ಮಗಳು ಓದುತ್ತಿರುವ ಕಾಲೇಜಿನಲ್ಲೇ `ಅಪ್ಪ’ ಜೂನಿಯರ್..!!

0
162

ಸಾಮಾನ್ಯವಾಗಿ ನಾವು ಗಮನಿಸಿದಂತೆ ಅಪ್ಪಂದಿರು ಮಕ್ಕಳು ಶಾಲಾ,ಕಾಲೇಜುಗಳಲ್ಲಿ ಹೇಗೆ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅವರ ದೈನಂದಿನ ಚಟುವಟಿಕೆ ಹೇಗಿದೆ ಎಂದು ವಿಚಾರಿಸಲು ಕಾಲೇಜು ಬಳಿ ಬರುತ್ತಾರೆ. ಆದರೆ ಇಲ್ಲೊಂದು ಸುದ್ದಿ ಕೇಳಿದರೆ ನಿಮಗೆ ಸ್ವಲ್ಪ ಆಶ್ಚರ್ಯ ಅನಿಸಬಹದು ಆದರೆ ಅದೆ ಸತ್ಯ. ಮಗಳು ಓದುತ್ತಿರುವ ಕಾಲೇಜಿನಲ್ಲೇ ತಂದೆ ಮಗಳ ಜೂನಿಯರ್ ಆಗಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮುಂಬೈನಲ್ಲಿ ಕಾನೂನು ಓದುತ್ತಿರುವ ಮಗಳ ಜೊತೆ ಜೂನಿಯರ್ ಆಗಿ ಕಾನೂನು ವಿಷಯವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಈ ವಿಚಾರ ಕುರಿತು ತಂದೆಯ ಬಗ್ಗೆs `ಹ್ಯೂಮನ್ಸ್ ಆಫ್ ಬಾಂಬೆ’ ಎಂಬ ಫೇಸ್‍ಬುಕ್ ಪೇಜ್‍ನಲ್ಲಿ ವಿಶೇಷವಾಗಿ ಬರೆದು ಪೋಸ್ಟ್ ಮಾಡಿದ್ದಾರೆ.

ನಮ್ಮ ತಂದೆ ನಾನು ಕಾನೂನು ಕಾಲೇಜಿಗೆ ಸೇರಿದಾಗ ಪ್ರತಿದನ ಕಾನೂನಿಗೆ ಸಂಬಂಧಿಸಿದ ಆನೇಕ ವಿಚಾರಗಳ ಬಗ್ಗೆ ಸಾಕಷ್ಟು ಕೂತಹಲದಿಂದ ಕೇಳುತ್ತಿದ್ದರು ಜೊತೆಗೆ ಅವರು ನಮ್ಮ ಸಮಯದಲ್ಲಿ ಇದ್ದಾಗ ವಿದ್ಯಾಭ್ಯಾಸವನ್ನು ಸಂಪೂರ್ಣವಾಗಿ ಮುಗಿಸಲು ಆಗಲಿಲ್ಲ ಯಾಕೆಂದರೆ ಆಗಿನ ಸಮಯದಲ್ಲಿ ನಮ್ಮ ತಂದೆಗೆ ಚಿಕ್ಕ ವಯಸ್ಸಿನಲ್ಲೇ ಮನೆಯ ಜವಾಬ್ದಾರಿ ಎದುರಾಯಿತು ಹಾಗಾಗಿ ಅವರು ವಿದ್ಯಾಭ್ಯಾಸವನ್ನು ಮುಂದುವರಿಸಲು ವಿಫಲರಾದರು. ಅವರಿಗೆ ಕಾನೂನು ಬಗ್ಗೆ ಬಹಳ ಆಸಕ್ತಿ ಇತ್ತು ಹಾಗೂ ಕಾನೂನು ಅಧ್ಯಯನ ಮಾಡಲು ಬಯಸಿದ್ದರು. ಅದೇ ರೀತಿಯಲ್ಲಿ ಅವರು ಇಗ ನಾನು ವ್ಯಾಸಂಗ ಮಾಡುತ್ತಿರುವ ಕಾಲೇಜಿನಲ್ಲೇ ಆಡ್ಮಿಶನ್ ಪಡೆದು ನನಗೆ ಜೂನಿಯರ್ ಆಗಿ ಕಾಲೇಜಿಗೆ ಸೇರಿಕೊಂಡಿದ್ದಾರೆ. ನಮ್ಮ ತಂದೆ ಎಲ್ಲ ವಿದ್ಯಾರ್ಥಿಗಳು ಹೇಗೆ ಉತ್ಸಾಹದಿಂದ ಇರುತ್ತಾರೋ ಅಷ್ಟೇ ಉತ್ಸಾಹದಲ್ಲಿ ಕಾಲೇಜಿನ ಎಲ್ಲ ಚಟುವಟಿಕೆಯಲ್ಲೂ ಭಾಗಿಯಾಗುತ್ತಾರೆ. ಅಧ್ಯಯನದಲ್ಲಿ ನಮ್ಮ ತಂದೆಯ ಉತ್ಸಾಹವನ್ನು ನೋಡಿ ನನಗೆ ತುಂಬ ಖುಷಿಯಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್ ಸುಮಾರು 22 ಸಾವಿರಕ್ಕೂ ಹೆಚ್ಚು ಲೈಕ್‍ಗಳನ್ನು ಪಡೆದುಕೊಂಡಿದೆ ಹಾಗೂ ಹಲವು ಮಂದಿ ಈ ಪೋಸ್ಟ್’ನ ಹೆಚ್ಚು ಶೇರ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here