ದಬಾಂಗ್-3 ರಿಲೀಸ್ ಡೇಟ್ ಅನೌನ್ಸ್!

0
253

ಬಾಲಿವುಡ್‍ನ ಬಹುನೀರಿಕ್ಷಿತ ಚಿತ್ರ ದಬಾಂಗ್-3 ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಇದೇ ಡಿಸೆಂಬರ್ 20 ರಂದು ಹಿಂದಿ ಸೇರಿದಂತೆ, ಕನ್ನಡ ತೆಲುಗು ತಮಿಳು ಬಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ ಎಂದು ಸ್ವತಃ ಸಲ್ಮಾನ್‍ಖಾನ್ ಅವರೆ ತಿಳಿಸಿದ್ದಾರೆ. ಈ ಬಗ್ಗೆ ತಮ್ಮ ಇನ್‍ಸ್ಟಾಗ್ರಾಮ್ ನಲ್ಲೂ ಕೂಡ ನಿರ್ದೇಶಕ ಪ್ರಭುದೇವ್ ಜೊತೆಗಿನ ಫೋಟೋ ಒಂದನ್ನ ಪೋಸ್ಟ್ ಮಾಡಿ ಸ್ಪಸ್ಟನೆ ಕೊಟ್ಟಿದ್ದಾರೆ. ಸಿನಿಮಾದಲ್ಲಿ ಸಲ್ಮಾನ್ ಖಾನ್ ಜೊತೆ ಕನ್ನಡದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಸಹಿತ ನಟಿಸುತ್ತಿದ್ದು,ಈಗಾಗಲೆ ಚಿತ್ರ ಭಾರಿ ನೀರಿಕ್ಷೇಯನ್ನ ಹುಟ್ಟಿಹಾಕಿದೆ.

ಇನ್ನು ಚಿತ್ರವನ್ನ ಡ್ಯಾನ್ಸ್ ಕಿಂಗ್ ಪ್ರಭುದೇವ ನಿರ್ದೇಶಿಸುತ್ತಿದ್ದು,ಇದೊದಂದು ಆಕ್ಷ್‍ನ್ ಸಿನಿಮವಾಗಿದೆ. ಸಲ್ಮಾನ್‍ಖಾನ್ ಫಿಲಮ್ಸ್ ಮತ್ತು ಅರ್‍ಬಾಜ್‍ಖಾನ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಸಿನಿಮಾ ತಯಾರಾಗಿದ್ದು, ನಿಕಿಲ ದಿವಿದಿ, ಸಲ್ಮಾನ್‍ಖಾನ್ ಮತ್ತು ಅರ್‍ಬಾಜ್‍ಖಾನ್ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ದೊಡ್ಡ ತಾರಾಬಳಗವೆ ಹೊಂದಿದ್ದು,ಮುಖ್ಯಭೂಮಿಕೆಯಲ್ಲಿ ಸಲ್ಮಾನ್‍ಖಾನ್,ಕಿಚ್ಚ ಸುದೀಪ್,ಸೊನಾಕ್ಷಿ ಸಿನ್‍ಹ,ಅರ್‍ಬಾಜ್‍ಖಾನ್ ಅಭಿನಯಿಸಿದ್ದಾರೆ!

ಬಹಳ ಕುತೂಹಲ ಮತ್ತು ನಿರೀಕ್ಷೇಯನ್ನು ಮೂಡಿಸಿರುವ ದಬಾಂಗ್-3 ವಿಶ್ವಾದ್ಯಂತ ಡಿಸೆಂಬರ್ 20 ರಂದು ತರೆಕಾಣುತ್ತಿದೆ. ಇನ್ನು ಕಿಚ್ಚ ಸುದೀಪ್ ರವರ ಪೈಲ್ವಾನ್ ಚಿತ್ರದ ಈಗಾಗಲೇ ಬಿಡುಗಡೆಯಾಗಿದ್ದು, ಭಾರತಾದ್ಯಂತ ಸದ್ದು ಮಾಡುತ್ತಿದೆ. ಇನ್ನು ದಬಾಂಗ್-3 ಸಿನಿಮಾದಲ್ಲಿ ಕಿಚ್ಚ ಇನ್ನಾವ ರೀತಿ ಸದ್ದು ಮಾಡುತ್ತಾರೋ ಕಾದು ನೋಡಬೇಕಾಗಿದೆ.

LEAVE A REPLY

Please enter your comment!
Please enter your name here