ದಿನ ಭವಿಷ್ಯ 03 ಜನವರಿ 2019!

0
274

ಮೇಷ– ಜನವರಿಯಲ್ಲಿ ಮೇಷ ರಾಶಿಯವರಿಗೆ ಅದರಲ್ಲೂ ಸರ್ಕಾರಿ ಕೆಲಸ, ಸರ್ಕಾರಿ ಯೋಜನೆ, ಸರ್ಕಾರಿ ನೌಕರರು, ಸರ್ಕಾರಿ ವ್ಯವಹಾರ, ರಸ್ತೆ ಹಾಕಿಸುವುದು, ಕಾಮಗಾರಿ, ಶಾಲೆ ನಡೆಸುವುದು, ಕಾಲೇಜು , ವೃದ್ಧಾಶ್ರಮ, ಫೌಂಡೇಷನ್ ಈ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ದೇವಿಚಿತ್ರ, ವಿದ್ಯಾಚಿತ್ರ ಅದ್ಭುತವಾದಂತಹ ಪ್ರಗತಿ.ಸ್ವಲ್ಪ ಕೃಷಿಕರಿಗೆ ಎಳೆದಾಟ. ನೀವಂದುಕೊಂಡಿರುವ ಕೆಲಸ ಕಾರ್ಯಗಳು, ಅದಕ್ಕೆ ತಕ್ಕಂತಹ ಪ್ರತಿಫಲ ಸಿಗುವುದಿಲ್ಲ. ಮಧ್ಯವರ್ತಿಗಳ ಮಾತಿಗೆ ಕೇಳಿ ಅವರಿಗೆ ನಿಮ್ಮ ವ್ಯವಹಾರವನ್ನು ವಹಿಸಬೇಡಿ ಜಾಗರೂಕತೆ.

 

ವೃಷಭ– ಖರ್ಚಿನ ವಾರ ತೀರ ತಲೆಕೆಡಿಸಿಕೊಳ್ಳುತ್ತೀರಿ. ವ್ಯವಹಾರ ನಿಮಿತ್ತವೂ, ಮಕ್ಕಳ ನಿಮಿತ್ತವೂ, ಹಿರಿಯರ ನಿಮಿತ್ತವೂ ಈ ವರ್ಷದ ಜನವರಿ ಮಾಸದಲ್ಲಿ ಅಡರು ತೊಡರುಗಳು ಎದುರಾಗುತ್ತದೆ. ಆದಷ್ಟು ದತ್ತ ಚರಿತ್ರೆ ರಾಮಾಯಣ, ಸುಂದರಕಾಂಡ ಪುಸ್ತಕ, ಬಡವರಿಗೆ, ಪುಸ್ತಕ ಪ್ರಿಯರಿಗೆ ದಾನ ಮಾಡ ಕೊಡತಕ್ಕದ್ದು ಒಳ್ಳೆಯದಾಗುತ್ತದೆ.

 

ಮಿಥುನ– ಈ ಒಂದು ಮಾತಿನಲ್ಲಿ ವಿಶೇಷವಾಗಿ ನೀವು ಇನ್ನೊಬ್ಬರ ಮೇಲೆ ಡಿಪೆಂಡ್ ಆಗುತ್ತೀರಿ. ನಿಮ್ಮ ಬುದ್ಧಿ ಶಕ್ತಿಯನ್ನು ಯಾರು ಗುರುತ್ತಿಸುವುದಿಲ್ಲ. ಆ ಒಂದು ಭಾವ ಇರುತ್ತದೆ. ದುಡುಕಬೇಡಿ, ಕ್ರೋಧ ,ಉನ್ಮಾದಕ್ಕೆ ಒಳಗಾಗಬೇಡಿ. ಸುತ್ತಾಟ, ಒಡಾಟ, ಸಂಗಾತಿ, ಪ್ರೀತಿ ಪಾತ್ರರೊಂದಿಗೆ ಪರಸ್ಪರ ದೈವ ಕ್ಷೇತ್ರವೋ,ಪುಣ್ಯ ಕ್ಷೇತ್ರಗಳನ್ನು ನೋಡುವಂಥ ಒಂದು ಸುಯೋಗ ಉಂಟು. ಮಿಥುನ ರಾಶಿಯವರಿಗೆ ಈ ವರ್ಷದಲ್ಲಿ ಪ್ರಯಾಣದ ಭರಾಟೆ ಉಂಟು.

