ಮಗನ ನಿರ್ದೇಶನದಲ್ಲಿ ಅಪ್ಪನ ಅಭಿನಯ !

0
142

ಮದನ್ ಪಾಟೀಲ್, ನಿರ್ದೇಶಕ ನಟ ಮತ್ತು ನಿರ್ಮಾಪಕನಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ ಸ್ವಾಮಿ ಸತ್ಯಾನಂದ, ಯಾರಿವಾನು ಮುಂತಾದ ಜನಪ್ರಿಯ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.2013 ರಲ್ಲಿ ತೆರೆಕಂಡ ‘ಸ್ವಾಮಿ ಸತ್ಯಾನಂದ’ ಚಿತ್ರ ಯಶಸ್ಸು ಕಂಡಿತ್ತು.
ಈಗ ಆರು ವರ್ಷದ ಬಳಿಕ ಮದನ್ ಪಟೇಲ್ ಅವರು ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ವಿಷೇಶ ಎನೆಂದರೆ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿರುವುದು ಮದನ್ ಪಾಟೀಲ್ ಅವರ ಪುತ್ರ ಮಯೂರ್ ಪಾಟೀಲ್ !

ಮಯೂರ್ ಪಾಟೀಲ್,

ಮಯೂರ್ ಪಟೇಲ್ ಭಾರತೀಯ ಚಲನಚಿತ್ರ ನಟ / ಗಾಯಕ, ಅವರು ಕನ್ನಡ ಚಲನಚಿತ್ರೋದ್ಯಮದಲ್ಲಿ ಪ್ರಧಾನವಾಗಿ ಕೆಲಸ ಮಾಡಿದ್ದಾರೆ. ಮಯೂರ್ ಪಟೇಲ್, ಸ್ಲಮ್, ಹುಂಜಾದಂತಹ ಜನಪ್ರಿಯ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಚಿತ್ರರಂಗದಲ್ಲಿ ಅಪರೂಪಕ್ಕೆ ಕಾಣಿಸಿಕೊಳ್ಳುತ್ತಿದ್ದ ಮದನ್‌ ಪಟೇಲ್ ಮತ್ತು ಪುತ್ರ ಮಯೂರ್‌ ಪಟೇಲ್, ಶೀಘ್ರದಲ್ಲಿಯೇ ‘ತಮಟೆ’ ಎನ್ನುವ ಹೊಸ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

ಅಂದ ಹಾಗೆ ಈ ತಮಟೆ,2013 ರಲ್ಲಿ ಮದನ್ ಪಾಟೀಲ್ ಅವರೇ ಬರೆದ ಕಾದಂಬರಿ.ಇನ್ನು ಈ ಕಾದಂಬರಿಯನ್ನು ಚಿತ್ರದ ರೂಪದಲ್ಲಿ ತೆರೆಯ ಮೇಲೆ ತರುತ್ತಿದ್ದರೆ, ಪುತ್ರ ಮಯೂರ್ ಪಾಟೀಲ್ !
ಇನ್ನು ಈ ಚಿತ್ರದ ಪ್ರಮುಖ ಪಾತ್ರವನ್ನು ಮದನ್ ಪಾಟೇಲ್ ಅಭಿನಯಿಸುತ್ತಿದ್ದಾರೆ..
ಇನ್ನು ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ, ಚಿತ್ರತಂಡ ಮುಹೂರ್ತ ನೆರವೇರಿಸಿದೆ !ನಂತರ ಸುದ್ದಿಗೋಷ್ಠಿ ಯೊಂದಿಗೆ ಮಾತನಾಡಿದ ಮಯೂರ್ ಪಟೇಲ್, ‘ಅಪ್ಪ ಬರೆದಿದ್ದ ಈ ಕಾದಂಬರಿಯನ್ನು ಓದಿದ ನಂತರ ಬಡ ಮುನಿಯನ ಪಾತ್ರ ತೀವ್ರವಾಗಿ ಕಾಡಿತ್ತು.

ಅದನ್ನೇ ಆಧರಿಸಿ ಸಿನಿಮಾ ಮಾಡಲು ನಿರ್ಧರಿಸಿದೆ. ಮುನಿಯ ಪಾತ್ರಕ್ಕೆ ಯಾವ ಕಲಾವಿದ ಸೂಕ್ತ ಅಂತ ಯೋಚಿಸುತ್ತಿದ್ದಾಗ, ನನಗೆ ಮೊದಲು ಕಣ್ಮುಂದೆ ಬಂದಿದ್ದು, ನನ್ನ ತಂದೆ ಮದನ್‌ ಪಟೇಲ್. ಅವರು ಕೂಡ ಮೂಲತಃ ತಮಟೆ ವಾದ್ಯ ನುಡಿಸುತ್ತಾ ಬಂದವರಾಗಿದ್ದರಿಂದ, ಆ ಪಾತ್ರಕ್ಕೆ ಅವರೇ ಸೂಕ್ತ ಅಂತ ಹೇಳಿ, ನಿರ್ದೇಶನಕ್ಕೆ ಇಳಿಯುತ್ತಿದ್ದೇನೆ’ ಎಂದು ಹೇಳಿದ್ದಾರೆ !

ಇನ್ನು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿರುವುದು ನಿರ್ಮಾಪಕಿ ವಂದನ.. ಇನ್ನು ಚಿತ್ರದಲ್ಲಿ ಮದನ್ ಪಟೇಲ್ ಅವರೊಂದಿಗೆ ಐಶ್ವರ್ಯಾ, ವಿನಯಾ ಪ್ರಸಾದ್‌, ಟೆನ್ನಿಸ್‌ ಕೃಷ್ಣ, ಲಕ್ಷ್ಮಣ್‌ ಶಿವಶಂಕರ್‌, ಚಂದು, ಗಿರೀಶ್‌ ಜತ್ತಿ, ರಮೇಶ್‌ ಭಟ್, ರಮೇಶ್‌ ಪಂಡಿತ್‌, ಮೋಹನ್‌ ಜುನೇಜಾ, ವಾಣಿಶ್ರೀ, ಸುಂದರಶ್ರೀ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ..

LEAVE A REPLY

Please enter your comment!
Please enter your name here