ಹಿರಿಯರ ಶಾಪದ ಬಗ್ಗೆ ಶ್ರೀ ರವಿಶಂಕರ್ ಗುರೂಜಿಯವರು ಇಂದಿನ ಸಂಚಿಕೆಯಲ್ಲಿ ತಿಳಿಸಿಕೊಟ್ಟಿದ್ದಾರೆ. ಎಲ್ಲಾ ಕಾರ್ಯ, ಏನ್ನೆಲ್ಲಾ ಪೂಜೆ ಹಿರಿಯರಿಗೆ ಮಾಡುತ್ತಿದ್ದೇವೆ! ಆದರೂ ಯಾಕೋ ಯಶಸ್ಸನ್ನು ಕಾಣುತ್ತಿಲ್ಲ. ನಾವು ಹೇಳಿಕೊಟ್ಟ ತತ್ತ್ವಗಳು ಇನ್ನೊಬ್ಬರು ಗೆದ್ದುಕೊಂಡು ಸಾಧಿಸುತ್ತಿದ್ದಾರೆ ವಿನಃ ನಮಗೆ ಗೆಲುವು, ಯಶಸ್ಸು ಕಾಣುತ್ತಿಲ್ಲವಲ್ಲ ಎಂದರೆ ಅಲ್ಲೊಂದು ಪಿತೃಶಾಪ. ಅಲ್ಲೆಲ್ಲೋ ಒಂದು ಹಿರಿಯರ ಶಾಪ.! ನಾವು ಏನು ಮಾಡುತ್ತಿದ್ದೇವೆ ಅದರ ಅರಿವು ನಮಗೆ ಇಲ್ಲ. ಅದು ನಮಗೆ ನೇರ ಶಾಪ, ನಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ ತಟ್ಟುತ್ತದೆ. ನಾವು ಒಳ್ಳೆಯ ಕೆಲಸಗಳನ್ನು ಮಾಡಿಕೊಂಡು ಹೋದರೆ ಅದು ನಮ್ಮ ಮೊಮ್ಮಕ್ಕಳು, ಮಕ್ಕಳಿಗೆ ದಾರಿ ದೀಪವಾಗುತ್ತದೆ.
ಹಿರಿಯರನ್ನು ನೆನಪಿಸಿಕೊಳ್ಳದೆ ಮಾಡುವ ಯಾವುದೇ ಕೆಲಸ ಕಾರ್ಯಗಳು ನಿಷ್ಫಲ! ಹಾಗಾಗಿ ಪೂಜೆಯನ್ನು ನೈವೇದ್ಯ ಒಂದು ದೀಪ ಆದರೂ ಹಚ್ಚಿದಲ್ಲಿ ಒಂದು ವಿಶೇಷತೆ ಇದೆ. ಒಂದು ಪುಟ್ಟದಾಗಿ ಬೆಳಗುವ ದೀಪ ಸಾಕು ನಂದಾದೀಪ ಬೇಕಿಲ್ಲ.! ದೀರ್ಘವಾಗಿ ಹರಿಯುವ ಎರಡು ಇಂಚಿನ ದೀಪವನ್ನು ಬಳಸಿ ಊರಿಯುವ ಹಾಗೆ ಮಾಡಿ. ಮೂರು ಇಂಚಿನ ದೀಪವಾದರೆ ಅತ್ಯುತ್ತಮ. ದೀಪಕ್ಕೆ ಆದಷ್ಟು ನೆನಪಿಟ್ಟುಕೊಳ್ಳಿ ಶುದ್ಧವಾದ ಎಣ್ಣೆ ಬಳಸಲಿಕ್ಕೆ ಪ್ರಯತ್ನ ಮಾಡಿ! ಇಲ್ಲ ನಿಮ್ಮ ಶಕ್ತಿ ಇದ್ದರೆ ಒಂದಿಷ್ಟು ತುಪ್ಪವನ್ನು ಹಾಕಿ. ಇಲ್ಲ ಅಂದರೆ ಒಂದೆರಡು ರೀತಿಯ ಎಣ್ಣೆಯನ್ನು ಮಿಶ್ರಣ ಮಾಡಿ ಪುಟ್ಟದಾಗಿ ಹಾಕಿ. ಪ್ರತಿಯೊಂದಕ್ಕೂ ಒಂದೊಂದು ರೀತಿಯ ನಿಯಮ ಇರುತ್ತದೆ.
