ಎಚ್ಚರ ತಪ್ಪಿದ್ರೆ ಅಂಗೈಯಲ್ಲೆ ಮನೆ ಮಾಡುವ ಚಾಲಾಕಿಗಳು..!

0
198

ಇಂದು ಜಗತ್ತಿನಲ್ಲಿ ಸ್ಮಾರ್ಟ್‍ಫೋನ್ ಇಲ್ಲದ ವ್ಯವಸ್ಥೆ ಕಲ್ಪಿಸಿಕೊಳ್ಳವುದು ಅಸಾಧ್ಯ. ಎಲ್ಲರ ಕೈನಲ್ಲೂ ಸ್ಮಾರ್ಟ್‍ಫೋನ್ ಇದ್ದೆ ಇರುತ್ತದೆ. ತಾಂತ್ರಿಕತೆ ಎಲ್ಲರನ್ನು ಹತ್ತಿರ ತಂದು ನಿಲ್ಲಿಸಿದೆ, ಇಲ್ಲಿ ತಾಂತ್ರಿಕ ನೆರವಿಗಿಂತ ಇಲ್ಲಿ ತಾಂತ್ರಿಕವಾಗಿ ದುರುಪಯೋಗ ಮಾಡಿಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿದೆ. ಸದ್ಯದ ಮಾಹಿತಿ ಪ್ರಕಾರ ಆ್ಯಪ್‍ಗಳಿಂದಲೇ ಕೆಲಸ ಕಾರ್ಯಗಳು ಸುಗಮವಾಗಿವೆ ಆದರೆ ಇದೇ ಆ್ಯಪ್ ಸಮಸ್ಯೆಗೆ ಕಾರಣವಾಗುತ್ತಿದೆ.

ತಾಂತ್ರಿಕ ದ್ಯತ್ಯ ಗೂಗಲ್‍ನ ಪ್ಲೇ ಸ್ಟೋರ್‍ನಲ್ಲಿ ದೊರೆಯುವ ಟಾಪ್ ಎನಿಸುವ 5000 ಉಚಿತ ಅಂಡ್ರಾಯ್ಡ್ ಆ್ಯಪ್‍ಗಳಲ್ಲಿ ದೋಷಪೂರಿತವಾಗಿರುವುದು ಪತ್ತೆಯಾಗಿದೆ. 1600 ಕ್ಕೂ ಹೆಚ್ಚು ಭದ್ರತಯೆಯ ಕೊರತೆಯಿಮದ ಕೂಡಿವೆ ಎಂದು ಸೈಬರ್ ಸೆಕ್ಯೂರಿಟಿ ಸಂಶೋಧಕರು ವರದಿ ನೀಡಿದ್ದಾರೆ.

ಜಾರ್ಜಿಯಾ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ದಿ ಒಹಿಯೋ ಸ್ಟೇಟ್ ಯೂನಿವರ್ಸಿಟಿ ಎಂಬ ಉನ್ನತ ಸಂಸ್ಥೆಗಳು ನಡೆಸಿರುವ ಸಂಶೋಧನೆ ಈ ಅಂಶಗಳನ್ನು ಬಿಚ್ಚಿಟ್ಟಿದೆ. ಈ ಅಪ್ಲಿಕೇಶನ್‍ಗಳ ಬ್ಯಾಕ್ ಎಂಡ್ ಸಿಸ್ಟಮ್‍ನಲ್ಲಿ ಬಲಹೀನತೆ ಇದ್ದು, ಇವುಗಳು ಕ್ಲೌಡ್ ಆಧಾರಿತ ಸರ್ವರ್‍ಗಳ ಜಾಲದ ನೆರವಿನೊಂದಿಗೆ ಕಂಟೆಂಟ್ ಮತ್ತು ಜಾಹೀರಾತುಗಳನ್ನು ಪ್ರಕಟಿಸುತ್ತವೆ ಎಂದು ಸಂಶೋಧನೆ ಬಹಿರಂಗಪಡಿಸಿದೆ.

