ ಹೌದು. ಅನ್ನವನ್ನು ಹೇಗೆ ತಿನ್ನಬೇಕು ಯಾವ ರೀತಿ ತಿನ್ನಬೇಕು ಹೇಗೆ ತಿಂದರೆ ಏನು ಲಾಭ? ಮೂರು ಬೆರಳಿನಲ್ಲಿ ತಿಂದರೆ ಏನೆಲ್ಲ ತೊಂದರೆಗಳು ದೋಷಗಳು ಎಂಬುದನ್ನು ಮುಂದಿನ ಸಂಚಿಕೆಯಲ್ಲಿ ಗುರೂಜಿಯವರು ತಿಳಿಸಿಕೊಡಲಿದ್ದಾರೆ.

ಇಂದಿನ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ,

 

ಮೇಷ– ಸರ್ಕಾರದ ಕೆಲಸ, ರಕ್ಷಣಾ ಇಲಾಖೆ, ಮಿಲಿಟರಿ, ಪೊಲೀಸ್ ಇಲಾಖೆ ಈ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಏನೋ ಒಂದು ಪೆಟ್ಟು, ಗಾಯ, ತೊಂದರೆ ಎಡವಟ್ಟುಗಳು ಆಗುವಂಥದ್ದು. ತಾಯಿ ಜಗನ್ಮಾತೆ ಆರಾಧನೆ ಮಾಡಿಕೊಳ್ಳಿ ಸಮಾಧಾನ ದೊರೆಯಲಿದೆ ಶುಭವಾಗಲಿದೆ.

 

ವೃಷಭ– ಪರವಾಗಿಲ್ಲ.! ಕಲಹ ದೋಷ, ಬೆಂಕಿ ದೋಷ, ಅವಘಢದ ದೋಷ ಮನೆಯಲ್ಲಿ ತುಪ್ಪದ ದೀಪ ಹಚ್ಚಿ.! ಮಾತನಾಡಲು ಹೋಗಿ ಯಾವುದೋ ಕಾಂಟ್ರವರ್ಸಿಗೆ ಸಿಕ್ಕಿ ಹಾಕಿಕೊಳ್ಳುತ್ತೀರಿ.

 

ಮಿಥುನ– ಆಪರೇಷನ್ ಗೆ ಹೋಗುವ ಸಂಭವವಿದೆ. ಯಾವುದೊ ಕಾಯಿಲೆಯ ಒಂದು ಸಮಸ್ಯೆಯಿದೆ. ಆರೋಗ್ಯದ ಒಂದು ಆಪತ್ತಿನ ಒಂದು ತೊಂದರೆ ಇದೆ. ಮಲಗಿಸಿದ್ದರೆ ಇನ್ನಷ್ಟು ಎಳೆದಾಟವಿದೆ ಜಾಗರೂಕತೆ. ಮನೆಯ ಮುಂದೆ ಒಂದು ಬೂದುಗುಂಬಳ ಕಾಯಿ ದೀಪವನ್ನು ಹಚ್ಚುವಂತಹ ಕೆಲಸ ಮಾಡಿ ಶುಭವಾಗಲಿದೆ.

 

ಕಟಕ– ಪ್ರಮುಖ ನಿರ್ಧಾರ, ವ್ಯವಹಾರ, ಮೂಲಕ ವ್ಯಾಪಾರ, ಮನೆ, ಭೂಮಿ, ಕುಟುಂಬದವರ ಆರೋಗ್ಯ ಆಪತ್ತು, ಕುತ್ತು ಎದುರಾಗುವಂತಹ ಸನ್ನಿವೇಶಗಳು ಇರಲಿರುವ ಒಂದು ದೋಷ.

 

ಸಿಂಹ– ಉಗ್ರ, ವ್ಯಾಘ್ರ, ನನ್ನದೇ ನಾನು ಮಾಡಿದ್ದೇ ಎಲ್ಲ ಎಂಬ ಕಬಳಿಕೆಗೆ ಹೋಗಿ ಬಿಡುತ್ತೀರಿ. ಆ ರೀತಿಯ ಒಂದು ಭಾವ ಬೇಡ.

 

ಕನ್ಯಾ– ಎಲ್ಲೊ ಒಂದು ಪೆಟ್ಟು ಅತ್ತೆ, ಅತ್ತೆಯ ಸಮಾನ, ಚಿಕ್ಕಮ್ಮ, ದೊಡ್ಡಮ್ಮ, ಅಲ್ಲೊಂದು ಕಿರಿಕಿರಿ, ತೊಳಲಾಟ ನೋವು ಉಂಟು. ಶಿವನ ದರ್ಶನ, ಶಿವ ಅಭಿಷೇಕ, ತೀರ್ಥ ಕ್ಷೇತ್ರ, ಕಾಶಿ ತೀರ್ಥ ಸೇವಿಸಿ, ಜಳಕ ಮಾಡಿ ಶುಭವಾಗಲಿದೆ.

