ಮೇಷ– ದಿನದಾರಂಭ ಸ್ವಲ್ಪ ಮಂದಗತಿ ಇದ್ದರೂ ಕೂಡ ಸ್ವಲ್ಪ ತುಂಟತನ. ಮಾಡುವ ಕೆಲಸಗಳು ಕನ್ಸ್ಟ್ರಕ್ಷನ್, ಇಂಟೀರಿಯರ್, ಅಲಂಕಾರ, ಒಪ್ಪ, ಓರಣ ಈ ಒಂದು ಹಣ್ಣು ತರಕಾರಿ, ಸ್ತ್ರೀಯರಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಪ್ರಗತಿ.
ವೃಷಭ– ನಿಮಗೂ ಅಷ್ಟೇ! ದಿನದ ಆರಂಭ ಸ್ವಲ್ಪ ಹುಳಿ, ಗಂಟಲು ನೋವು, ವಾಟರ್ ಇನ್ಫೆಕ್ಷನ್, ತಲೆನೋವು, ಭಯ ಆತಂಕ, ಇಟ್ಟುಕೊಂಡು ಶುರು ಮಾಡುತ್ತೀರಿ ತೊಂದರೆಯಿಲ್ಲ. ಇವತ್ತು ನಿಮ್ಮ ದಿನ ಚೆನ್ನಾಗಿದೆ ಶುಭವಾಗಲಿ.
ಮಿಥುನ– ಲಾಭ ಸ್ಥಾನದಲ್ಲಿ ಕೇತು ಸಾರದಲ್ಲಿ ಚಂದ್ರ ಇರುವುದರಿಂದ, ಸ್ವಲ್ಪ ಬೇವು ಬೆಲ್ಲ ಎರಡು ನೋಡುತ್ತೀರಿ ಗಾಬರಿ ಪಡಬೇಡಿ. ಸ್ವಲ್ಪ ವಾಹನಗಳನ್ನು ಖರೀದಿ ಮಾಡುವುದು, ತೆಗೆದುಕೊಳ್ಳುವುದು ಅದರ ಬಿಸಿನೆಸ್, ಆಟೊಮೊಬೈಲ್’ ಇಂಡಸ್ಟ್ರಿ ಮಿಕ್ಕಂತೆ ಯಾವ ತೊಂದರೆಗಳಿಲ್ಲ. ವಾಹನಗಳನ್ನು ರಭಸವಾಗಿ ಓಡಿಸಲು ಹೋಗಬೇಡಿ, ಖರ್ಚು ಹೆಚ್ಚಿದೆ.
ಕಟಕ– ರಾಶಿಯ ಅಧಿಪತಿ ಚಂದ್ರ, ಕೇತು ಸಾರದಲ್ಲಿ ಇರುವುದರಿಂದ ನೀವೇ ಹುಳಿ.! ಹಾಲು ಮೊಸರು ಆಗುತ್ತದೆ. ಆ ರೀತಿಯ ಪ್ರಭಾವ ನಿಮ್ಮ ಮನಸ್ಸು ಸರಿಯಿಲ್ಲದ ಪ್ರಭಾವ.! ಕೆಲ ತಪ್ಪಾದ ಗ್ರಹಿಕೆ ಮಾಡುವಂಥ ಪರಿಸ್ಥಿತಿ ಎದುರಾಗುತ್ತದೆ ಜಾಗರೂಕತೆ. ದಿನದ ಅಂತ್ಯಕ್ಕೆ ಶುಭ ಸುದ್ದಿ. ವ್ಯಾಪಾರ ನಿಮಿತ್ತ, ವ್ಯವಹಾರ ನಿಮಿತ್ತ, ಮಕ್ಕಳ ನಿಮಿತ್ತ ಚೆನ್ನಾಗಿದೆ.
