ದಿನ ಭವಿಷ್ಯ 07 ಜನವರಿ 2020!

0
332

ಮನೆಯಲ್ಲಿ ಹಿರಿಯರ ಪೂಜೆ ಇದು ಎಲ್ಲರೂ ಕೂಡ ಮಾಡಿಕೊಳ್ಳಬೇಕು. ದೈವ ಬಲವಿದ್ದರೆ ಏನಂತೆ! ಗುರು ಬಲವಿದ್ದರೆ ಏನಂತೆ.! ಆದರೆ ಪಿತೃ ಬಲವಿಲ್ಲದಿದ್ದರೆ, ಹಿರಿಯರ ಬಲವಿಲ್ಲದಿದ್ದರೆ ಅವನು ಜೀವಮಾನದಲ್ಲಿ ಏಳಿಗೆ ಆಗುವುದಿಲ್ಲ ಅನ್ನುವ ಮಾತು ಧರ್ಮಶಾಸ್ತ್ರದಲ್ಲಿ ಉಲ್ಲೇಖವಾಗಿದೆ. ಭೀಷ್ಮಾಚಾರ್ಯರು ಪ್ರತಿ ಅಮಾವಾಸ್ಯೆ ಸಮಯದಲ್ಲಿ ತರ್ಪಣ ಬಿಡುತ್ತಿರುತ್ತಾರೆ. ಹಿರಿಯರ ಹೆಸರಿನಲ್ಲಿ ತರ್ಪಣವನ್ನು ಬಿಡುತ್ತಾರೆ. ತನ್ನ ತಂದೆಯ ಹೆಸರಿನ ಮೂಲಕ ದರ್ಬೆಯಲ್ಲಿ ತರ್ಪಣ ಬಿಡಬೇಕು.! ಬಿಡುತ್ತಿರುವ ಸಂದರ್ಭದಲ್ಲಿ ತಂದೆಯಾದ ಶಾಂತನು ತುಂಬಾ ಖುಷಿಯಾಗುತ್ತಾರೆ.

 

ಖುಷಿಯಾಗಿ ನನ್ನ ಮಗ ಎಷ್ಟು ಒಳ್ಳೆಯ ಸೇವೆ ಮಾಡುತ್ತಿದ್ದಾನೆ ಎಂದು ಖುಷಿ ಪಡುತ್ತಾರೆ. ಅವರ ತಂದೆ ಭೀಷ್ಮ ಉತ್ತಮ ಆಚಾರ್ಯ ಎಂದು ಅವನ ಎದುರೇ ಬಂದು ನಿಂತು ತರ್ಪಣ ತೆಗೆದುಕೊಳ್ಳಲು ಕೈಚಾಚಿ ನಿಲ್ಲುತ್ತಾರೆ. ಆ ಸಮಯದಲ್ಲಿ ಭೀಷ್ಮರು ಹೋಗಿ ಆಚೆ ತಂದೆ! ನಿಮಗೆ ಕೊಡುವುದಿಲ್ಲ. ದರ್ಬೆಯ ಮುಖಾಂತರವೇ ಅಸೂಕ್ಷ್ಮ ರೀತಿಯಲ್ಲಿ ನಿಮಗೆ ಕೊಡುತ್ತೇನೆ ಸೇವಿಸಿ ಎಂದು ಹೇಳುತ್ತಾರೆ. ನಿಮಗೆ ಎಷ್ಟೇ ಪ್ರೀತಿ ಇದ್ದರೂ ಕೂಡ ನಾನು ಈ ರೀತಿ ಮಾಡುವ ಹಾಗಿಲ್ಲ.! ನಾನು ಮೃತ್ಯು ಹೊಂದಿದಾಗ ನಿನ್ನ ಸೇವೆಯನ್ನು ಮಾಡುತ್ತೇನೆ, ಅಲ್ಲಿಗೆ ಬಂದು ಮಾತನಾಡಿಸುತ್ತೇನೆ ಅದು ನಿಶ್ಚಿತ ಆದರೆ ಈ ಭೂಲೋಕದಲ್ಲಿ ಕೆಲವೊಂದು ಕಟ್ಟುಪಾಡು ಇದ್ದಾವೆ.