 

ಕಟಕ– ಈ ಒಂದು ಮಾಸ ಪರಿಶ್ರಮದ ಮಾಸ. ಸಾಲದ ವಿಚಾರ, ಹಣಕಾಸಿನ ವಿಚಾರದಲ್ಲಿ ತೊಂದರೆ. ಮಕ್ಕಳ ವಿಚಾರದಲ್ಲಿ ತೊಳಲಾಟ. ಯಾವುದೋ ಒಂದು ಗಾಬರಿ ನಿಮ್ಮನ್ನು ಒಳಪಡಿಸುವಂತದ್ದು ಆಗುತ್ತದೆ. ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ,ದುಡುಕಬೇಡಿ.ಕೊಡುವುದು, ಸಹಿ ಹಾಕುವುದು ಈ ಮಾಸದಲ್ಲಿ ಮಾಡಬೇಡಿ ಜಾಗರೂಕತೆ.

 

ಸಿಂಹ– ಈ ಮಾಸ ನಿಮಗೆ ಪರಿಪೂರ್ಣ ವಿಜಯದ ಮಾಸ. ಗೌರವದ ಮಾಸ, ಹೆಸರು, ಕೀರ್ತಿ, ಪ್ರತಿಷ್ಠೆ, ಮಕ್ಕಳೊಂದಿಗೆ ,ಮನೆಯವರೊಂದಿಗೆ, ಆತ್ಮೀಯರೊಂದಿಗೆ ನಿರ್ಧಾರ.! ವ್ಯವಹಾರಗಳಲ್ಲಿ ವಿಶೇಷ ಪ್ರಗತಿ ಪಡೆಯುತ್ತೀರಿ. ಆದರೆ ಯಾರಾದರೂ ನಿಮಗೊಂದು ಮೋಸ ಮಾಡಬಹುದು ಜಾಗರೂಕತೆ. ಸಿಂಹ ರಾಶಿಯವರಿಗೆ ನಂಬಿಸಿ ಮೋಸ ಮಾಡುವುದು, ದುಡ್ಡಿನ ವಿಚಾರ,ಪಾರ್ಟ್ನರ್ಶಿಪ್, ಫ್ರೆಂಡ್ ಶಿಪ್, ಕುಟುಂಬದವರೇ, ಹತ್ತಿರದವರೇ, ತಿಳಿದವರೇ ನಿಮಗೆ ಮೋಸ ಮಾಡುವುದು. ಹಾಗಾಗಿ ಆ ರೀತಿ ಒಂದು ಪ್ರಭಾವ ನೋಡತಕ್ಕಂತ ಒಂದು ಬಾವ.ಸಿಂಹ ರಾಶಿಯವರು ಬಹಳ ಎಚ್ಚರಿಕೆ ದುಡುಕಬೇಡಿ. ಆದಷ್ಟು ಪುಣ್ಯಕ್ಷೇತ್ರದ ದೈವಸ್ಥಾನ,ತೀರ್ಥಸ್ನಾನ ಯೋಗವೂ ಉಂಟು.

 

ಕನ್ಯಾ– ವಿಪರೀತ ರಾಜಯೋಗ. ಆನಂದಕ್ಕೆ, ವ್ಯವಹಾರಕ್ಕೆ ವಿಶೇಷ ಅಭಿವೃದ್ಧಿ. ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದೀರಿ. ದೊಡ್ಡ ಫ್ಯಾಕ್ಟರಿ, ದೊಡ್ಡ ಬ್ಯಾಂಕಿಂಗ್, ಅಕೌಂಟ್, ಧಾರ್ಮಿಕ, ವಿಶೇಷ ಕೀರ್ತಿಯನ್ನು ನೋಡುತ್ತೀರಿ. ಯಾವುದೋ ಒಂದು ಗುರುವಿನ ಸಹಾಯ ನಿಮಗೆ ಬಂದು ಸೇರುವಂತ ಸುಯೋಗ. ಜನವರಿ ಮಾಸ ತುಪ್ಪದ ಮಾಸ.! ಕನ್ಯಾ ರಾಶಿಯವರು ಯೋಚಿಸಬೇಡಿ. ಪರದೇಶ,ಪರಸ್ಥಳ ಹೋಗಿ ಬರುವಂಥ ಸುಯೋಗ ಉಂಟು. ದೇವದರ್ಶನ, ಗುರುದರ್ಶನ, ಶಿವಶಕ್ತಿಪೀಠ ಇವುಗಳನ್ನು ನೋಡಕ್ಕಂತ ವಿಶೇಷ ಶಕ್ತಿಯನ್ನು ಈ ಮಾಸ ತಂದುಕೊಡುತ್ತದೆ.

