ಇಂದು ವೈಕುಂಠ ಏಕಾದಶಿಯ ಬಹು ವಿಶೇಷ ದಿನ. ಆ ಭಗವಂತನ ಅನುಗ್ರಹ ನಿಮಗೆಲ್ಲ ಆಶೀರ್ವಾದವಾಗಿ ಸದಾ ಸಿಗಲಿ ಎಂಬುದು ರವಿಶಂಕರ್ ಗುರೂಜಿಯವರ ಅಪೇಕ್ಷೆ.! ಅನೇಕ ವ್ಯಕ್ತಿಗಳು ತಾವು ಜೀವಂತವಾಗಿರುವಾಗಲೇ ನಾವು ಭಗವಂತನನ್ನು ನೋಡಬೇಕು.! ಸ್ವರ್ಗ ನೋಡಬೇಕು ಎಂಬ ಯೋಚನೆ ಮಾಡುತ್ತಿರುತ್ತಾರೆ. ಭಗವಂತನ ಬಳಿ ನೀವು ಪ್ರಾರ್ಥನೆಯನ್ನು ಮಾಡುತ್ತೀರಿ ಲಕ್ಷಪಟ್ಟು ಲಕ್ಷ ಪಟ್ಟು ಅರಿತಿರುವ ಸಂಕೇತ ನೀವು ಭಗವಂತನ ಮುಂದೆ ನಿಷ್ಠಾವಂತಿಕೆಯಿಂದ ಬೇಡಿಕೊಳ್ಳಿ.
ಅದೇ ನೀವು ಹರಕೆಯನ್ನು ಸಲ್ಲಿಸಿದಂತೆ ಸಮ. ವೈಕುಂಠ ಎನ್ನುವುದು ನಿಮ್ಮ ಮನಸ್ಸಿನಲ್ಲಿಯೇ ಇದೆ ನೀವು ಎಷ್ಟು ಬಾರಿ ಆ ವೈಕುಂಠವನ್ನು ನೆನೆಸಿಕೊಳ್ಳುತ್ತೀರ ಶಿವನನ್ನು, ದೇವಿಯನ್ನು, ಅಲ್ಲ ಭಗವಂತನನ್ನು ಅಷ್ಟು ನಿಮಗೆ ಆಶೀರ್ವಾದ ಲಭಿಸುತ್ತದೆ. ನಿಮ್ಮ ಮನೆಗೆ ತಳಿರು ತೋರಣ ಕಟ್ಟಿ ನಂತರ ಅಲ್ಲೊಂದು ಶಿವನಾಮ, ದೇವಿ ನಾಮ ಇಟ್ಟು ಒಂದು ಹಸುವಿಗೆ ಪೂಜೆ ಮಾಡಿ. ಯಾಕೆಂದರೆ ಪ್ರತಿಯೊಂದು ಕೋಟಿ ದೈವಗಳು ಹಸುವಿನ ಒಳಗೆ ಇರುವುದರಿಂದ ನಾಲ್ಕು ಬಾಳೆಹಣ್ಣು, ಸಿಹಿ ಇಟ್ಟು ಅದಕ್ಕೆ ಒಂದು ನಮಸ್ತೆ ಮಾಡಿ ಗೋಮೂತ್ರವನ್ನು ಹಸು ನೀಡಿದರೆ ನಿಮ್ಮ ಪುಣ್ಯ ಸೇವಿಸಿ. ಮನೆಗೆ ಒಂದು ಆರತಿ ಬೆಳಗಿ ಒಳಗೆ ಬಂದು ಕುಳಿತುಕೊಳ್ಳಿ.