 

ಹಿರಿಯರನ್ನು ಹಾಗಾಗಿ ನಾವು ನಿತ್ಯ ನೆನಪಿಸಿಕೊಳ್ಳಬೇಕು ಈ ವಿಚಾರದಲ್ಲಿ ಭೀಷ್ಮ ಅವರ ಹೆಸರನ್ನು ಎಲ್ಲರೂ ನೆನಪಿಸಿಕೊಳ್ಳಲೇಬೇಕು. ಭೀಷ್ಮರು ತಮ್ಮ ಹಿರಿಯರಿಗೆ ಮಾಡುತ್ತಿದ್ದಂತ ಸೇವೆ ಅಪರಿಮಿತ.! ದಿನ ನಿತ್ಯ ನಿಮ್ಮ ಹಿರಿಯರಿಗೆ ಪುಟ್ಟ ಪ್ರಸಾದ ರೂಪದಲ್ಲಿ, ನೈವೇದ್ಯ ರೂಪದಲ್ಲಿ ಬೆಳಗ್ಗೆ ತಿಂಡಿ ಏನು ಮಾಡುತ್ತಿರೊ, ಮಾಡಿದ ತಕ್ಷಣ ಎರಡು ಬಟ್ಟಲಿನಲ್ಲಿ ಹಾಕಿಕೊಳ್ಳಿ. ಒಂದು ದೇವರಿಗೆ ನೈವೇದ್ಯ, ಮತ್ತೊಂದು ಆ ಹಿರಿಯರಿಗೆ ನೈವೇದ್ಯ ದೇವರ ನೈವೇದ್ಯ ಪೂಜೆ ಆದ ಮೇಲೆ ಯಾರಿಗಾದರೂ ನೀವು ಕೊಡಿ. ಆದರೆ ನಿಮ್ಮ ಹಿರಿಯರ ಮುಂದೆ ಇಟ್ಟಂತ ನೈವೇದ್ಯವನ್ನು ನೀವು ಅಥವಾ ನಿಮ್ಮ ಕುಟುಂಬದವರೊಡನೆ ಸೇರಿ ಸೇವಿಸಿ. ಸಂಜೆ ಬಂದಾದರೂ ಅದನ್ನು ಸೇವಿಸಿ. ವೃತ್ತಿ ಸಂಬಂಧಿತವಾಗಿ, ಕೌಟುಂಬಿಕ ಸಂಬಂಧಿತವಾಗಿ, ಗೆಲುವು ನಿಶ್ಚಿತ ಮತ್ತಷ್ಟಿದೆ ಸಂಕಲ್ಪಗಳ ಬಗ್ಗೆ ಶುಭವಾಗಲಿ.

ಇಂದಿನ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ,

ಮೇಷ– ಇಂದು ನಿಮ್ಮ ದಿನ ಚೆನ್ನಾಗಿದೆ. ಸರ್ಕಾರ, ಸ್ವಂತ ನಿರ್ಧಾರ, ಸ್ವಂತ ವ್ಯಾಪಾರ, ಟ್ರಾವೆಲ್ಸ್, ಬೇಕರಿ, ಹಣ್ಣು ಹಂಪಲು, ಬಂಗಾರ, ಚಿನ್ನದ ಅಂಗಡಿ, ಬಟ್ಟೆ ಅಂಗಡಿ, ಜ್ಯೂಸ್ ,ತರಕಾರಿ ಇವುಗಳಲ್ಲಿ ಬರುತ್ತಿರುವವರಿಗೆ ಅದ್ಭುತವಾದಂತಹ ಅನುಕೂಲಕರವಾದಂತಹ ದಿನ ಶುಭವಾಗಲಿದೆ.

 

ವೃಷಭ– ಸ್ವಲ್ಪ ಒತ್ತಡ ಅನ್ನಿಸಿದರೂ ಅಂತ ಯಾವ ರೀತಿಯ ತೊಂದರೆಯಿಲ್ಲ. ಸ್ವಲ್ಪ ಮೂರ್ಖರಾಗಿ ಪ್ರವರ್ತಿಸುವ ಸೂರ್ಯ ಪ್ರಭಾವ ಜೋರು ಇರುವ ಕಾರಣ, ಕಷ್ಟ! ಹಾಗಾಗಿ ನಿಮ್ಮಿಂದ ಒಂದು ಬಾಧೆ, ಬೇರೆಯವರಿಂದ ನಿಮಗೆ ಬಾಧೆ ಇರುವಂಥದ್ದು ನಿಶ್ಚಿತ! ಆದಷ್ಟು ದುರ್ಗಾ ಮಂತ್ರವನ್ನು ಜಪ ಮಾಡಿ.

