ಮೇಷ– ನಿಮಗೆ ಈ ಒಂದು ಚಂದ್ರ ತುಂಬಾ ಚೆನ್ನಾಗಿದೆ. ಆನಂದವನ್ನು ನೋಡ ತಕ್ಕಂತ ಒಂದು ಸುಯೋಗ ಉಂಟು. ಜನವರಿ ೨೧ರ ನಂತರ ಶನಿ ಬದಲಾಗುವುದು ಉಂಟು. ವೃತ್ತಿ ಸಂಬಂಧಿತವಾಗಿ ಕುಟುಂಬ ಸಹಿತವಾಗಿ ವಿಶೇಷ ಅಭಿವೃದ್ಧಿಯನ್ನು ನೋಡಕ್ಕಂತ ಅದ್ಭುತ ವರ್ಷವಾಗಿರುತ್ತದೆ. ಟೀಚಿಂಗ್, ರೈಟರ್ ,ಡಾಕ್ಟರ್, ಅಡ್ವೈಸರ್, ಕನ್ಸಲ್ಟೆಂಟ್, ಬ್ಯಾಂಕಿಂಗ್, ಕನ್ಸಲ್ಟೆಂಟ್ ಇಂಥ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವರಿಗೆ ಒತ್ತಡದ ಛಾಯೆ.
ವೃಷಭ– ತುಂಬ ಒಳ್ಳೆಯದು. ಪರಿಶ್ರಮದಿಂದ ಏನು ಮುಂದೆ ಹೆಜ್ಜೆ ಇಡುತ್ತಿದ್ದೀರಿ ಅದರಲ್ಲಿ ಯಶಸ್ಸು ನೋಡತಕ್ಕಂತ ದಿನ ಆಗಿರುತ್ತದೆ. ಕಲಾವಿದರು, ಡೈರೆಕ್ಟರ್, ಅಡ್ವರ್ಟೈಸಿಂಗ್, ಏಜೆನ್ಸಿ ,ಮಾರ್ಕೆಟಿಂಗ್ ಏಜೆಂಟ್ಸ್ ,ಬ್ಯಾಂಕಿಂಗ್ ಏಜೆನ್ಸಿ ಅದ್ಭುತ.
ಮಿಥುನ– ನಿಮ್ಮ ರಾಶ್ಯಾಧಿಪತಿ ಬುಧ, ಈ ವರ್ಷ ಆರಂಭದ ದಿನ ಗುರು ನಿಮ್ಮ ಮನೆಯಲ್ಲಿರುವುದರಿಂದ ಯಾರಾದರೂ ನಿಮಗೆ ನೆರಳಾಗಿ ನಿಂತುಕೊಂಡು ದಾರಿ ತೋರುತ್ತಾರೆ. ಮಾಸ್ಟರ್, ಗುರು, ಅಡ್ವೈಸರ್ ,ಕಮಿಷನ್ ಏಜೆಂಟ್, ಟೆಕ್ನಿಕಲ್ ಅಡೈಸರ್, ಟೀಚಿಂಗ್, ಅಡ್ವೈಸರ್, ಫೈನಾನ್ಸ್ ಈ ಒಂದು ವಿಭಾಗದಲ್ಲಿ ಇರುವವರಿಗೆ ಅದ್ಭುತ ವರ್ಷವಾಗಿರಲಿದೆ. ಈ ವರ್ಷದಲ್ಲಿ ಯಾವುದೇ ರೀತಿಯ ತೊಂದರೆಗಳಿಲ್ಲ.
ಕಟಕ– ನಿಮಗೆ ಭೂಮಿಯ ವಿಚಾರದಲ್ಲಿ ಒಂದು ಬಹುದೊಡ್ಡ ಲಾಭವನ್ನು ನೋಡುತ್ತೀರಿ. ಮಕ್ಕಳ ವಿಚಾರಗಳಲ್ಲಿ ತೊಳಲಾಟ ಇರುತ್ತದೆ. ಸಾಲ ಮಾಡಿದ್ರು ಕೂಡ ಒಂದು ರೀತಿಯ ಸಂದರ್ಭಗಳು ಉಂಟು. ತೀರ್ಥಕ್ಷೇತ್ರಗಳ ಸುಯೋಗ ಉಂಟು. ಆತಂಕಕ್ಕೆ ಒಳಗಾಗಬೇಡಿ ಉತ್ತಮ ದಿನಗಳನ್ನು ನೋಡುತ್ತೀರಿ.