ನಿರಂತರ ಕೆಲಸಗಳನ್ನು ಮಾಡಿಕೊಳ್ಳಿ ಶುಭವಾಗುತ್ತದೆ. ಒಂದು ಹಿಡಿ ಅವಲಕ್ಕಿಯನ್ನು ನೀವು ಯಾರಿಗಾದರೂ ಕೊಟ್ಟರೆ ಅದು ಮಹಾ ಪ್ರಸಾದವೇ.! ಇವತ್ತು ಆದರೆ ಒಂದಿಷ್ಟು ಐದು ಜನಕ್ಕೆ ಅವಲಕ್ಕಿ ಬೆಲ್ಲವನ್ನು ಕೊಟ್ಟು, ಒಂದಿಷ್ಟು ಏಲಕ್ಕಿಯನ್ನು ಕುಟ್ಟಿ ಪುಡಿ ಮಾಡಿ ಸಣ್ಣದಾಗಿ ಹಂಚುವ ಕೆಲಸ ಮಾಡಿ ವೈಕುಂಠದ ಬಾಗಿಲು ನಿಮ್ಮ ಮನೆಯಲ್ಲಿಯೇ ಇದೆ. ಹೆಚ್ಚಾಗಿ ತಲೆ ಕೆಡಿಸಿಕೊಳ್ಳಬೇಡಿ. ವೈಕುಂಠ ಸೇವೆ ಮಾಡಲಿಲ್ಲ, ಸ್ವರ್ಗದ ಬಾಗಿಲು ನೋಡಲಿಲ್ಲ ಎಂಬ ಭಯ, ಆತಂಕವನ್ನು ಮೊದಲು ಬಿಡಿ.
ಮನೆಯಲ್ಲಿರುವ ದೇವರುಗಳನ್ನು ಬಿಟ್ಟು, ಕಲ್ಲು ಮಣ್ಣಿನ ದೇವರುಗಳ ಸುತ್ತ ಅಲೆಯುತ್ತೀರ ಎಂಬುದು ಹಿರಿಯರ ಒಂದು ಮಾತು ಇವತ್ತು ಅದೇ ನಿಜವಾಗಿದೆ. ನಮ್ಮ ತಂದೆ ತಾಯಿಯೇ ನಿಜವಾದ ದೇವರು, ಕಣ್ಣಿಗೆ ಕಾಣುವ ದೇವರು ಅವರನ್ನು ಚೆನ್ನಾಗಿ ನೋಡಿಕೊಳ್ಳಿ ದೈವವನ್ನು ನೋಡಿಕೊಂಡಂತೆ. ವಯಸ್ಸಾದವರಿಗೆ ಕ್ಷೇತ್ರ ದರ್ಶನ ಮಾಡುವುದು, ಪುಣ್ಯ ದೊಡ್ಡವರಿಗೆ ಪುಣ್ಯಕ್ಷೇತ್ರಗಳಿಗೆ ಕಳುಹಿಸಿಕೊಡಿ ಅದೇ ಶ್ರೇಷ್ಠ.! ಇಂದು ಮನೆಯಲ್ಲಿಯೇ ವೈಕುಂಠ ನೆನಪಿಸಿಕೊಳ್ಳಿ, ಒಂದು ವಿಷ್ಣು ಸಹಸ್ರನಾಮ ಜಪ್ಪಿಸಿಕೊಂಡರೆ ಸಾಕು ಒಳ್ಳೆಯದಾಗಲಿದೆ. ವಿಷ್ಣು ಸಹಸ್ರನಾಮ ಒಂದಕ್ಕೆ ಮಾತ್ರ ನಿಯಮಗಳಿಲ. ಎಲ್ಲಿಯಾದರೂ ನೀವು ಕುಳಿತು ಭಕ್ತಿಯಿಂದ ಓದಬಹುದು ಶುಭವಾಗಲಿ.
ಇಂದಿನ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ,
ಮೇಷ– ವಾಹನ, ಭೂಮಿ, ಮನೆ,ಅಲಂಕಾರ ,ಒಪ್ಪ ಈ ರೀತಿಯ ಒಂದು ಖಷಿ. ವ್ಯವಹಾರದಲ್ಲಿ ವಿಶೇಷ ಪ್ರಗತಿ ಕಾಣ ತಕ್ಕಂತ ಅದ್ಭುತವಾದ ದಿನ. ಕನೆಕ್ಷನ್ ,ಕುಕ್ಕಿಂಗ್, ಬೆಂಕಿ, ರಿಯಲ್ ಎಸ್ಟೇಟ್ ,ಪೊಲೀಸ್ ಇಲಾಖೆ, ರಕ್ಷಣಾ ಇಲಾಖೆ ಕೆಲಸ ಮಾಡುತ್ತಿದ್ದರೆ ವಿಶೇಷ ಪ್ರಗತಿ.