 

ತುಲಾ– ಜನವರಿ ಮಾಸ ವಿಶೇಷವಾದಂಥ ವಾಹನ ಅನುಕೂಲ, ವಸ್ತ್ರ ಅನುಕೂಲ, ಅಧಿಕಾರ ಅನುಕೂಲ ಇವುಗಳನ್ನು ನೋಡ ತಕ್ಕಂತ ವಿಶೇಷ ಯೋಗ. ಅತಿ ಬುದ್ಧಿ ಉಪಯೋಗಿಸಿ ಸಿಕ್ಕಿ ಹಾಕಿಕೊಳ್ಳುತ್ತೀರಿ. ನೋಟು ಬದಲಾವಣೆ, ಫೋನ್‌ ಅರ್ಧ ಹಣವನ್ನು ಕೊಡುತ್ತೇವೆ. ಈ ರೀತಿ ಹಣ ಹಾಕಿಬಿಡಿ ಎಂದು ಮೋಸ ಮಾಡುತ್ತಾರೆ ಜಾಗೃತೆ. ದಿಢೀರ್ ದುಡ್ಡು, ವ್ಯವಹಾರ ದಿಢೀರ್ ಲಾಭ ದೂರವಿರಿ.

 

ವೃಶ್ಚಿಕ– ವಿಶೇಷವಾದಂಥ ವಾಸವಾಗಿರುತ್ತದೆ ಚೆನ್ನಾಗಿದೆ. ಶುಭಕಾರಕ ಈ ಮಾಸ ಸಂಕ್ರಾಂತಿ ಹಬ್ಬದ ಒಳಗೆ ಹೇಳುವುದು ನಿಶ್ಚಿತ. ವ್ಯವಹಾರ ನಿಮಿತ್ತವೂ, ಕುಟುಂಬದಲ್ಲಿ ಮಕ್ಕಳ ನಿಮಿತ್ತ, ಬಹುದೊಡ್ಡ ಸಂಸ್ಥೆಯ ನಿಮಿತ್ತ, ಶಿಸ್ತನ್ನು ಕೀರ್ತಿಯ ಮೆಟ್ಟಿಲನ್ನು ಏರುತ್ತೀರಿ. ನೀವು ತುಂಬಾ ದುಡುಕುತ್ತೀರಿ, ಗಾಬರಿಯಾಗುತ್ತೀರಿ. ತಲೆನೋವು ಹೆಚ್ಚಿರುತ್ತದೆ. ಸೈನ್ಸ್, ಸ್ಲಿಪ್ ಟೆಸ್ಟ್ ಸೊಂಟನೋವು ಈ ರೀತಿಯ ಸಮಸ್ಯೆ ಇದ್ದರೆ ಬಳಲುತ್ತಿದ್ದರೆ ಇನ್ನಷ್ಟು ಉಲ್ಬಣವಾಗುತ್ತದೆ. ಸೂರ್ಯ ನಮಸ್ಕಾರವನ್ನು ಮಾಡಿಕೊಳ್ಳುವ ಅಭ್ಯಾಸವನ್ನು ಮಾಡಿಕೊಳ್ಳಿ.

