ಡಿ. ೨೩ರಿಂದ ಕೂಡಲಸಂಗಮದಿಂದ ವಿಧಾನಸೌಧಕ್ಕೆ ಚಲೋ: ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ

0
68

ಲಿಂಗಾಯತ ಸಮುದಾಯಕ್ಕೆ ೨ ಎ ಮೀಸಲಾತಿ ನೀಡಬೇಕು. ಇಲ್ಲದಿದ್ರೆ ಡಿಸೆಂಬರ್ ೨೩ರಿಂದ ವಿಧಾನಸೌಧ ಚಲೋ ಹಮ್ಮಿಕೊಳ್ತೇವೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ಇಂದಿನ ಸಂಪುಟ ಸಭೆಯಲ್ಲಿ ಲಿಂಗಾಯತ ಒಬಿಸಿ ವಿಚಾರ ಚರ್ಚೆಗೆ ಬಾರದ ಹಿನ್ನೆಲೆ ಚಿತ್ರಕಲಾ ಪರಿಷತ್ ನಲ್ಲಿ ಮಾತನಾಡಿದ ಪಂಚಮಸಾಲಿ ಮಠದ ಜಯಮೃತ್ಯುಂಜಯ ಸ್ವಾಮೀಜಿ, ಮುಂದಿನ ಸಂಪುಟದಲ್ಲಿ ಇದರ ನಿರ್ಧಾರ ಹೊರಬೀಳಬೇಕು.‌ಕೊಟ್ಟ ಮಾತಿನಂತೆ ಸಿಎಂ ಅವರು ನಡೆದುಕೊಳ್ಳಬೇಕು. ಲಿಂಗಾಯತ ಸಮುದಾಯಕ್ಕೆ ೨ ಎ ಮೀಸಲಾತಿ ನೀಡಬೇಕು. ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಸೇರಿಸಬೇಕು. ಕುಲಶಾಸ್ತ್ರ ಅಧ್ಯಯನಕ್ಕೆ ಸಮಿತಿ ರಚಿಸಬೇಕು. ಇಲ್ಲವಾದರೆ ಡಿಸೆಂಬರ್ ೨೩ರಿಂದ ವಿಧಾನಸೌಧ ಚಲೋ ಹಮ್ಮಿಕೊಳ್ತೇವೆ. ಕೂಡಲಸಂಗಮದಿಂದ ವಿಧಾನಸೌಧ ಚಲೋ ಹಮ್ಮಿಕೊಳ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದರು.

ರಾಜ್ಯದ ೨ ಎ, ಕೇಂದ್ರದ ಒಬಿಸಿ ಮೀಸಲಾತಿ ಬೇಕು. ಅಕ್ಟೋಬರ್ ೨೮ ರಂದು ಸತ್ಯಾಗ್ರಹ ಮಾಡಿದ್ದೆವು.
ಒಂದು ತಿಂಗಳೊಳಗೆ ಮೀಸಲಾತಿ ನಿರ್ಧಾರಕ್ಕೆ ಒತ್ತಾಯಿಸಿದ್ದೆವು. ನಮ್ಮ ಹೋರಾಟಕ್ಕೆ ಸಿಎಂ ಭರವಸೆ ಕೊಟ್ಟಿದ್ದರು. ನಿನ್ನೆ ಕೂಡ ಸಿಎಂ ಭೇಟಿ ಮಾಡಿದ್ದೆವು.‌ ಆಗಲೂ ಸಿಹಿ ಸುದ್ದಿ ಕೊಡ್ತೇವೆ ಅಂತ ಹೇಳಿದ್ದರು.‌ನಾವು ಐತಿಹಾಸಿಕ ನಿರ್ಧಾರಕ್ಕೆ ಕಾದಿದ್ದೆವು. ಆದರೆ ಇಂದಿನ ಸಂಪುಟದಲ್ಲಿ ವಿಷಯ ಚರ್ಚೆಯಾಗಿಲ್ಲ.‌ನಾವು ಇದರಿಂದ ನಿರಾಸೆಗೊಂಡಿಲ್ಲ.‌ಮುಂದಿನ ಸಂಪುಟದಲ್ಲಾದ್ರೂ ಚರ್ಚೆಗೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ನಿಮ್ಮ ನಡುವಿನ ರಾಜಕೀಯ ವಿಚಾರ ಏನೇ ಇರಲಿ. ಅದು ನಮಗೆ ಸೇರಿದ್ದಲ್ಲ. ನಮಗೆ ಸಮುದಾಯವಷ್ಟೇ ಮುಖ್ಯ. ಈ ವಿಚಾರದಲ್ಲಿ ರಾಜಕೀಯ ತಲೆದೂರಬಾರದು. ರಾಜಕೀಯ ಹೊರತಾದ ಹೋರಾಟ ನಮ್ಮದು. ಎರಡು ಬಾರಿ ಬಿಎಸ್ ವೈ ಸಿಎಂ ಪದವಿ ಪಡೆದಿದ್ದಾರೆ.
ಅದಕ್ಕೆ ಸಮುದಾಯದ ಕೊಡುಗೆ ಸಾಕಷ್ಟಿದೆ. ಶೇ ೭೦ ರಷ್ಟು ಪಂಚಮಸಾಲಿ ಬೆಂಬಲವಿದೆ. ನೀವು ಯಾರನ್ನ ಮಂತ್ರಿ ಮಾಡ್ತಿರೋ ಬಿಡ್ತಿರೋ ಗೊತ್ತಿಲ್ಲ. ಆದರೆ ನಮಗೆ ಬೇಕಿರೋದು ಮೀಸಲಾತಿ ಮಾತ್ರ.‌ಸಮುದಾಯಕ್ಕೆ ನ್ಯಾಯ ಸಿಗಬೇಕಷ್ಟೇ ಎಂದು ಪಂಚಮಸಾಲಿ ಪೀಠಾಧಿಪತಿ ಜಯಮೃತ್ಯುಂಜಯ ಶ್ರೀ ಒತ್ತಾಯ ಮಾಡಿದರು.

