ಸಣ್ಣ ಪಾತ್ರಗಳಲ್ಲಿ ಕೆಲವು ಚಿತ್ರಗಳಲ್ಲಿ ನಟಿಸಿರುವ ದರ್ಶನ್ ಅವರ ಸೋದರಸಂಬಂಧಿ ಮನೋಜ್ ‘ಟಕ್ಕರ್’ ಎಂಬ ಹೊಸ ಚಿತ್ರದ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ!
ಎಸ್.ಎಲ್.ಎನ್. ಕ್ರಿಯೇಶನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಈ ಚಿತ್ರಕ್ಕೆ ಕೆ.ಎನ್. ನಾಗೇಶ್ ಕೋಗಿಲು ಅವರು ಬಂಡವಾಳ ಹೂಡಿದ್ದಾರೆ! ಇನ್ನು ಈ ಮೊದಲು ವಿನಯ್ ರಾಜಕುಮಾರ್ ಅವರ ‘ರನ್ ಆಂಟನಿ’ ನಿರ್ದೇಶಿದ್ದ ರಘು ಶಾಸ್ತ್ರಿ ಅವರು ಸ್ವಲ್ಪ ಸಮಯದ ನಂತರ ಮತ್ತೆ ‘ಟಕ್ಕರ್’ ನಿರ್ದೇಶಿಸಿದ್ದಾರೆ..

ಇನ್ನು ಈ ಮುಂಚೆ ನಟ ದರ್ಶನ್ ‘ಟಕ್ಕರ್’ ತಂಡವನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿ ಟೀಸರ್ ಮತ್ತು ಶೀರ್ಷಿಕೆ ಹಾಡನ್ನು ವೀಕ್ಷಿಸಿದ್ದರು. ಚಿತ್ರ ತಂಡವನ್ನು ಶ್ಲಾಘಿಸಿ ಚಿತ್ರದ ಬಿಡುಗಡೆ ಮತ್ತು ಮಾರ್ಕೆಟಿಂಗ್ ಬಗ್ಗೆ ದರ್ಶನ್ ಕೆಲವು ಸಲಹೆಗಳನ್ನು ನೀಡಿದ್ದರು..

ಸೆಪ್ಟೆಂಬರ್ 7ರಂದು ಚಿತ್ರದ ಹಾಡುಗಳು ರಿಲೀಸ್ ಆಗಲಿದೆ.. ಇನ್ನು ಈ ಚಿತ್ರದ ಹಾಡುಗಳನ್ನು ಸ್ವತಃ ಚಾಲೆಂಜಿಗ್ ಸ್ಟಾರ್ ದರ್ಶನ್ ಅವರೆ ಬಿಡುಗಡೆ ಮಾಡಲಿದ್ದಾರೆ !
ಇನ್ನು ಚಿತ್ರದಲ್ಲಿ ಮೂರು ಹಾಡುಗಳಿದ್ದು ಡಾ.ವಿ.ನಾಗೇಂದ್ರ ಪ್ರಸಾದ್ ಎರಡು ಹಾಡುಗಳನ್ನು ರಚಿಸಿದ್ದಾರೆ.. ಹೀರೋ ಇಂಟ್ರಡಕ್ಷನ್ ಸಾಂಗ್ ಅನ್ನು ಶಶಾಂಕ್ ಶೇಷಗಿರಿ ಹಾಡಿದ್ರೆ ಡ್ಯುಯೆಟ್ ಹಾಡನ್ನು ವಿಜಯಪ್ರಕಾಶ್ ಮತ್ತು ಅನುರಾಧಾ ಭಟ್ ಹಾಡಿದ್ದಾರೆ.. ಮತ್ತು ಚಿತ್ರದ ಸ್ಫೂರ್ತಿದಾಯಕ ಹಾಡನ್ನು ಸಂಜಿತ್ ಹೆಗಡೆ ಹಾಡುವ ಮುಖಾಂತರ ಮೆರುಗು ತರಲಿದ್ದಾರೆ.

ಸಾಕಷ್ಟು ಕುತೂಹಲಕಾರಿ ಮೂಡಿಸಿರುವ ಟಕ್ಕರ್ ಸಿನಿಮಾ ಆಡಿಯೋ ಬಿಡುಗಡೆ ಸಮಾರಂಭದಂದು ಚಿತ್ರದ ಬಿಡುಗಡೆ ಡೇಟ್ ಅನೌನ್ಸ್ ಮಾಡಲಿದೆಯಂತೆ