 

ಧನಸ್ಸು ಯೋಗಕಾರಕ ನಿಮ್ಮ ಮನೆಯಲ್ಲಿ ಇದ್ದಾನೆ. ಗುರು ನಿಮ್ಮ ಜೊತೆಯಲ್ಲಿ ಇದ್ದಾನೆ. ವಿಚಿತ್ರ ವಿಚಿತ್ರವಾದ ಸನ್ನಿವೇಶಗಳು ನಡೆಯತಕ್ಕದ್ದು ಆಗುತ್ತದೆ. ಸ್ವಲ್ಪ ಬಹುದೊಡ್ಡ ಸ್ಥಾನದಲ್ಲಿ ಗುರುವಾಗಿದ್ದರೆ,ಕಂಪನಿಯ ಪ್ರವೃತ್ತರಾಗಿದ್ದರೆ ಆರೋಗ್ಯದ ಕಡೆ ಎಚ್ಚರಿಕೆ. ಯಾವುದೋ ವ್ಯವಹಾರ ನಿಮಿತ್ತವೋ, ಹತ್ತಿರ ಬಂಧುಗಳಿಂದ, ಭೂಮಿ ಕೊಡುವುದು, ತೆಗೆದುಕೊಳ್ಳುವುದು ಪಾಲುದಾರಿಕೆ, ದೊಡ್ಡ ಮೋಸ ಒಂದು ಉಂಟು ಜಾಗರೂಕತೆ. ಕಲಾವಿದರಿಗೆ ವಿಶೇಷ ಸನ್ಮಾನ. ಟೆಕ್ನಿಷಿಯನ್ಸ್ ಗಳಿಗೆ ವಿಶೇಷ ಇನ್ಕಂ ಎಲ್ಲವನ್ನೂ ನೋಡ ತಕ್ಕಂತ ಮಾಸ ಈ ಜನವರಿ ಅದ್ಭುತ. ಸ್ವಲ್ಪ ಪ್ರಯಾಣಗಳಲ್ಲಿ ಎಚ್ಚರಿಕೆ ಗಡಿಬಿಡಿ ಜಾಗರೂಕತೆ
ಬೆಂಕಿ ಬಳಿ ಕೆಲಸ, ರಕ್ಷಣಾ ಇಲಾಖೆ, ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವವರಿಗೆ ಟೆನ್ಷನ್ ಇರಲಿದೆ.

 

ಮಕರ– ಆಕಸ್ಮಿಕ ಪ್ರಯಾಣ ಒಂದು ಆಗಿದೆ. ವ್ಯವಹಾರ ನಿಮಿತ್ತ, ವ್ಯಾಪಾರ ಮತ್ತು ಉದ್ಯೋಗ ನಿಮಿತ್ತ ಸ್ವಲ್ಪ ವಿದ್ಯಾರ್ಥಿಗಳು ಗಲಿಬಿಲಿ ಆಗ್ತೀರಿ. ಗಲಿಬಿಲಿ ಆಗುವಂತ ಪ್ರಸಂಗ! ಕೃಷಿಕರಿಗೆ ಒಳ್ಳೆಯ ಲಾಭ, ಕಬ್ಬಿಣ, ಸಿಮೆಂಟ್, ಸ್ಟೀಲ್, ಇಟ್ಟಿಗೆ ,ಮರಳು, ಬೆಂಕಿ, ಎಲೆಕ್ಟ್ರಾನಿಕ್ಸ್ ಎಲೆಕ್ಟ್ರಿಕಲ್ ವಸ್ತುಗಳು, ಈ ಒಂದು ವಿದ್ಯುತ್ ಉಪಕರಣಗಳ ವಸ್ತುಗಳು, ಕೆಇಬಿ, ಎಲೆಕ್ಟ್ರಿಸಿಟಿ ಇಂಥ ವಿಭಾಗಗಳಲ್ಲಿ ಮೆಕ್ಯಾನಿಕಲ್ ಇಂಜಿನಿಯರ್, ಕನ್ಸ್ಟ್ರಕ್ಷನ್ ಇಂಜಿನಿಯರ್ ಈ ವಿಭಾಗಗಳಲ್ಲಿ ಕೆಲಸ, ಕಾರ್ಯ ಮಾಡುತ್ತಿರುವವರಿಗೆ ಪರಿಶ್ರಮ
ಆದರೂ ಲಾಭವಿದೆ ಚೆನ್ನಾಗಿದೆ. ಆತಂಕಕ್ಕೆ ಒಳಗಾಗುವುವ ಅವಶ್ಯಕತೆ ಇಲ್ಲ.