 

ಮಿಥುನ– ಪೈಲ್ಸ್, ಪಿಸ್ತೂಲ್, ಗುಪ್ತ ರೋಗ, ಗುಪ್ತ ಕಾಯಿಲೆ, ಗುಪ್ತಾಂಗ ರೋಗಗಳ ಬಾಧೆ, ಹಾರ್ಟ್, ಲಿವರ್, ಕಣ್ಣು ನೋವು, ಮೈಗ್ರೇನ್, ಸೈನಸ್, ವಿಪರೀತ ಪಿತ್ತ, ಸ್ವಲ್ಪ ಉಲ್ಪಣ ಜಾಗರೂಕತೆ. ಆದರೆ ತುಂಟಾಟಕ್ಕೆ ಕೊನೆಯಿಲ್ಲ ನಿಮ್ಮ ದಿನ ಖುಷಿಯಾಗಿರಿ.

 

ಕಟಕ– ಅಧಿಕಾರದ ದಿನ! ಏಂಥ ಅಧಿಕಾರಿಯಾಗಲಿ ನಿಮ್ಮ ಮುಂದೆ ಇವತ್ತು ಹದ್ದನ್ನು ನೋಡಿದ ಹಾಗೆ ಹಾವು ಹೇಗೆ ಮಲಗುತ್ತದೆಯೋ ಆ ರೀತಿಯ ಒಂದು ಭಾವ.! ಇವತ್ತು ಯಾರಿಗೂ ಹೆದರಬೇಡಿ, ಧೈರ್ಯವಾಗಿ ಮುನ್ನುಗ್ಗಿ ಶುಭವಾಗಲಿದೆ.

 

ಸಿಂಹ– ಇಂದು ನಿಮ್ಮ ದಿನ ಚೆನ್ನಾಗಿದೆ. ವಿಜಯೋತ್ಸವ ಮಾಡುವ ಎಲ್ಲ ಕೆಲಸ, ಕಾರ್ಯ, ವ್ಯವಹಾರ, ವ್ಯಾಪಾರ, ಉದ್ಯೋಗ, ಸನ್ಮಾನ ಒಂದು ರೀತಿ ಗೌರವಯುತವಾದ ಬದುಕು ಕಟ್ಟುವಿರಿ.

 

ಕನ್ಯಾ– ಸೂರ್ಯ ವಿಶೇಷವಾಗಿ ನಿಮಗೆ ಸುಖ ಭಾವದಲ್ಲಿದ್ದು, ಸುಖ ಸಾರದಲ್ಲಿರುವುದರಿಂದ ಒಳ್ಳೆ ಖುಷಿ, ಸಂಭ್ರಮ ನೋಡುವಂಥ ಒಂದು ದಿನ. ದರ್ಪ, ಗೌರವ, ದರ್ಪದ ಜೀವನ.

 

ತುಲಾ– ಯಾವ ರೀತಿಯ ತೊಂದರೆಯಿಲ್ಲ! ಯಾರದ್ದೋ ಸಹಾಯ, ಉದ್ಯೋಗದಲ್ಲಿ, ವ್ಯವಹಾರದಲ್ಲಿ, ವ್ಯಾಪಾರದಲ್ಲಿ ಒಡಹುಟ್ಟಿದವರಿಂದಲ್ಲೋ, ಸ್ನೇಹಿತರು ರೂಪದಲ್ಲೊ, ಆತ್ಮರೂಪದಲ್ಲಿ ಬಂದು ಕಾಪಾಡುತ್ತದೆ ಒಂದು ಕ್ರಮಯವಿದೆ ತೊಂದರೆಯಿಲ್ಲ ಗಾಬರಿ ಪಡಬೇಡಿ.

 

ವೃಶ್ಚಿಕ– ನೀವು ಮಾಡುವ ಎಲ್ಲ ಕೆಲಸ, ಕಾರ್ಯ, ವ್ಯವಹಾರಗಳಲ್ಲಿ ಪ್ರಗತಿ ಪರವಾಗಿ ನಿಲ್ಲತಕ್ಕಂತ ಅದ್ಭುತವಾದ ದಿನ. ಸರ್ಕಾರ, ಗೆಜೆಟೆಡ್ ಆಫೀಸರ್, ಸ್ವಂತ ವ್ಯಾಪಾರ, ಸ್ವಂತ ಉದ್ಯೋಗ, ತರಕಾರಿ ಈ ರೀತಿಯ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದರೆ ವಿಶೇಷ ಅನುಕೂಲ.

