ಕರಿಬೇವಿನ ಉಪಯೋಗ ತಿಳಿದರೆ ನೀವು ಇ೦ದೆ ಉಪಯೋಗಿಸುತ್ತಿರಾ

0
677

ಕರಿಬೇವಿನಿಂದ ಹೀಗೆ ಮಾಡಿದರೆ ನಿಮ್ಮ ಕೂದಲು ಉದರುವುದು ನಿಂತು , ದಟ್ಟವಾಗಿ , ಆರೋಗ್ಯವಾಗಿ ಬೆಳೆಯುತ್ತದೆ..

ಹಾಗಾಗಿ ನಾವು ಹೇಳೋ ಸುಲಭ ಪರಿಹಾರವನ್ನು ಅನುಸರಿಸಿ:

  1. ಕರಿಬೇವು :- ಒಂದು ಬೊಗಸೆಯಷ್ಟು ಕರಿಬೇವನ್ನು ನೀರಿನಲ್ಲಿ ಕುದಿಸಿ . ಆ ನೀರು ತಣ್ಣಾಗದ ನಂತರ ಕೂದಲಿನ ಮೂಲಗಳಿಗೆ ತಾಗುವಂತೆ 3 ರಿಂದ 4 ನಿಮಿಷಗಳ ಕಾಲ ಮಸಾಜ್ ಮಾಡಿಕೊಂಡು ತದನಂತರ ಅದನ್ನು ಒಣಗಲು ಬಿಟ್ಟು 5 ರಿಂದ 10 ನಿಮಿಷಗಳ ನಂತರ ನೀರಿನಿಂದ ಕೂದಲನ್ನು ಚೆನ್ನಾಗಿ ತೊಳೆದುಕೊಳ್ಳಬೇಕು . ಇದರಿಂದ ಕೂದಲು ಉದರುವುದು ನಿಲ್ಲುತ್ತದೆ ಮತ್ತು ದಟ್ಟವಾಗಿ ಬೆಳೆಯುವುದು .

  1. 1/2 ಕ್ಕಿಂತ ಕಡಿಮೆ ಬಟ್ಟಲಿನಷ್ಟು ಕರಿಬೇವಿನ ಪೇಸ್ಟ್ ನ್ನು ಮತ್ತು 2 ಚಮಚ ಮೊಸರನ್ನು ಬೆರೆಸಿ ಪೇಸ್ಟ್ ರೀತಿ ತಯಾರಿಸಿಕೊಂಡು ಕೂದಲಿನ ಮೂಲಗಳಿಗೆ ಚೆನ್ನಾಗಿ ಹಚ್ಚಿ ಮಸಾಜ್ ಮಾಡಿಕೊಳ್ಳಿ. 1/2 ಗಂಟೆಯ ನಂತರ ಕೂದಲನ್ನು ಚೆನ್ನಾಗಿ ತೊಳೆಯಿರಿ. ಇದರಿಂದ ಕೂದಲು ಆರೋಗ್ಯಕರವಾಗಿ ದಟ್ಟವಾಗಿ ಬೆಳೆಯಲು ಸಹಾಕಾರಿಯಾಗುತ್ತದೆ .
  2. ಕರಿಬೇವನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿಕೊಂಡು ಕೊಬ್ಬರಿ ಎಣ್ಣೆಯಲ್ಲಿ ಹಾಕಿ 4 ರಿಂದ 5 ನಿಮಿಷ ಬಿಸಿಮಾಡಿ . ಸ್ವಲ್ಪ ಉಗುರು ಬೆಚ್ಚವಾದಮೇಲೆ ಆ ಎಣ್ಣೆಯನ್ನು ತಲೆಗೆ ಹಚ್ಚಿಕೊಂಡು 5 ನಿಮಿಷ ಮಸಾಜ್ ಮಾಡಿಕೊಂಡು 2 ಗಂಟೆಗಳ ನಂತರ ಯಾವುದಾದರು ಶಾಂಪುನಿಂದ ತೊಳೆದುಕೊಂಡು ಬಿಡಿ . ಆಗ ನಿಮ್ಮ ಕೂದಲಿಗೆ ಸಾಕಷ್ಟು ಪೋಷಣೆ ನೀಡಿದಂತಾಗುತ್ತದೆ.

LEAVE A REPLY

Please enter your comment!
Please enter your name here