ಸಿಂಹ– ಸ್ವಲ್ಪ ಅರಳು ಮರಳು ಆಗುವಂಥ ಪ್ರಭಾವ.! ಗಾಬರಿ, ಹಿರಿಯರ ಆರೋಗ್ಯದ ಕಡೆ ಸ್ವಲ್ಪ ಗಮನ ಇರಲಿ. ಮನೆಯಲ್ಲಿ ಸ್ತ್ರೀಯರ ವಿಚಾರದಲ್ಲಿ ಸಣ್ಣ ಎಳೆದಾಟ, ವಿಷ್ಣು ಸಹಸ್ರನಾಮ ಪುಟ್ಟದಾಗಿ ಮಾಡಿಕೊಳ್ಳಿ ತೊಂದರೆಯಿಲ್ಲ.
ಕನ್ಯಾ– ಸಣ್ಣ ಎಳೆದಾಟ ಆಗುತ್ತದೆ. ಆದರೂ ತೊಂದರೆ ಇಲ್ಲ. ಒಂದು ಅದ್ಭುತವಾದ ದಿನ, ವಿಶೇಷವಾದಂಥ ದಿನ, ವ್ಯಾವಹಾರಿಕವಾಗಿ ಏನಾದರೂ ಒಂದು ಆರ್ಕಿಟೆಕ್, ಡಿಸೈನರ್, ಡ್ಯಾನ್ಸ್ ,ಮ್ಯೂಸಿಷಿಯನ್, ಸ್ಪೋರ್ಟ್ಸ್ ಪರ್ಸನ್ ಅದ್ಭುತವಾದ ಪ್ರಗತಿ ಕಾಣುವಂತ ಒಂದು ದಿನ.
ತುಲಾ– ಕಾಸಿಗೆ ತಕ್ಕಂತೆ ಕಜ್ಜಾಯ .! ಅನ್ನುವ ಭಾವ ಕಷ್ಟ ಪಡುತ್ತಿದ್ದೀರಿ, ಆದರೆ ಪ್ರಯತ್ನದಲ್ಲಿದ್ದರೆ ನಿಮಗೆ ಲಾಭವಿಲ್ಲ ಎಂಬ ಭಾವ ಮೂಡುತ್ತದೆ. ಆತಂಕವಿಲ್ಲ ಚೆನ್ನಾಗಿ ಆಗುತ್ತದೆ ಯೋಚಿಸಬೇಡಿ. ಹತ್ತಿರದಲ್ಲಿ ಎಲ್ಲಿಯಾದರೂ ವಿನಾಯಕನ ಸನ್ನಿಧಿ ಇದ್ದರೆ ಭಾನುವಾರ ಹೋಗಿ ಬನ್ನಿ ದರ್ಶನ ಅರ್ಚನಾ ಸಂಕಲ್ಪ ಮಾಡಿಕೊಂಡು ಬರುವಂಥದ್ದು ಒಳ್ಳೆಯದಾಗುತ್ತದೆ.
ವೃಶ್ಚಿಕ– ಮನೆ, ರಿಪೇರಿ, ಗಡಿಬಿಡಿ, ಅಲಂಕಾರ, ಒಪ್ಪ, ಪಾರ್ಟಿಷನ್ ಈ ರೀತಿ ಭೂಮಿಗೆ ಸಂಬಂಧಪಟ್ಟಂತ, ಮನೆಗೆ ಸಂಬಂಧಪಟ್ಟಂತ, ಜಾಗಕ್ಕೆ ಸಂಬಂಧಪಟ್ಟಂತ ಕೆಲಸಗಳು ಅದನ್ನು ಸರಿಪಡಿಸಿಕೊಳ್ಳುವ ದಿನ ತುಂಬಾ ಒತ್ತಡದಲ್ಲಿರುತ್ತೀರ ಎಂಜಾಯ್ ಮಾಡಿ ಶುಭವಾಗಲಿದೆ.