ಸಿಂಹ– ವಿಶೇಷ ಪ್ರಗತಿ ವೃದ್ಧಿ.! ಈ ಒಂದು ವರ್ಷ ವಿಶೇಷವಾಗಿರಲಿದೆ. ನಿಮ್ಮ ರಾಶ್ಯಾಧಿಪತಿ ಪೂರ್ವಪುಣ್ಯ ಸ್ಥಾನದಲ್ಲಿ ಕುಳಿತು ಅಲ್ಲಿರುವ ಗುರು ಅವನ ಜೊತೆಯಲ್ಲಿರುವುದರಿಂದ ಅಧಿಕಾರ, ಅಂತಸ್ತು, ಆಸ್ತಿ, ಪದವಿ, ಶುಭ ಕಾರ್ಯ, ಮದುವೆ, ಮುಂಜಿ, ಮನೆ, ಭೂಮಿ ವ್ಯವಸ್ಥೆ ದಂಡಾಧಿಕಾರಿ, ಸರ್ಕಾರಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವವರಿಗೆ ಅದ್ಭುತ ಅಭಿವೃದ್ಧಿ, ಯಶಸ್ಸು ಉಂಟು.
ಕನ್ಯಾ– ವಿಶಿಷ್ಟವಾಗಿರುವಂತ ಒಂದು ವರ್ಷ ತುಂಬಾ ಚೆನ್ನಾಗಿದೆ. ಶುಕ್ರ ನಿಮಗೆ ಪಂಚಮದಲ್ಲಿದ್ದಾನೆ, ನಿಮ್ಮ ರಾಶ್ಯಾಧಿಪತಿ ಸುಖದಲ್ಲಿದ್ದಾನೆ. ಗುರುವಿನ ಕೃಪಾಕಟಾಕ್ಷ ಸಂಪೂರ್ಣವಾಗಿದೆ. ಮಗು, ಮನೆ, ವಾಹನ, ಬಂಗಾರ, ಬೆಳ್ಳಿ ಇವುಗಳ ಒಂದು ವ್ಯಾಪಾರ, ವ್ಯವಹಾರ ತೆಗೆದುಕೊಳ್ಳಬೇಕು, ಕೂಡಿಡಬೇಕು ಹೊಸದೊಂದು ಬದುಕು ಸಣ್ಣದ್ದೊಂದು ಜೀವನ ಬದಲಾವಣೆಯನ್ನು ನೋಡ ತಕ್ಕಂತ ಒಂದು ಅದ್ಭುತ ಸುಯೋಗ ವರ್ಷ ಯೋಚಿಸಬೇಡಿ.
ತುಲಾ– ನಿಮಗೆ ರಾಶ್ಯಾಧಿಪತಿ ಶುಕ್ರದಲ್ಲಿದ್ದಾನೆ. ಶನಿ ಮೂರನೇ ಮನೆಯಲ್ಲಿದ್ದಾನೆ. ನಿಧಾನವಾದರೂ ಒಂದೊಂದೇ ಮೆಟ್ಟಿಲನ್ನು ಹತ್ತಿಕೊಂಡು ಹೋಗುವಂಥ ಸುಯೋಗ. ಅದರಲ್ಲೂ ಕಲೆಗಾರರು, ಕಲಾವಿದರು, ಅಡ್ವರ್ಟೈಸಿಂಗ್ ಏಜೆನ್ಸಿ, ಬಟ್ಟೆ ವ್ಯಾಪಾರ, ಬೆಳ್ಳಿ ವ್ಯಾಪಾರ, ಬಂಗಾರ ವ್ಯಾಪಾರ, ವಾಹನ ವ್ಯಾಪಾರ ಇಂಥ ಒಂದು ವ್ಯಾಪಾರ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿರುವವರಿಗೆ ಅದ್ಭುತ ಅವಕಾಶಗಳ ಸಿಂಚನ.