 

ಧನಸ್ಸು– ಶುಭ ಸುದ್ದಿಯೊಂದನ್ನು ಕೇಳುವಿರಿ. ಎಂಥ ಒಂದು ಕಷ್ಟವಿದ್ದರೂ, ತೊಂದರೆ ಇದ್ದರೂ ಶುಭ ಸುದ್ದಿಯೊಂದನ್ನು ಕೇಳುತ್ತೀರಿ ಅದು ನಿಶ್ಚಿತ.! ಹಣಕಾಸಿನ ನಿಮಿತ್ತವೂ, ವ್ಯಾಪಾರ ನಿಮಿತ್ತವೋ ಶುಭ ಸುದ್ದಿ ಪಡೆಯುತ್ತೀರಿ. ಶಾಪಿಂಗ್ ಕೂಡ ಜಾಸ್ತಿ!

 

ಮಕರ– ನಿಮಗೂ ಅಷ್ಟೇ ಹಾಲು, ಬೆಣ್ಣೆ, ತುಪ್ಪ ,ಮೊಸರು, ಸಕ್ಕರೆ, ಬಂಗಾರ ,ಬೆಳ್ಳಿ, ಸ್ವಂತ ವ್ಯಾಪಾರ, ಸ್ವಂತ ಕನ್ಸಲ್ಟೆನ್ಸಿ ಈ ರೀತಿಯ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿರುವವರಿಗೆ ಅನುಕೂಲ ಸಿಂಧು ಆಗುವಂಥ ದಿನ.

 

ಕುಂಭ– ಬೇಸರ ಒತ್ತಡದ ಛಾಯೆ! ವ್ಯವಹಾರ, ವ್ಯಾಪಾರ, ಗಾಬರಿ ಅನ್ನಿಸಿದರೂ ಕೂಡ ಮಧ್ಯಾಹ್ನದ ನಂತರ ಗಮ್ಯಕ್ಕೆ ಸರಿಯಾಗಿ ಸೇರಲಿಕ್ಕೆ ದಾರಿಯಾಗುತ್ತದೆ. ಸ್ತ್ರೀಯರಿಗೆ ಸಂಬಂಧಿಸಿದ ವ್ಯವಹಾರ, ವ್ಯಾಪಾರ, ಕೆಲಸ, ಸರಕಾರಕ್ಕೆ ಸಂಬಂಧಿಸಿದ ಕೆಲಸ, ವ್ಯಾಪಾರ, ಸ್ವಂತ ಉದ್ಯೋಗ, ವ್ಯಾಪಾರ ಅಭಿವೃದ್ಧಿ ಸಂಕೇತವಾಗಿ ನಿಲ್ಲುತ್ತದೆ.

 

ಮೀನ– ಎಂಥಾ ಶತ್ರುಗಳನ್ನಾದರೂ ನುಗ್ಗಿಕೊಂಡು, ಭೇದಿಸಿಕೊಂಡು ಹೋಗುವಂತ ಅಭಿಮನ್ಯುವಾಗಿ ತಾಕತ್ತು, ಕೆಲಸಗಳು ವ್ಯವಹಾರದಲ್ಲಿ ಇರುತ್ತದೆ. ಸ್ವಲ್ಪ ಚಿಂತೆ ಮಾಡುತ್ತಾ ಕುಳಿತಿರುತ್ತೀರಿ, ಗಾಬರಿಯಾಗುತ್ತೀರಿ.! ಪಾಂಡುರಂಗ, ವಿಷ್ಣು, ವೇಣುಗೋಪಾಲ, ಕೃಷ್ಣ, ಬಾಲಾಜಿ, ಗೋವಿಂದ ಈ ಒಂದು ಕ್ಷೇತ್ರಕ್ಕೆ ಹೋಗಿ ಒಂದು ಕೆ.ಜಿ ಹೆಸರು ಕಾಳು ಕೊಟ್ಟು ದಾನ ಮಾಡಿ ಒಳ್ಳೆಯದಾಗುತ್ತದೆ ಶುಭವಾಗಲಿ.

LEAVE A REPLY

Please enter your comment!
Please enter your name here