ಧನಸ್ಸು– ಹೆಸರಿನ ವಿಚಾರ, ಖ್ಯಾತಿ, ಪ್ರಖ್ಯಾತಿ ಏನೋ ಕಷ್ಟಪಟ್ಟು ಪಡೆದಿದ್ದೀರಿ ಅದಕ್ಕೆಲ್ಲಾ ಒಂದು ಸಣ್ಣ ಲೋಪ ಸೇರಿಕೊಳ್ಳುತ್ತದೆ ಆ ರೀತಿ ಆಗುತ್ತದೆ. ಶುದ್ಧ ಬಂಗಾರ ಎಲ್ಲೂ ಇಲ್ಲ. ಶುದ್ಧ ಬಂಗಾರಕ್ಕೆ ಒಂದು ಸ್ವಲ್ಪ ಅಶುದ್ಧ ಬಂಗಾರ ಸೇರಿಸಲೇಬೇಕು, ಆವಾಗಲೇ ಅದೊಂದು ಆಭರಣ ಆಗುವುದು. ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ ಒಳ್ಳೆಯದಾಗುತ್ತದೆ.
ಮಕರ– ಇವತ್ತು ಒಂದು ರೀತಿ ಸಂಭ್ರಮಾಚರಣೆಯ ದಿನ ಆಗಿರುತ್ತದೆ ಯೋಚಿಸಬೇಡಿ. ನಿಮ್ಮ ಕೆಲಸದ ಬಗ್ಗೆ ದಿಟ್ಟ ಹೆಜ್ಜೆ ಇಡುವುದು ಒಳ್ಳೆಯದು. ಕೆಲಸ ಕಾರ್ಯಗಳನ್ನು ಮಾಡಿಕೊಳ್ಳುವಂಥ ದಿನ ಶುಭವಾಗಲಿ.
ಕುಂಭ– ಒಡಹುಟ್ಟಿದವರ ವಿಚಾರದಲ್ಲಿ ಒಂದು ಎಳೆದಾಟ, ಅವರ ಜವಾಬ್ದಾರಿ ಅವರ ಮನೆಯಲ್ಲಿ ಒಂದು ಎಳೆದಾಟ. ಹಿರಿಯರ ವಿಚಾರದಲ್ಲಿ ತೊಂದರೆ, ಇನ್ನೊಬ್ಬರ ಬಗ್ಗೆ ಯೋಚಿಸಬೇಡಿ, ನಿಮ್ಮ ಬಗ್ಗೆ ಮೊದಲು ಯೋಚಿಸಿಕೊಳ್ಳಿ ಸರಿಪಡಿಸಿಕೊಳ್ಳಿ.
ಮೀನ– ಉದ್ಯೋಗ, ನಡೆದು ಹೋದ ಘಟನೆ ಮುಂಬರುವ ಯಾವುದೋ ಒಂದು ಘಟನೆ ಆಗಿ, ಮುಗಿದುಹೋದ ಘಟನೆ ಇತರ ಪರಿಸ್ಥಿತಿ ನೆನೆಸಿಕೊಂಡು ಮನಸ್ಸನ್ನು ಕಲುಷಿತ ಮಾಡಿಕೊಳ್ಳುತ್ತೀರಿ ಅಂಥ ಪರಿಸ್ಥಿತಿ ಇರುತ್ತದೆ. ದಿನದ ಆರಂಭವೇ ಈ ರೀತಿ ಇರುತ್ತದೆ. ಸ್ವಲ್ಪ ಗಂಟಲು ನೋವು, ಹೊಟ್ಟೆ ನೋವು ಇರುತ್ತದೆ. ಗಂಟಲಿನ ಬಗ್ಗೆ ಮೂರು ಸ್ವಲ್ಪ ಎಚ್ಚರಿಕೆ ಇರಲಿ ಬಿಸಿ ನೀರು ಕುಡಿಯುವುದು ಒಂದೇ ಇದು ಶುಭವಾಗಲಿ.