ವೃಶ್ಚಿಕ– ವಿಶೇಷವಾದಂಥ ವರ್ಷ.! ಎಷ್ಟು ಕಷ್ಟಪಟ್ಟಿದ್ದೀರ ಅದರ ಸಂಪೂರ್ಣ ಫಲವನ್ನು ನೋಡುವಂತ ವರ್ಷವಾಗಿರಲಿದೆ. ನೀವು ಕಷ್ಟಪಟ್ಟು ಬೆಳೆಸಿರುವ ಮರದಿಂದ ಒಂದು ಸಿಹಿಯಾದ ಹಣ್ಣನ್ನು ಫಲವಾಗಿ ನೋಡುತ್ತೀರಿ. ಹಲವಾರು ದಾರಿಗಳಾಗಿ ಶುಭ ಸುದ್ದಿಯನ್ನು ಕೆಳ ತಕ್ಕಂತ ಒಂದು ಯೋಗ, ಭೂಮಿ ಕಾರಕ, ಕುಜ ನಿಮ್ಮ ಮನೆಯಲ್ಲಿ ಕುಳಿತಿರುವುದರಿಂದ ಚಂದ್ರ ಸುಖ ಕಾರಕ ಸ್ಥಾನದಲ್ಲಿ ಕುಳಿತಿರುವುದರಿಂದ, ಸುಖ ವೃದ್ಧಿ, ತಾಯಿ, ತಂದೆಯ ಆರೋಗ್ಯ, ಕುಟುಂಬ ಇವುಗಳೆಲ್ಲವನ್ನೂ ತಾನಾಗಿಯೇ ದೇವದರ್ಶನ, ಗುರುದರ್ಶನ, ಕುಕ್ಕೆ ದರ್ಶನ ಇವೆಲ್ಲವನ್ನೂ ನೋಡುವಂಥ ಸುಯೋಗ ಉಂಟು ಚೆನ್ನಾಗಿದೆ.
ಧನಸ್ಸು– ಗುರು ನಿಮ್ಮ ಮನೆಯಲ್ಲಿದ್ದಾನೆ. ನೀವು ಯಾವ ಮನೋ ಇಚ್ಛೆಯಿಂದ ಮುಂದಕ್ಕೆ ಹೆಜ್ಜೆ ಇಡುತ್ತೀರಿ ಎಲ್ಲವನ್ನೂ ಗೆಲ್ಲುತ್ತೀರಿ. ಟೀಚರ್, ಅಡ್ವೈಸರ್, ಟೆಕ್ನಿಷಿಯನ್, ಟೆಕ್ನಿಕಲ್, ಡಿಪ್ಲೊಮಾ, ಎಂಜಿನಿಯರ್ ಸ್ಟೂಡೆಂಟ್ಸ್, ಮೆಡಿಕಲ್ ಸ್ಟೂಡೆಂಟ್ಸ್ ಈ ಒಂದು ವಿಭಾಗಗಳಲ್ಲಿ ಕೆಲಸ ಕಾರ್ಯ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ಅದ್ಭುತವಾದಂತಹ ಸಂಕಲ್ಪದ ಒಂದು ವರ್ಷ. ವಿಶೇಷ ಅಂದರೆ ವಿದ್ಯಾರ್ಥಿಗಳಂತೂ ಮುಟ್ಟಿದ್ದೆಲ್ಲ ಚಿನ್ನ. ಆದರೆ ಅಪಮಾನ, ಪ್ರಚೋದನೆಗೆ ಒಳಗಾಗಿ ಬಿಡುತ್ತೀರಿ ಎಚ್ಚರಿಕೆ.
ಮಕರ– ಈ ವರ್ಷ ಸ್ವಲ್ಪ ಖರ್ಚಿಗೆ ಒಳಗಾಗುತ್ತೀರಿ. ಈ ವರ್ಷ ಶುಕ್ರ ಸಪ್ತಮಾಧಿಪತಿ, ಕುಟುಂಬದಲ್ಲಿ ಪರಿಪೂರ್ಣ ವಿಜಯ, ನಿಮ್ಮ ವಿಜಯಕ್ಕೋಸ್ಕರ ಹಲವಾರು ದಾರಿ, ಹಲವಾರು ಗುರುಗಳ ದರ್ಶನ ಕ್ಷೇತ್ರಗಳಿಗೆ ಅಲೆದಾಡಿಸುತ್ತಾರೆ. ಏನು ಕಷ್ಟಪಟ್ಟಿದ್ದೀರಿ ಅದರ ಪೂರ್ಣ ಫಲವನ್ನು ನೋಡುತ್ತೀರಿ. ತೊಂದರೆ ಏನೂ ಇಲ್ಲ.! ಅದರಲ್ಲೂ ಕಲೆಗಾರರಾಗಿದ್ದರೆ, ಈ ಒಂದು ಇಂಟೀರಿಯರ್ ಡೆಕೋರೇಷನ್, ಆರ್ಕಿಟೆಕ್, ಡಿಸೈನ್, ಮನೆ ವಾಸ್ತು ಇದಕ್ಕೆ ಸಂಬಂಧಿಸಿದ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದರೆ. ಪ್ಲಂಬಿಂಗ್, ಕನ್ಸಟ್ರಕ್ಷನ್ ಲೈನ್, ಹಿರಿಯರ ಸಹಾಯ ಇವೆಲ್ಲವೂ ಕೂಡಿ ಬರಲಿದೆ. ಕಾಶಿಯಾತ್ರೆ, ಗಂಗಾ ಸ್ನಾನ, ರಾಮೇಶ್ವರ ಕ್ಷೇತ್ರ ಒಂದು ಸೌಭಾಗ್ಯ ಉಂಟು.