ಹಾಗೆಯೇ ಹಿರಿಯ ಫೋಟೋವನ್ನು ಎಲ್ಲಿ ತೂಗು ಹಾಕಬೇಕು ಎಂಬುದಕ್ಕೆ ಒಂದು ನಿಯಮವಿದೆ. ಪ್ರತಿಯೊಬ್ಬರೂ ಹಿರಿಯರ ಫೋಟೊವನ್ನು ಮನೆಯ ದಕ್ಷಿಣದ ಗೊಡಗೆ ಹಾಕಬೇಕು. ಯಾಕೆ ಹಾಲಲ್ಲಿ ಹಾಕಬೇಕು ಎಂದರೆ ಯಾರೇ ಹಿರಿಯರು, ಗುರುಗಳು, ನಮಗೆ ಬೇಕಾದವರು, ಆತ್ಮೀಯರು ನಮ್ಮ ಮನೆಗೆ ಬಂದಾಗ ಅವರನ್ನು ನೋಡಿದಾಗ ಎಂಥ ದೊಡ್ಡ ಮನಸ್ಥಿತಿಯವರು, ಎಂದು ಹೇಳಿ ಅವರು ನೆನಪಿಸಿಕೊಳ್ಳುತ್ತಾರೆ. ಹಾಗಾಗಿ ಮನೆಯ ಹಾಲ್ ನಲ್ಲಿ ದಕ್ಷಿಣದ ಗೋಡೆಯ ಮೇಲಕ್ಕೆ ಹಾಕಬೇಕು. ನಿತ್ಯ ಫೋಟೋ ಮೇಲೆ ಒಂದು ಪುಷ್ಪವನ್ನು ಇಡುವ ಅಭ್ಯಾಸ ಮಾಡಿಕೊಳ್ಳಿ. ಪ್ಲಾಸ್ಟಿಕ್ ಹಾರ, ಪ್ಲಾಸ್ಟಿಕ್ ಮಾಲೆ, ಹೂವನ್ನು ಹಾಕಬಾರದು.
ನೀವು ದೇವರ ಫೋಟೊವನ್ನು ನೋಡುತ್ತಿರೊ, ಇಲ್ಲವೋ! ಆದರೆ ಹಿರಿಯರ ಫೋಟೋ ನೋಡಿ ನಮಸ್ಕರಿಸಿ ನಿಮ್ಮ ನಿತ್ಯದ ಕೆಲಸವನ್ನು ಆರಂಭಿಸುವುದು ಒಳ್ಳೆಯದು. ಅವರೇ ನಿಮಗೆ ಸೂಕ್ಷ್ಮ ರೂಪದಲ್ಲಿ ಕಾಣುವ ದೈವ.! ಹಿರಿಯರು ನಿಮಗೆ ತಿಳಿಸಿಕೊಕೊಟ್ಟಿರುವ ಅನೇಕ ವಿಚಾರಗಳು ಇಂದು ನಿಮಗೆ ದಾರಿ ದೀಪವಾಗಿದೆ. ಅವರು ಹೇಳಿಕೊಟ್ಟಿರುವ ವಿಚಾರಗಳನ್ನು ಇಂದು ಮರೆತಿದ್ದೇವೆ. ಅವರನ್ನು ಹೆಚ್ಚಾಗಿ ನೆನಪಿಸಿಕೊಂಡು ನಾವು ನಡೆದರೆ ಅವರ ಆಶೀರ್ವಾದವೂ ನಮ್ಮನ್ನು ಕಾಪಾಡುವುದು.
ದಿನನಿತ್ಯ ಫೋಟೋಗೆ ಒಂದು ಹೂವು, ಪುಷ್ಪ, ಒಂದು ದೀಪವನ್ನು ಹಚ್ಚಿ ಹೊರಡಿ ಸಂಧ್ಯಾ ಕಾಲದಲ್ಲಿ ದೀಪ ಹಚ್ಚಿದರೆ ಶ್ರೇಷ್ಠ.! ಎಂಟು ಅಮಾವಾಸ್ಯೆ ಮಧ್ಯಾಹ್ನದ ವೇಳೆ ೧೨/ ೧೨:೩೦ ರ ಸಮಯದಲ್ಲಿ ಒಂದು ದೀಪ ಹಚ್ಚಿ ಒಂದೈದು ಜನಕ್ಕೆ ಪ್ರಸಾದವನ್ನು ತಯಾರಿಸಿ ನೀಡಿ. ಅಥವಾ ಅದನ್ನು ಭಿಕ್ಷುಕರಿಗೆ, ಗೋವಿಗೆ ಹಂಚಿ ತಿನ್ನುವ ಪ್ರಮೇದ ಮಾಡಿ ನೋಡಿ ಆ ಮನೆ ನಂದನವನವಾಗುತ್ತದೆ ಅದು ನಿಶ್ಚಿತ. ಯಾರ ಮನೆಯಲ್ಲಿ ವಂಶಾಭಿವೃದ್ಧಿ ಇಲ್ಲ, ವಂಶವೆಲ್ಲಾ ದಿಕ್ಕಾಪಾಲಾಗಿದೆ. ಅಂಥವರು ಈ ರೀತಿಯ ಒಂದು ಸಂಕಲ್ಪ ಮಾಡಿಕೊಂಡು ಹೋಗುವಂಥದ್ದು ಮಾಡಿಕೊಳ್ಳಿ ಒಳ್ಳೆಯದಾಗಲಿದೆ.
