ಡಿ.ಕೆ. ಶಿವಕುಮಾರ್ ಬೆನ್ನಿಗೆ ನಿಂತ ಕೇಂದ್ರ ಸಚಿವರು..!

0
1714

ರಾಜ್ಯದ ಪ್ರಭಾವಿ ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್ ಇಡಿ ಸಂಕಷ್ಟಕ್ಕೆ ಸಿಲುಕಿರುವ ಮಧ್ಯೆಯೇ ಕೇಂದ್ರ ಸರ್ಕಾರದ ಇಬ್ಬರು ಪ್ರಭಾವಿ ಸಚಿವರು ಡಿಕೆಶಿ ಬೆನ್ನಿಗೆ ನಿಂತಿದ್ದಾರೆ ಎನ್ನಲಾಗಿದೆ. ಬಂಧನ ಭೀತಿಯಿಂದ ಡಿ.ಕೆ.ಶಿವಕುಮಾರ್ ಅವರು ಬಚಾವ್ ಆಗಿದ್ದು ಕೂಡಾ ಇವರ ಪ್ರಭಾವದಿಂದಲೇ ಎಂಬ ಮಾತು ಕೇಳಿ ಬಂದಿದೆ.

ಇನ್ನು ಡಿ.ಕೆ. ಶಿವಕುಮಾರ್ ನೆರವಿಗೆ ಕಾಂಗ್ರೆಸ್ ನಾಯಕರು ಯಾರು ಬರಲಿಲ್ಲ. ಆದರು ಡಿಕೆಶಿಯನ್ನು ಉಳಿಸಿಕೊಳ್ಳಲು ಈ ಸಚಿವರು ನಡೆಸಿದ ಪ್ರಯತ್ನ ಫಲ ನೀಡಿದೆ. ಇನ್ನು ಆ ಇಬ್ಬರು ಸಚಿವರು ಡಿ.ಕೆ ಶಿವಕುಮಾರ್ ಜೊತೆ ವ್ಯಾವಹಾರಿಕ ಕಾರಣಗಳಿಂದಾಗಿ ಆಪ್ತ ಸಂಬಂಧ ಹೊಂದಿದ್ದಾರೆ ಎನ್ನಲಾಗಿದೆ. ಬಂಧನ ಭೀತಿ ಎದುರಾದ ತಕ್ಷಣ ಡಿಕೆಶಿ ಆ ಇಬ್ಬರು ಕೇಂದ್ರ ಸಚಿವರ ಮೊರೆ ಹೋಗಿದ್ದಾರೆ. ಆ ಪವರ್ ಫುಲ್ ಸಚಿವರುಗಳೊಂದಿಗಿನ ವ್ಯಾವಹಾರಿಕ ಸಂಬಂಧವೇ ಡಿಕೆಶಿಯವರನ್ನು ಬಂಧನದ ಭೀತಿಯಿಂದ ಪಾರು ಮಾಡಿದೆ ಎಂಬ ಮಾತುಗಳು ದೆಹಲಿ ಮಟ್ಟದಲ್ಲಿ ಕೇಳಿ ಬರುತ್ತಿವೆ. ಆದರೆ ಆ ಇಬ್ಬರು ಕೇಂದ್ರ ಸಚಿವರ ಹೆಸರು ತಿಳಿದುಬಂದಿಲ್ಲ.

ಇನ್ನು ಕಾಂಗ್ರೆಸ್ ಅಧ್ಯಕ್ಷಗಾದಿಗೇರುವ ಉಮೇದಿಯಲ್ಲಿದ್ದ ಡಿಕೆಶಿಗೆ ಈಗ ರಾಜಕೀಯ ಹಿನ್ನಡೆಯುಂಟಾಗಿದೆ. ಡಿಕೆಶಿಗೆ ಬಂಧನ ಭೀತಿ ಎದುರಾದರು ರಾಜ್ಯ ಕಾಂಗ್ರೆಸ್ ನಾಯಕರು ಬೆಂಬಲಕ್ಕೆ ಬಂದಿಲ್ಲ. ಇನ್ನು ಈ ಹಿಂದೆ ಐಟಿ ರೇಡ್ ಆದಾಗ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಬೆಂಬಲಕ್ಕೆ ನಿಂತಿದ್ದನ್ನು ಹೊರತುಪಡಿಸಿ, ರಾಜ್ಯ ಕಾಂಗ್ರೆಸ್ ನಾಯಕರು ಮಾತ್ರ ಮೌನಕ್ಕೆ ಶರಣಾಗಿದ್ದರು. ಈಗಲು ಅದನ್ನೆ ಮುಂದುವರೆಸಿದ್ದಾರೆ. ಹೀಗಾಗಿ ರಾಜಕೀಯವಾಗಿ ಡಿಕೆಶಿ ಏಕಾಂಗಿಯಾಗಿದ್ದಾರೆ.

LEAVE A REPLY

Please enter your comment!
Please enter your name here