೩೧೭ ಖಾತೆಗಳು… ೨೦೦ ಕೋಟಿ ಠೇವಣಿ…ಕ್ರಿಮಿನಲ್ ವ್ಯವಹಾರ… ಡಿಕೆಶಿ ಅಕ್ರಮಗಳನ್ನು ಕೋರ್ಟ್ ಮುಂದಿಟ್ಟ ಇಡಿ ವಕೀಲ…!

0
300

ರಾಜ್ಯ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿರುವ ಕಾಂಗ್ರೆಸ್ ಪ್ರಭಾವಿ‌ ನಾಯಕ ಡಿಕೆ ಶಿವಕುಮಾರ್ ಬಂಧನ ಪ್ರಕರಣದಲ್ಲಿ ಕೆಲವು ಅಚ್ಚರಿ ಸಂಗತಿಗಳನ್ನು ಇಡಿ ಪರ ವಕೀಲರು ಕೋರ್ಟ್ ಮುಂದಿಟ್ಟಿದ್ದಾರೆ. ಕೆಲವು ದಿನಗಳ ಹಿಂದೆ ಡಿಕೆ ಶಿವಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಹೆಚ್ಚಿನ ವಿಚಾರಣೆಗಾಗಿ ಡಿಕೆಶಿಯನ್ನು ಇಡಿ ಕಸ್ಟಡಿಗೆ ನೀಡಲಾಗಿತ್ತು. ಇಂದು ಮತ್ತೆ ಕೋರ್ಟ್ ಗೆ ಹಾಜರುಪಡಿಸಲಾಗಿದ್ದು, ಇಡಿ ಪರ ವಕೀಲರು ತಮ್ಮ ವಾದ ಮಂಡಿಸಿದ್ದು, ಮತ್ತೆ ಐದು ದಿನಗಳ ಕಾಲ ಡಿಕೆ ಶಿವಕುಮಾರ್ ಅವರನ್ನು ಇಡಿ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಇನ್ನು ಇಡಿ ಪರ ವಾದ ಮಂಡಿಸಿದ ಕೆ. ನಟರಾಜ್ ಕೆಲವು ಮಹತ್ವದ ಅಂಶಗಳನ್ನು ನ್ಯಾಯಾಲಯದ ಗಮನಕ್ಕೆ ತಂದರು. ಆ ಅಂಶಗಳ ಆಧಾರದ ಮೇಲೆಯೇ ಹೆಚ್ಚಿನ ವಿಚಾರಣೆಯ ಅಗತ್ಯವಿದೆ ಎಂದು ವಾದಿಸಿದರು. ಇನ್ನು ನಟರಾಜ್ ಕೋರ್ಟ್ ಮುಂದಿಟ್ಟ ಅಂಶಳೆಂದರೆ, ಡಿಕೆ ಶಿವಕುಮಾರ್ ಅಕ್ರಮವಾಗಿ ಸಾಕಷ್ಟು ವ್ಯವಹಾರ ನಡೆಸಿದ್ದಾರೆ. ಡಿಕೆ ಶಿವಕುಮಾರ್ ಅವರು ನಡೆಸಿದ ವ್ಯವಹಾರದಲ್ಲಿ ೩೧೭ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ. ಆದರೆ ಅದಕ್ಕೆ ಸಂಬಂಧಿಸಿದಂತೆ ಡಿಕೆಶಿ ಬಳಿ ಸಮರ್ಪಕ ಉತ್ತರವಿಲ್ಲ.

೩೧೭ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ್ದು ಯಾಕೆ‌..? ಅದರ ಮೂಲ ಯಾವುದು..? ಎಂಬುದರ ಬಗ್ಗೆ ದಾಖಲೆ ಇಲ್ಲ. ಇನ್ನು ಡಿಕೆ ಶಿವಕುಮಾರ್ ಅವರ ೨೨ ವರ್ಷ ಮಗಳು ಐಶ್ವರ್ಯ ಸುಮಾರು ೧೦೮ ಕೋಟಿ ರೂಪಾಯಿಗಳ ವ್ಯವಹಾರ ನಡೆಸಿದ್ದಾಳೆ. ಇಷ್ಟು ದೊಡ್ಡ ಮೊತ್ತದ ವ್ಯವಹಾರ ನಡೆದಿದ್ದು ಹೇಗೆ..? ಅದರ ಮೂಲದ ಬಗ್ಗೆ ಸರಿಯಾದ ಉತ್ತರ ನೀಡುತ್ತಿಲ್ಲ. ಇನ್ನು ಅಚ್ಚರಿ ಎಂದರೆ ಡಿಕೆ ಶಿವಕುಮಾರ್ ಅವರು ದೇಶದ ಸುಮಾರು ೧೭ ಬ್ಯಾಂಕ್ ಗಳಲ್ಲಿ ೨೦೦ ಕೋಟಿ ರೂಪಾಯಿ ಠೇವಣಿ ಇಟ್ಟಿದ್ದಾರೆ. ಅಂದರೆ ತಿಂಗಳಿಗೆ ಕೋಟ್ಯಾಂತರ ರೂಪಾಯಿ ಹಣ ಠೇವಣಿಯಿಂದಲೇ ಪಡೆಯುತ್ತಿದ್ದಾರೆ.

ಆದರೆ ಆ ೨೦೦ ಕೋಟಿ ರೂಪಾಯಿ ಠೇವಣಿ ಹಣದ ಮೂಲ ಪತ್ತೆಯಾಗಿಲ್ಲ.ಇನ್ನು ಕಳೆದ ೯ ದಿನಗಳಿಂದ ವಿಚಾರಣೆ ನಡೆಸಿದರು ಡಿಕೆ ಶಿವಕುಮಾರ್ ಇಡಿ ಅಧಿಕಾರಿಗಳಿಗೆ ಸರಿಯಾದ ಉತ್ತರ ನೀಡಿಲ್ಲ. ಹಾರಿಕೆ ಉತ್ತರ ನೀಡುತ್ತಾ ಕಾಲ ಕಳೆದಿದ್ದಾರೆ. ತಮ್ಮ ಹಣಕಾಸಿನ ಮೂಲಗಳ ನಿಖರ ಮಾಹಿತಿಯನ್ನು ನೀಡಿಲ್ಲ. ಅಕ್ರಮ ಹೂಡಿಕೆ ಮಾಡಿದ್ದಾರೆ. ಕ್ರಿಮಿನಲ್ ಚಟುವಟಿಕೆಗಳಲ್ಲಿಯೂ ಭಾಗಿಯಾಗಿದ್ದಾರೆ ಎಂಬ ಅನುಮಾನವೂ ಇದೆ ಹೀಗಾಗಿ ಹೆಚ್ಚಿನ ವಿಚಾರಣೆಗಾಗಿ ಇನ್ನು ೫ ದಿನಗಳ ಕಾಲ ಇಡಿ ಕಸ್ಟಡಿಗೆ ನೀಡುವಂತೆ ಇಡಿ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here