ಇಂದಿನ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ,
ಮೇಷ– ಮಾತು ಬಲ್ಲವನಿಗೆ ಜಗಳವಿಲ್ಲ ನಿಮ್ಮ ಮಾತೇ ಇಂದು ನಿಮ್ಮ ಎಲ್ಲಾ ಕೆಲಸಗಳಿಗೂ ಬಾಣವಾಗಿರುತ್ತದೆ. ನಿಮ್ಮ ಮಾತಿನ ಮೂಲಕ ಎಲ್ಲಾ ಕೆಲಸ, ಕಾಯಕವನ್ನು ಮಾಡಿಕೊಳ್ಳುತ್ತೀರಿ. ನಿಮ್ಮ ಮಾತಿನ ಮೂಲಕವೇ ನೀವು ಗೆಲ್ಲುತ್ತೀರಿ ಅಂಥದ್ದೊಂದು ತಾಕತ್ತು ನಿಮಗಿರುತ್ತದೆ ಶುಭ ಆಗಲಿ.
ವೃಷಭ– ಎನೋ ಒಂದು ಅಂತಕ, ಭಯ, ಮನೆಯ ವಿಚಾರ, ವ್ಯವಹಾರ ವಿಚಾರ, ಭೂಮಿ ವಿವಾರ, ಆರೋಗ್ಯ ವಿಚಾರದಲ್ಲಿ ಒಂದು ತಲ್ಲಣ? ಆದಷ್ಟು ಹುಳಿ ಪದಾರ್ಥದಿಂದ ದೂರವಿರಿ.
ಮಿಥುನ– ಯಾವುದೂ ನಡೆದು ಹೋದ ಚಿಂತೆ, ಕಳೆದು ಹೋದ ಚಿಂತೆ, ಯಾವುದೊ ಚಿಂತೆ ತಾಯಿ ಚಿಂತೆ, ತಂದೆ ಚಿಂತೆ, ತಮ್ಮನ ಚಿಂತೆ, ತಾಯಿಯ ಆರೋಗ್ಯದ ಚಿಂತೆ ನಿಮ್ಮನ್ನು ತಳಮಳ ಮಾಡುತ್ತದೆ. ಯಾಕೋ ಮನಸ್ಸಿನಲ್ಲಿ ಶಕ್ತಿ ಇರುವುದಿಲ್ಲ. ಓಂ ದುಂ ದುರ್ಗೆಯ ನಮಃ ಎಂದು ಜಪ ಮಾಡಿಕೊಳ್ಳಿ.
ಕಟಕ– ಇವತ್ತು ಆಂಜೆನೇಯ ಸ್ವಾಮಿಯ ಸ್ತೋತ್ರವನ್ನು ಪಠಿಸಿ. ಇಂದು ನೀವು ಮಾಡುವ ಎಲ್ಲ ಕೆಲಸ ಕಾರ್ಯಗಳು ಬಹಳ ವೇಗವಾಗಿ, ಚುರುಕಾಗಿ ಕೆಲಸ ಮಾಡುತ್ತೀರಿ. ಯಥೇಚ್ಛವಾಗಿ ಕೀರ್ತಿ ಯಶಸ್ಸು ಲಾಭವನ್ನು ತಂದು ಕೊಡುವಂತೆ ದಿನ ಎಂದ ಆಗಿರುತ್ತದೆ ಶುಭವಾಗಲಿ.
ಸಿಂಹ– ಸ್ವಲ್ಪ ತಲ್ಲಣ ಉದ್ಯೋಗದಲ್ಲಿ, ಕೌಟುಂಬಿಕ ನಿಮಿತ್ತ, ವ್ಯವಹಾರ ನಿಮಿತ್ತ, ತಾಯಿ ನಿಮಿತ್ತ, ಗಲಿಬಿಲಿಯ ದಿನ ತೊಂದರೆ ಏನಿಲ್ಲಾ ಖರ್ಚಿನ ಭಾವ.!
