ದಿನ ಭವಿಷ್ಯ 04 ಜನವರಿ 2020!

0
262

ನಿಮಗೆ ಗೊತ್ತೋ ಗೊತ್ತಿಲ್ಲದೆಯೋ ಕೆಲವೊಂದು ದೋಷಗಳು ನಿಮಗೆ ಜನ್ಮತಃ ಕಾಡುತ್ತಿರುತ್ತದೆ. ಅದನ್ನು ತಿಳಿದುಕೊಳ್ಳುವುದು ಹೇಗೆ ಎಂಬುದೇ ದೊಡ್ಡ ಸಮಸ್ಯೆ.! ಯಾರು ತಾಯಿಯ ವಿಚಾರದಲ್ಲಿ ಕಣ್ಣೀರು ಇಡುತ್ತಿರುತ್ತಾರೆ ಅವರಿಗೆ ಚಂದ್ರ ದೋಷ! ಸದಾ ಡಿಪ್ರೆಶನ್, ಮೈಗ್ರೇನ್, ಸೈನಸ್, ನಿದ್ದೆ ಬರುವುದಿಲ್ಲ, ತೊಳಲಾಟ, ಅಮ್ಮನ ಹತ್ತಿರ ಜಗಳ, ತಾಯಿಯನ್ನು ದ್ವೇಷಿಸುವುದು, ದೂರ ಇರುವುದು, ಮೂಗಿನಲ್ಲಿ ಸದಾ ಸೋರಿಕೆ, ಗಂಟಲು ಸಮಸ್ಯೆ ,ಇನ್ಫೆಕ್ಷನ್, ಕಿವಿನೋವು, ಕಣ್ಣಿಗೆ ಒತ್ತಡ, ತಲೆನೋವು, ತಲೆಭಾರ, ಅಸ್ತಮಾ ಸಮಸ್ಯೆ, ಅನ್ನಕ್ಕೆ ಒದ್ದಾಡುವಂಥ ಪ್ರಸಂಗ, ಹಸಿವು ತಡೆದುಕೊಳ್ಳಲು ಆಗದಿರುವುದು, ವಿಪರೀತ ತಿನ್ನುತ್ತೀರಿ, ಇಲ್ಲ ತಿನ್ನುವುದೇ ಇಲ್ಲ.!

ಅನ್ನದಲ್ಲಿ ಕಲ್ಲು ಸಿಗುವುದು, ಕೂದಲು ಸಿಗುವುದು, ತಿನ್ನುವಾಗ ನೆಲಕ್ಕೆ ಬೀಳುತ್ತದೆ. ತುಂಬಾ ನಿದ್ದೆ ಮಾಡುವುದು, ನಿದ್ದೆಯಲಿ ವಿಪರೀತ ಕನಸು ಕಾಣುವುದು, ಬೆಚ್ಚಿ ಬೀಳುವುದು, ವಿಪರೀತ ಉನ್ಮಾದ, ನಡುಗುವುದು ಇವೆಲ್ಲ ಚಂದ್ರ ದೋಷದ ಪ್ರಭಾವ! ತಾಯಿಗೆ ಅನಾರೋಗ್ಯ, ತಾಯಿಯ ಕಣ್ಣೀರನ್ನು ನೋಡುವುದು, ತಾಯಿಗೆ ಅವಮಾನ ಆಗುವುದು, ತಾಯಿಯಿಂದ ದೂರ ಇರುವುದು ಇವೆಲ್ಲವೂ ಚಂದ್ರ ದೋಷದ ಪ್ರಭಾವ. ಜಲ ದೋಷ, ನೀರಿನ ಸಮಸ್ಯೆ, ದೇವಾಲಯಕ್ಕೆ ಹೋಗದಿರುವುದು, ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿಂದೇಟು ಆಗುವಂಥದ್ದು.

 

