‘ನಾನು ಎಲ್ಲದಕ್ಕೂ ಸೈ’ ತೊಡೆ ತಟ್ಟಿದ ಶೂಟರ್ ಡಿಕೆಶಿ..!

0
765

ವ್ಯವಸ್ಥಿತವಾಗಿ ನನ್ನನ್ನು ನನ್ನ ಪಕ್ಷವನ್ನು ಮುಗಿಸಲು ತಂತ್ರಗಾರಿಕೆ ನಡೆಯುತ್ತಿದೆ. ಆದರೆ ನಾನು ಕೆಂಪೆಗೌಡರ ಮಗ. ಹೆದರುವ ಮಗನಲ್ಲ. ಕೆಂಪೇಗೌಡರ ಮಗ ಹೆದರುವುದೂ ಇಲ್ಲ. ಕಾನೂನು, ರಾಜಕೀಯ ಮತ್ತು ಸಾಮಾಜಿಕ ಚೌಕಟ್ಟಿನಲ್ಲಿಯೇ ಹೋರಾಡುತ್ತೇನೆ ಎಂದು ಕಾಂಗ್ರೆಸ್ ನಾಯಕ ಸಚಿವ ಡಿ ಕೆ ಶಿವಕುಮಾರ್ ಗುಡುಗಿದ್ದಾರೆ.

ಇಂದು ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಕೆ ಶಿವಕುಮಾರ್, ನಾನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ, ನಾಯಕನಾಗಿ ಪಕ್ಷ ಕೊಟ್ಟಂತ ಜವಾಬ್ದಾರಿಯನ್ನು ನಡೆಸಿಕೊಂಡು ಬಂದಿದ್ದೇನೆ. ಈ ಹಿಂದೆ ಮಹಾರಾಷ್ಟ,್ರ ಗುಜರಾತ್ ಮತ್ತು ನಮ್ಮ ರಾಜ್ಯದ ಶಾಸಕರನ್ನು ಕಾಪಾಡುವಂತ ಜವಾಬ್ದಾರಿ ಮಾಡಿಕೊಂಡು ಬಂದಿದ್ದೇನೆ. ಹೀಗಾಗಿಯೇ ನನ್ನ ಮೇಲೆ ಷಡ್ಯಂತ್ರ ಹೆಣೆಯಲಾಗಿದೆ.

ನಾನು ದೇಶದ ನ್ಯಾಯಾಂಗದ ಬಗ್ಗೆ ಗೌರವ ಇಟ್ಟುಕೊಂಡವನು. ನ್ಯಾಯಾಂಗಕ್ಕೆ, ಶಾಸಕಾಂಗಕ್ಕೆ ಏನೆಲ್ಲಾ ಗೌರವಕೊಡಬೇಕೋ ಕೊಟ್ಟಿದ್ದೇನೆ. ನನ್ನ ಕರ್ತವ್ಯಗಳನ್ನು ನಾನು ಮಾಡಿಕೊಂಡು ಬಂದಿದ್ದೇನೆ. ಜಾರಿ ನಿರ್ದೇಶನಾಲಯ ಕೇಳಿರುವ ಪ್ರಶ್ನೆಗಳಿಗೆ ನಮ್ಮ ಆಡಿಟರ್ ಕರೆಸಿ ಕೆಲವೊಂದಕ್ಕೆ ಉತ್ತರ ಕೊಟ್ಟಿದ್ದೇನೆ. ಹೀಗಾಗಿ ಯಾವುದಕ್ಕೂ ಹೆದರುವ ಪ್ರಶ್ನೆಯೇ ಇಲ್ಲ. ಎಲ್ಲವನ್ನೂ ನಾನು ಎದುರಿಸುತ್ತೇನೆ ಎಂದರು.

ಇನ್ನು ನಾನು ಮಾಡಬಾರದ ಕೆಲಸ ಏನೂ ಮಾಡಿಲ್ಲ. ಕಾನೂನು ರೀತಿಯಲ್ಲಿಯೇ ಮಾಡಿದ್ದೇನೆ. ಹೀಗಾಗಿ ಕೋರ್ಟ್‍ನಲ್ಲೂ ಮತ್ತೆ ಮೇಲ್ಮಮನವಿ ಸಲ್ಲಿಸುತ್ತೇನೆ. ಇಡಿ ಒಬ್ಬರಿಗೊಂದು ನ್ಯಾಯ ಮತ್ತೊಬ್ಬರಿಗೊಂದು ನ್ಯಾಯದಂತೆ ನಡೆದುಕೊಳ್ಳುತ್ತಿದೆ. ನನಗೆ, ನನ್ನ ಪಕ್ಷಕ್ಕೆ, ನನ್ನ ಕುಟುಂಬಕ್ಕೆ ಏನೇನೂ ತೇಜೋವಧೆ ಮಾಡಬೇಕೋ ಹಾಗೆಲ್ಲಾ ಮಾಡಲಾಗುತ್ತಿದೆ. ಆದರೇ ಇದಕ್ಕೆ ನಾನು ಕಾನೂನಿನ ಚೌಕಟ್ಟಿನಲ್ಲಿ ಹೋರಾಡುತ್ತೇನೆ ಎಂದು ಗುಡುಗಿದ್ದಾರೆ. ಈ ಮೂಲಕ ನಾನು ಎಲ್ಲದಕ್ಕೂ ಸೈ ಎನ್ನುವ ಸಂದೇಶವನ್ನು ರವಾನಿಸಿದ್ದಾರೆ. ಸುದ್ದಿಗೋಷ್ಠಿಯ ನಂತರ ಡಿ.ಕೆ. ಶಿವಕುಮಾರ್ ಮತ್ತು ಅವರ ಕುಟುಂಬ ವಿಚಾರಣೆ ಎದುರಿಸಲು ದೆಹಲಿಯತ್ತ ತೆರಳಿದೆ.

LEAVE A REPLY

Please enter your comment!
Please enter your name here