ಕನ್ಯಾ– ಇವತ್ತು ನಿಮಗೆ ಒಂದು ಗೊಂದಲ ಬುದ್ಧಿ ಮಾತು, ಕೇಳಬೇಕಾ, ಮನಸ್ಸಿನ ಮಾತು ಕೇಳಬೇಕು ಎಂಬ ಉಂಟಾಗುತ್ತದೆ ಬುದ್ಧಿಮಾತು ವ್ಯಾವಹಾರಿಕ ವಿಚಾರವಾಗಿ ಮನಸ್ಸಿನ ಮಾತು ಧಾರ್ಮಿಕ ವಿಚಾರವಾಗಿ ಎರಡೂ ಕಲಿತುಬಿಟ್ಟರೆ ಕಿಚಡಿ ಆದಂತೆ. ಇವತ್ತು ಮನಸ್ಸಿನ ಮಾತು ಗೊಂದಲದ ಮಾತು ಎರಡರಲ್ಲಿ ಯಾವ ಮಾತು ಕೇಳಬೇಕು ಎಂಬ ಒಂದು ಗಲಿಬಿಲಿ ಇರುತ್ತದೆ ಜಾಗರೂಕತೆ.
ತುಲಾ– ಉದ್ಯೋಗದಲ್ಲಿ ಒಂದು ತಳಮಳವಿದೆ ಆದರೂ ದಿನದ ಅಂತ್ಯಕ್ಕೆ ಒಳ್ಳೆಯ ಶುಭ ಸುದ್ದಿಯನ್ನು ಕೇಳುವಿರಿ ಯೋಚಿಸಬೇಡಿ ನಿಶ್ಚಿಂತೆಯಿಂದ ಕೆಲಸ ಮಾಡಿ ಶುಭವಾಗಲಿ.
ವೃಶ್ಚಿಕ– ಇಂದು ಒಳ್ಳೆಯ ದಿನ. ಹಾಲು, ಬೆಣ್ಣೆ, ತುಪ್ಪ, ಮೊಸರು, ಜೀವನ ಆನಂದಮಯ. ನೀವು ಮಾಡುವ, ನೀವು ನೋಡುವ ಪರಿ ಖುಷಿಯಾಗಿರುತ್ತದೆ. ನಿಮ್ಮ ನೋಟ ಮತ್ತು ಕೆಲಸಗಳಲ್ಲಿ ಅನಂದ ಶುಭ ಸುದ್ದಿ.
ಧನಸ್ಸು– ಮಾಡುವ ಕೆಲಸದಲ್ಲಿ ಅದಮ್ಯ ಪರಿಶ್ರಮ ಉತ್ತಮ ಲಾಭ.! ಪರಿಶ್ರಮಕ್ಕೆ ತಕ್ಕಂತ ಫಲ, ಲಾಭ ನೋಡುತ್ತೀರಿ. ಆಮದು, ರಫ್ತು, ಮೀನುಗಾರಿಕೆ ಇಂಥ ಕೆಲಸಗಳಲ್ಲಿರುವವರಿಗೆ ಯಶಸ್ಸಿನ ದಿನ.
ಮಕರ– ಕೊಡುವುದು, ತೆಗೆದುಕೊಳ್ಳವುದು, ಆತ್ಮೀಯರು ಕಲಾ ವೇದಿಕೆ ಹಾಲಿನ ವ್ಯವಹಾರ, ಹಣ್ಣಿನ ವ್ಯಾಪಾರ ತರಕಾರಿ ವ್ಯಾಪಾರ, ಇವೆಂಟ್ ಒಳ್ಳೆಯ ಲಾಭದ ದಿನ.
ಕುಂಭ– ಯಾವುದೋ ಒಂದು ತಳಮಳ, ಗೊಂದಲ ಇರಲಿದೆ. ತಾಯಿಗೆ ಸಂಬಂಧಿಸಿದ ವಿಚಾರದಲ್ಲಿ ಏನೋ ಒಂದು ಖುಷಿ ನೋಡುತ್ತೀರಿ. ಹಾಲು, ಬೆಣ್ಣೆ, ತುಪ್ಪ ಸವಿಯುವಂತ ದಿನ.
ಮೀನ– ಹಾಲು, ನೀರು, ಮೀನು, ಲಿಕ್ಕರ್, ಗ್ಯಾಸ್ಟಿಕ್ ಸಿಮೆಂಟ್ ಕನ್ಸ್ಟ್ರಕ್ಷನ್ ಕೆಲಸದಲ್ಲಿದ್ದರೆ ಸ್ವಲ್ಪ ತಳಮಳದ ದಿನ ಶುಭವಾಗಲಿ.