ರಾತ್ರಿಯಲ್ಲಿ ಎದ್ದು ಕೂತಿರುವುದು, ಅನುಮಾನದ ಪಿಶಾಚಿ, ಅನ್ಯರನ್ನು ದೂಷಿಸುವುದು, ಕೆಟ್ಟ ನಿರ್ಧಾರ, ಕೆಟ್ಟ ಯೋಚನೆ ಇವೆಲ್ಲವೂ ಚಂದ್ರ ದೋಷ ಪ್ರಭಾವ.! ಇದಕ್ಕೆ ಏನು ಪರಿಹಾರ ಎಂದರೆ ಎಷ್ಟೇ ಕಷ್ಟವಾದರೂ ಒಂಟಿಯಾಗಿರಬೇಡಿ. ಆದಷ್ಟೂ ಗುಂಪಿನೊಂದಿಗೆ ಇರಲು ಪ್ರಯತ್ನ ಮಾಡಿ. ಚಂದ್ರ ದೋಷಕ್ಕೆ ಒಂಟಿಯಾಗಿರುವುದು ಪ್ರಚೋದಿಸಿ ಇಲ್ಲವೆಲವೂ ಆಗುತ್ತದೆ. ಸ್ವಲ್ಪವಾದರೂ ಹಾಲು, ತುಪ್ಪ ಒಂದು ಚಿಟಿಕೆ ಆದರೂ ತುಪ್ಪವನ್ನು ಊಟದಲ್ಲಿ ಸೇರಿಸಿ ತಿನ್ನಲು ಅಭ್ಯಾಸ ಮಾಡಿ. ಹಾಲನ್ನು ಸಕ್ಕರೆ ಹಾಕದ ಹಾಗೆಯೇ ಕುಡಿಯಲು ಪ್ರಯತ್ನ ಮಾಡಿ ವಿಶೇಷ.

 

ಬಟ್ಟೆಯನ್ನು, ಅನ್ನವನ್ನು ದಾನ ಮಾಡಬೇಡಿ ಬದಲು ಹಣವನ್ನು ಸರ್ವಸೇವಾ, ದೇವರ ಸೇವೆ ಎಂದು ಬರೆದು ಚೆಕ್ಕಿನ ಮೂಲಕ ಕೊಟ್ಟುಬಿಡಿ. ಬೆಳ್ಳಿ ದಾನ ಕೊಡಬೇಡಿ, ಹಾಲು ದಾನ ಕೊಡಬೇಡಿ, ವಸ್ತ್ರವನ್ನು ಹಾಗೆ ಕೊಡಬೇಡಿ. ಇವೆಲ್ಲವೂ ಚಂದ್ರ ದೋಷದ ಮುಖ್ಯ ಅಂಶವೇ.! ತಾಯಿಯ ಹತ್ತಿರ ಮಧುರವಾಗಿ ಇರುವುದು, ತಾಯಿಯ ಜೊತೆ ಜಗಳ ಆಗದೇ ಇರುವ ಹಾಗೆ ನೋಡಿಕೊಳ್ಳಿ ಅವರನ್ನು ಸಂತೃಪ್ತಿಯಾಗಿ ನೋಡಿಕೊಳ್ಳಿ. ದೇವಿ ಕ್ಷೇತ್ರಗಳಲ್ಲಿ ಒಂದು ರಾತ್ರಿ, ಐದು ರಾತ್ರಿ ಇದ್ದು ಸ್ನಾನ, ದರ್ಶನ, ಪೂಜಾ ಸೇವಾ ನಿಮ್ಮ ಶಕ್ತಿ ಏನಾದರೊಂದು ಮಾಡಿಕೊಂಡು ಬನ್ನಿ ಶುಭವಾಗಲಿ.

ಇಂದಿನ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ,

ಮೇಷ– ಮೊದಲ ವಾರಾಂತ್ಯ ಹೆಚ್ಚಿನ ಚಿಂತೆ! ಸೋದರ ವರ್ಗದಲ್ಲಿ ಒಂದು ನೋವಿದೆ. ಅಕ್ಕ ತಂಗಿಯರ ವಿಚಾರದಲ್ಲಿ ಬೇಸರ. ಅಕ್ಕನ ವಿಚಾರದಲ್ಲಿ ಬೇಸರ ಮಾಡಿಕೊಳ್ಳಬೇಡಿ ಅವರ ಪ್ರೀತಿಯನ್ನು ಸ್ವೀಕರಿಸಿ ಶುಭವಾಗಲಿ.

 

ವೃಷಭ– ಬುದ್ಧಿ ಉಪಯೋಗಿಸಿ ಮೆಧಾಶಕ್ತಿ ಉಪಯೋಗಿಸಿ ಮಾಡತಕ್ಕಂತಹ ಗಣಕಯಂತ್ರ, ಟೆಕ್ನಿಕಲ್, ಬಯೋಟೆಕ್, ಇಂಜಿನಿಯರ್, ಸೈಂಟಿಸ್ಟ್ ಗಳು ಅದ್ಭುತ ಪ್ರಗತಿ ಚೆನ್ನಾಗಿದೆ.