ವೃಷಭ– ಮಷಿನರಿ ಇಲಾಖೆ, ಮೆಕ್ಯಾನಿಕಲ್ ಎಂಜಿನಿಯರ್, ಎಲೆಕ್ಟ್ರಿಕಲ್ ಎಂಜಿನಿಯರ್, ಬಯೋಟೆಕ್ ಇಂಜಿನಿಯರ್ ಈ ರೀತಿ ವಿಭಾಗಗಳಲ್ಲಿ ಕೆಲಸ, ಕಾರ್ಯ ಮಾಡುತ್ತಿರುವವರಿಗೆ ಪರಿಶ್ರಮಕ್ಕೆ ತಕ್ಕಂತ ಫಲ ನೋಡುತ್ತೀರಿ ಶುಭವಾಗಲಿ.
ಮಿಥುನ– ಅಂದುಕೊಂಡಿರುವ ಕೆಲಸಗಳನ್ನು ಮಾಡಿ ಸಾಧಿಸಿ ಕೊಳ್ಳುವಂಥ ದಿನವಾಗಿರುತ್ತದೆ ಯೋಚಿಸಬೇಡಿ. ಸ್ವಲ್ಪ ಒಡಹುಟ್ಟಿದವರು, ಅಪ್ಪ, ಚಿಕ್ಕಪ್ಪ, ಸಹೋದ್ಯೋಗಿಗಳು, ಸ್ನೇಹಿತರು, ಹತ್ತಿರ ಬಂಧುಗಳ ವಿಚಾರದಲ್ಲಿ ಒಂದು ಸಣ್ಣ ಕಿರಿಕಿರಿ ಉಂಟು ಜಾಗರೂಕತೆ.
ಕಟಕ– ಇವತ್ತು ಶುಭ ದಿನ. ವಿಶಿಷ್ಟ ವೃದ್ಧಿ, ಉದ್ಯೋಗ ನಿಮಿತ್ತ, ವ್ಯವಹಾರ ನಿಮಿತ್ತ ಪಡೆಯುತ್ತೀರಿ ತೊಂದರೆ ಇಲ್ಲ.
ಸಿಂಹ– ಯಶಸ್ಸಿನ ದಿನ! ಪೊಸಿಷನ್, ಪ್ರಮೋಷನ್, ಇವತ್ತು ನಿಮ್ಮ ದಿನವೇ ನಿಮ್ಮ ತಾಕತ್ತು, ಪ್ರದರ್ಶನ ಮಾಡುವಂಥ ಒಂದು ದಿನ. ಸಂಪೂರ್ಣ ಯಶಸ್ಸನ್ನು ನೋಡುವ ಅದ್ಭುತ ದಿನ ಗೆಲುವು ನಿಮ್ಮದೇ.
ಕನ್ಯಾ– ಸೋಮವಾರ ತುಂಟತನ ದರ್ಪ, ಖುಷಿ, ನೆಮ್ಮದಿ ಖರ್ಚು ಮಾಡುವಂಥ ದಿನ, ಸುತ್ತಾಟದ ದಿನ ಇವೆಲ್ಲವನ್ನು ನೋಡ ತಕ್ಕಂತ ಒಂದು ಭಾವ ನಿಮ್ಮದಾಗಿರುತ್ತದೆ.