ಕುಂಭ– ನಿಮ್ಮ ಮನೆಯಲ್ಲಿ ಗುರು. ೧೦ನೇ ಮನೆಯಲ್ಲಿ ಕುಜ, ಹನ್ನೊಂದನೆ ಮನೆಯಲ್ಲಿ ಶನಿ, ಬುದ್ಧಿ ಮೇದಸ್ಸು ಇವೆಲ್ಲವನ್ನೂ ಉಪಯೋಗಿಸಿ ಮಾಡುವಂತ ವ್ಯವಹಾರಗಳಲ್ಲಿ ವಿಶೇಷ ಪ್ರಗತಿ, ಧನಲಾಭವನ್ನು ನೋಡುತ್ತೀರಿ. ನೆಮ್ಮದಿಗೆ ಭಂಗವಿಲ್ಲ. ಗುರುವಿನ ಪೂರ್ಣ, ಪರಿಪೂರ್ಣ ಫಲ ಇರುತ್ತದೆ. ಯಾವ ಕೆಲಸ ಮಾಡಿದರೂ ಕೂಡ ಯಾರಾದರೂ ಬಂದು ನಿಮಗೆ ನೆರಳು ಕೊಡವಂತಹ ಪ್ರಸಂಗ, ಧನ ವೃದ್ಧಿಯಾಗುತ್ತದೆ. ಅಷ್ಟೇ ಖರ್ಚು ಕೂಡ ಇರುತ್ತದೆ. ನಿಮಗೆ ಖರ್ಚು ಇಲ್ಲ ಎಂದರೆ ಆಗುವುದಿಲ್ಲ. ಯಾವುದೋ ರೂಪದಲ್ಲಿ ನಿಮ್ಮ ಖರ್ಚಾಗುತ್ತದೆ. ಆರೋಗ್ಯದ ಕಡೆ ಗಮನವಿರಲಿ, ಹಿರಿಯರ ಆರೋಗ್ಯದಲ್ಲಿ ಎಡವಟ್ಟು ಇದ್ದರೆ ಜಾಗರೂಕತೆ.
ಮೀನ– ಪ್ರಗತಿಯನ್ನು ಕಾಣುವಂಥ ಒಂದು ವರ್ಷ ನಿಮಗೆ. ಅದರಲ್ಲೂ ಗುರು ದಶಮ ಸ್ಥಾನದಲ್ಲಿ ಇದ್ದಾನೆ. ನಿಮ್ಮ ದೊಡ್ಡ, ದೊಡ್ಡ ಕಾಂಪಿಟೆಟೀವ್ ಎಕ್ಸಾಮ್ಗಳು, ದೊಡ್ಡದಾದ ಪೊಸಿಷನ್ ಗಳಿಗೆ ಪ್ರಯತ್ನ ಮಾಡುತ್ತಿದ್ದೀರಿ ಯಶಸ್ಸು ನೋಡಕ್ಕಂತ ಒಂದು ಭಾವವನ್ನು ತಂದುಕೊಡುವಂತಹ ಒಂದು ವರ್ಷ. ಅದರಲ್ಲೂ ಉದ್ಯೋಗಿಗಳಲ್ಲಿ ಸ್ಥಳಾಂತರ, ಪರದೇಶ, ಪರಸ್ಥಳ ,ತಾಯಿ ತಂದೆಯ ಆರೋಗ್ಯದಲ್ಲಿ ಸ್ವಲ್ಪ ಗಲಿಬಿಲಿ. ಮಾನಸಿಕ ಆರೋಗ್ಯ ಕಾಡುತ್ತದೆ. ಆಚಾರ್ಯರಿಗೆ, ಗುರುಗಳಿಗೆ ತಾಂಬೂಲ ಕೊಡುವುದು, ಪಾದಪೂಜೆ ಮಾಡಿಸುವುದು ಅಥವಾ ಗೋವಿಗೆ ಸೇವೆ ಮಾಡುವುದು, ಗೋವಿಗೆ ಏನಾದ್ರೂ ಹಣ್ಣು ಹಂಪಲು ನೀಡುವುದು ಮಾಡಿ ಒಳ್ಳೆಯದಾಗುತ್ತದೆ.