 

ಕುಂಭ– ಆರೋಗ್ಯದ ಬಗ್ಗೆ ಗಮನವಿರಲಿ. ಮಾಂತ್ರಿಕವಾಗಿ, ದೈಹಿಕವಾಗಿ, ರೋಗಕಾರಕ ನಿಮಿತ್ತ ತೊಳಲಾಟ ಇರುತ್ತದೆ.ಅದು ಬಿಟ್ಟರೆ ಮಿಕ್ಕಂತೆ ಯಾವ ತೊಂದರೆ ಇಲ್ಲ. ಒಡನಾಟ, ಸಂತೋಷ ,ಓಡಾಟ, ಪ್ರಯಾಣ ಭೋಗಕ್ಕೆ ಕಡಿಮೆ ಇಲ್ಲ. ವಿಶೇಷ ಬಂಗಾರ, ಮನೆ ಇರುತ್ತದೆ. ಭೂಮಿ, ಮನೆ ತೆಗೆದುಕೊಳ್ಳುವುದು, ಜಾಗ ತೆಗೆದುಕೊಳ್ಳುವುದು, ವ್ಯವಹಾರ ಅಭಿವೃದ್ಧಿ, ನ್ಯಾಯಾಂಗ ಇಲಾಖೆಯಲ್ಲಿ ತೀರ ಧಾರ್ಮಿಕ ಇಲಾಖೆಯಲ್ಲಿ ಹೆಸರು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಹಣ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ.

 

ಮೀನ– ಜನವರಿ ಮಾಸ ಅದ್ಭುತವಾದ ಮಾಸವಾಗಿ ಬದಲಾಗುತ್ತದೆ. ಟೀಚರ್, ಇನ್ಸ್ಟ್ಯೂಟ್, ಕನ್ಸಲ್ಟೆಂಟ್, ಲೋನ್, ಬ್ಯಾಂಕಿಂಗ್ ಲೋನ್ ಕೊಡಿಸುವುದು, ಕನ್ಸಲ್ಟೆಂಟ್ ಹಾಕಿ ನಡೆಸುತ್ತಿರುವವರು, ಲೇವಾದೇವಿ, ಚಿಕ್ಕ ಪುಟ್ಟ ಚೀಟಿ ವ್ಯವಹಾರ, ಫೈನಾನ್ಸ್ ಬ್ಯಾಂಕಿಂಗ್, ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದೀರಿ. ರಿಪೇರಿ ಮೆಂಟೇನೆನ್ಸ್ ಈ ರೀತಿಯ ಒಂದು ವ್ಯವಹಾರ, ಮೊಬೈಲ್, ಎಲೆಕ್ಟ್ರಾನಿಕ್ ಐಟಂ, ಪುಸ್ತಕ ಬರವಣಿಗೆ, ಲೇಖನ, ಡೈರೆಕ್ಟರ್, ಸ್ಕ್ರಿಪ್ಟ್ ರೈಟರ್ ಈ ತರಹದ ಮ್ಯೂಸಿಕ್ ಡೈರೆಕ್ಟರ್ ಆಗಿದ್ದೀರಿ. ಡ್ಯಾನ್ಸ್ ಮಾಸ್ಟರ್ ನಾಟ್ಯ ಮಾಸ್ಟರ್ ಆಗಿದ್ದೀರಿ. ವಿದ್ಯಾಸಂಸ್ಥೆಗಳನ್ನು ನಡೆಸುತ್ತಿದ್ದೀರಿ ಅದ್ಭುತವಾದಂತಹ ಪ್ರಗತಿ. ಆದರೆ ಸ್ವಲ್ಪ ಮಾನಸಿಕ ಒತ್ತಡವಿರುತ್ತದೆ. ಶಿವಾರ್ಚನೆ ಸಮಾಧಾನ ತಂದುಕೊಡುತ್ತದೆ ಅದ್ಭುತವಾದಂತಹ ಮಾಸ ಈ ಜನವರಿ ಶುಭವಾಗಲಿ.

LEAVE A REPLY

Please enter your comment!
Please enter your name here