ಡಿಕೆಶಿಯನ್ನು ಆಸ್ಪತ್ರೆಗೆ ದಾಖಲು ಮಾಡಲು ‘ಇಡಿ’ ತಡಮಾಡಿದ್ದಾದ್ದರು ಯಾಕೆ..?

0
201

ಹಾಲಿ ಕನಕಪುರ ಶಾಸಕ ಡಿ.ಕೆ. ಶಿವಕುಮಾರ್ ಅವರನ್ನು ಅಕ್ರಮ ಆಸ್ತಿ, ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿದಂತೆ(ಇ.ಡಿ) ವಿಶೇಷ ನ್ಯಾಯಾಲಯ ಡಿಕೆಶಿಯವರನ್ನು ಕಳೆದ ವಾರದಿಂದ ಹೆಚ್ಚು ತನಿಖೆಗೆ ಒಳಪಡಿಸಿದ್ದು, ಇದ್ದರಿಂದ ಹೆಚ್ಚು ಸಮಯ ವಿಚಾರಣೆಯಲ್ಲೇ ಕಳೆಯುತ್ತಿರುವ ಡಿಕೆ ಶಿವಕುಮಾರ್ ಅವರ ಆರೋಗ್ಯದಲ್ಲಿ ತೀರಾ ಏರುಪೇರು ಕಂಡುಬಂದಿದೆ. ಕಳೆದ ವಿಚಾರಣೆಯಲ್ಲಿ ಮಾತನಾಡಿದ ಡಿಕೆಶಿ ಇಡಿ ಅದಿಕಾರಿಗಳು ವಿಚಾರಣೆ ನೆಪದಲ್ಲಿ ನನಗೆ ತೀವ್ರ ಕಿರುಕುಳ ನೀಡುತ್ತಿದ್ದಾರೆ. ನನ್ನ ಆರೋಗ್ಯದ ಸ್ಥಿತಿ ಗತಿ ಸರಿಯಿಲ್ಲ.! ವಿಶ್ರಾಂತಿ ತೆಗದುಕೊಳ್ಳಲು ಸೂಕ್ತ ಸಮಯ ನೀಡುತ್ತಿಲ್ಲ ಎಂದು ಇಡಿ ಅದಿಕಾರಿಗಳ ವಿರುದ್ಧ ಡಿಕಶಿ ಆರೋಪ ಮಾಡಿದ್ದರು.

ಆರೋಗ್ಯದಲ್ಲಿ ಸಾಕಷ್ಟು ತೊಂದರೆ ಕಾಣಿಸುತ್ತಿದೆ ಆದರೆ ಇಡಿ ಅಧಿಕಾರಿಗಳು ಇದಕ್ಕೆ ಸ್ಪಂದಿಸುತ್ತಿಲ್ಲ. ಆಸ್ಪತ್ರೆಯಲ್ಲಿ ವೈದ್ಯರು ಕೈಗೆ ಸೂಜಿ ಚುಚ್ಚಿದ್ದರು. ಕೈಯಲ್ಲಿ ರಕ್ತ ಹೆಚ್ಚಾಗಿ ಸೋರುತ್ತಿದ್ದರು ಅಸ್ಪತ್ರೆಯಲ್ಲೇ ದಾಖಲು ಮಾಡದೆ ಕರೆದೊಯ್ಯಲಾಗಿತ್ತು ಎಂದು ಡಿಕೆಶಿ ತಮ್ಮ ಆಳಲನ್ನು ನ್ಯಾಯಾಧೀಶರಿಗೆ ಹೇಳಿಕೊಂಡಿದ್ದರು. ಇದನ್ನು ಗಮನಿಸಿದ ನ್ಯಾಯಾಲಯ ಇಡಿಗೆ ಡಿಕೆಶಿ ಅವರ ಆರೋಗ್ಯಕ್ಕೆ ಮೊದಲ ಅದ್ಯತೆ ನೀಡಬೇಕು ಎಂದು ಆದೇಶ ನೀಡಿತ್ತು.

ಆದರೆ ಇಂದು ಡಿಕೆಶಿಗೆ ರಕ್ತದೊತ್ತಡ ಸಮಸ್ಯೆ ಕಾಣಿಸಿಕೊಂಡಿದೆ ಇದಕ್ಕೆ ಮಂದಗತಿಯಲ್ಲಿ ಪ್ರತಿಕ್ರಿಯೆ ನೀಡಿದ ಇಡಿ ಅಧಿಕಾರಿಗಳು ತಕ್ಷಣವೇ ಅಸ್ಪತ್ರೆಗೆ ದಾಖಲು ಮಾಡಿಲ್ಲ.! ಅದರೆ ಡಿಕೆಶಿಗೆ ರಕ್ತದೊತ್ತಡ ಹೆಚ್ಚಾದ ಹಿನ್ನೆಲೆ ಇಡಿ ಅಧಿಕಾರಿಗಳು ತಮ್ಮ ಕಛೇರಿಯಿಂದ ಕೊಡಲೇ ದೆಹಲಿಯ ಆರ್.ಎಂ.ಎಲ್ ಅಸ್ಪತ್ರೆಗೆ ಶೀಫ್ಟ್ ಮಾಡಿದೆ.

LEAVE A REPLY

Please enter your comment!
Please enter your name here