ಈ ವಿಚಾರದಲ್ಲಿ ಯಾವುದೇ ವಿಳಂಬ ಬೇಡ.‌ನೀವು ಕೊಟ್ಟ ಮಾತಿನಂತೆ ನಡೆದುಕೊಳ್ಳಿ.‌ ನೀವಲ್ಲದೆ ಯಾರು ಇದನ್ನ ಮಾಡೋಕೆ ಸಾಧ್ಯ..? ಯಡಿಯೂರಪ್ಪನವರು ಅಮಿತ್ ಶಾ ಜೊತೆ ಬೇಕಾದ್ರೂ ಮಾತನಾಡಲಿ, ಪ್ರಧಾನಿಯವರ ಜೊತೆಯಾದ್ರೂ ಮಾತನಾಡಲಿ. ಆದರೆ ನಮ್ಮ ಸಮಾಜಕ್ಕೆ ಮೀಸಲಾತಿ ಸಿಗಬೇಕು ಎಂದು ಸಿಎಂ ಬಿಎಸ್ ವೈ ಗೆ ಪಂಚಮಸಾಲಿ ಶ್ರೀಗಳ ಆಗ್ರಹ ಮಾಡಿದರು.‌

ನಮ್ಮ ಸಮುದಾಯದ ಮುಖಂಡರ ಜೊತೆ ಚರ್ಚೆ ಮಾಡುತ್ತೇನೆ. ನಮ್ಮ ಸಮುದಾಯದ ಜನಪ್ರತಿನಿಧಿಗಳ ಜೊತೆ ಸಭೆ ಮಾಡ್ತೇವೆ.‌ ಆ ನಂತರ ಹೋರಾಟದ ರೂಪುರೇಷೆ ಮಾಡ್ತೇವೆ. ಕೇಂದ್ರದಿಂದ ಸೂಚನೆ ಬರುತ್ತಲೇ ಸಂಪುಟದಿಂದ ಕೈಬಿಟ್ರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇಲ್ಲಿ ರಾಜಕಾರಣವನ್ನ ಮಾಡಬಾರದು ಇದು ನಮ್ಮ ಸಮುದಾಯದ ಅಸ್ಮಿತೆ. ಯಡಿಯೂರಪ್ಪ ರಾಜಕಾರಣ ಮಾಡದೆ ನಿರ್ಧಾರ ತೆಗೆದುಕೊಳ್ಳಬೇಕು. ನಾಳೆ ೨೮ ರೊಳಗೆ ಒಂದು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಶ್ರೀ ಹೇಳಿದರು.

ವೀರಶೈವ ಲಿಂಗಾಯಿತ ಸಮುದಾಯವನ್ನು ಒಬಿಸಿ ಗೆ ಸೇರ್ಪಡೆಗೆ ಶಿಫಾರಸ್ಸು ಮಾಡಲು ಚಿಂತನೆ ಇತ್ತು.ಆದರೆ ಒಕ್ಕಲಿಗರ ಕುಂಚಟಿಗರು ಸೇರಿದಂತೆ ಹಲವು ಸಮುದಾಯಗಳು ಬಿಟ್ಟು ಹೋಗಿರುವ ಹಿನ್ನೆಲೆಯಲ್ಲಿ ಕೇಂದ್ರದ ಜತೆ ಚರ್ಚಿಸಿ ಬಳಿಕ ನಂತರ ತೀರ್ಮಾನಿಸಲು ನಿರ್ಧರಿಸಿ ಇಂದು ಕ್ಯಾಬಿನೆಟ್ ನಲ್ಲಿ ಈ ವಿಷಯವನ್ನು ಡಿಫರ್ ಮಾಡಲಾಯ್ತು ಎಂದು ಸಚಿವ ಮಾಧುಸ್ವಾಮಿ ಹೇಳಿದ್ದರು.

LEAVE A REPLY

Please enter your comment!
Please enter your name here