 

ತುಲಾ– ಭಾಗ್ಯವನ್ನು ಕೆಡಿಸಿಕೊಳ್ಳುತ್ತೀರಿ. ಇರುವ ಅಧಿಕಾರವನ್ನು ಕಾಲಲ್ಲಿ ಒದ್ದುಕೊಳ್ಳುತ್ತೀರಿ. ಯಾರೊಂದಿಗೂ ಜಗಳ ಮಾಡುತ್ತೀರಿ, ಹೊಡೆದಾಟಕ್ಕೆ ನಿಲ್ಲುತ್ತೀರಿ ದರ್ಪ ತೋರಿಸುತ್ತೀರಿ. ಯಾವುದು ಶಾಶ್ವತವಲ್ಲ ದುಡುಕಬೇಡಿ ಜಾಗರೂಕತೆ ಶುಭವಾಗಲಿ.

 

ವೃಶ್ಚಿಕ– ಮನೆ ವೇದನ, ಪುತ್ರ ವೇದನ, ಮಾತೃ ವೇದನ, ಕುಟುಂಬ ವೇದನಾ ಏನ್ನಾದರೂ ಒಂದು ತಂದು ಇಟ್ಟುಕೊಳ್ಳುತ್ತೀರಿ. ಗ್ರಹಣದ ರೀತಿಯ ಛಾಯೆ ಮೂಡಲಿದೆ. ಮನೆಯ ಮುಂದೆ ಒಂದು ತೆಂಗಿನ ಕಾಯಿಯ ದೀಪವನ್ನು ಹಚ್ಚಿ ಶಾಂತಸ್ಥ.!

 

ಧನಸ್ಸು– ವ್ಯವಹಾರದಲ್ಲಿ ಉಗ್ರತ್ವ, ವ್ಯಾಪಾರದಲ್ಲಿ ಉಗ್ರತ್ವ, ಕ್ರೋಧತ್ವಕ್ಕೆ ಒಳಗಾಗುತ್ತೀರಿ. ಮನೆಯಲ್ಲಿ ಬೆಲ್ಲದ ದೀಪ ಹಚ್ಚುವುದೊ, ಸುಬ್ರಹ್ಮಣ್ಯ ದೇವಾಲಯದಲ್ಲಿ ಬೆಲ್ಲದ ದೀಪವನ್ನು ಹಚ್ಚುವುದೊ ಮಾಡಿ ಒಳ್ಳೆಯದಾಗಲಿದೆ.

 

ಮಕರ– ಪಾರ್ಟ್ನರ್ ಶಿಪ್, ಫ್ರೆಂಡ್ ಶಿಪ್ ಈ ವ್ಯವಹಾರಗಳಿಗೆ ಹೋಗಬೇಡಿ. ಯಾವುದೇ ಡಾಕ್ಯುಮೆಂಟ್ಸ್ ದಾಖಲಾತಿಗಳಿಗೆ ಸಹಿ ಹಾಕಲು ಹೋಗಬೇಡಿ. ತಾಯಿ ಆಶಯವನ್ನು ಪಡೆದುಕೊಳ್ಳಿ, ತಾಯಿಯ ಶಾಪಕ್ಕೆ ತುತ್ತಾಗದಿರಿ ಶುಭವಾಗಲಿ.

 

ಕುಂಭ– ಆಲಯ, ದೇವಾಲಯ, ಸಮಾಜಕಾರ್ಯಾಲಯ ಯಾವುದೋ ಒಂದು ದೈವ ಕಾರ್ಯ ನಡೆಯಲಿದೆ. ಆದರೆ ಧಗ ಧಗ ಎಂದು ಉರಿಯಲಿದೆ ಪೈಲ್ಸ್, ಪಿಸ್ತೂಲ ಸಮಸ್ಯೆ ಇದ್ದರೆ ಉಲ್ಬಣಿಸಲಿದೆ. ಮಾತನಾಡುವಾಗ ಹೆಚ್ಚು ಜಾಗರೂಕತೆ.

 

ಮೀನ– ಪ್ರಯಾಣದಲ್ಲಿ ಒಂದು ಜಾಗರೂಕತೆ. ವಾಹನದಲ್ಲಿ ಒಂದು ಕಿರಿಕಿರಿ. ತುಂಬು ಗರ್ಭಿಣಿಯರು ಬಹಳ ಎಚ್ಚರಿಕೆ ಅದರಲ್ಲೂ ಈ ೦೯,೧೦,೧೧ ದಿನಾಂಕದವರೆಗೂ ಬಹಳ ಎಚ್ಚರಿಕೆ! ಆದಷ್ಟು ಮನೆಯಲ್ಲಿ ವಿಷ್ಣು ಸಹಸ್ರನಾಮ ಪಠಿಸಿ ಕೇಳುತ್ತಿರಿ. ಸ್ಕಂದ ಕವಚವನ್ನು ಓದುವುದರಿಂದ ಇಂಥ ದೋಷಗಳಿಂದ ಮುಕ್ತರಾಗಬಹುದು.

LEAVE A REPLY

Please enter your comment!
Please enter your name here