ತುಲಾ– ಸ್ನೇಹಿತರೊಂದಿಗೆ ಪಾಲುದಾರಿಕೆ, ಆತ್ಮೀಯರು, ಎಕ್ಸ್ಪೋರ್ಟ್, ಇಂಪೋರ್ಟ್, ಹಣ್ಣುಗಳ ವ್ಯಾಪಾರ, ತರಕಾರಿಗಳ ವ್ಯಾಪಾರ ಇಂಥ ಒಂದು ವಿಭಾಗದಲ್ಲಿ ತೊಡಗಿಸಿಕೊಂಡಿರುವವರಿಗೆ ಉದ್ಯೋಗಸ್ಥರಿಗೆ ಅನುಕೂಲಕರ ದಿನ.
ವೃಶ್ಚಿಕ– ಒಂದು ಟೆನ್ಷನ್, ಗಾಬರಿ, ಮಧ್ಯಾಹ್ನದ ನಂತರ ತಿಳಿಯಾಗತಕ್ಕದ್ದು, ವಿದ್ಯಾಭ್ಯಾಸದಲ್ಲಿ ಪರಿಶ್ರಮಕ್ಕೆ ತಕ್ಕಂತೆ ಫಲ ನೋಡುತ್ತಿರಿ ಚೆನ್ನಾಗಿದೆ.
ಧನಸ್ಸು– ಲಾಭದ ಮೇಲೆ ಲಾಭ! ಕೃಷಿ, ಶನಿವಾರ ಭಾನುವಾರ ಎರಡು ಖುಷಿಯ ದಿನ. ವೃತ್ತಿ ನಿಮಗೆ ಪಾರ್ಟಿ ಡೇ ಅನ್ನುವ ಪ್ರಭಾವ ಇರತಕ್ಕಂಥ ಒಂದು ದಿನ ಚೆನ್ನಾಗಿದೆ. ಉದ್ಯೋಗ ನಿಮಿತ್ತ ಶುಭ ಸುದ್ದಿ.
ಮಕರ– ವ್ಯವಹಾರ, ವ್ಯಾಪಾರ, ಸ್ತ್ರೀಗೆ ಸಂಬಂಧಿಸಿದ ಕೆಲಸ ಕಾರ್ಯ, ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದರೆ, ಸ್ಪೋರ್ಟ್ಸ್, ಡಾನ್ಸ್ ಕ್ಲಾಸ್, ಮ್ಯೂಸಿಕ್ ಇಂಡಸ್ಟ್ರಿ ಇಂಥ ಒಂದು ವಿಭಾಗಗಳಲ್ಲಿ ಕೆಲಸ ಕಾರ್ಯ ಮಾಡುತ್ತಿರುವವರಿಗೆ ವಿಶೇಷ ಪ್ರಗತಿ ಅನುಕೂಲ ಸಿಂಧು ಆಗುವಂಥ ಒಂದು ದಿನ.
ಕುಂಭ– ಒಂದು ರೀತಿ ವಿಕ್ರಮದ ದಿನ. ಧೈರ್ಯದ ದಿನ, ಸೋಮವಾರ ಅದ್ಭುತ. ಶುಭ ಸುದ್ದಿ ,ವ್ಯವಹಾರ ನಿಮಿತ್ತ, ವ್ಯಾಪಾರ ನಿಮಿತ್ತ ಪಡೆಯ ತಕ್ಕಂತಹ ಅದ್ಭುತವಾದ ದಿನ ಯೋಚಿಸಬೇಡಿ.
ಮೀನ– ವಿಶೇಷ ಯಶಸ್ಸನ್ನು ನೋಡಿ ತಕ್ಕಂತ ಅದ್ಭುತವಾದ ದಿನವಾಗಿರುತ್ತದೆ. ಭೂಮಿ, ಮನೆ, ದಿನಸಿ ,ರಿಟೇಲ್ ಈ ಒಂದು ದೊಡ್ಡ ಕಾಂಡಿಮೆಂಟ್ಸ್, ಬೇಕರಿ, ಟ್ರಾವೆಲ್ಸ್, ವೆಹಿಕಲ್ಸ್, ಆಟೋ ಮೊಬೈಲ್ ವಿಶೇಷ ಯಶಸ್ಸು ಖುಷಿ ನೋಡಕ್ಕಂತ ಒಂದು ದಿನ ಶುಭವಾಗಲಿ.