 

ಮಿಥುನ– ನನ್ನ ಯೋಗ್ಯತೆಗೆ ಬೆಲೆ ಇಲ್ಲವಾ? ಎಂಬ ಭಾವ ನಿಮ್ಮಲ್ಲಿ ಮೂಡುತ್ತದೆ. ನಿಮ್ಮ ಗೌರವದ ಬಗ್ಗೆ, ನಿಮಗೆ ನಿಮ್ಮ ಯೋಗ್ಯತೆಯ ಬಗ್ಗೆ ನಿಮಗೆ ಗೊತ್ತಿರುತ್ತದೆ ಅದನ್ನು ನಂಬಿಕೊಂಡು ಕೆಲಸ ಮಾಡಿ. ಇನ್ನೊಬ್ಬರ ಕೊಂಕು ಮಾತುಗಳು ಹೆಚ್ಚಾಗಿ ಕೇಳಿ ಬರುತ್ತದೆ. ಅದಕ್ಕೆ ತಲೆ ಕೆಡಿಸಿಕೊಳ್ಳಬೇಡಿ ಚೆನ್ನಾಗಿರುತ್ತೀರಿ.

 

ಕಟಕ– ಸ್ವಲ್ಪ ಸಿದ್ಧಾಂತಗಳನ್ನು ಒಪ್ಪುವುದಿಲ್ಲ, ಸ್ವಲ್ಪ ಮೊಂಡು. ಮೊಂಡುತನವನ್ನು ಈಜಲು ಬಳಸುವುದಿಲ್ಲ ಬದಲು ನೋವಿಗೆ ಇಟ್ಟುಕೊಳ್ಳುತ್ತೀರಿ. ಹೆಚ್ಚು ನೋವನ್ನು ನೀವೇ ತಂದಿಟ್ಟುಕೊಳ್ಳುತ್ತೀರಿ. ವ್ಯವಹಾರದ ಒಂದು ಟೆನ್ಷನ್ ಹೊರೆಯಾಗಿರುತ್ತದೆ. ಊಟವನ್ನು ಚೆನ್ನಾಗಿ ಜಮಾಯಿಸಿ ಯೋಚಿಸಬೇಡಿ.

 

ಸಿಂಹ– ಆಕಸ್ಮಿಕ ಧನ ಪ್ರಾಪ್ತಿ, ಬುದ್ಧಿಶಕ್ತಿ ,ಮೇಧಾಶಕ್ತಿ ಸ್ವಲ್ಪ ಅಡ್ಡದಾರಿ ಸಂಪಾದನೆ ಹೆಚ್ಚಿಸುತ್ತೀರಿ. ಬಂಗಾರವನ್ನು ಬಿಟ್ಟು ಬೆಳ್ಳಿಯ ಕಡೆ ಯೋಚಿಸುತ್ತೀರಿ ತಪ್ಪು.! ಜೇಬು ಕಳ್ಳತನ ಮತ್ತೊಂದು ಆಗಲಿದೆ ಜಾಗರೂಕತೆ. ಅತಿಯಾದ ಬುದ್ಧಿ, ಅತಿಯಾದ ಅಡ್ಡದಾರಿ ಮತ್ತೊಂದು ಅಡ್ಡ ದಾರಿಗೆ ಮಾಡಿಕೊಡುತ್ತದೆ.

 

ಕನ್ಯಾ– ನೀವು ಎಷ್ಟು ಪ್ರಯತ್ನ ಪಡುತ್ತೀರಿ. ಕಾಸಿಗೆ ತಕ್ಕಂತೆ ಕಜ್ಜಾಯ ದೊರೆಯುತ್ತದೆ. ವ್ಯವಹಾರ ನಿಮಿತ್ತ, ಬ್ಯಾಂಕಿಂಗ್ ಹಣಕಾಸು, ಲೇವಾದೇವಿ ಬುದ್ಧಿಶಕ್ತಿ ಚಾಣಾಕ್ಷತನದಿಂದ ಕೆಲಸ ಮಾಡುತ್ತೀರಿ.

 

ತುಲಾ– ಯಾಕೋ ನಿಮಗೆ ಕೊಟ್ಟಿರುವ ಸ್ಥಾನ, ಪೊಸಿಷನ್, ತೃಪ್ತಿ ಇಲ್ಲದ್ದು ಅನ್ನಿಸುತ್ತದೆ. ಅದರ ಕಡೆ ಗಮನ ಕೊಡಬೇಡಿ. ನಿಮಗೆ ಖುಷಿ ದಿನ, ಸಂತಸದ ದಿನ, ಉದ್ಯೋಗದಲ್ಲಿ ಒತ್ತಡ ಇರುತ್ತದೆ. ಆದರೆ ಸ್ಥಾನ ಲಾಭವನ್ನು ನೋಡುವಂತ ದಿನ.

