ಸದ್ಯ ದರ್ಶನ್ ಅಭಿನಯದ ಕುರುಕ್ಷೇತ್ರ ಆಗಸ್ಟ್ ಒಂಬತ್ತ ರಂದು ಐದು ಭಾಷೆಯಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ.. ಸದ್ಯ ಡಿ ಬಾಸ್ ಪ್ರಚಾರ ಕ್ರಿಯೆಯಲ್ಲಿ ಸಕ್ರಿಯರಾಗಿದ್ದಾರೆ.. ಇನ್ನು ಡಿ ಬಾಸ್ ಅವರ ಐವತ್ತನೇ ಸಿನಿಮಾ ಇದಾಗಿದ್ದು, ದುರ್ಯೋಧನನ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ಮಿಂಚಿದ್ದಾರೆ ..
ಮೊನ್ನೆಯಷ್ಟೇ ತೆಲುಗಿನಲ್ಲಿ ಆಡಿಯೋ ರಿಲೀಸ್ ಮಾಡಿದ ಚಿತ್ರತಂಡ, ತೆಲುಗಿನ ಪ್ರೇಕ್ಷಕರಲ್ಲು ಸಹ ನಿರೀಕ್ಷೆಯನ್ನು ಉಂಟುಮಾಡಿದೆ .. ಅಲ್ಲದೇ ದರ್ಶನ್ ಆಡಿಯೋ ರಿಲೀಸ್ ಸಮಾರಂಭದ ವೇಳೆಯಲ್ಲಿ ತೆಲುಗಿನಲ್ಲಿ ಮಾತನಾಡಿ ತೆಲುಗು ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಂಡಿದ್ದಾರೆ …
ಇನ್ನು ಚಿತ್ರದ ಪ್ರಮೋಷನ್ ಭರದಿಂದ ಸಾಗುತ್ತಿದೆ. ಈ ಹಿಂದೆ ಚಿತ್ರಕ್ಕೆ ಅಭಿಮನ್ಯು ಪಾತ್ರಧಾರಿ ನಿಖಿಲ್ ಅವರು ಧ್ವನಿ ನೀಡಿರಲಿಲ್ಲ.. ಆದರೆ ಮೊನ್ನೆಯಷ್ಟೇ ಡಬ್ಬಿಂಗ್ ಮುಗಿಸಿ ಚಿತ್ರದ ಪ್ರಮೋಷನ್ಗೆ ನಿಖಿಲ್ ಕುಮಾರಸ್ವಾಮಿ ಕೈ ಜೋಡಿಸಿದ್ದಾರೆ..

ಆದರೆ ಡಿ ಬಾಸ್ ದರ್ಶನ್ ಈ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಒಂದು ಎಡವಟ್ಟು ಹೇಳಿಕೆ ನೀಡಿದ್ದಾರೆ .. ಈ ಹೇಳಿಕೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ ..
ಪತ್ರಿಕಾ ಗೋಷ್ಠಿಯೊಂದಿಗೆ ಮಾತನಾಡುತ್ತಾ ದರ್ಶನ್, ‘ಕುರುಕ್ಷೇತ್ರ ನಡೆದಿರುವುದು, ಎಲ್ಲರೂ ನೋಡಿರುವುದು, ಓದಿರುವುದು ಬೇರೆಯದ್ದೇ ಇದೆ. ಗದಾ ಯುದ್ಧವೇ ಒಂದು ವರ್ಷ ಇದೆ. ಆದರೆ ವಾಲ್ಮೀಕಿ ಬರೆದಿರುವುದು ಇನ್ನೊಂದು ತರಹ ಇದೆ .. ಹಾಗಾಗಿ ಇಂತಹ ಮಹಾಭಾರತವನ್ನು ಆಯ್ಕೆ ಮಾಡಿಕೊಳ್ಳುವಾಗ ತುಂಬಾ ಎಚ್ಚರ ವಹಿಸಬೇಕಾಗುತ್ತದೆ’ ಎಂದು ದರ್ಶನ್ ಮಾತನಾಡಿದ್ದಾರೆ!
ಈ ಹೇಳಿಕೆಯನ್ನು ಕೇಳಿದ ನೆಟ್ಟಿಗರು, ಟ್ರೋಲ್ ಪೇಜ್ ಗಳಲ್ಲಿ ದರ್ಶನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ..
ಮಹಾಭಾರತ ಮತ್ತು ರಾಮಾಯಣ ದೇಶದ ಎರಡು ಶ್ರೇಷ್ಠ ಮಹಾಕಾವ್ಯ, ಮಹಾಭಾರತ ಬರೆದಿರುವುದು ವ್ಯಾಸ, ರಾಮಾಯಣ ಬರೆದಿರುವುದು ವಾಲ್ಮೀಕಿ, ಆದರೆ ದರ್ಶನ್ ನೀಡಿರುವ ತಪ್ಪಾದ ಹೇಳಿಕೆಯಿಂದ ಟ್ರೋಲ್ ಗಳಿಗೆ ಸಿಕ್ಕಿದ್ದಾರೆ ..