ಇಂದು ಕೂಡಾ ಡಿಕೆಶಿಗೆ ಸಿಗಲಿಲ್ಲ ರಿಲೀಫ್, ಜಡ್ಜ್ ಏನಂದ್ರು ಗೊತ್ತಾ…?!

0
316

ಡಿಕೆ ಶಿವಕುಮಾರ್ ಅವರ ಇಡಿ ಕಸ್ಟಡಿ ಅವಧಿ ಇಂದು ಮುಕ್ತಾಯವಾಗಿದ್ದು, ಡಿಕೆಶಿಯನ್ನು ಇಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜಪಡಿಸಿದರು. ಇಡಿ ಪರ ವಾದ ಮಂಡಿಸಿದ ನಟರಾಜ್, ಮತ್ತೆ ಐದು ದಿನಗಳ ಕಾಲ ಇಡಿ ಕಸ್ಟಡಿಗೆ ಡಿಕೆಶಿಯನ್ನು ನೀಡುವಂತೆ ವಾದಿಸಿದರು. ಡಿಕೆ ಶಿವಕುಮಾರ್ ಅಕ್ರಮವಾಗಿ ಸಾಕಷ್ಟು ವ್ಯವಹಾರ ನಡೆಸಿದ್ದಾರೆ. ೧೭ ಬ್ಯಾಂಕುಗಳಲ್ಲಿ ೨೦೦ ಕೋಟಿ ರೂಪಾಯಿ ಠೇವಣಿ ಸೇರಿದಂತೆ ಬೇನಾಮಿ ಆಸ್ತಿ ಮತ್ತು ಹೂಡಿಕೆ ಸಂಬಂಧಿಸಿದಂತೆ ಸಾಕಷ್ಟು ಮಾಹಿತಿಯನ್ನು ಡಿಕೆ ಶಿವಕುಮಾರ್ ಮುಚ್ಚಿಟ್ಟಿದ್ದಾರೆ.

ಸೂಕ್ತ ಉತ್ತರಗಳನ್ನು ನೀಡಿದೆ, ಇಡಿ ಅಧಿಕಾರಿಗಳ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಹೀಗಾಗಿ ಅವರನ್ನು ಇನ್ನಷ್ಟು ವಿಚಾರಣೆಗೆ ಒಳಪಡಿಸಬೇಕಾದ ಅಗತ್ಯವಿದ್ದು ಮತ್ತೆ ೫ ದಿನಗಳ ಕಾಲ ಇಡಿ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು. ಇಡಿ ಪರ ವಕೀಲರ ಸುದಿರ್ಘ ವಾದ ಆಲಿಸಿದ ನ್ಯಾಯಾಧೀಶರು ತಮ್ಮ ತೀರ್ಪನ್ನು ಕಾಯ್ದಿರಿಸಿದ್ದಾರೆ. ಇದೇ ವೇಳೆ ಡಿಕೆ ಶಿವಕುಮಾರ್ ಅವರ ಜಾಮೀನು ವಿಚಾರಣೆ ಇಂದು ನಡೆಸಲು ಸಾಧ್ಯವಿಲ್ಲ. ಇಂದು ಏನಿದ್ದರೂ ಕಸ್ಟಡಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಯಲಿದೆ. ಸೋಮವಾರ ಜಾಮೀನು ಅರ್ಜಿ ವಿಚಾರಣೆ ನಡೆಸುತ್ತೇವೆ ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದ್ದಾರೆ.

ಹೀಗಾಗಿ ಡಿಕೆ ಶಿವಕುಮಾರ್ ಇಂದು ಇಡಿ ಕಸ್ಟಡಿಗೆ ಒಳಗಾಗುತ್ತಾರೋ…? ಅಥವಾ ನ್ಯಾಯಾಂಗ ಬಂಧನಕ್ಕೆ ಒಳಗಾಗುತ್ತಾರೋ…? ಕಾದು ನೋಡಬೇಕು. ಆದರೆ ಇಂದು ಡಿಕೆ ಶಿವಕುಮಾರ್ ಅವರಿಗೆ ಬಿಡುಗಡೆಯ ಭಾಗ್ಯವಿಲ್ಲ ಜಾಮೀನು ಅರ್ಜಿ ಸೋಮವಾರ ನಡೆಯಲಿದೆ.

LEAVE A REPLY

Please enter your comment!
Please enter your name here