 

ವೃಶ್ಚಿಕ– ಸಣ್ಣಪುಟ್ಟ ಲೇವಾದೇವಿ, ಸಣ್ಣ ಪುಟ್ಟ ಚೀಟಿ ವ್ಯವಹಾರ, ಬಡ್ಡಿ ವ್ಯವಹಾರ, ವ್ಯಾಪಾರ, ದಿನಗೂಲಿ ಈ ಒಂದು ಅಂಗನವಾಡಿ ಗಾರ್ಮೆಂಟ್ಸ್, ಟ್ಯಾಕ್ಸಿ ಚಾಲಕ ಎಷ್ಟು ಕಷ್ಟಪಡುತ್ತೀರಿ ಅದಕ್ಕೆ ತಕ್ಕ ಫಲವುಂಟು.

 

ಧನಸ್ಸು– ಪಾರ್ಟಿ, ಫ್ರೆಂಡ್ಶಿಪ್, ಹತ್ತಿರ ಬಂಧುಗಳು ಇವರ ವಿಚಾರದಲ್ಲಿ ಸಣ್ಣ ಕಿರಿಕಿರಿ ಉಂಟು ತಲೆಕೆಡಿಸಿಕೊಳ್ಳಬೇಡಿ. ಏನೇ ನಡೆದರೂ ಕೂಡ ಆನೆ ನಡೆದಿದ್ದೇ ದಾರಿ ಎಂಬ ಯೋಚನೆ ಮಾಡಿಕೊಂಡು ಮುನ್ನುಗ್ಗಿ ಶುಭವಾಗಲಿದೆ.

 

ಮಕರ– ಭಾಗ್ಯಾಧಿಪತಿ ೧೨ನೇ ಮನೆಯಲ್ಲಿರುವುದರಿಂದ ದೂರ ಪ್ರದೇಶದಿಂದ ಒಂದು ವಿಶೇಷ ವಾರ್ತೆ, ವ್ಯವಹಾರ ನಿಮಿತ್ತ ಹಣಕಾಸನ್ನು ವ್ಯಾಪಾರ ನಿಮಿತ್ತ, ಇವೆಂಟ್ ಮ್ಯಾನೇಜ್ಮೆಂಟ್, ಇಂಟೀರಿಯರ್, ಆರ್ಕಿಟೆಕ್ಟ್, ಡಿಸೈನರ್, ಕಲೆಗಾರರು, ಪೇಂಟಿಂಗ್ ಅದ್ಭುತವಾದಂತಹ ಪ್ರಗತಿ.

 

ಕುಂಭ– ಸ್ವಲ್ಪ ಎಚ್ಚರಿಕೆ! ಯಾರಾದರೂ ನಿಮ್ಮ ತಲೆ ಕೆಡಿಸುತ್ತಾರೆ. ತಲೆಗೆ ಹುಳ ಬಿಡುತ್ತಾರೆ, ನಿಮ್ಮನ್ನು ಸಿಲುಕಿಸುವ ಕೆಲಸವನ್ನು ಮಾಡುತ್ತಾರೆ ಜಾಗರೂಕತೆ. ಮಾತಿನಲ್ಲಿ ಹಣ ಕೊಟ್ಟು ಸಿಲುಕಿಕೊಳ್ಳುವುದು ಆ ರೀತಿ ಪ್ರಭಾವ ಇರುತ್ತದೆ. ಯೋಚಿಸಿ, ಚಿಂತಿಸಿ ನಾಲ್ಕು ಜನರ ಬಳಿ ಕೇಳಿ ವ್ಯವಹಾರದತ್ತ ಹೆಜ್ಜೆ ಇಡಿ ಒಳ್ಳೆಯದಾಗುತ್ತದೆ.

 

ಮೀನ– ಬುದ್ಧನಿಗೂ ನಿಮಗೂ ಅಷ್ಟಕ್ಕಷ್ಟೇ.! ನಿಮಗೆ ಯಾರಾದರೂ ಮೋಸ ಮಾಡುತ್ತಾರೆ ಇಲ್ಲ ನೀವು ಯಾರಿಗಾದರೂ ಮೋಸ ಮಾಡುತ್ತೀರಿ ಅಂತ ಒಂದು ಎಡವಟ್ಟು ತಲೆನೋವು ಕಟ್ಟಿಟ್ಟ ಬುತ್ತಿ. ಬಹಳ ಎಚ್ಚರಿಕೆ! ಎಷ್ಟು ತಿಂದರೂ ಎಷ್ಟೇ ಬಚ್ಚಿಟ್ಟರೂ ತಿನ್ನುವುದು ನಾಲ್ಕು ರೊಟ್ಟಿಯೇ.! ಹಾಗಾಗಿ ಅಡ್ಡದಾರಿ, ಅಡ್ಡ ಸಂಪಾದನೆ ಬೇಡ.

LEAVE A REPLY

Please enter your comment!
Please enter your name here