ದುರ್ಬಲತೆಯ ಪ್ರಯೋಜನಕ್ಕೆ ಹವಣಿಸುವ ಸೈಬರ್ ಹ್ಯಾಕರ್‍ಗಳು ಇಂತಹ ಅವಕಾಶವನ್ನು ಬಿಡುವುದುಂಟೆ ಮತ್ತು ಅವರು ತಮ್ಮ ಕೆಲಸವನ್ನು ನಾಜೂಕಾಗಿ ಮಾಡಿಮುಗಿಸುತ್ತಾರೆ. ಪ್ರಮುಖವಾದ ಮತ್ತು ವೈಯಕ್ತಿಕ ಮಾಹಿತಿ ಕದಿಯಾಗುತ್ತದೆ. ಕ್ಲೌಡ್ ಸರ್ವರ್‍ಗಳ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆಗಳೇ ಹೆಚ್ಚು, ಒಂದು ಬಾರಿ ಹ್ಯಾಕರ್ ಸರ್ವರ್ ಸಂಪರ್ಕ ಸಾಧಿಸಿ ಹಲವು ಪ್ರಕಾರಗಳಲ್ಲಿ ದಾಳಿ ಮಾಡಬಹುದಾಗಿದೆ. ಯಾವುದೇ ಆ್ಯಪ್ ಇನ್‍ಸ್ಟಾಲ್ ಮಾಡುವಾಗ ಮಾಹಿತಿಯನ್ನು ಮತ್ತು ಭದ್ರತಾ ವಿಧಾನಗಳ್ನನು ತಿಳಿದುಕೊಳ್ಳುವುದು ಮುಖ್ಯ ಇಲ್ಲದಿದ್ದರೆ ಅಪಾಯವನ್ನು ಅಂಗೈಗೆ ತಂದುಕೊಂಡಂತೆ. ಸ್ಮಾರ್ಟ್‍ಫೋನ್ ಬಳಕೆಗೆ ಪ್ರಾಧಾನ್ಯತೆ ಹಜೆಚ್ಚು ಕೊಡುವುದಕ್ಕಿಂತಲೂ ಅದರ ಕಾಣದ ಕೈಗಳ ಬಗ್ಗೆ ಮೊದಲು ಕಣ್ಣಿಡಬೇಕು.

ಜಾರ್ಜಿಯಾಟೆಕ್ ಸ್ಕೂಲ್ ಎಲೆಕ್ಟ್ರಿಕಲ್ ಅಂಡ್ ಕಂಪ್ಯೂಟಿಂಗ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರೊಫೆಸರ್ ಬ್ರೆಂಡನ್ ಸಾಲ್ಟಫರ್ಮಾಜಿಯೋ ದೋಷಪೂರಿತ ಆ್ಯಪ್‍ಗಳ ಬಳಕೆಯಿಂದ ಎದುರಾಗಬಹುದಾದ ಅಪಾಯಗಳ ಬಗ್ಗೆ ಸವಿವರ ವರದಿ ನೀಡಿದ್ದಾರೆ. ಇದರಲ್ಲಿ ಖಾಸಗಿ ಮಾಹಿತಿಯ ಕಳ್ಳತನ ಮತ್ತು ಹಣಕಾಸಿನ ವಿವರ ಕದ್ದು ಲಾಭ ಪಡೆಯುವ ಹುನ್ನಾರಗಳ ಬಗ್ಗೆ ಎಚ್ಚರಿಸಿದ್ದಾರೆ. ಇತ್ತಿಚೆಗೆ ಅಣಬೆಯಂತೆ ಹುಟ್ಟಿಕೊಂಡಿರುವ ಪೇಮೆಂಟ್ ಆ್ಯಪ್‍ಗಳು ಸುರಕ್ಷತಾ ಕ್ರಮಗಳಲ್ಲಿ ಹೇಗಿವೆ, ಎಂದು ಯಾರು ಪರಾಮರ್ಶೆ ಮಾಡದೇ ಇನ್ಸ್ಟಾಲ್ ಮಾಡಿಕೊಳ್ಳುವ ಕಾರಣಕ್ಕೆ ಅಪಾಯಗಳ ಸಾಧ್ಯತೆ ಹೆಚ್ಚು.

LEAVE A REPLY

Please enter your comment!
Please enter your name here